Thursday, September 17, 2026

ವಿಜಯಪುರದಲ್ಲಿ ಹೈದ್ರಾಬಾದ್ ವಿಮೋಚನಾ ದಿನಾಚರಣೆ ಮಹಾನ್ ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ ನಮ್ಮ ಯುವಜನಾಂಗಕ್ಕೆ ಸ್ಫೂರ್ತಿ : ಜಗದೇವ ಸೂರ್ಯವಂಶಿ

ವಿಜಯಪುರ : ನಗರದ   ವಲ್ಲಭಾಯಿ ಪಟೇಲ ವೃತ್ತದಲ್ಲಿ ವಿಜಯಪುರ ಜಿಲ್ಲಾ 371 (ಜೆ) ಹೋರಾಟ ಸಮಿತಿ ಹಾಗೂ ಕರ್ನಾಟಕ ರಕ್ಷಣಾ ವೇದಿಕೆ  ಸ್ವಾಭಿಮಾನಿ ಸೇನೆ ವತಿಯಿಂದ ಹೈದ್ರಾಬಾದ್ ವಿಮೋಚನಾ ದಿನಾಚರಣೆ ಆಚರಿಸಲಾಯಿತು.

ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಸೇನೆಯ ರಾಜ್ಯಾಧ್ಯಕ್ಷ ಜಗದೇವ ಸೂರ್ಯವಂಶಿ ಅವರು ಮಾತನಾಡಿ  ಆಪರೇಷನ್ ಪೋಲೊ ಮೂಲಕ ಹೈದ್ರಾಬಾದ್ ಪ್ರಾಂತವನ್ನು ಭಾರತದ ಒಕ್ಕೂಟದಲ್ಲಿ ಸೇರಿಸಿದ ಕೀರ್ತಿ ಸರದಾರ ವಲ್ಲಭಾಯಿ ಪಟೇಲ ಅವರಿಗೆ ಸಲ್ಲುತ್ತದೆ. ಅಂತಹ ಮಹಾನ್ ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ ನಮ್ಮ ಯುವಜನಾಂಗಕ್ಕೆ ಸ್ಫೂರ್ತಿ ಎಂದು ಹೇಳಿದರು.

ವಿಜಯಪುರ ಜಿಲ್ಲೆಯು ಹೈದ್ರಾಬಾದ್ ರಾಜ್ಯದ ಭಾಗವಾಗಿತ್ತು ಜಿಲ್ಲೆಯ ಸ್ವಾಮಿ ರಾಮಾನಂದ ತೀರ್ಥರು ವಿಮೋಚನಾ ಚಳುವಳಿಯ ನೇತೃತ್ವ ವಹಿಸಿ ವಿಮೋಚನಾ ಚಳುವಳಿಗೆ ದೊಡ್ಡ ಕೊಡುಗೆ ನೀಡಿದ್ದಾರೆ ಎಂದು ಹೇಳಿದರು.

371 (ಜೆ ) ಹೋರಾಟಗಾರರಾದ ವಿನೋದ ಖೇಡ, ಕರವೇ ಸ್ವಾಭಿಮಾನಿ ಸೇನಾ ರಾಜ್ಯ ಪ್ರಧಾನ ಕಾರ್ಯದರ್ಶಿ ಡಾ ಎಮ್ ಆರ್ ಗುರಿಕಾರ ಅವರು ಮಾತನಾಡಿ , ಹೈದ್ರಾಬಾದ್ ಪ್ರಾಂತ ವಿಮೋಚನಾ ಚಳುವಳಿಗೆ  ಜಿಲ್ಲೆಯ ಸಾವಿರಾರು ಜನ ಯೋಧರು ಬಲಿದಾನ ಗೈದಿದ್ದಾರೆ. ಸರ್ದಾರ ಬಸವರಾಜ ನಾಗೂರ , ಸಿದ್ದಗೊಂಡಪ್ಪಗೌಡ‌ ಪಾಟೀಲ, ಸಂಗಯ್ಯ ಹಿರೇಮಠ ಸೇರಿದಂತೆ ಹಲವರು ವಿಮೋಚನಾ ಚಳುವಳಿಗೆ ಅವಿರತವಾಗಿ ಶ್ರಮಿಸಿದ ಫಲವಾಗಿ ಹೈದ್ರಾಬಾದ್ ಪ್ರಾಂಥವು ಭಾರತದ ಒಕ್ಕೂಟ ವ್ಯವಸ್ಥೆಯ ಭಾಗವಾಗಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ 371 ಜೆ ಹೊರಾಟಗಾರ ಲಾಯಪ್ಪ ಇಂಗಳೆ, ಕಲ್ಲಪ್ಪ ಶಿವಶರಣ ಮಾತನಾಡಿ, ವಿಜಯಪುರ ಜಿಲ್ಲೆಯು  ಅಖಂಡ ಹೈದ್ರಾಬಾದ ಪ್ರಾಂತದ ಸ್ವಾತಂತ್ರ್ಯ ಚಳುವಳಿಯ ಹೆಬ್ಬಾಗಿಲಾಗಿದೆ. ಇಲ್ಲಿನ ಚಳುವಳಿಗಾರರು ನೇತೃತ್ವ ವಹಿಸಿದ್ದಕ್ಕಾಗಿ ಹೈದ್ರಾಬಾದ್ ಪ್ರಾಂತ ವಿಮೋಚನೆಗೊಂಡಿದೆ. ವಿಮೋಚನೆ ಚಳುವಳಿಯ ಶ್ರೇಯಸ್ಸು ಸ್ವಾಮಿ ರಾಮಾನಂದ ತೀರ್ಥರಿಗೆ ಸಲ್ಲಬೇಕು ಎಂದು ಹೇಳಿದ ಅವರು ವಿಜಯಪುರ ಜಿಲ್ಲೆಯನ್ನು ಸರ್ಕಾರ 371 ಜೆ ಮೀಸಲಾತಿ ಅಡಿ ಸೇರಿಸಿ ಜಿಲ್ಲೆಯ ಹೈದ್ರಾಬಾದ ವಿಮೋಚನಾ ಚಳುವಳಿಗಾರರಿಗೆ ಗೌರವ ಸಲ್ಲಿಸಬೇಕೆಂದರು.

