Monday, September 18, 2023

ಜಿಲ್ಲೆಯಲ್ಲಿ ಮೂರನೇ ಶನಿವಾರ ನಡೆದ ಸಭೆಯಲ್ಲಿ 48,315 ಪಾಲಕರು ಭಾಗಿ ಅಂಗನವಾಡಿ ಕೇಂದ್ರಗಳ ಅಭಿವೃದ್ಧಿ ಹಾಗೂ ಮಕ್ಕಳ ಸೃಜನಾತ್ಮಕ -ಕ್ರಿಯಾತ್ಮಕ ಚಟುವಟಿಕೆ ತಿಳಿದುಕೊಳ್ಳಲು ಪಾಲಕರ ಸಭೆ ಯಶಸ್ವಿ : ಜಿಪಂ ಸಿಇಓ ರಾಹುಲ್ ಶಿಂಧೆ

 ಈ ದಿವಸ ವಾರ್ತೆ

ವಿಜಯಪುರ: ಜಿಲ್ಲೆಯ ಅಂಗನವಾಡಿ ಕೇಂದ್ರಗಳಿಗೆ ಗ್ರಾಮ ಪಂಚಾಯತಿ ಮೂಲಕ  ಮಕ್ಕಳ ಸ್ನೇಹಿ ಚೇರ್ ಹಾಗೂ ಟೇಬಲ್ ದೊರಕಿಸಿಕೊಡುವ ಮೂಲಕ ಅಂಗನವಾಡಿ ಕೆಂದ್ರದಲ್ಲಿನ ದಾಖಲಾದ ಮಕ್ಕಳು ಓದಿನಲ್ಲಿ ಆಸಕ್ತಿ ತಾಳುವುದಷ್ಷೇ ಅಲ್ಲದೇ, ಉತ್ಸುಕತೆ, ಉಲ್ಲಾಸದಿಂದ ಅಂಗನವಾಡಿ ಕೇಂದ್ರಕ್ಕೆ ಬರಲು ಪ್ರೇರೇಪಣೆಯಾಗಿದೆ. 

ಇದೇ ಮೂರನೇ ಶನಿವಾರ ಪಾಲಕರ ಸಭೆಯಲ್ಲಿ ತಮ್ಮ  ಮಕ್ಕಳ ವಿವಿಧ ಸೃಜನಾತ್ಮಕ- ಕ್ರಿಯಾತ್ಮಕ ಚಟುವಟಿಕೆಯಲ್ಲಿ ಭಾಗವಹಿಸುವುದನ್ನು ಪಾಲಕರು ತಿಳಿದುಕೊಳ್ಳಲು ಈ ಸಭೆ  ಅತ್ಯಂತ ಯಶಸ್ವಿಯಾಗಿದೆ ಎಂದು ಜಿಲ್ಲಾ ಪಂಚಾಯತಿಯ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ರಾಹುಲ್ ಶಿಂಧೆ ಹೇಳಿದ್ದಾರೆ. 

ಜಿಲ್ಲೆಯಲ್ಲಿನ 2,755 ಅಂಗನವಾಡಿ ಕೇಂದ್ರಗಳಲ್ಲಿ ಪಾಲಕರ ಸಭೆ ನಡೆಸಲಾಯಿತು. ಈ ಸಭೆಯಲ್ಲಿ 48,315 ಕ್ಕೂ ಹೆಚ್ಚು ಪಾಲಕರು ಭಾಗವಹಿಸಿದ್ದರು. ಜಿಲ್ಲೆಯಾದ್ಯಂತ  ಇರುವ ಅಂಗನವಾಡಿ ಕೇಂದ್ರಗಳಲ್ಲಿ ಪ್ರತಿ ತಿಂಗಳ ಮೂರನೇ ಶನಿವಾರ ಪಾಲಕರ ಸಭೆ ಆಯೋಜಿಸಲಾಗುತ್ತಿದ್ದು, ಪಾಲಕರು ಭಾಗವಹಿಸಿ, ತಮ್ಮ ಮಕ್ಕಳ ಶೈಕ್ಷಣಿಕ, ಆಟೋಟ ಪ್ರಗತಿ ತಿಳಿದುಕೊಳ್ಳಬಹುದಾಗಿದೆ.

ಅಂಗನವಾಡಿಯಲ್ಲಿ ದೊರೆಯುವ ಪೌಷ್ಟಿಕ ಆಹಾರದಿಂದ ಮಕ್ಕಳು ದೈಹಿಕ ಹಾಗೂ ಬೌದ್ಧಿಕವಾಗಿ ಸದೃಢರಾಗುವಲ್ಲಿಯೂ ಯಶ ಕಾಣಲಾಗುತ್ತಿದೆ.

