ವಿಜಯಪುರ : ಗಾಂಧಿಜೀಯವರ ಮೌಲ್ಯಗಳನ್ನು ಸ್ಮರಿಸುತ್ತಾ ಅವುಗಳನ್ನು ನಮ್ಮ ದೈನಂದಿನ ಜೀವನದಲ್ಲಿ ಅಳವಡಿಸಿಕೊಳ್ಳಲು ಪ್ರತಿಜ್ಞೆ ಮಾಡೋಣ, ಸುತ್ತ ಮುತ್ತಲಿನ ಪರಿಸರವನ್ನು ಸ್ವಚ್ಛ ಹಸಿರು ಸ್ಥಳವನ್ನಾಗಿ ಮಾಡೋಣ ಎಂದು ಜಿಲ್ಲಾಧಿಕಾರಿ ಟಿ.ಭೂಬಾಲನ್ ಹೇಳಿದರು.
ಬುಧವಾರ ನಗರದ ಆನಂದ ಮಹಲ್ ಆವರಣದಲ್ಲಿ ಜಿಲ್ಲಾಡಳಿತ, ನೆಹರು ಯುವ ಕೇಂದ್ರ, ವಿಜಯಪುರ ಲಾಡ್ಲೀ ಪೌಂಡೇಶನ್ ನವದೆಹಲಿ, ಜಿಲ್ಲಾ ಎನ್.ಎಸ್.ಎಸ್. ಘಟಕ, ಕ್ಷೇತ್ರ ಸಂವಹನ ಇಲಾಖೆ, ಸ್ಪಂದನಾ ಸೇವಾ ಸಂಸ್ಥೆ, ಸಮಪ್ರಭ ಸಂಸ್ಥೆಯವರ ಸಂಯುಕ್ತಾಶ್ರಯದಲ್ಲಿ “ಸ್ವಚ್ಛತಾ ಹಿ ಸೇವಾ“ ಕಾರ್ಯಕ್ರಮ ಗಾಂಧಿ ಜಯಂತಿ ಅಂಗವಾಗಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಾವು ಗಾಂಧಿ ಜಯಂತಿಯನ್ನು ಆಚರಿಸುತ್ತಿರುವಾಗ ಸ್ವಚ್ಛ ಭಾರತ ಅಭಿಯಾನಕ್ಕೆ ನಮ್ಮ ಬದ್ಧತೆ ಕೊಡುಗೆ ನೀಡಬೇಕಾಗಿದೆ. ಗಾಂಧಿಜೀಯವರು ಹಾಕಿಕೊಟ್ಟ ಅಹಿಂಸಾ ಮಾರ್ಗದಲ್ಲಿ ನಡೆದುಕೊಂಡು ಸ್ವಚ್ಛತೆ ಮತ್ತು ಸಮಾಜ ಸೇವೆಗೆ ಅಣಿಯಾಗಬೇಕಾಗಿದೆ. ಸ್ವಚ್ಛತೆಯ ಬಗ್ಗೆ ಸಾರ್ವಜನಿಕರು ತಮ್ಮ ಜವಾಬ್ದಾರಿ ಅರಿತು ಭಾಗಿಯಾಗಬೇಕೆಂದು ಎಂದು ಹೇಳಿದರು.