ಕಾರ್ಯಕ್ರಮದಲ್ಲಿ ಹೋರಾಟಗಾರರಾದ ಮಲ್ಲಿಕಾರ್ಜುನ ಬಟಗಿ, ಅನಿಲ ಇಕ್ಕಡೆ, ಚಂದ್ರಶೇಖರ ಹೊಸಮನಿ, ಮಲ್ಲನಗೌಡ ಬಿರಾದಾರ,ಮಲ್ಲಿಕಾರ್ಜುನ ಲಂಗೋಟಿ, ಅಂಬಣ್ಣ ಗುನ್ನಾಪೂರ, ನೀಲಾಂಬಿಕಾ ಬಿರಾದಾರ , ಈಶ್ವರ ಚಂದ್ರ ಪಡಗಾನೂರ, ಶಂಕರ ಸಾತಪೋತೆ, ಶರಣಪ್ಪ ಕಟ್ಟಿ, ತಿಮ್ಮನಗೌಡ ಪಾಟೀಲ, ರಾಜಕುಮಾರ ಉಪ್ಪಾರ, ಚಿದಾನಂದ ಹಳ್ಳಿ, ವಿಠ್ಠಲ ಕರಿಗಾರ, ಉಮೇಶ ದೊಡಮನಿ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.

ರಾಜ್ಯಾದ್ಯಂತ ಆಸಕ್ತರಿಗೆ ವಿಶೇಷ ಸೂಚನೆ :

ಸುದ್ದಿ ಹಾಗೂ ಜಾಹೀರಾತುಗಳನ್ನು ಪ್ರಕಟಿಸಲು ಇಂದೇ ಸಂಪರ್ಕಿಸಿರಿ.ಸಂಪಾದಕರು ಈ ದಿವಸ ಕನ್ನಡ ದಿನ ಪತ್ರಿಕೆ ವ್ಯಾಟ್ಸಪ್ ಸಂಖ್ಯೆ : 7204279187 / 9900378892 ತಾವು ಟೈಪಿಸಿ eedivasa@gmail.com ಈ ಮೇಲ್ ಗೂ ಮೇಲ್ ಸೆಂಡ್ ಮಾಡಿದರೆ ಪ್ರಕಟಿಸಲಾಗುವುದು.



Sunday, September 13, 2026

ಗ್ರಂಥಾಲಯಗಳು ನಿಜ ಮನುಷ್ಯರನು ಸೃಷ್ಟಿಸುತ್ತವೆ: ಕುಲಸಚಿವ ಸೋಮಲಿಂಗ ಗೆಣ್ಣೂರ


ವಿಜಯಪುರ: ಪುಸ್ತಕಗಳು ನಮ್ಮ ದಿನನಿತ್ಯದ ಗೆಳೆಯರಾಗಬೇಕು, ಪುಸ್ತಕಪ್ರೀತಿಯಿಂದ ಮನುಷ್ಯರೂಪದ ಜೀವಿಯೊಬ್ಬ ನಿಜವಾದ ಮನುಷ್ಯನಾಗಿ ರೂಪುಗೊಳ್ಳುವುದು ಸಾಧ್ಯವಾಗುತ್ತದೆಂದು ಬಾಗಲಕೋಟೆ ವಿಶ್ವವಿದ್ಯಾಲಯದ ಕುಲಸಚಿವರು ಹಾಗೂ ಈ ಹಿಂದಿನ ವಿಜಯಪುರ ಜಿಲ್ಲೆಯ ಅಪರ ಜಿಲ್ಲಾಧಿಕಾರಿಗಳಾಗಿದ್ದ ಸೋಮಲಿಂಗ ಗೆಣ್ಣೂರ ಹೇಳಿದರು. 

ವಿಜಯಪುರದ ನವರಸಪುರದಲ್ಲಿರುವ ತಿಕೋಟಾದ ನೇತ್ರಾಧಿಕಾರಿ ಡಾ. ಪ್ರಕಾಶ ಪರಣಾಕಾರ ಅವರ ಮನೆಯಲ್ಲಿ ನಡೆದ ಮನೆಗೊಂದು ಗ್ರಂಥಾಲಯ ಅನುಷ್ಠಾನ ಸಮಾರಂಭದ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.

ಪ್ರತಿಯೊಂದು, ನಿಜವಾದ ಪುಸ್ತಕದ ಒಳಗೂ ನಮ್ಮೊಂದಿಗೆ ಸಂವಾದಕ್ಕೆ ಹಾತೊರೆಯುವ ಒಂದು ವ್ಯಕ್ತಿತ್ವ ಮತ್ತು ಮನಸ್ಸಿದೆ ದಿಕ್ಕು ತಪ್ಪಿಸುವ, ಮೌಢ್ಯಬಿತ್ತುವ ಕಂದಾಚಾರಕ್ಕೆ ದೂಡುವ ಪುಸ್ತಕಗಳ ತಿರಸ್ಕರಿಸಿ, ವೈಚಾರಿಕ ಹಾಗೂ ವೈಜ್ಞಾನಿಕತೆ ಬಿತ್ತುವ ಪುಸ್ತಕಗಳ ಓದಬೇಕು ಎಂದರು.

ಈ ಸಂದರ್ಭ ಡಾ. ಮಹಾಂತೇಶ ಬಿರಾದಾರ ಮಾತನಾಡಿ, ಒಂದು ಪುಸ್ತಕವನ್ನೋದುವುದೆಂದರೆ ಬಸವಣ್ಣನ ಸಮಸಮಾಜವನು ಮುನ್ನಡೆಸುವುದು ಎಂದರ್ಥ. ಅದೊಂದು ಹೊಸ ಅನುಭವ ಹಾಗೂ ಪ್ರಪಂಚದಲ್ಲಿ ಸಹೃದಯರು ಕೈಗೊಳ್ಳುವ ಪರ್ಯಟನವೋ ಅಥವಾ ರಸಯಾತ್ರೆಯೋ ಆಗಿರುತ್ತದೆ ಎಂದರು.

