ಚಡಚಣ: ಪಟ್ಟಣದ ಪ್ರಸಿದ್ಧ ಜವಳಿ ವರ್ತಕರಾದ ಅಜಿತ ಮುತ್ತಿನ ಅವರು ಕಳೆದ ವಾರ 2400 ಜನರನ್ನು 1 ವಾರದ ಕಾಲ ತಮ್ಮ ಸ್ವಂತ ಖರ್ಚಿನಲ್ಲಿ ಕಾಶಿ ಯಾತ್ರೆಗೆ ಕರೆದುಕೊಂಡು ಯಶಸ್ವಿಯಾಗಿ ಹೋಗಿ ಬಂದ ಹಿನ್ನಲೆಯಲ್ಲಿ ಮುತ್ತಿನ ಸಹೋದರರ ಈ ಮಹತರ ನಿಸ್ವಾರ್ಥ ಸೇವೆಯನ್ನು ಕೊಂಡಾಡಿದ ಬ್ಯಾಂಕ್ ಆಫ್ ಬರೋಡ ಶಾಖೆ ನಿವರಗಿ ಸಿಬ್ಬಂದಿಗಳು ಅಜಿತ್ ಮುತ್ತಿನ ದಂಪತಿಗೆ ಸನ್ಮಾನಿಸಿ, ಗೌರವಿಸಿದರು.
ಕಳೆದ ಏಳೆಂಟು ವರ್ಷಗಳಿಂದ ಪ್ರಸಿದ್ಧ ಜವಳಿ ವ್ಯಾಪಾರಸ್ಥರಾದ ಮುತ್ತಿನ ಸಹೋದರರು ಉಚಿತ ಯಾತ್ರೆ ಕೈಗೊಳ್ಳುತ್ತಿದ್ದು, ಈ ಬಾರಿಯೂ ತಮ್ಮ ಸ್ವಂತ ಆದಾಯದಲ್ಲಿನ ಸುಮಾರು 2 ಕೋಟಿ ರೂ. ವೆಚ್ಚವನ್ನು ಭರಿಸಿ, ಉಚಿತವಾಗಿ ಒಂದು ವಾರದ ಕಾಶಿ ಯಾತ್ರೆ ಆಯೋಜಿಸಿದ್ದರು.
ಈ ಸಂದರ್ಭದಲ್ಲಿ ನಿವರಗಿಯ ಬ್ಯಾಂಕ್ ಆಫ್ ಬರೋಡ ಶಾಖಾ ವ್ಯವಸ್ಥಾಪಕರಾದ ಸಂತೋಷ ಹಿಟ್ನಳ್ಳಿ ಮಾತನಾಡಿ, ಇವರ ಸಮಾಜಮುಖಿ ಸೇವೆ ಎಲ್ಲರಿಗೂ ಮಾದರಿಯಾಗಿದೆ. ಅವರ ಸೇವಾ ಮನೋಭಾವ ಹೀಗೆ ಮುಂದುವರಿಯಲಿ ಎಂದರು.
ಈ ವೇಳೆ ಬ್ಯಾಂಕಿನ ಸಿಬ್ಬಂದಿ ವಿಜಯಕುಮಾರ್, ಜಗನ್ನಾಥ್, ಸಿದ್ದು ಆಲಮೇಲಕರ ಸೇರಿದಂತೆ
ಯಾತ್ರೆಯಲ್ಲಿ ಭಾಗವಹಿಸಿದ್ದ ಅನೇಕ ಯಾತ್ರಿಕರು ಉಪಸ್ಥಿತರಿದ್ದರು.
ರಾಜ್ಯಾದ್ಯಂತ ಆಸಕ್ತರಿಗೆ ವಿಶೇಷ ಸೂಚನೆ:
ಯುವ ಪ್ರತಿಭೆಗಳು, ಹಿರಿ-ಕಿರಿ ಆಸಕ್ತ ಸಾಹಿತಿ, ಕವಿ, ಲೇಖಕರಿಗೆ ಈ ದಿವಸ ವೇದಿಕೆ ಕಲ್ಪಿಸುತ್ತಿದೆ. ಆಸಕ್ತರು ತಮ್ಮ ಸ್ವ ರಚಿತ ಲೇಖನ, ಕಥೆ, ಕವನ , ಶಾಲಾ ಕಾಲೇಜಿನ, ವಿಶ್ವವಿದ್ಯಾಲಯ ವರದಿ, ಹೋರಾಟಗಾರರ ಮನವಿ, ತಮ್ಮ ಜಿಲ್ಲೆ, ಪಟ್ಟಣ, ತಾಲೂಕು, ಗ್ರಾಮಗಳಲ್ಲಿನ ಸಮಸ್ಯೆಗಳು ಸೇರಿದಂತೆ ಇತರೆ ಸುದ್ದಿ ಹಾಗೂ ಜಾಹೀರಾತುಗಳನ್ನು ಪ್ರಕಟಿಸಲು ಇಂದೇ ಸಂಪರ್ಕಿಸಿರಿ.
ಸಂಪಾದಕರು ಈ ದಿವಸ ಕನ್ನಡ ದಿನ ಪತ್ರಿಕೆ ವ್ಯಾಟ್ಸಪ್ ಸಂಖ್ಯೆ : 7204279187 / 9900378892 ತಾವು ಟೈಪಿಸಿ eedivasa@gmail.com ಈ ಮೇಲ್ ಗೂ ಮೇಲ್ ಸೆಂಡ್ ಮಾಡಿದರೆ ಪ್ರಕಟಿಸಲಾಗುವುದು.
No comments:
Post a Comment