Saturday, October 31, 2026

ರಾಜ್ಯೋತ್ಸವ: ವಿವಿಧ ಕ್ಷೇತ್ರದ ಸಾಧಕರಿಗೆ ಸನ್ಮಾನ ಪವರ್‌ಲಿಫ್ಟಿಂಗ್‌ನಲ್ಲಿ ಬೆಳ್ಳಿ ಪದಕ ವಿಜೇತ ಸಚಿನ ಸಾಳೂಂಕೆಗೆ ವಿಶೇಷ ಗೌರವ

ವಿಜಯಪುರ:  ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ಜಿಲ್ಲೆಯ ಸಾಧಕರನ್ನು ಆಯ್ಕೆ ಮಾಡಲಾಗಿದ್ದು, ನವೆಂಬರ್ 01ರಂದು ಜರುಗುವ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಆಯ್ಕೆಯಾದ ಸಾಧಕರನ್ನು ಸನ್ಮಾನಿಸಲಾಗುವುದು ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕರು ತಿಳಿಸಿದ್ದಾರೆ.

 ಜನಪದ ಕ್ಷೇತ್ರದಲ್ಲಿ ಗಂಗಾಧರ ಹಣಮಂತ ಬಡಿಗೇರ, ಶ್ರೀಮತಿ ನಿಂಬೆವ್ವ ಶಿವಗೊಂಡ ಬಿರಾದಾರ,

ಮರಿಯಪ್ಪ ವಾಳದವರ ಹಾಗೂ ಶ್ರೀಮತಿ ಚಂದ್ರಭಾಗ ಬಬಲೇಶ್ವರ, ಬಯಲಾಟ ಕ್ಷೇತ್ರದಲ್ಲಿ ರುದ್ರಗೌಡ ಸಿದಗೌಡ ಬಿರಾದಾರ, ಈಶ್ವರಯ್ಯ ಸಂಗಯ್ಯ ಪೂಜಾರಿ ಹಾಗೂ ಮುಕ್ತುಮ್ ಸಾಬ್ ಬಡೆಸಾಬ್ ಶೇಕ್,

ರಂಗಭೂಮಿ ಕ್ಷೇತ್ರದಲ್ಲಿ ಶ್ರೀಮತಿ ಆಶಾ ಬಾಗವಾನ,ಸಾಹಿತ್ಯ ಕ್ಷೇತ್ರದಲ್ಲಿ ಸಿದ್ದರಾಮಪ್ಪ ಈರಗೊಂಡಪ್ಪ ಬಿರಾದಾರ ಹಾಗೂ ಜಿ.ಜಿ. ಲಮಾಣಿ (ರಾಮಕುಮಾರ್) ಆಯ್ಕೆ ಮಾಡಲಾಗಿದೆ. ಚಿತ್ರಕಲೆ ಮತ್ತು ಶಿಲ್ಪಕಲೆ ಕ್ಷೇತ್ರದಲ್ಲಿ ಶ್ರೀಶೈಲ್ ಸಿದ್ದಪ್ಪ ಹೂಗಾರ ಹಾಗೂ ಈರಣ್ಣ ಮಾನಪ್ಪ ಬಡಿಗೇರ, ಸಂಗೀತ ಕ್ಷೇತ್ರದಲ್ಲಿ ಕಲ್ಯಾಣರಾವ್ ದೇಶಪಾಂಡೆ ಹಾಗೂ ಬಸವಂತಪ್ಪ ಬಿರಾದಾರ ಅವರನ್ನು ಆಯ್ಕೆ ಮಾಡಲಾಗಿದೆ.

 ನೃತ್ಯ ಕ್ಷೇತ್ರದಲ್ಲಿ ಶ್ರೀಮತಿ ಶಾರದಾಬಾಯಿ ಅರ್ಜುನ ಚವ್ಹಾಣ,ಶಿಕ್ಷಣ ಕ್ಷೇತ್ರದಲ್ಲಿ ಎಸ್.ಎ.ಜಮಾದಾರ ಹಾಗೂ ಶೇಖರಪ್ಪ ನರಬೆಂಚಿ,ಕೃಷಿ ಮತ್ತು ಅರಣ್ಯ ಕ್ಷೇತ್ರದಲ್ಲಿ ಈರಪ್ಪ ಚಂದ್ರಮಪ್ಪ ನಾಶಿ, ವೈದ್ಯಕೀಯ ಕ್ಷೇತ್ರದಲ್ಲಿ ಡಾ.ಸುರೇಶ ಕಾಗಲ್ಕರ್ ಹಾಗೂ ಡಾ.ಚಂದ್ರಶೇಖರಯ್ಯ ಶಿವಯೋಗಿಮಠ ಇವರನ್ನು ಆಯ್ಕೆ ಮಾಡಲಾಗಿದೆ. ಸಮಾಜಸೇವೆ ಕ್ಷೇತ್ರದಲ್ಲಿ ಡಾ.ರೇವಣಸಿದ್ದಪ್ಪ (ಸಿದ್ದು) ಎಂ. ಕಲ್ಲೂರ,ಸಂಕೀರ್ಣ ಕ್ಷೇತ್ರದಲ್ಲಿ ಗುಂಡಪ್ಪ ರಾವತಪ್ಪ ಕುಂಬಾರ, ರಾಜಶೇಖರ ವಿಠಲಗೌಡ ಪಾಟೀಲ ಹಾಗೂ ಡಾ. ಚಂದು ಎಲ್. ಜಾಧವ,

ಪತ್ರಿಕೋದ್ಯಮ ಕ್ಷೇತ್ರದಲ್ಲಿ ಖಾಜಪ್ಪ ಬಸಪ್ಪ ಶಿಂಗಗೋಳ, ಇಂದುಶೇಖರ ಸಿದ್ದಣ್ಣ ಮಣೂರ,ಸುನೀಲ ಗೋಡೆನವರ,ಗುಂಡಪ್ಪ ಚಂದ್ರಪ್ಪ ಮುತ್ತಲದಿನ್ನಿ ಹಾಗೂ ನವೀದ್ ಅಂಜುಮ್ ಮಮದಾಪುರ ಅವರನ್ನು ಆಯ್ಕೆ ಮಾಡಲಾಗಿದೆ.

 ಕೆನಡಾದಲ್ಲಿ ಸೆ.17 ರಿಂದ 27ರವರೆಗೆ ನಡೆದ ಕಾಮನ್‌ವೆಲ್ತ್ ಪವರ್‌ಲಿಫ್ಟಿಂಗ್ ಸ್ಪರ್ಧೆಯಲ್ಲಿ ಭಾರತ ದೇಶವನ್ನು ಪ್ರತಿನಿಧಿಸಿ ಬೆಳ್ಳಿ ಪದಕ ಪಡೆದು ಅಂತರರಾಷ್ಟ್ರೀಯ ಮಟ್ಟದಲ್ಲಿ ಜಿಲ್ಲೆಗೆ ಕೀರ್ತಿ ತಂದಿರುವ ಸಚಿನ ತುಕಾರಾಮ ಸಾಳೂಂಕೆ ಅವರಿಗೆ ರಾಜ್ಯೋತ್ಸವ ಅಂಗವಾಗಿ ವಿಶೇಷ ಸನ್ಮಾನ ಹಮ್ಮಿಕೊಳ್ಳಲಾಗಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರ ಪ್ರಕಟಣೆ ತಿಳಿಸಿದೆ.

ರಾಜ್ಯಾದ್ಯಂತ ಆಸಕ್ತರಿಗೆ ವಿಶೇಷ ಸೂಚನೆ :

ಸುದ್ದಿ ಹಾಗೂ ಜಾಹೀರಾತುಗಳನ್ನು ಪ್ರಕಟಿಸಲು ಇಂದೇ ಸಂಪರ್ಕಿಸಿರಿ.ಸಂಪಾದಕರು ಈ ದಿವಸ ಕನ್ನಡ ದಿನ ಪತ್ರಿಕೆ ವ್ಯಾಟ್ಸಪ್ ಸಂಖ್ಯೆ : 7204279187 / 9900378892 ತಾವು ಟೈಪಿಸಿ eedivasa@gmail.com ಈ ಮೇಲ್ ಗೂ ಮೇಲ್ ಸೆಂಡ್ ಮಾಡಿದರೆ ಪ್ರಕಟಿಸಲಾಗುವುದು.