ಕನ್ನಡ ಪುಸ್ತಕ ಪ್ರಾಧಿಕಾರದ ವಿಜಯಪುರ ಜಿಲ್ಲಾ ಗ್ರಂಥಾಲಯ ಜಾಗೃತಿ ಸಮಿತಿ ಸದಸ್ಯ ಪ್ರೊ. ಬಸವರಾಜ ಜಾಲವಾದಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಪುಸ್ತಕ ಓದುವವನು ಒಂದೇ ಜನ್ಮದಲ್ಲಿ ಸಾವಿರ ಜೀವನ ಕಾಣಬಲ್ಲ, ಆದರೆ ಪುಸ್ತಕ ಓದದವನು ಒಂದು ಹುಟ್ಟಿನಲ್ಲಿ ಕೇವಲ ಒಂದೇ ಜೀವನ ಅನುಭವಿಸಬಲ್ಲ’ ಎಂದು ನೆನಪಿಸಿ, ಬುದ್ಧ, ಬಸವ, ಅಂಬೇಡ್ಕರರೇ ಈ ಜನ್ಮಕೆಷ್ಟು ಪುಸ್ತಕ ಓದಿದ ಬಳಿಕ ಇವನಾರವ, ಇವನಾರವ ಎನ್ನದೇ ಇಂವ ನಮ್ಮಂವ, ಇಂವ ನಮ್ಮವ ಎಂದಾದರೆ ಓದಿದ್ದಕ್ಕೂ ಸಾರ್ಥಕವಾಯಿತು ಎಂದು ಪುಸ್ತಕದ ಮಹತ್ವ ಸಾರಿದರು.

ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದ ಕಕಮರಿ ಗುರುದೇವಾಶ್ರಮದ ಪರಮಪೂಜ್ಯ ಶ್ರೀ ಆತ್ಮಾರಾಮ ಮಹಾಸ್ವಾಮಿಗಳು ಕನ್ನಡ ಪುಸ್ತಕ ಪ್ರಾಧಿಕಾರದವರಿಗೆ ಅಭಿನಂದನೆ ಸಲ್ಲಿಸಿ ಮಾತನಾಡಿ, ಇದೊಂದು ಆದರ್ಶ ಕಾರ್ಯಕ್ರಮ ಪ್ರತಿಯೊಬ್ಬರ ಮನೆಯಲ್ಲೂ ಈ ತರದ ಕಾರ್ಯಕ್ರಮಗಳನ್ನ ಮಾಡಿದಾಗ ಪುಸ್ತಕ ಪ್ರೀತಿಯ ಬಗ್ಗೆ ಒಲವು ಮೂಡುತ್ತದೆ ಹಾಗೂ ಪ್ರತಿಯೊಬ್ಬರೂ ತಮ್ಮ ತಮ್ಮ ಮನೆಯಲ್ಲಿ ಗ್ರಂಥಾಲಯ ಮಾಡಿಕೊಳ್ಳಬೇಕೆಂದು ಕರೆಕೊಟ್ಟರು. ಸ್ವಾಮಿಗಳಾದವರ ನಿಜವಾದ ಅಭಿಲಾಶೆಯೂ ಇದೇ ಆಗಿರುತ್ತದೆ. ಸಮಾಜ ಈ ತರದ ಕಾರ್ಯಕ್ರಮ ಹಮ್ಮಿಕೊಂಡು ಕತ್ತಲಿನಿಂದ ಹೊರಬರಲು ಕರೆಕೊಟ್ಟರು.

ಯರಡೋಣದ ಕುಮಾರೇಶ್ವರ ಸ್ವಾಮಿಗಳು, ಪ್ರಗತಿಪರ ರೈತ ಮಲ್ಲಿಕಾರ್ಜುನ ಹಂಜಗಿ, ಶ್ರೀಧರ್ ಮುರಾಳೆ, ಬಾಬೂರಾವ ಮಹಾರಾಜ, ವೀರೇಶ ಹಿರೇಮಠ ವೇದಿಕೆ ಮೇಲಿದ್ದರು.

ಬಸವರಾಜ ಬೆಳಗಲಿ ಸ್ವಾಗತಿಸಿದರು.ಸಿದ್ಧಾರ್ಥ ಪರಣಾಕರ ವಂದಿಸಿದರು. 

ರಾಜ್ಯಾದ್ಯಂತ ಆಸಕ್ತರಿಗೆ ವಿಶೇಷ ಸೂಚನೆ :

ಸುದ್ದಿ ಹಾಗೂ ಜಾಹೀರಾತುಗಳನ್ನು ಪ್ರಕಟಿಸಲು ಇಂದೇ ಸಂಪರ್ಕಿಸಿರಿ.ಸಂಪಾದಕರು ಈ ದಿವಸ ಕನ್ನಡ ದಿನ ಪತ್ರಿಕೆ ವ್ಯಾಟ್ಸಪ್ ಸಂಖ್ಯೆ : 7204279187 / 9900378892 ತಾವು ಟೈಪಿಸಿ eedivasa@gmail.com ಈ ಮೇಲ್ ಗೂ ಮೇಲ್ ಸೆಂಡ್ ಮಾಡಿದರೆ ಪ್ರಕಟಿಸಲಾಗುವುದು.

ಕಲ್ಯಾಣ ಕರ್ನಾಟಕ ಸಾರಿಗೆಯ ವಿಜಯಪುರ ವಿಭಾಗದಲ್ಲಿ ಹೈದ್ರಾಬಾದ್ ವಿಮೋಚನಾ ದಿನ ಆಚರಣೆಗೆ ಆಗ್ರಹಿಸಿ ಮನವಿ



