Wednesday, October 20, 2021
Tuesday, October 19, 2021
Monday, October 18, 2021
ನಾಜೀಯಾ ಶಕೀಲ ಅಂಗಡಿ ಯವರು ಗೆಲವು ನಿಶ್ಚಿತ
ಈ ದಿವಸ ವಾರ್ತೆ
ವಿಜಯಪುರ : ನಗರದಲ್ಲಿರುವ ಜೆಡಿಎಸ್ ಕೇಂದ್ರ ಕಛೇರಿಯಲ್ಲಿ ನಡೆದ ಜಿಲ್ಲಾ ಮಟ್ಟದ ಮುಖಂಡರ ಸಭೆಯಲ್ಲಿ ಮಾತನಾಡಿದ ಹೆಚ್ ಡಿ ದೇವೇಗೌಡರು ಮಾಜಿ ