'ಅಪ್ಪ' ಅನ್ನೊ ಅದ್ಭುತ
ನನ್ನೊಂದಿಗಿದ್ದರೆ ಅದೇ ನನ್ನ ಜಗತ್ತು
ಇವರು ಊಹಿಸಲಾಗದಂತ ಸಂಪತ್ತು .
ಕೇಳಿದ ತುಂಟ ಪ್ರಶ್ನೆಗಳಿಗೆಲ್ಲ ತಾಳ್ಮೆಯಿಂದ ಉತ್ತರಿಸುವ
ಕೈ ಮಾಡಿದ್ದನ್ನೆಲ್ಲ ಕೊಡಿಸುವ
ನನ್ನ ಜೀವನದ ಜ್ಯೋತಿ ಇವರು 'ಅಪ್ಪ' .
ಗುರಿಯನ್ನು ಸೃಷ್ಟಿಸಿದ ಗುರು ಇವರು
ಗುರಿಯತ್ತ ಸಾಗುವ ದಾರಿಯನ್ನು ತೋರಿಸಿದವರು
ಪ್ರತಿ ಹೆಜ್ಜೆ ಗೂ ಜೋತೆಗಿರುವರು 'ಅಪ್ಪ '.
ಮೌನ ವಾಗಿರುವ ಮನದ ಮಾತನ್ನು ತಿಳಿದುಕೊಳ್ಳುವರು
ನೋವುನ್ನು ಬಚ್ಚಿಟ್ಟು ನಗುವಿನ ಸುರಿಮಳೆ ಸುರಿಸುವರು' ಅಪ್ಪ'.
ಗೆಲುವಿನ ಮೆಟ್ಟಿಲನ್ನು ಕಟ್ಟಿದವರು
ಕಾಣದ ದೇವರನ್ನು ಅಡಗಿಸಿಕೊಂಡ
ಸದಾ ಜೋತೆ-ಜೋತೆಯಾಗಿರುವ ಜ್ಯೋತಿ ಇವರು 'ನನ್ನಪ್ಪ'.
✍️ - ಬಿಸ್ಮಿಲ್ಲಾ ಚಾ ಪಿಂಜಾರ
ವಿಜಯಪುರ.
No comments:
Post a Comment