ವಿಜಯಪುರ : ಕಲ್ಯಾಣ ಕರ್ನಾಟಕ ಸಾರಿಗೆ ಸಂಸ್ಥೆಯ ವಿಜಯಪುರ ವಿಭಾಗೀಯ
 ಕಚೇರಿ ಹಾಗೂ ಎಲ್ಲ ಘಟಕಗಳಲ್ಲಿ ಹೈದ್ರಾಬಾದ್ ವಿಮೋಚನಾ ದಿನಾಚರಣೆ (ಕಲ್ಯಾಣ ಕರ್ನಾಟಕ ಉತ್ಸವ ) ಆಚರಿಸಲು ಆಗ್ರಹಿಸಿ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಅಧ್ಯಕ್ಷ ಅರುಣಕುಮಾರ ಎಮ್ ವೈ ಪಾಟೀಲ ಹಾಗೂ ವಿಭಾಗೀಯ ನಿಯಂತ್ರಣಾಧಿಕಾರಿ ದೇವಾನಂದ ಬಿರಾದಾರ ಅವರಿಗೆ ಸಾರಿಗೆ ಅಧಿಕಾರಿ ಮಂಜುನಾಥ ಕೋಟ್ಯಾಳ ಅವರ ಮೂಲಕ ವಿಜಯಪುರ ಜಿಲ್ಲಾ  371 (ಜೆ) ಹೋರಾಟ ಸಮಿತಿಯಿಂದ ಇಂದು ಮನವಿ ಸಲ್ಲಿಸಿದರು.
ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಎಲ್ಲ  ವಿಭಾಗಗಳಲ್ಲಿ ಹೈದ್ರಾಬಾದ್ ವಿಮೋಚನಾ ದಿನ (ಕಲ್ಯಾಣ ಕರ್ನಾಟಕ ಉತ್ಸವ) ವನ್ನು ಆಚರಣೆ ಮಾಡುತ್ತ ಬರುತ್ತಿದ್ದಾರೆ.ಈ ಬಾರಿ ವಿಜಯಪುರ  ವಿಭಾಗದ ಕೇಂದ್ರ ಕಚೇರಿ ಸೇರಿದಂತೆ ಎಲ್ಲ ಘಟಕಗಳಲ್ಲಿ ಹೈದ್ರಾಬಾದ್ ವಿಮೋಚನಾ ದಿನ (ಕಲ್ಯಾಣ ಕರ್ನಾಟಕ ಉತ್ಸವ ) ಆಚರಣೆ ಮಾಡಿ ವಿಮೋಚನಾ ಚಳುವಳಿ ನೇತೃತ್ವ ವಹಿಸಿದ 
ಸ್ವಾಮಿ ರಾಮಾನಂದ ತೀರ್ಥರು, ಸರ್ದಾರ ಡಾ ಬಸವರಾಜ ನಾಗೂರು, ಸಿದ್ದಗೊಂಡಪ್ಪಗೌಡ ಪಾಟೀಲ ಅವರು ಸೇರಿದಂತೆ ಈ ಭಾಗದ ಅನೇಕ ಸ್ವಾತಂತ್ರ‍್ಯ  ಹೋರಾಟಗಾರರು ಹಾಗೂ ವಿಮೋಚನಾ ಚಳುವಳಿಯ ಮಹಾನ್ ಚೇತನಗಳಿಗೆ ಗೌರವ ಸಲ್ಲಿಸಬೇಕು ಎಂದು ಹೋರಾಟಗಾರರು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಹೋರಾಟಗಾರರಾದ ವಿನೋದ ಖೇಡ ಲಾಯಪ್ಪ ಇಂಗಳೆ ಅನಿಲ ಇಕ್ಕಡೆ, ಗಿರೀಶ ಕಲಘಟಗಿ ಸೇರಿದಂತೆ  ಮುಂತಾದವರು ಉಪಸ್ಥಿತರಿದ್ದರು.

ರಾಜ್ಯಾದ್ಯಂತ ಆಸಕ್ತರಿಗೆ ವಿಶೇಷ ಸೂಚನೆ :

ಸುದ್ದಿ ಹಾಗೂ ಜಾಹೀರಾತುಗಳನ್ನು ಪ್ರಕಟಿಸಲು ಇಂದೇ ಸಂಪರ್ಕಿಸಿರಿ.ಸಂಪಾದಕರು ಈ ದಿವಸ ಕನ್ನಡ ದಿನ ಪತ್ರಿಕೆ ವ್ಯಾಟ್ಸಪ್ ಸಂಖ್ಯೆ : 7204279187 / 9900378892 ತಾವು ಟೈಪಿಸಿ eedivasa@gmail.com ಈ ಮೇಲ್ ಗೂ ಮೇಲ್ ಸೆಂಡ್ ಮಾಡಿದರೆ ಪ್ರಕಟಿಸಲಾಗುವುದು.


ವಿಜಯಾನಂದ ಟ್ರಾವೆಲ್ಸ್ ಹೊಸ ದಾಖಲೆ!

 ಸಾರಿಗೆ ಕ್ಷೇತ್ರದಲ್ಲಿ ವಿಜಯಾನಂದ ಟ್ರಾವೆಲ್ಸ್ ಪ್ರೈ.ಲಿ. (ವಿಟಿಪಿಎಲ್) ಹೊಸ ದಾಖಲೆ ಬರೆದಿದೆ. ವೋಲ್ವೋ ಇಂಡಿಯಾ ಸಂಸ್ಥೆ ಮೂಲಕ ಸಿಂಗಲ್ ಆರ್ಡರ್‌ನಲ್ಲಿ 150 ವೋಲ್ವೋ ಬಸ್‌ಗಳನ್ನು ಖರೀದಿಸಿದೆ. ವಿಜಯಾನಂದ ಟ್ರಾವೆಲ್ಸ್ ಪ್ರೈ.ಲಿ.ಗೆ  150 ವೋಲ್ವೋ-9600 ಐಷಾರಾಮಿ ಸ್ಲೀಪರ್ ಕೋಚ್ ಗೋಲ್ಡ್ ಕ್ಲಾಸ್ ಬಸ್‌ಗಳನ್ನು ಹಸ್ತಾಂತರಿಸಿತು. ಈ ಒಪ್ಪಂದವು ಖಾಸಗಿ ಟ್ರಾವೆಲ್ಸ್‌ವೊಂದು ವೋಲ್ವೋ ಬಸ್‌ಗೆ ನೀಡಿದ ಅತಿದೊಡ್ಡ ಆರ್ಡರ್ ಆಗಿದೆ.