0-6 ವರ್ಷದ ವಯೋಮಾನದ ಮಕ್ಕಳ ಆರೋಗ್ಯ ತಪಾಸಣೆ, ಮಕ್ಕಳ ಪೌಷ್ಠಿಕ ಮಟ್ಟ ಹೆಚ್ಚಿಸಲು ಹಾಲು, ಮೊಟ್ಟೆ ಹಾಗೂ ಮೊಳಕೆ ಕಾಳು ವಿತರಣೆ ಹಾಗೂ ಕೇಂದ್ರಗಳಿಗೆ ನಿಯಮಿತವಾಗಿ ಆಹಾರ ಸಾಮಗ್ರಿ ಪೂರೈಕೆ, ಮಗುವಿನ ದೈಹಿಕ, ಮಾನಸಿಕ ಮತ್ತು ಸಾಮಾಜಿಕ ಬೆಳವಣಿಗೆಗೆ ಭದ್ರ ಅಡಿಪಾಯ ಹಾಕಲು ಐಸಿಡಿಎಸ್ ಮಿಷನ್ ಮೂಲಕ ಮಕ್ಕಳಿಗೆ ಅನೌಪಚಾರಿಕ ಶಿಕ್ಷಣದಡಿ ದಿನಬಳಕೆ ಸ್ಥಳೀಯ ಸಾಮಗ್ರಿಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಸಂಗ್ರಹಿಸಿ ಅಂಗನವಾಡಿ ಕೇಂದ್ರವನ್ನು ಮಕ್ಕಳ ಕಲಿಕಾ ಸ್ನೇಹಿ ಕೇಂದ್ರವಾಗಿರುವ ಬಗ್ಗೆ ತಿಳಿಸಲಾಯಿತು.ಶಾಲಾ ಪೂರ್ವ ಶಿಕ್ಷಣದ ಚಟುವಟಿಕೆಗಳನ್ನು ಕೇಂದ್ರಗಳಲ್ಲಿ ಏರ್ಪಡಿಸುತ್ತಿರುವ ಹಾಗೂ ಅದರಲ್ಲಿ ಮಕ್ಕಳು ಭಾಗವಹಿಸುವಿಕೆ ಕುರಿತು ಮಕ್ಕಳಿಂದ ಅಭಿನಯ ಗೀತೆ, ಕಥೆ ಹೇಳಿಸುವ ಪ್ರಾತ್ಯಕ್ಷಿಕೆ ನೋಡಿ ಪಾಲಕರು ಅಭಿಮಾನ ಪಟ್ಟು ಸಂಭ್ರಮಿಸಿದರು. ಮಕ್ಕಳು ಅನಾರೋಗ್ಯಕ್ಕೆ ಒಳಗಾಗುವುದನ್ನು ತಪ್ಪಿಸಲು ನಿಗದಿಯಂತೆ  ಚುಚ್ಚುಮದ್ದುಗಳನ್ನು ನೀಡಲು ಅರಿವು ಮೂಡಿಸಲಾಯಿತು.  ಮಕ್ಕಳ ಆರೋಗ್ಯದ ಬಗ್ಗೆ ಕಾಳಜಿವಹಿಸುವಂತೆಯೂ ತಮ್ಮ ಮಕ್ಕಳ ಆರೋಗ್ಯ ಮತ್ತು ಪೌಷ್ಠಿಕತೆಯ ಅಗತ್ಯತೆ ಸರಿಯಾಗಿ ನೋಡಿಕೊಳ್ಳುವಂತೆಯೂ ತಾಯಂದಿರಿಗೆ ತಿಳಿಸಲಾಯಿತು.    

ಇಲಾಖೆಯ ಭಾಗ್ಯಲಕ್ಷ್ಮಿ, ಸುಕನ್ಯಾ ಸಮೃದ್ದಿ, ಪ್ರಧಾನಮಂತ್ರಿ ಮಾತೃವಂದನಾ ಹಾಗೂ ಗೃಹಲಕ್ಷ್ಮಿ ಯೋಜನೆಯ ಸೌಲಭ್ಯಗಳನ್ನು ಪಡೆದುಕೊಳ್ಳುವಂತೆಯೂ,

