ವಿಜಯಪುರ : ಪ್ರಧಾನಿ ನರೇಂದ್ರ ಮೋದಿ ಅವರ 73 ಜನ್ಮದಿನ ಹಾಗೂ ದೇಶ ರಕ್ಷಕರ ಪಡೆ 5 ನೇ ವರ್ಷಾಚರಣೆ ಪ್ರಯುಕ್ತ ಜೆ.ಎಸ್.ಎಸ್ ಆಸ್ಪತ್ರೆ, ಶ್ರೀ ರಾಮಸುಧಾ ಕಣ್ಣಿನ ಆಸ್ಪತ್ರೆ , ವಿಜಯಪುರ ರಕ್ತನಿಧಿ ಕೇಂದ್ರ ಹಾಗೂ ಎಚ್‌ಡಿಎಫ್‌ಸಿ ಬ್ಯಾಂಕ್ ಸಹೋಗದಲ್ಲಿ ಇದೇ ದಿ.17 ರವಿವಾರ ಉಚಿತ ಆರೋಗ್ಯ ತಪಾಸಣಾ ಮತ್ತು ರಕ್ತದಾನ ಶಿಬಿರವನ್ನು ವಿಜಯಪುರ ನಗರದ ಶ್ರೀ ರುಕ್ಮಾಂಗದ ಶಾಲೆಯಲ್ಲಿ ಹಮ್ಮಿಕೊಳ್ಳಲಾಗಿದೆ.
ಶಿಬಿರದಲ್ಲಿ ಖ್ಯಾತ ನೇತ್ರ ತಜ್ಞ ಡಾ.ಗುರುರಾಜ ಕುಲಕರ್ಣಿ, ಡಾ.ವಿಕಾಸ ಸೊನಗೆ, ಡಾ.ಭಾಗ್ಯಶ್ರೀ ಪೂಜಾರಿ ಚಿಕಿತ್ಸೆ ನೀಡಲಿದ್ದಾರೆ. ಖ್ಯಾತ ಮಧುಮೇಹ ತಜ್ಞ ಬಾಬೂರಾಜೆಂದ್ರ ನಾಯಿಕ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ಡಾ.ಶರಣ ಮಲಖೇಡಕರ, ಜೆ.ಎಸ್.ಎಸ್ ಆಸ್ಪತ್ರೆ ಸಿಇಓ, ಮಹಾನಗರ ಪಾಲಿಕೆ ಸದಸ್ಯ ಕಿರಣ ಪಾಟೀಲ, ವಿಶ್ವನಾಥ ಜೋಶಿ, ಗಿರೀಶ ನೀಲಗುಂದ ಉಪಸ್ಥಿತರಿರಲಿದ್ದಾರೆ ಎಂದು ದೇಶ ರಕ್ಷಕರ ಪಡೆ ಸಂಸ್ಥಾಪಕ ರೋಹನ ಆಪ್ಟೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಆಸಕ್ತರಿಗೆ ವಿಶೇಷ ಸೂಚನೆ:
ಯುವ ಪ್ರತಿಭೆಗಳಿಗೆ, ಹಿರಿ-ಕಿರಿ ಆಸಕ್ತ ಸಾಹಿತಿ, ಕವಿ, ಲೇಖಕರಿಗೆ ಈ ದಿವಸ ವೇದಿಕೆ ಕಲ್ಪಿಸುತ್ತಿದೆ. ಆಸಕ್ತರು ತಮ್ಮ ಸ್ವ ರಚಿತ ಲೇಖನ, ಕಥೆ, ಕವನ , ಶಾಲಾ ಕಾಲೇಜಿನ ವರದಿ, ಹೋರಾಟಗಾರರ ಮನವಿ, ತಮ್ಮ ಊರಿನ ಸಮಸ್ಯೆಗಳ ಸೇರಿದಂತೆ ಇತರೆ ಸುದ್ದಿ ಹಾಗೂ ಜಾಹೀರಾತುಗಳನ್ನು ಪ್ರಕಟಿಸಲು ಸಂಪರ್ಕಿಸಿರಿ.
ಕಲ್ಲಪ್ಪ ಶಿವಶರಣ
ವ್ಯವಸ್ಥಾಪಕ ಸಂಪಾದಕ
ಈ ದಿವಸ ಕನ್ನಡ ದಿನ ಪತ್ರಿಕೆ
ಮೊ: 7204279187/
9900378892
ತಾವು ಟೈಪಿಸಿ ವ್ಯಾಟ್ಸಪ್ ಅಥವಾ eedivasa@gmail.com ಈ ಮೇಲ್ ಗೂ ಮೇಲ್ ಮಾಡಿರಿ.
No comments:
Post a Comment