ನಗರದ ಖಾಸಗಿ ಹೋಟೆಲ್‌ನಲ್ಲಿ ನಡೆದ ಸಮಾರಂಭದಲ್ಲಿ ವೋಲ್ವೋ ಸಂಸ್ಥೆಯ ಎಂಡಿ ಮತ್ತು ಸಿಇಒ ಬಿ. ಶ್ರೀನಿವಾಸ್ ಅವರು ವಿಆರ್‌ಎಲ್ ಮೀಡಿಯಾ ಪ್ರೈ.ಲಿ. ವ್ಯವಸ್ಥಾಪಕ ನಿರ್ದೇಶಕ ಡಾ. ಆನಂದ ಸಂಕೇಶ್ವರ ಹಾಗೂ ವಿಜಯಾನಂದ ಟ್ರಾವೆಲ್ಸ್ ಪ್ರೈ.ಲಿ. ವ್ಯವಸ್ಥಾಪಕ ನಿರ್ದೇಶಕ ಶಿವಾ ಸಂಕೇಶ್ವರ ಅವರಿಗೆ ಕೀ ಹಸ್ತಾಂತರಿಸುವ ಮೂಲಕ ಬಸ್‌ಗಳನ್ನು ನೀಡಿದರು. ವೋಲ್ವೋ ಸಂಸ್ಥೆಯ ವಿಇ ವಾಣಿಜ್ಯ ವಾಹನಗಳು ವಿಭಾಗದ ಮುಖ್ಯ ವಾಣಿಜ್ಯ ಅಧಿಕಾರಿ ಎಸ್.ಎಸ್. ಗಿಲ್ ಮತ್ತು ವಿಇ ವಾಣಿಜ್ಯ ವಾಹಗಳ ಇವಿಪಿ ಬಸ್ ವಿಭಾಗದ ಸುರೇಶ್ ಚೆಟ್ಟಿಯಾರ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಈ ವೇಳೆ ಮಾತನಾಡಿದ ಆನಂದ ಸಂಕೇಶ್ವರ, 1996ರಲ್ಲಿ ವಿಜಯಾನಂದ ಟ್ರಾವೆಲ್ಸ್ ಆರಂಭವಾಯಿತು. 2007ರಿಂದ ವೋಲ್ವೋ ಕಂಪನಿ ಜತೆ ನಮ್ಮ ಒಪ್ಪಂದವಿದೆ. ಮೊದಲು 20 ಬಸ್‌ಗಳನ್ನು ಖರೀದಿ ಮಾಡಲಾಗಿತ್ತು. 2012ರ ವೇಳೆ 100 ಬಸ್‌ಗಳನ್ನು ಆರ್ಡರ್ ಮಾಡಿದ್ದೇವು. ಈಗ 150 ಬಸ್‌ಗಳನ್ನು ಆರ್ಡರ್ ಮಾಡಿದ್ದೇವೆ. ರಾಜ್ಯ ಮತ್ತು ದೇಶಾದ್ಯಂತ ನಮ್ಮ ನೆಟ್‌ವರ್ಕ್ ಇರುವುದರಿಂದ ಪ್ರಯಾಣಿಕರಿಗೆ ಅತಿ ಉತ್ತಮವಾದುದನ್ನು ನೀಡಲು ಬಯಸುತ್ತೇವೆ ಎಂದರು.
ಇತ್ತೀಚಿನ ದಿನಗಳಲ್ಲಿ ಪ್ರಯಾಣಿಕರು ಬಸ್ ಬುಕ್ ಮಾಡುವ ವೇಳೆಯೇ ಶೌಚಾಲಯದ ವ್ಯವಸ್ಥೆ ಇದೆಯೇ ಎಂಬುದನ್ನು ಕೇಳಿ ಬುಕ್ ಮಾಡುತ್ತಿದ್ದಾರೆ. ಶೌಚಾಲಯದ ವ್ಯವಸ್ಥೆ ಇರುವುದರಿಂದ ಪ್ರಯಾಣ ಅವಧಿ ಕೂಡ ಕಡಿಮೆಯಾಗಲಿದೆ. ಶೌಚಕ್ಕಾಗಿ ಒಂದೆಡೆ ಬಸ್ ನಿಲ್ಲಿಸಿದರೆ ಅರ್ಧ ಗಂಟೆ ಸಮಯ ವ್ಯರ್ಥವಾಗುತ್ತಿತ್ತು. ಈ ಸಮಯ ಉಳಿಯುವುದರಿಂದ ನಿಗದಿತ ಸಮಯಕ್ಕಿಂತ ಮೊದಲೇ ನಿಗದಿತ ಸ್ಥಳವನ್ನು ತಲುಲಿದರೆ, ಪ್ರಯಾಣಿಕರ ಪ್ರಯಾಣದ ಅವಧಿ ಕಡಿಮೆಯಾಗಿ ಬೇಗ ಸ್ಥಳವನ್ನು ತಲುಪಲಿದ್ದಾರೆ ಎಂದರು.

ಅನುಮಾನವೇ ಬೇಡ, ವೋಲ್ವೋ ನೆಕ್ಟ್ ಲೆವೆಲ್: ಶಿವಾ ಸಂಕೇಶ್ವರ
ಎಲ್ಲ ಬಸ್‌ಗಳನ್ನು ಒಂದು ಕಡೆ ನಿಲ್ಲಸಿದರೆ, ವೋಲ್ವೋ ಮತ್ತೊಂದು ಕಡೆ ನಿಲ್ಲಲ್ಲಿದೆ. ವೋಲ್ವೋಗೆ ತನ್ನದೇ ವಿಶೇಷತೆ ಮತ್ತು ಆಕರ್ಷಕ ಹೊರನೋಟವಿದೆ. ಆದ್ದರಿಂದಲೇ ಹೇಳುತ್ತಿದ್ದೇನೆ, ಅನುಮಾನವೇ ಬೇಡ, ವೋಲ್ವೋ ನೆಕ್ಟ್ ಲೆವೆಲ್‌ಗೆ ಇದೆ. ಈ ಮೊದಲು ಸ್ವೀಡನ್‌ನಲ್ಲಿ ಉತ್ಪಾದನೆ ಮಾಡಲಾಗುತ್ತಿತ್ತು. ಈಗ ಹೊಸಕೋಟೆ ಘಟಕದಲ್ಲಿಯೇ ಎಲ್ಲ ಬಸ್‌ಗಳನ್ನು ಉತ್ಪಾದನೆ ಮಾಡಲಾಗುತ್ತಿದೆ ಎಂದು ವಿಜಯಾನಂದ ಟ್ರಾವೆಲ್ಸ್ ಪ್ರೈ.ಲಿ. ವ್ಯವಸ್ಥಾಪಕ ನಿರ್ದೇಶಕ ಶಿವ ಸಂಕೇಶ್ವರ ತಿಳಿಸಿದರು.