ಅಂಗನವಾಡಿ ಕೇಂದ್ರಗಳ ಕಟ್ಟಡ ನಿರ್ಮಾಣಕ್ಕಾಗಿ ನಿವೇಶನ ನೀಡಲು ದಾನಿಗಳನ್ನು ಗುರುತಿಸುವುದು ಹಾಗೂ ಶಾಲಾ ಆವರಣದಲ್ಲಿ ಕೊಠಡಿಗಳನ್ನು ಪಡೆಯಲು ಪಾಲಕರು ಸಹಭಾಗಿತ್ವದ ಮಹತ್ವ ತಿಳಿಸಲಾಯಿತು. ಕೇಂದ್ರಗಳಲ್ಲಿ ವಿದ್ಯುತ್, ಫ್ಯಾನ್, ಕುಡಿಯುವ ನೀರು, ಶೌಚಾಲಯ, ಕೈ ತೋಟ ಸೇರಿದಂತೆ ಮೂಲಭೂತ ಸೌಕರ್ಯಗಳ ಕಲ್ಪಿಸಿಕೊಡಲು ಪಾಲಕರಲ್ಲಿ ಮನವಿ ಮಾಡಲಾಯಿತು. ಮಾತೃಪೂರ್ಣ ಯೋಜನೆಯಡಿ ಗರ್ಭಿಣಿಯರು, ಬಾಣಂತಿಯರು ಕೇಂದ್ರಕ್ಕೆ ಆಗಮಿಸಿ, ಪೂರಕ ಪೌಷ್ಠಿಕ ಆಹಾರ ಪಡೆಯಲು ಫಲಾನುಭವಿಗಳನ್ನು ಪ್ರೇರೆಪಿಸುವಂತೆ ತಿಳಿಸಲಾಯಿತು. ಮಕ್ಕಳು ದಿನನಿತ್ಯ ಅಂಗನವಾಡಿಗೆ ಕಳುಹಿಸಬೇಕು.ಮಕ್ಕಳ ವೈಯಕ್ತಿಕ ಶುಚಿತ್ವಕ್ಕೆ ಗಮನ, ಶೌಚಾಲಯದ ಬಳಕೆಯ ಮಹತ್ವ, ಮಕ್ಕಳಲ್ಲಿ ಶಿಸ್ತು ರೂಢಿಸುವುದರ ಬಗ್ಗೆ ತಿಳಿಸಲಾಯಿತು. ಬಾಲ ವಿಕಾಸ ಸಮಿತಿ, ತಾಯಂದಿರ ಸಭೆ, ಮಕ್ಕಳ ಕಾವಲು ಸಮಿತಿ ಹಾಗೂ ಪೋಷಕರ ಸಭೆಯಲ್ಲಿ ತಾಯಿ-ತಂದೆ ಹಾಗೂ ಕುಟುಂಬದ ಸದಸ್ಯರು ಭಾಗವಹಿಸಿ ತಮ್ಮ ಸಹಭಾಗಿತ್ವ ಇರುವಂತೆ ನೋಡಿಕೊಳ್ಳಲೂ, ಗೃಹಲಕ್ಷ್ಮಿ ಯೋಜನೆಯಡಿ ಸೌಲಭ್ಯ ಪಡೆಯದಿರುವ ಯಜಮಾನಿ ಮಹಿಳೆಯರಿಗೆ  ಅಗತ್ಯ ದಾಖಲಾತಿಗಳನ್ನು ಸಿದ್ಧಪಡಿಸಿಟ್ಟುಕೊಳ್ಳಲು, ಸೆಪ್ಟೆಂಬರ್ ತಿಂಗಳನ್ನು ‘ಪೋಷಣ್ ಮಾಹೆ’ ಎಂದು ಆಚರಿಸುತ್ತಿರುವುದರಿಂದ ಎಲ್ಲ ಚಟುವಟಿಕೆಗಳಲ್ಲಿ ಭಾಗವಹಿಸುವಂತೆ  ಪಾಲಕರಲ್ಲಿ ಕೋರಲಾಯಿತು.

*ಸಭೆಗೆ ಹಾಜರಾದ ಪಾಲಕರ ವಿವರ* : 

ವಿಜಯಪುರ ನಗರ ವಲಯದಲ್ಲಿ 351 ಅಂಗನವಾಡಿ ಕೇಂದ್ರಗಳಿದ್ದು, 15,874 ಮಕ್ಕಳು ಈ ಕೇಂದ್ರದಲ್ಲಿ ದಾಖಲಾಗಿದ್ದಾರೆ. 9,400 ಪಾಲಕರು, ವಿಜಯಪುರ ಗ್ರಾಮೀಣ ವಲಯದಲ್ಲಿನ  400 ಅಂಗನವಾಡಿ ಕೇಂದ್ರಗಳಲ್ಲಿ 18,256 ದಾಖಲಾತಿ ಇದ್ದು, 10,865 ಪಾಲಕರು, ಸಿಂದಗಿ ವಲಯದಲ್ಲ 486 ಅಂಗನವಾಡಿ ಕೇಂದ್ರಗಳಲ್ಲಿ ದಾಖಲಾದ ಮಕ್ಕಳ ಸಂಖ್ಯೆ38,432 ಇದ್ದು, 5,400 ಪಾಲಕರು ಭಾಗವಹಿಸಿದ್ದರು. ಚಡಚಣ ವಲಯದಲ್ಲಿ 198 ಅಂಗನವಾಡಿ ಕೇಂದ್ರಗಳಲ್ಲಿ 21,509 ಮಕ್ಕಳು ದಾಖಲಾಗಿದ್ದು, 3,200 ಪಾಲಕರು, ಮುದ್ದೇಬಿಹಾಳ ವಲಯದಲ್ಲಿ  458 ಅಂಗನವಾಡಿ ಪೈಕಿ, 33,065 ದಾಖಲಾಗಿದ್ದು,6450 ಪಾಲಕರು, ಇಂಡಿ ವಲಯದ 406 ಅಂಗನವಾಡಿ ಕೇಂದ್ರಗಳಲ್ಲಿ 37,455 ಮಕ್ಕಳ ದಾಖಲಾತಿ ಇದ್ದು, 5,735 ಪಾಲಕರು ಹಾಗೂ ಬಸವನ ಬಾಗೇಡಿ ವಲಯದ 456 ಅಂಗನವಾಡಿಯಲ್ಲಿ 37,384 ಮಕ್ಕಳ ದಾಖಲಾತಿ ಇರುವ ಈ ಅಂಗನವಾಡಿ ಕೇಂದ್ರಗಳಲ್ಲಿ 7,265 ಪಾಲಕರು ಸೇರಿದಂತೆ,  ಒಟ್ಟಾರೆ ಜಿಲ್ಲೆಯ 2,755 ಅಂಗನವಾಡಿ ಕೇಂದ್ರಗಳಲ್ಲಿ ನಡೆದ ಸಭೆಯಲ್ಲಿ 48,315 ಪಾಲಕರು ಭಾಗವಹಿಸಿದ್ದರು ಎಂದು ರಾಹುಲ್ ಶಿಂಧೆ ತಿಳಿಸಿದ್ದಾರೆ. 

