ಈ ದಿವಸ ವಾರ್ತೆ
ವಿಜಯಪುರ: ಮಕ್ಕಳ ಸರ್ವಾಂಗೀಣ ಬೆಳವಣಿಗೆ ಅಂಗನವಾಡಿ ಕೇಂದ್ರಗಳು ಸಹಕಾರಿಯಾಗಿವೆ ಎನ್ನುವ ನಂಬಿಕೆ ಕೂಡ ಪಾಲಕರಲ್ಲಿ ಮೂಡಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕರಾದ ಕೆ.ಕೆ.ಚವ್ಹಾಣ ಹೇಳಿದರು.
ಅವರು ನಗರದ ವಜ್ರಹನುಮಾನ ನಗರ ಕೊಡ್ ಸಂಖ್ಯೆ-522 ಅಂಗನವಾಡಿ ಕೇಂದ್ರದಲ್ಲಿ ನಗರ ವ್ಯಾಪ್ತಿಯಲ್ಲಿ ಬರುವ ಪ್ರತಿ ಅಂಗನವಾಡಿ ಕೇಂದ್ರಗಳಲ್ಲಿ ಪಾಲಕರ ಸಭೆಯನ್ನು ಸಸಿಗೆ ನೀರುಣಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.
ಮಕ್ಕಳು ಶಿಕ್ಷಣ ಕಲಿಯಬೇಕು. ಶಿಕ್ಷಣದಿಂದ ಮಾತ್ರ ಸುಂದರವಾದ ಬದುಕನ್ನು ನಿರ್ಮಿಸಿಕೊಳ್ಳಬಹುದಾಗಿದೆ ಎಂದರು. ಇಲಾಖೆಯಲ್ಲಿ ಸಾಕಷ್ಟು ಸೌಲಭ್ಯಗಳಿವೆ ಪ್ರತಿಯೊಬ್ಬ ಫಲಾನುಭವಿಗಳು ಪಡೆದುಕೊಳ್ಳಬೇಕು ಎಂದರು.
ಶಿಶು ಅಭಿವೃದ್ಧಿ ವಿಜಯಪುರ ನಗರ ಯೋಜನಾಧಿಕಾರಿಗಳಾದ ದೀಪಾಕ್ಷಿ ಜಾನಕಿ ಸ್ವಾಗತ ನುಡಿಗಳನ್ನಾಡಿದರು.
ಇದೇ ಸಂದರ್ಭದಲ್ಲಿ ಅಂಗನವಾಡಿಗೆ ಆಗಮಿಸಿದ ಪಾಲಕರು ಅಂಗನವಾಡಿ ಕೇಂದ್ರದ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು.
ಕಾರ್ಯಕ್ರಮಕ್ಕೂ ಮುನ್ನ ಅಂಗನವಾಡಿ ಕೇಂದ್ರದಲ್ಲಿನ ಪುಟಾಣಿ ಅನ್ವಿಕಾ ಪಂಡೆಪಿವಳ ಪ್ರಾರ್ಥನೆಯೊಂದಿಗೆ ಸಭೆ ಆರಂಭವಾಯಿತು.
ವಲಯದ ಮೇಲ್ವಿಚಾರಕಿ ಪ್ರತಿಭಾ ಅಂಗಡಿಮಠ ಕಾರ್ಯಕ್ರಮ ನಿರೂಪಿಸಿದರು.
ಈ ಕಾರ್ಯಕ್ರಮದಲ್ಲಿ ಎಲ್ಲಾ ತಾಯಂದಿರು ಗರ್ಭಿಣಿ, ಬಾಣಂತಿಯರು ಕಾರ್ಯಕರ್ತೆ, ಸಹಾಯಕಿಯರು ಮುದ್ದು ಮಕ್ಕಳು ಹಾಜರಿದ್ದು, ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.


No comments:
Post a Comment