“ಒಬ್ಬ ತಂದೆಯ ಮನಸ್ಸು ನಿಸರ್ಗದ ಮೇರುಕೃತಿಯಿದ್ದಂತೆ”
ಹಾಗೆ ನನ್ನ ತಂದೆ ನನ್ನ ಜೀವನದ ಒಬ್ಬ ಮಾದರಿ ವ್ಯಕ್ತಿಯಾಗಿದ್ದರು. ಅದೇ ತರಹ ಒಬ್ಬ ನಾಯಕನೂ ಮತ್ತು ಸ್ನೇಹಿತನೂ ಕೂಡ. ಅವರ ಆ ಒಂದು ಹೆಸರೇ ನನ್ನ ಜೀವನದ ಸ್ಪೂರ್ಥಿಯ ಚಿಲುಮೆ.
ನನ್ನ ತಂದೆಯ ಹೆಸರು ಬಾಬು ತಾಳಿಕೋಟಿ. ನಾನು ಯಾವಾಗಲು ಅವರನ್ನು ಅಪ್ಪಾಜಿ ಅಂತಾನೆ ಕರೆಯೋದು. ಅವರು ಒಬ್ಬ ಯಶಶ್ವಿ ಉದ್ಯಮಿಯಾಗಿದ್ದರು. ಅವರ ಸಮಯಪ್ರಜ್ಞೆ, ಪ್ರಾಮಾಣಿಕತೆ, ಕರುಣಾಮಯೀ ಹೃದಯ, ಅವರನ್ನು ಸಮಾಜದಲ್ಲಿ ಮತ್ತು ಕುಟುಂಬದಲ್ಲಿ ಒಬ್ಬ ಅತ್ಯುನ್ನತ ಗೌರವಯುತ ವ್ಯಕ್ತಿಯನ್ನಾಗಿಸಿದ್ದವು. ಅವರು ನನ್ನ ಜೀವನದ ಬಹು ವಿಶೇಷ ವ್ಯಕ್ತಿಯಾಗಿದ್ದರು. ಈಗ ಅವರು ನನ್ನೊಂದಿಗೆ ಇಲ್ಲದಿದ್ದರೂ ಅವರು ನೆನಪುಗಳು ಹಾಗೆ ನಮ್ಮೊಂದಿಗಿವೆ.
ಅವರು ಜೀವನದಲ್ಲಿ ಏನೂ ಹೇಳದೆ ಹೋದರು ಒಬ್ಬ ಒಳ್ಳೆಯ ಮನುಷ್ಯನಾಗಿ ಹೇಗೆ ಬದುಕಬೇಕೆಂಬುದ್ದನ್ನು ಕಲಿಸಿ ಹೋದರು. ಅದೇ ತರಹ ನನ್ನ ಶಿಕ್ಷಣದ ಅಭಿರುಚಿಯಲ್ಲಿ ಯಾವುದೇ ತರಹ ವಿರೋಧ ತೋರದೆ ನನ್ನ ಶೈಕ್ಷಣಿಕ ಜೀವನ ನಾನೇ ಆಯ್ಕೆ ಮಾಡಿಕೊಳ್ಳುವಲ್ಲಿ ಸಹಾಯ ಮಾಡಿದರು. ಅವರೊಂದಿಗಿನ ಆ ನನ್ನ ಅನುಭನದ ಯಾವಾಗಲೂ ಮರೆಯಲಾಗದು. ಇಂತಹ ತಂದೆಯನ್ನು ಕೊಟ್ಟ ಆ ದೇವರಿಗೆ ನಾನು ಯಾವಾಗಲೂ ಕೃತಜ್ಞಳಾಗಿದ್ದೇನೆ.
ಅವರು ನನಗೆ ತುಂಬಾ ಸಲುಗೆ ಕೊಟ್ಟಿರುವ ಕಾರಣ ನಾನು ಅವರಿಗೆ ಯಾವದೆ ಸತ್ಯ ಹೇಳಲು ಹೆದರುತ್ತಿರಲಿಲ್ಲ. ಅವರು ಯಾಕೆ ಇಷ್ಟೊಂದು ಒಡನಾಡಿಯಾಗಿದ್ದರು ಎಂಬುದು ನಮಗೆ ಇವಾಗ ಅರ್ಥವಾಗುತ್ತಿದೆ. ಅವರಷ್ಟು ನನಗೆ ಅರ್ಥ ಮಾಡಿಕೊಂಡವರು ಭಹುಷ: ಯಾರು ಇಲ್ಲ ಎನ್ನಬಹುದು. ತಪ್ಪು ಮಾಡಿದಾಗ ತಿಳಿಸಿ ಹೇಳಿದರು. ನನ್ನ ಜೀವನದ ಗುರಿಯ ಕಡೆ ನಾನು ಯಾವಾಗಲು ಲಕ್ಷ್ಯವಿರಿಸಲು ಅವರ ಪಾತ್ರ ಬಹು ಮುಖ್ಯವಾದದ್ದು. ಆದ್ದರಿಂದ ಅವ್ರು ನನ್ನ ಜೀವನದ ಒಬ್ಬ ಶಿಕ್ಷಕನೂ ಕೂಡ ಆಗಿದ್ದರು.
ಅವರ ಬಗ್ಗೆ ಹೇಳಲು ಇಷ್ಟು ಪದಗಳು ಬಹಳ ಕಡಿಮೆ. ಸಮಾಜದಲ್ಲಿ ನಾಲ್ಕು ಜನ ನೋಡಿ ಕಲಿಯುವಂತೆ ನೈತಿಕವಾಗಿ ಬದುಕಿ ತೋರಿಸಿದವರು. ಅವರು ನನ್ನೊಂದಿಗೆ ಇಲ್ಲ ಎಂದರೂ ಅವರು ಕಳಿಸಿದ ಪಾಠ, ನೈತಿಕತೆ, ಜೀವನದ ಉದ್ದೇಶಗಳು ಎಲ್ಲವನ್ನೂ ಅನುಸರಿಸುತ್ತಿದ್ದೇನೆ. ಒಬ್ಬ ಮಗಳು ಒಬ್ಬ ತಂದೆಯ ಹೆಸರು ಎತ್ತಿ ಹಿಡಿಯಲು ಏನು ಅವಶ್ಯವೋ ಎಲ್ಲವನ್ನು ಮಾಡುತ್ತಿದ್ದೇನೆ. ಅಂತಹ ತಂದೆಯ ಹಸಿ ನೆನಪುಗಳು ನನಗೆ ತುಂಬಾ ಸಂತೋಷ ಮತ್ತು ಭಾವುಕ ಮೂಕವಿಸ್ಮಯನನ್ನಾಗಿಸವೆ.
“ಅಪ್ಪನ ಕೈಗಳು ಶ್ರಮಪಟ್ಟಾಗಲೇ
ಮಕ್ಕಳ ಕೈಗಳು ಸುಂದರವಾಗಿ ಕಾಣುತ್ತವೆ."
ಸ್ಮೀ ತಾ ತಾಳಿಕೋಟಿ,
ವಿಜಯಪುರ
No comments:
Post a Comment