ಮುಂಬರುವ ಪಾಲಕರ ಸಭೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲಕರು ಹಾಗೂ ಗ್ರಾಮಸ್ಥರು ಭಾಗವಹಿಸಿ ಮಕ್ಕಳ ಸರ್ವಾಂಗೀಣ ವ್ಯಕ್ತಿತ್ವದ ಬೆಳವಣಿಗೆಗೆ ಸಹಕರಿಸಬೇಕು. ಅಂಗನವಾಡಿ ಕೇಂದ್ರಗಳಲ್ಲಿ ಅಗತ್ಯ ಇರುವ ಪಾಠೋಪಕರಣ ಹಾಗೂ ಪೀಠೋಪಕರಣ, ಮೂಲಭೂತ ಸೌಲಭ್ಯ ಕಲ್ಪಿಸಿಕೊಡುವ ಮೂಲಕ ತಮ್ಮೂರಿನ ಎಳೆಯ ಮಕ್ಕಳ ಶೈಕ್ಷಣಿಕ ಗುಣಮಟ್ಟ ಹೆಚ್ಚಿಸುವ ಈ ಕಾರ್ಯದಲ್ಲಿ ಕೈಜೋಡಿಸಬೇಕು ಎಂದು  ಕೋರಲಾಯಿತು.

ಉಪ ನಿರ್ದೇಶಕರು ಹಾಗೂ ಪ್ರತಿ ತಾಲೂಕಿನ ಶಿಶು ಅಭಿವೃದ್ದಿ ಯೋಜನಾಧಿಕಾರಿಗಳು ಅಂಗನವಾಡಿ  ಪಾಲಕರ ಸಭೆಯಲ್ಲಿ ಪಾಲ್ಗೊಂಡಿದ್ದರು.  

*ಸಭೆಯಲ್ಲಿ ಪಾಲ್ಗೊಂಡಿದ್ದ  ಪಾಲಕರ-ಪೋಷಕರ ಅಭಿಪ್ರಾಯಗಳು*:

ಅಂಗನವಾಡಿ ಕೇಂದ್ರಗಳಲ್ಲಿ ಪಾಲಕರ ಸಭೆಯನ್ನು ಕರೆದಿರುವುದರಿಂದ ಸಂತಸ ತಂದಿದೆ.ಅಂಗನವಾಡಿಯಲ್ಲಿ ಮಕ್ಕಳ ಶಾಲಾ ಪೂರ್ವ ಶಿಕ್ಷಣವನ್ನು ಗಮನಿಸಲು ಸಹಾಯಕವಾಗಿದೆ. ಮಕ್ಕಳಲ್ಲಿ ಶೈಕ್ಷಣಿಕ ಪ್ರಗತಿ ಹಂತ-ಹಂತವಾಗಿ ಕಾಣಬಹುದಾಗಿದೆ. ಮಕ್ಕಳಲ್ಲಿ ಸೂಪ್ತವಾಗಿ ಹುದುಗಿರುವ ವಿವಿಧ ಕೌಶಲ್ಯ- ಸೃಜನಾತ್ಮಕತೆ  ಅವರ ಭಾಗವಹಿಸುವಿಕೆಯಿಂದ ತಿಳಿದುಕೊಳ್ಳಬಹುದಾಗಿದೆ. ಕುಂಠಿತ ಬೆಳವಣಿಗೆಯಿರುವ ಮಕ್ಕಳ ಬಗ್ಗೆ ಮುಂಜಾಗ್ರತಾ ಕ್ರಮಗಳು ಹಾಗೂ ಇಲಾಖೆಯಿಂದ ಇರುವ ಸೌಲಭ್ಯಗಳ ಬಗ್ಗೆ ತಿಳಿಯಲು ಸಹಾಯಕವಾಗುವುದು.  ಕೇಂದ್ರಗಳ ಉನ್ನತೀಕರಣದ ಬಗ್ಗೆ ಚರ್ಚಿಸಲು ಸಹಾಯಕವಾಗಿದೆ. ಅಂಗನವಾಡಿ ಕೇಂದ್ರದಲ್ಲಿ ಪಾಲಕರ ಪಾಲ್ಗೊಳ್ಳುವಿಕೆ ಹೆಚ್ಚಾಗಿದೆ.  ಮಕ್ಕಳ ಮುಂದಿನ ಶಾಲಾ ಜೀವನದ ನಿಯಮಗಳನ್ನು ಅಂಗನವಾಡಿ ಕೇಂದ್ರದಲ್ಲಿ ಬುನಾದಿಯಾಗಿ ಪರಿವರ್ತಿಸಿಕೊಳ್ಳಲು ಸಹಾಯಕವಾಗಿದೆ. ಕೇಂದ್ರದ ಎಲ್ಲ ಚಟುವಟಿಕೆ, ಬೆಳವಣಿಗೆಯ ಪರಿಶೀಲನೆ ಹಾಗೂ ಮೇಲ್ವಿಚಾರಣೆ ಮಾಡಲು ಪಾಲಕರ ಸಭೆ ಒಂದು ವೇದಿಕೆಯಾಗಿದೆ ಎಂದು ಸಭೆಯಲ್ಲಿ ಭಾಗವಹಿಸಿದ ಪಾಲಕರ ಅನಿಸಿಕೆ ಹಂಚಿಕೊಂಡರು  ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕ ಕೆ.ಕೆ.ಚವ್ಹಾಣ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Sunday, September 17, 2023

ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನ

 

ಈ ದಿವಸ ವಾರ್ತೆ

ಚಡಚಣ: ನಗರದ ಶ್ರೀ ಸಂಗಮೇಶ್ವರ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದಲ್ಲಿ  ರಾಷ್ಟ್ರೀಯ ಸೇವಾ ಯೋಜನೆ ಘಟಕ ಮತ್ತು ರಾಜ್ಯಶಾಸ್ತ್ರ ವಿಭಾಗದ ವತಿಯಿಂದ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನ ಆಚರಿಸಲಾಯಿತು.

ಸಂವಿಧಾನದ ಪೀಠಿಕೆ ಬೋಧಿಸಿ, ಮಾತನಾಡಿದ ಪ್ರಾಚಾರ್ಯರಾದ ಡಾ. ಎಸ್.ಬಿ.ರಾಠೋಡ ಅವರು 

ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನವು  ವಿಶ್ವದಲ್ಲಿನ ಪ್ರಜಾಪ್ರಭುತ್ವದ ಸ್ಥಿತಿಯನ್ನು ತಿಳಿಸುತ್ತದೆ. ಪ್ರಜಾಪ್ರಭುತ್ವದ ಆದರ್ಶ ತತ್ವವನ್ನು ಎಲ್ಲರೂ, ಎಲ್ಲೆಡೆ ಪಾಲಿಸುವದು ನಮ್ಮೆಲ್ಲರ ಆದ್ಯ ಕರ್ತವ್ಯ ಕೂಡ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಗ್ರಂಥಪಾಲಕರಾದ ಶ್ರೀ ಎಂ.ಕೆ.ಬಿರಾದಾರ, ರಾಷ್ಟ್ರೀಯ ಸೇವಾ ಯೋಜನೆಯ ಅಧಿಕಾರಿ ಮಾಹತೇಂಶ ಜನವಾಡ ಕಾರ್ಯಕ್ರಮ ನಿರ್ವಹಣೆ ಮಾಡಿದರು 

ಪ್ರೋ. ಐ.ಆರ್,ಜೋರಾಪುರ,ಪ್ರೋ. ವಿನೋದ ಘೇವಂಡೆ, ಪ್ರೋ.ಎಸ್.ಎಸ್.ಪಾಟೀಲ, ಮಹಾವಿದ್ಯಾಲಯದ ಪ್ರಾಧ್ಯಾಪಕರು, ವಿದ್ಯಾರ್ಥಿಗಳು ಮುತ್ತು ರಾಷ್ಟ್ರೀಯ ಸ್ವಯಂ ಸೇವಕರು ಇದ್ದರು.

ಆಸಕ್ತರಿಗೆ ವಿಶೇಷ ಸೂಚನೆ:

ಯುವ ಪ್ರತಿಭೆಗಳಿಗೆ, ಹಿರಿ-ಕಿರಿ ಆಸಕ್ತ ಸಾಹಿತಿ, ಕವಿ, ಲೇಖಕರಿಗೆ ಈ ದಿವಸ ವೇದಿಕೆ ಕಲ್ಪಿಸುತ್ತಿದೆ. ಆಸಕ್ತರು ತಮ್ಮ ಸ್ವ ರಚಿತ  ಲೇಖನ, ಕಥೆ, ಕವನ , ಶಾಲಾ ಕಾಲೇಜಿನ ವರದಿ, ಹೋರಾಟಗಾರರ ಮನವಿ, ತಮ್ಮ ಊರಿನ ಸಮಸ್ಯೆಗಳ ಸೇರಿದಂತೆ ಇತರೆ ಸುದ್ದಿ ಹಾಗೂ ಜಾಹೀರಾತುಗಳನ್ನು ಪ್ರಕಟಿಸಲು ಸಂಪರ್ಕಿಸಿರಿ.