ನೆಹರು ಯುವ ಕೇಂದ್ರದ ಜಿಲ್ಲಾ ಯುವ ಅಧಿಕಾರಿ ರಾಹುಲ ಡೋಂಗ್ರೆ ಪ್ರಾಸ್ತಾವಿಕವಾಗಿ ಮಾತನಾಡಿ ಕಳೆದ ಸೆÀಪ್ಟಂಬರ್ 17ರಿಂದ ಅಕ್ಟೋಬರ್ 02ರವರೆಗೆ ನಿರಂತರವಾಗಿ "ಸ್ವಚ್ಛತೆಯೇ ಹಿ ಸೇವಾ" ಕಾರ್ಯಕ್ರಮದ ಜಿಲ್ಲೆಯ ಯುವಕ ಸಂಘಗಳು ಮತ್ತು ಎನ ಎಸ್ ಎಸ್ ಘಟಕಗಳ ಮೂಲಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾ ಬಂದಿದೆ. ಗಾಂಧೀಜಿ ಅವರ ಸ್ವಚ್ಛತೆಯ ಪರಿಕಲ್ಪನೆಯನ್ನು ಯುವಕರಿಗೆ ತಲುಪಿಸುವಲ್ಲಿ ಪ್ರಾಮಾಣಿಕ ಪ್ರಯತ್ನ ನೆಹರು ಯುವ ಕೇಂದ್ರದಿAದ ಮಾಡಲಾಗಿದೆ ಎಂದು ಹೇಳಿದರು.
ಜಾವೀದ ಜಮಾದಾರ ಮಾತನಾಡಿ, ಸ್ವಚ್ಛತೆ ಕಾಪಾಡುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಯುವಕರು ಗಾಂಧೀಜಿಯವರು ಹಾಕಿಕೊಟ್ಟಂತಹ ಮಾರ್ಗದಲ್ಲಿ ನಡೆಯಬೇಕು ಎಂದರು.
ಎನ್.ಎಸ್.ಎಸ್. ಸ್ವಯಂ ಸೇವಕರ ತಲಾ 100 ಜನರ 8 ತಂಡಗಳನ್ನು ರಚಿಸಿ ನಗರದ ಕೇಂದ್ರ ಬಸ್ ನಿಲ್ದಾಣ, ಗಗನ ಮಹಲ್, ಜಿಲ್ಲಾಧಿಕಾರಿಗಳ ಕಛೇರಿ ಆವರಣ, ಬಾರಾಕಮಾನ, ಗಾಂಧಿಚೌಕ ನರಸಿಂಹ ದೇವಸ್ಥಾನ, ಹಳೇ ತಹಶೀಲ್ದಾರ, ಆಫೀಸ್, ಎಲ್.ಬಿ.ಎಸ್. ಮಾರ್ಕೆಟ್ ಸೇರಿದಂತೆ ವಿವಿಧ ಸ್ಥಳಗಳಲ್ಲಿ ಸ್ವಚ್ಛತೆ ಕೈಗೊಳ್ಳಲಾಯಿತು. ಆನಂದ ಮಹಲ್ ಆವರಣದಿಂದ ಸ್ವಚ್ಚತಾ ಜಾಗೃತಿ ಗಾಂಧಿ ವೃತ್ತದವರೆಗೆ ಹಮ್ಮಿಕೊಂಡು, ವೃತ್ತದಲ್ಲಿ ಮಾನವ ಸರಪಳಿ ನಿಮಿಸಿ ಮಹಾತ್ಮ ಗಾಂಧೀಜಿಯವರ ಪ್ರತಿಮೆಗೆ ಮಾಲಾಪಣೆ ಮಾಡಲಾಯಿತು.
