ಈ ದಿವಸ ವಾರ್ತೆ
ವಿಜಯಪುರ
: ಭಾರತೀಯ ಜನತಾ ಪಾರ್ಟಿಯ ಹಿರಿಯ ಮುಖಂಡರಾದ ಹಿಂದುಳಿದ ವರ್ಗದ ನಾಯಕರಾದ ಸರಳ ಸಜ್ಜಿನಿಕೆ ವ್ಯಕ್ತಿ ಪಕ್ಷದ ನಿಷ್ಠಾವಂತ ಪ್ರಮಾಣಿಕ ಕಾರ್ಯಕರ್ತರಾದ ಅಶೋಕ ಗಸ್ತಿ ಅವರಿಗೆ ರಾಜ್ಯಸಭೆಗೆ ಕರ್ನಾಟಕದಿಂದ
(ಎಂ.ಪಿ)ಆಗಿ ಆಯ್ಕೆಗೊಂಡಿರುವ ಹಿನ್ನೆಲೆ ಅವರಿಗೆ ವಿಜಯಪುರ ಜಿಲ್ಲಾ ಸವಿತಾ ಸಮಾಜದ ಜಿಲ್ಲಾಧ್ಯಕ್ಷ ಲಿಂಗರಾಜ್ ಎನ್.
ಬಳ್ಳಾರಿ ಅವರ ನೇತೃತ್ವದೊಂದಿಗೆ ಅಶೋಕ ಗಸ್ತಿ ಅವರ ನಿವಾಸ ರಾಯಚೂರನಲ್ಲಿ ಮೆನೆಗೆ ತೆರಳಿ ಹೃದಯಪೂರ್ವಕವಾಗಿ ಅಭಿನಂದನೆ ಸಲ್ಲಿಸುವುದರೊಂದಿಗೆ ಸೇಬು ಹಣ್ಣಿನ ಹಾರ ಹಾಕುವುದರ ಮೂಲಕ ವಿಶೇಷವಾಗಿ ಸನ್ಮಾನ ಮಾಡಲಾಯಿತು.
ಈ ಸಂದರ್ಭದಲ್ಲಿ ಸವಿತಾ ಸಮಾಜದ ಕರ್ನಾಟಕ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯರಾದ ರಾಘವೇಂದ್ರ ಇಟಗಿ, ವಿಠ್ಠಲ ಕಾಸೆದ್, ಮಲ್ಲೇಶ ನಾವಿ, ಗಣೇಶ ಬಳ್ಳಾರಿ, ಬಾಪು ಕ್ಷೀರಸಾಗರ, ಗಡ್ಡೆಪ್ಪ ನಾವಿ, ರಾಜಕುಮಾರ ನಾವಿ, ನರ್ಸಿಂಗ್ ಮೋತಕ್‌ಪಲ್ಲಿ, ಕಿರಣ ಹಡಪದ ಮುಂತಾದವರು ಇದ್ದರು.
No comments:
Post a Comment