ಕಲ್ಲಪ್ಪ ಶಿವಶರಣ

ವ್ಯವಸ್ಥಾಪಕ ಸಂಪಾದಕ

ಈ ದಿವಸ ಕನ್ನಡ ದಿನ ಪತ್ರಿಕೆ

 ಮೊ: 7204279187/     

          9900378892

ತಾವು ಟೈಪಿಸಿ ವ್ಯಾಟ್ಸಪ್ ಅಥವಾ eedivasa@gmail.com ಈ ಮೇಲ್ ಗೂ ಮೇಲ್ ಮಾಡಿರಿ.


18-09-2023 EE DIVASA KANNADA DAILY NEWS PAPER

Saturday, September 16, 2023

17-09-2023 EE DIVASA KANNADA DAILY NEWS PAPER

ಮಕ್ಕಳ ಸರ್ವಾಂಗೀಣ ಬೆಳವಣಿಗೆಗೆ ಅಂಗನವಾಡಿ ಕೇಂದ್ರಗಳು ಸಹಕಾರಿ : ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ ಕೆ.ಕೆ.ಚವ್ಹಾಣ

ಈ ದಿವಸ ವಾರ್ತೆ

ವಿಜಯಪುರ: ಮಕ್ಕಳ ಸರ್ವಾಂಗೀಣ ಬೆಳವಣಿಗೆ ಅಂಗನವಾಡಿ ಕೇಂದ್ರಗಳು ಸಹಕಾರಿಯಾಗಿವೆ ಎನ್ನುವ ನಂಬಿಕೆ ಕೂಡ ಪಾಲಕರಲ್ಲಿ ಮೂಡಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕರಾದ ಕೆ.ಕೆ.ಚವ್ಹಾಣ ಹೇಳಿದರು.

ಅವರು ನಗರದ ವಜ್ರಹನುಮಾನ ನಗರ ಕೊಡ್ ಸಂಖ್ಯೆ-522 ಅಂಗನವಾಡಿ ಕೇಂದ್ರದಲ್ಲಿ ನಗರ ವ್ಯಾಪ್ತಿಯಲ್ಲಿ ಬರುವ ಪ್ರತಿ ಅಂಗನವಾಡಿ ಕೇಂದ್ರಗಳಲ್ಲಿ ಪಾಲಕರ ಸಭೆಯನ್ನು ಸಸಿಗೆ ನೀರುಣಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.

ಮಕ್ಕಳು ಶಿಕ್ಷಣ ಕಲಿಯಬೇಕು. ಶಿಕ್ಷಣದಿಂದ ಮಾತ್ರ ಸುಂದರವಾದ ಬದುಕನ್ನು ನಿರ್ಮಿಸಿಕೊಳ್ಳಬಹುದಾಗಿದೆ ಎಂದರು. ಇಲಾಖೆಯಲ್ಲಿ ಸಾಕಷ್ಟು ಸೌಲಭ್ಯಗಳಿವೆ ಪ್ರತಿಯೊಬ್ಬ ಫಲಾನುಭವಿಗಳು ಪಡೆದುಕೊಳ್ಳಬೇಕು ಎಂದರು.

ಶಿಶು ಅಭಿವೃದ್ಧಿ ವಿಜಯಪುರ ನಗರ ಯೋಜನಾಧಿಕಾರಿಗಳಾದ ದೀಪಾಕ್ಷಿ ಜಾನಕಿ ಸ್ವಾಗತ ನುಡಿಗಳನ್ನಾಡಿದರು.

ಇದೇ ಸಂದರ್ಭದಲ್ಲಿ ಅಂಗನವಾಡಿಗೆ ಆಗಮಿಸಿದ  ಪಾಲಕರು ಅಂಗನವಾಡಿ ಕೇಂದ್ರದ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು. 

ಕಾರ್ಯಕ್ರಮಕ್ಕೂ ಮುನ್ನ ಅಂಗನವಾಡಿ ಕೇಂದ್ರದಲ್ಲಿನ ಪುಟಾಣಿ ಅನ್ವಿಕಾ ಪಂಡೆಪಿವಳ ಪ್ರಾರ್ಥನೆಯೊಂದಿಗೆ ಸಭೆ ಆರಂಭವಾಯಿತು.

ವಲಯದ ಮೇಲ್ವಿಚಾರಕಿ ಪ್ರತಿಭಾ ಅಂಗಡಿಮಠ   ಕಾರ್ಯಕ್ರಮ ನಿರೂಪಿಸಿದರು.

ಈ ಕಾರ್ಯಕ್ರಮದಲ್ಲಿ ಎಲ್ಲಾ ತಾಯಂದಿರು ಗರ್ಭಿಣಿ, ಬಾಣಂತಿಯರು ಕಾರ್ಯಕರ್ತೆ, ಸಹಾಯಕಿಯರು ಮುದ್ದು ಮಕ್ಕಳು ಹಾಜರಿದ್ದು, ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.