ಸುರಕ್ಷತೆ, ವಿಶ್ವಾಸಾರ್ಹತೆಯ ಪಾಲುದಾರಿಕೆ: ಶ್ರೀನಿವಾಸ್
ಈ ಹೂಡಿಕೆಯು ತಂತ್ರಜ್ಞಾನ, ಸುರಕ್ಷತಾ ಇಂಜಿನಿಯರಿಂಗ್ ಮತ್ತು ಸೇವಾ ಪರಿಸರ ವ್ಯವಸ್ಥೆಯಲ್ಲಿ ನಿರಂತರ ವಿಶ್ವಾಸವನ್ನು ಪ್ರತಿಬಿಂಬಿಸುತ್ತದೆ ಎಂದು ವೋಲ್ವೋ ಸಂಸ್ಥೆಯ ಎಂಡಿ ಮತ್ತು ಸಿಇಒ ಬಿ. ಶ್ರೀನಿವಾಸ್ ತಿಳಿಸಿದರು.
ಭಾರತದಲ್ಲಿ ವೋಲ್ವೋ ಬಸ್‌ಗಳ ಅತ್ಯಂತ ಮೌಲ್ಯಯುತ ಮತ್ತು ದೀರ್ಘಕಾಲೀನ ಖಾಸಗಿ ಆಪರೇಟರ್ ಪಾಲುದಾರರಲ್ಲಿ ವಿಜಯಾನಂದ ಟ್ರಾವೆಲ್ಸ್ ಒಂದಾಗಿದೆ. ಈ ಹೆಗ್ಗುರುತು ಆದೇಶವು ದಶಕಗಳಿಂದ ನಿರ್ಮಿಸಲಾದ ನಂಬಿಕೆಗೆ ಪ್ರಬಲ ಸಾಕ್ಷಿಯಾಗಿದೆ. ಪ್ರಯಾಣಿಕರ ಸುರಕ್ಷತೆ, ಸೌಕರ್ಯ ಮತ್ತು ವಿಶ್ವಾಸಾರ್ಹತೆಗೆ ಅತ್ಯುನ್ನತ ಮಾನದಂಡವನ್ನು ನಿಗದಿಪಡಿಸುವ ನಿರ್ವಾಹಕರಿಗೆ ಆದ್ಯತೆಯ ವೇದಿಕೆಯಾಗಲು ನಾವು ಅಪಾರ ಹೆಮ್ಮೆಪಡುತ್ತೇವೆ ಎಂದರು.

ವಿಮಾನ ಮಾದರಿ ಶೌಚಾಲಯ ವ್ಯವಸ್ಥೆ
ಸಾಮಾನ್ಯವಾಗಿ ದೂರದ ಪ್ರಯಾಣದ ವೇಳೆ ಅಗತ್ಯವಾಗಿ ಬೇಕಾಗಿರುವುದು ಶೌಚಾಲಯ. ಹಿರಿಯ ನಾಗರಿಕರು, ಮಹಿಳೆಯರು ಮತ್ತು ಮಕ್ಕಳು ಪ್ರಯಾಣಕ್ಕೆ ಶೌಚಾಲಯವಿದ್ದರೆ ಆರಾಯಾಗಿ ಪ್ರಯಾಣ ಮಾಡಬಹುದು. ವೋಲ್ವೋ 9600 ಕೋಚ್‌ನಲ್ಲಿ ವಿಮಾನದಲ್ಲಿರುವಂತೆ ಶೌಚಾಲಯದ ವ್ಯವಸ್ಥೆ ಇದೆ. ಇದರಿಂದ ದೂರದ ಪ್ರಯಾಣಕ್ಕೆ ಹೇಳಿ ಮಾಡಿಸಿದ ಕೋಚ್ ಆಗಿದೆ. ಶೌಚಕ್ಕೆ ಹೋದಾಗಲೂ ಬಸ್ ಕುಲುಕುವುದಿಲ್ಲ. ಮನೆಗಳಲ್ಲಿನ ಶೌಚಕ್ಕೆ ಹೋದಾಗ ಆಗುವ ಅನುಭವವೇ ಇಲ್ಲಿಯೂ ಆಗಲಿದೆ.
ಆರಾಮದಾಯಕ ಸೀಟುಗಳು
ನೂರಾರು ಕಿಮೀ ಪ್ರಯಾಣ ಮಾಡುವುದರಿಂದ ಸ್ಲೀಪರ್ ಕೋಚ್‌ಗಳಲ್ಲಿನ ಸೀಟುಗಳು ಬಹಳ ಮುಖ್ಯ ಪಾತ್ರ ವಹಿಸಲಿವೆ. ಮೃದುವಾದ ಸೀಟುಗಳನ್ನು ಅಳವಡಿಸಲಾಗಿದ್ದು, ಗ್ರಾಹಕರು ತಮ್ಮ ಮನೆಯಲ್ಲಿ ಮಲಗಿರುವ ಭಾವನೆ ಬರಲಿದೆ. ಸೀಟುಗಳು ವಿಶಾಲವಾಗಿದ್ದು, ಎಲ್ಲಿಯೂ ಕಿಷ್ಕಿಂಧೆ ಎನಿಸುವುದಿಲ್ಲ. ನೂರಾರು ಕಿಮೀ ದೂರ ಪ್ರಯಾಣಿಸಿದರೂ ಮೈಕೈ ನೋವು ಬಾರದಂತೆ ಆರಾಮದಾಯಕವಾಗಿರುವಂತೆ ಮಾಡಿರುವುದು ಪ್ರಯಾಣಿಕರ ಆಕರ್ಷಣೆಯಾಗಿದೆ.

ರಾಜ್ಯಾದ್ಯಂತ ಆಸಕ್ತರಿಗೆ ವಿಶೇಷ ಸೂಚನೆ :

ಸುದ್ದಿ ಹಾಗೂ ಜಾಹೀರಾತುಗಳನ್ನು ಪ್ರಕಟಿಸಲು ಇಂದೇ ಸಂಪರ್ಕಿಸಿರಿ.ಸಂಪಾದಕರು ಈ ದಿವಸ ಕನ್ನಡ ದಿನ ಪತ್ರಿಕೆ ವ್ಯಾಟ್ಸಪ್ ಸಂಖ್ಯೆ : 7204279187 / 9900378892 ತಾವು ಟೈಪಿಸಿ eedivasa@gmail.com ಈ ಮೇಲ್ ಗೂ ಮೇಲ್ ಸೆಂಡ್ ಮಾಡಿದರೆ ಪ್ರಕಟಿಸಲಾಗುವುದು.