ಎಸ್.ಯು.ಜಮಾದಾರ್ ಅವರು ಪ್ರತಿಜ್ಞಾವಿಧಿ ಬೋಧಿಸಿದರು. ಕ್ಷೇತ್ರ ಸಂವಹನಾ ಅಧಿಕಾರಿ ಸುರೇಶ ಸಿ.ಕೆ. ಎನ್.ಎಸ್.ಎಸ್. ನೋಡಲ್ ಅಧಿಕಾರಿ ಪ್ರಕಾಶ ರಾಠೋಡ, ಸುರಭಿಸಿಂಗ್, ಸುರೇಶ ಬಿಜಾಪೂರ, ಮಹದೇವ ದೇವರ, ಆರ್.ಬಿ.ಉಪಾಸೇ, ಡಾ. ಶಿವಕುಮಾರ ನಾಯಕ, ಶೇಖರ ಕುಮಾರ ಝಾ, ಎಸ್.ಯು. ಜಮಾದಾರ ಪ್ರೆಸಿಡೆನ್ಸಿ ಕಾಲೇಜಿನ ಪ್ರಾಚಾರ್ಯ ಡಾ|| ಸುಮಾ ಬೊಳರೆಡ್ಡಿ, ಚೇತನಾ ಕಾಲೇಜಿನ ಪುರುಷೋತ್ತಮ, ವೇದಾಂತ ಕಾಲೇಜಿನ ಎ.ಎಸ್. ಹೂಗಾರ, ಎ.ಎಸ್.ಪಾಟೀಲ ಕಾಮರ್ಸ್ ಕಾಲೇಜಿನ ವಿಜಯಕುಮಾರ ತಳವಾರ, ಮತ್ತು ಪ್ರದೀಪ ಕುಂಬಾರ ಜೆ.ಎಸ್.ಎಸ್. ಶಿಕ್ಷಣ ಮಹಾವಿದ್ಯಾಲಯದ ಡಾ|| ಬಿ.ಎಸ್. ಹಿರೇಮಠ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಕಾರ್ಯಕ್ರಮದ ಮೊದಲಿಗೆ ಪ್ರಶಾಂತ ದೇಶಪಾಂಡೆ ಸ್ವಾಗತಿಸಿದರು. ನೆಹರು ಯುವ ಕೇಂದ್ರದ ಕಾರ್ಯಕ್ರಮ ಸಹಾಯಕಿ ಬೇಬಿ ದೊಡಮನಿ ವಂದಿಸಿದರು. ಸಂಗಮೇಶ ರಾಮಗೊಂಡ ನಿರೂಪಿಸಿದರು.
ರಾಜ್ಯಾದ್ಯಂತ ಆಸಕ್ತರಿಗೆ ವಿಶೇಷ ಸೂಚನೆ:
ಯುವ ಪ್ರತಿಭೆಗಳು, ಹಿರಿ-ಕಿರಿ ಆಸಕ್ತ ಸಾಹಿತಿ, ಕವಿ, ಲೇಖಕರಿಗೆ ಈ ದಿವಸ ವೇದಿಕೆ ಕಲ್ಪಿಸುತ್ತಿದೆ. ಆಸಕ್ತರು ತಮ್ಮ ಸ್ವ ರಚಿತ ಲೇಖನ, ಕಥೆ, ಕವನ , ಶಾಲಾ ಕಾಲೇಜಿನ, ವಿಶ್ವವಿದ್ಯಾಲಯ ವರದಿ, ಹೋರಾಟಗಾರರ ಮನವಿ, ತಮ್ಮ ಜಿಲ್ಲೆ, ಪಟ್ಟಣ, ತಾಲೂಕು, ಗ್ರಾಮಗಳಲ್ಲಿನ ಸಮಸ್ಯೆಗಳು ಸೇರಿದಂತೆ ಇತರೆ ಸುದ್ದಿ ಹಾಗೂ ಜಾಹೀರಾತುಗಳನ್ನು ಪ್ರಕಟಿಸಲು ಇಂದೇ ಸಂಪರ್ಕಿಸಿರಿ.
ಸಂಪಾದಕರು ಈ ದಿವಸ ಕನ್ನಡ ದಿನ ಪತ್ರಿಕೆ ವ್ಯಾಟ್ಸಪ್ ಸಂಖ್ಯೆ : 7204279187 / 9900378892 ತಾವು ಟೈಪಿಸಿ eedivasa@gmail.com ಈ ಮೇಲ್ ಗೂ ಮೇಲ್ ಸೆಂಡ್ ಮಾಡಿದರೆ ಪ್ರಕಟಿಸಲಾಗುವುದು.
No comments:
Post a Comment