ಧಾನಿ ನರೇಂದ್ರ ಮೋದಿ ಅವರ 73 ಜನ್ಮದಿನ : ಉಚಿತ ಆರೋಗ್ಯ ತಪಾಸಣಾ ಮತ್ತು ರಕ್ತದಾನ ಶಿಬಿರ

ವಿಜಯಪುರ : ಪ್ರಧಾನಿ ನರೇಂದ್ರ ಮೋದಿ ಅವರ 73 ಜನ್ಮದಿನ ಹಾಗೂ ದೇಶ ರಕ್ಷಕರ ಪಡೆ 5 ನೇ ವರ್ಷಾಚರಣೆ ಪ್ರಯುಕ್ತ ಜೆ.ಎಸ್.ಎಸ್ ಆಸ್ಪತ್ರೆ, ಶ್ರೀ ರಾಮಸುಧಾ ಕಣ್ಣಿನ ಆಸ್ಪತ್ರೆ , ವಿಜಯಪುರ ರಕ್ತನಿಧಿ ಕೇಂದ್ರ ಹಾಗೂ ಎಚ್‌ಡಿಎಫ್‌ಸಿ ಬ್ಯಾಂಕ್ ಸಹೋಗದಲ್ಲಿ ಇದೇ ದಿ.17 ರವಿವಾರ ಉಚಿತ ಆರೋಗ್ಯ ತಪಾಸಣಾ ಮತ್ತು ರಕ್ತದಾನ ಶಿಬಿರವನ್ನು ವಿಜಯಪುರ ನಗರದ ಶ್ರೀ ರುಕ್ಮಾಂಗದ ಶಾಲೆಯಲ್ಲಿ ಹಮ್ಮಿಕೊಳ್ಳಲಾಗಿದೆ.

ಶಿಬಿರದಲ್ಲಿ ಖ್ಯಾತ ನೇತ್ರ ತಜ್ಞ ಡಾ.ಗುರುರಾಜ ಕುಲಕರ್ಣಿ, ಡಾ.ವಿಕಾಸ ಸೊನಗೆ, ಡಾ.ಭಾಗ್ಯಶ್ರೀ ಪೂಜಾರಿ ಚಿಕಿತ್ಸೆ ನೀಡಲಿದ್ದಾರೆ. ಖ್ಯಾತ ಮಧುಮೇಹ ತಜ್ಞ ಬಾಬೂರಾಜೆಂದ್ರ ನಾಯಿಕ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ಡಾ.ಶರಣ ಮಲಖೇಡಕರ, ಜೆ.ಎಸ್.ಎಸ್ ಆಸ್ಪತ್ರೆ ಸಿಇಓ, ಮಹಾನಗರ ಪಾಲಿಕೆ ಸದಸ್ಯ ಕಿರಣ ಪಾಟೀಲ, ವಿಶ್ವನಾಥ ಜೋಶಿ, ಗಿರೀಶ ನೀಲಗುಂದ ಉಪಸ್ಥಿತರಿರಲಿದ್ದಾರೆ ಎಂದು ದೇಶ ರಕ್ಷಕರ ಪಡೆ ಸಂಸ್ಥಾಪಕ ರೋಹನ ಆಪ್ಟೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಆಸಕ್ತರಿಗೆ ವಿಶೇಷ ಸೂಚನೆ:

ಯುವ ಪ್ರತಿಭೆಗಳಿಗೆ, ಹಿರಿ-ಕಿರಿ ಆಸಕ್ತ ಸಾಹಿತಿ, ಕವಿ, ಲೇಖಕರಿಗೆ ಈ ದಿವಸ ವೇದಿಕೆ ಕಲ್ಪಿಸುತ್ತಿದೆ. ಆಸಕ್ತರು ತಮ್ಮ ಸ್ವ ರಚಿತ  ಲೇಖನ, ಕಥೆ, ಕವನ , ಶಾಲಾ ಕಾಲೇಜಿನ ವರದಿ, ಹೋರಾಟಗಾರರ ಮನವಿ, ತಮ್ಮ ಊರಿನ ಸಮಸ್ಯೆಗಳ ಸೇರಿದಂತೆ ಇತರೆ ಸುದ್ದಿ ಹಾಗೂ ಜಾಹೀರಾತುಗಳನ್ನು ಪ್ರಕಟಿಸಲು ಸಂಪರ್ಕಿಸಿರಿ.

ಕಲ್ಲಪ್ಪ ಶಿವಶರಣ

ವ್ಯವಸ್ಥಾಪಕ ಸಂಪಾದಕ

ಈ ದಿವಸ ಕನ್ನಡ ದಿನ ಪತ್ರಿಕೆ

 ಮೊ: 7204279187/     

          9900378892

ತಾವು ಟೈಪಿಸಿ ವ್ಯಾಟ್ಸಪ್ ಅಥವಾ eedivasa@gmail.com ಈ ಮೇಲ್ ಗೂ ಮೇಲ್ ಮಾಡಿರಿ.

ಚಿದಂಬರೇಶ್ವರ ಭಾವಚಿತ್ರ ಹಾಗೂ ಪಾಲಿಕೆ ಉತ್ಸವ ಮೂರ್ತಿಯ ಅದ್ಧೂರಿ ಮೆರವಣಿಗೆ


ವಿಜಯಪುರ: ಚಿದಂಬರೇಶ್ವರ ಭಾವಚಿತ್ರ ಹಾಗೂ ಪಾಲಿಕೆ ಉತ್ಸವ ಮೂರ್ತಿಯೊಂದಿಗೆ ಅದ್ಧೂರಿ ಮೆರವಣಿಗೆ ಜರುಗಿತು.