1,000 ಬಡ ವಿದ್ಯಾರ್ಥಿಗಳಿಗೆ ಶ್ರೀರಾಮ್ ಫೈನಾನ್ಸ್ ವಿದ್ಯಾರ್ಥಿವೇತನ


ವಿಜಯಪುರ: ಬಡ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಉತ್ತೇಜನ ನೀಡುವ ಉದ್ದೇಶದಿಂದ ಶ್ರೀರಾಮ್ ಫೈನಾನ್ಸ್ ಲಿಮಿಟೆಡ್‌ನ ವಿಜಯಪುರ ರೀಜನ್ ವತಿಯಿಂದ ನಗರದ ಆನಂದನಗರದಲ್ಲಿರುವ ಭಾವಸಾರ ಕ್ಷತ್ರೀಯ ಮಂಗಲ ಕಾರ್ಯಾಲಯದಲ್ಲಿ ಬೃಹತ್ ವಿದ್ಯಾರ್ಥಿವೇತನ ವಿತರಣಾ ಸಮಾರಂಭ ನಡೆಯಿತು. ಕಾರ್ಯಕ್ರಮದಲ್ಲಿ ಸುಮಾರು 1,000 ವಿದ್ಯಾರ್ಥಿಗಳು ವಿದ್ಯಾರ್ಥಿವೇತನ ಸ್ವೀಕರಿಸಿದರು.

ಕಾರ್ಯಕ್ರಮದಲ್ಲಿ ಬಳ್ಳಾರಿ ಜೋನಲ್ ಬಿಸಿನೆಸ್ ಹೆಡ್ ಚೆನ್ನನಗೌಡ ಎಚ್. ಮಾತನಾಡಿ, ಶಿಕ್ಷಣದಿಂದ ಯಾವುದೇ ಮಗು ವಂಚಿತವಾಗಬಾರದು ಎಂಬ ಉದ್ದೇಶದಿಂದ ಸಂಸ್ಥೆ ವಿದ್ಯಾರ್ಥಿವೇತನ ಯೋಜನೆಯನ್ನು ನಿರಂತರವಾಗಿ ನಡೆಸಿಕೊಂಡು ಬರುತ್ತಿದೆ ಎಂದು ಹೇಳಿದರು.

1974ರಲ್ಲಿ ಆರಂಭಗೊಂಡ ಸಂಸ್ಥೆ, 1979ರಲ್ಲಿ ಶ್ರೀರಾಮ್ ಟ್ರಾನ್ಸ್‌ಪೋರ್ಟ್ ಫೈನಾನ್ಸ್ ಆಗಿ ಕಾರ್ಯನಿರ್ವಹಿಸಿ, ಇದೀಗ ಶ್ರೀರಾಮ್ ಫೈನಾನ್ಸ್ ಲಿಮಿಟೆಡ್ ಆಗಿ ದೇಶದ ಪ್ರಮುಖ ಎನ್‌ಬಿಎಫ್‌ಸಿ ಸಂಸ್ಥೆಗಳಲ್ಲಿ ಒಂದಾಗಿ ಬೆಳೆದಿದೆ. ಸಂಸ್ಥಾಪಕ ಪದ್ಮಭೂಷಣ ಆರ್. ತ್ಯಾಗರಾಜನ್ ಅವರ ದೂರದೃಷ್ಟಿಯಂತೆ ಚಾಲಕರು ಹಾಗೂ ಸಣ್ಣ ವ್ಯಾಪಾರಿಗಳನ್ನು ಆರ್ಥಿಕವಾಗಿ ಸಬಲಗೊಳಿಸುವ ಕಾರ್ಯಕ್ಕೆ ಸಂಸ್ಥೆ ಆದ್ಯತೆ ನೀಡಿದೆ ಎಂದು ತಿಳಿಸಿದರು.

ಲಾರಿ ಹಾಗೂ ಟ್ರಕ್ ಚಾಲಕರು, ಕ್ಲೀನರ್‌ಗಳು ತಮ್ಮ ವೃತ್ತಿಯ ನಿಮಿತ್ತ ಸದಾ ಊರೂರು ಸಂಚರಿಸುವುದರಿಂದ ಅವರ ಮಕ್ಕಳ ಶಿಕ್ಷಣಕ್ಕೆ ಯಾವುದೇ ರೀತಿಯ ಅಡಚಣೆಯಾಗಬಾರದು ಎಂಬ ಉದ್ದೇಶದಿಂದ ಈ ವಿದ್ಯಾರ್ಥಿವೇತನ ಯೋಜನೆ ರೂಪಿಸಲಾಗಿದೆ. ವಿಶೇಷವಾಗಿ ಚಾಲಕರ ಮಕ್ಕಳ ಶಿಕ್ಷಣಕ್ಕೆ ಆರ್ಥಿಕ ನೆರವು ನೀಡುವ ಮೂಲಕ ಅವರ ವಿದ್ಯಾಭ್ಯಾಸ ಮುಂದುವರಿಸಲು ಸಂಸ್ಥೆ ಪ್ರೋತ್ಸಾಹ ನೀಡುತ್ತಿದೆ. ಇದರ ಜೊತೆಗೆ ಬಡ ಕುಟುಂಬಗಳ ಪ್ರತಿಭಾವಂತ ಮಕ್ಕಳು ಆರ್ಥಿಕ ಸಮಸ್ಯೆಯಿಂದ ಶಿಕ್ಷಣ ಮೊಟಕುಗೊಳಿಸಬಾರದು ಎಂಬ ಆಶಯದಿಂದ ದೇಶಾದ್ಯಂತ ಪ್ರತಿವರ್ಷ 30 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಸಂಸ್ಥೆ ವಿದ್ಯಾರ್ಥಿವೇತನ ನೀಡುತ್ತಿದೆ ಎಂದರು.

8ರಿಂದ 10ನೇ ತರಗತಿ ವಿದ್ಯಾರ್ಥಿಗಳಿಗೆ ವಾರ್ಷಿಕ ₹4,000 ಹಾಗೂ ಪಿಯುಸಿ 11 ಮತ್ತು 12ನೇ ತರಗತಿ ವಿದ್ಯಾರ್ಥಿಗಳಿಗೆ ವಾರ್ಷಿಕ ₹4,500 ವಿದ್ಯಾರ್ಥಿವೇತನ ನೀಡಲಾಗುತ್ತಿದೆ. ಕನಿಷ್ಠ ಶೇ.60 ಅಂಕ ಗಳಿಸುವ ಅರ್ಹ ವಿದ್ಯಾರ್ಥಿಗಳಿಗೆ ಈ ನೆರವನ್ನು ನಿರಂತರವಾಗಿ ಒದಗಿಸಲಾಗುತ್ತಿದೆ ಎಂದು ವಿವರಿಸಿದರು.