ವಿಜಯಪುರ ನಗರದ ಇಂಬ್ರಾಹಿAಪೂರ ವೆಂಕಟೇಶ್ವರ ದೇವಸ್ಥಾನದಿಂದ ಪ್ರಾರಂಭವಾದ ಶೋಭಾಯಾತ್ರೆಯು ಗಣೇಶ ನಗರ ಮುಖಾಂತರ ಚಿದಂಬರ ದೇವಸ್ಥಾನಕ್ಕೆ ತಲುಪಿತು.

ಈ ಸಂದರ್ಭದಲ್ಲಿ ಚಿದಂಬರ ಭಜನಾ ಮಂಡಳಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಪ್ರಾಯೋಜಕತ್ವದಲ್ಲಿ ಕರಡಿ ಮಜಲು, ಗೊಂಬೆ ಕುಣಿತವು ಮೆರವಣಿಗೆ ಮೆರಗು ತಂದವು. 

ಈ ಸಂಭರ್ದದಲ್ಲಿ ಚಿದಂಬರ ಸೇವಾ ಸಮಿತಿ ಅಧ್ಯಕ್ಷರಾದ ಪಿ.ಬಿ. ಹಂಗರಗಿ, ವೇದ ಮೂರ್ತಿ ಶಂಕರಭಟ ಅಗ್ನಿಹೋರ್ತಿ, ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷರಾದ ಶ್ರೀಹರಿಗೊಳಸಂಗಿ, ಶ್ರೀನಿವಾಸ ಬೆಟಗೇರಿ, ಲಕ್ಷಿö್ಮÃಕಾಂತ ಕುಲಕರ್ಣಿ, ವಿಜಯ ಜೋಶಿ, ಮಧುಸೂಧನ ಜೋಶಿ, ಮಾಧವ ಜೋಶಿ, ರಮೇಶ ಕುಲಕರ್ಣಿ, ಪ್ರಾಣೇಶ ಕುಲಕರ್ಣಿ, ಸಚಿನಭಟ ಜೋಶಿ, ಜ್ಯೋತಿ ಹುನಗುಂದ, ವೆಂಕಟೇಶ ಜೋಶಿ, ವೆಂಕಟೇಶ ಜೋಶಿ ನಂದವಾಡಗಿ, ದೀಪಕ ಜೋಶಿ,ಸುಧೀಂದ್ರ ಕುಲಕರ್ಣಿ, ಸಿ.ಕೆ.ಪಾಟೀಲ ಪದ್ಮನಾಬ ಜೋಶಿ, ಅಜೀತ ಜೋಶಿ, ಚಿದಂಬರ ಜೋಶಿ, ರಾಘವೇಂದ್ರ ಕುಲಕರ್ಣಿ, ರಘೋತ್ತಮ ಪಾಟೀಲ, ಮಾಲತೇಶ ಕುಲಕರ್ಣಿ, ನಾಗರಾಜ ಜೋಶಿ, ಉಮೇಶ ಜೋಶಿ, ಉದಯ ಔರಸಂಗ, ರಾಘವೇಂದ್ರ ಜೋಶಿ ಸಂಕನಾಳ, ವಿಕಾಸ ಪದಕಿ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.

ಆಸಕ್ತರಿಗೆ ವಿಶೇಷ ಸೂಚನೆ:

ಯುವ ಪ್ರತಿಭೆಗಳಿಗೆ, ಹಿರಿ-ಕಿರಿ ಆಸಕ್ತ ಸಾಹಿತಿ, ಕವಿ, ಲೇಖಕರಿಗೆ ಈ ದಿವಸ ವೇದಿಕೆ ಕಲ್ಪಿಸುತ್ತಿದೆ. ಆಸಕ್ತರು ತಮ್ಮ ಸ್ವ ರಚಿತ  ಲೇಖನ, ಕಥೆ, ಕವನ , ಶಾಲಾ ಕಾಲೇಜಿನ ವರದಿ, ಹೋರಾಟಗಾರರ ಮನವಿ, ತಮ್ಮ ಊರಿನ ಸಮಸ್ಯೆಗಳ ಸೇರಿದಂತೆ ಇತರೆ ಸುದ್ದಿ ಹಾಗೂ ಜಾಹೀರಾತುಗಳನ್ನು ಪ್ರಕಟಿಸಲು ಸಂಪರ್ಕಿಸಿರಿ.

ಕಲ್ಲಪ್ಪ ಶಿವಶರಣ

ವ್ಯವಸ್ಥಾಪಕ ಸಂಪಾದಕ

ಈ ದಿವಸ ಕನ್ನಡ ದಿನ ಪತ್ರಿಕೆ

 ಮೊ: 7204279187/     

          9900378892

ತಾವು ಟೈಪಿಸಿ ವ್ಯಾಟ್ಸಪ್ ಅಥವಾ eedivasa@gmail.com ಈ ಮೇಲ್ ಗೂ ಮೇಲ್ ಮಾಡಿರಿ.