ಶ್ರೀರಾಮ್ ಫೌಂಡೇಶನ್ ಮೂಲಕ ವಿದ್ಯಾರ್ಥಿವೇತನದ ಜತೆಗೆ ವಿವಿಧ ಸಮಾಜಮುಖಿ ಕಾರ್ಯಗಳನ್ನು ಕೈಗೊಳ್ಳಲಾಗುತ್ತಿದೆ. ಕಿವುಡ ಮಕ್ಕಳ ಶಾಲೆ ನಡೆಸುವುದು, ವೃದ್ಧಾಶ್ರಮಗಳ ನಿರ್ವಹಣೆ, ಪರಿಸರ ಸಂರಕ್ಷಣೆಗಾಗಿ ಗಿಡ ನೆಡುವುದು, ಸ್ವಚ್ಛತಾ ಕಾರ್ಯಕ್ರಮಗಳು ಹಾಗೂ ಅಂಧ ಮಕ್ಕಳಿಗೆ ನೆರವು ಸೇರಿದಂತೆ ಹಲವು ಸಾಮಾಜಿಕ ಸೇವಾ ಕಾರ್ಯಗಳನ್ನು ಸಂಸ್ಥೆ ನಡೆಸುತ್ತಿದೆ ಎಂದು ತಿಳಿಸಿದರು.

ಮಸೂತಿಯ ಜಗದೀಶ್ವರ ಹಿರೇಮಠದ ಶ್ರೀ ಮ.ಘ.ಚ. ಪ್ರಭುಕುಮಾರ ಶಿವಾಚಾರ್ಯ ಮಹಾಸ್ವಾಮಿಗಳು ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ವಿದ್ಯಾರ್ಥಿಗಳಿಗೆ ಆಶೀರ್ವಚನ ನೀಡಿದರು.

ಹಿರಿಯ ವೈದ್ಯ ಡಾ. ಎಲ್.ಎಚ್. ಬಿದರಿ ಮಾತನಾಡಿ, ಶ್ರೀರಾಮ್ ಫೈನಾನ್ಸ್ ನೀಡುತ್ತಿರುವ ವಿದ್ಯಾರ್ಥಿವೇತನವನ್ನು ವಿದ್ಯಾರ್ಥಿಗಳು ಸದ್ಬಳಕೆ ಮಾಡಿಕೊಂಡು, ಶಿಕ್ಷಣದತ್ತ ಹೆಚ್ಚಿನ ಗಮನ ಹರಿಸಬೇಕು. ಆರ್ಥಿಕ ನೆರವು ತಮ್ಮ ಭವಿಷ್ಯ ರೂಪಿಸಿಕೊಳ್ಳಲು ದೊರೆತಿರುವ ಉತ್ತಮ ಅವಕಾಶವಾಗಿದ್ದು, ಪರಿಶ್ರಮ, ಶಿಸ್ತು ಹಾಗೂ ಆತ್ಮವಿಶ್ವಾಸದಿಂದ ಮುನ್ನಡೆದು ಸಮಾಜಕ್ಕೆ ಕೊಡುಗೆ ನೀಡುವ ವ್ಯಕ್ತಿಗಳಾಗಬೇಕು ಎಂದು ಪ್ರೇರೇಪಿಸಿದರು.

ಕಾರ್ಯಕ್ರಮದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಆರ್.ವಿ. ಹೊಸೂರ, ವಿಜಯಪುರ ಮಹಾನಗರ ಪಾಲಿಕೆ ಮಹಾಪೌರ ಮಡಿವಾಳಪ್ಪ ಕರಡಿ, ವಿ.ಡಿ.ಎ ಅಧ್ಯಕ್ಷ ಗಂಗಾಧರ ಸಂಬಣ್ಣಿ, ಮಹಾನಗರ ಪಾಲಿಕೆ ಸದಸ್ಯೆ ರಶ್ಮಿ ಬಿ. ಕೋರಿ, ಲಾರಿ ಅಸೋಸಿಯೇಶನ್ ಅಧ್ಯಕ್ಷ ಆಸೀಫ್ ಎಲ್. ಬಗಲಿ (ಪಟ್ಟೇಲ), ಗುತ್ತಿಗೆದಾರರ ಸಂಘದ ಉಪಾಧ್ಯಕ್ಷ ಎಚ್.ಆರ್. ಚಿಂಚಲಿ ಭಾಗವಹಿಸಿದ್ದರು.

ವಿಜಯಪುರ ರೀಜನಲ್ ಬಿಸಿನೆಸ್ ಹೆಡ್ ಉಮೇಶ ಬಿರಾದಾರ ಹಾಗೂ ಸಿಬ್ಬಂದಿ ವರ್ಗದವರು ಆಗಮಿಸಿದ ಎಲ್ಲ ಅತಿಥಿ-ಗಣ್ಯರನ್ನು, ವಿದ್ಯಾರ್ಥಿಗಳನ್ನು ಹಾಗೂ ಪಾಲಕರನ್ನು ಸ್ವಾಗತಿಸಿ ಸತ್ಕರಿಸಿದರು.

ರಾಜ್ಯಾದ್ಯಂತ ಆಸಕ್ತರಿಗೆ ವಿಶೇಷ ಸೂಚನೆ :

ಸುದ್ದಿ ಹಾಗೂ ಜಾಹೀರಾತುಗಳನ್ನು ಪ್ರಕಟಿಸಲು ಇಂದೇ ಸಂಪರ್ಕಿಸಿರಿ.ಸಂಪಾದಕರು ಈ ದಿವಸ ಕನ್ನಡ ದಿನ ಪತ್ರಿಕೆ ವ್ಯಾಟ್ಸಪ್ ಸಂಖ್ಯೆ : 7204279187 / 9900378892 ತಾವು ಟೈಪಿಸಿ eedivasa@gmail.com ಈ ಮೇಲ್ ಗೂ ಮೇಲ್ ಸೆಂಡ್ ಮಾಡಿದರೆ ಪ್ರಕಟಿಸಲಾಗುವುದು.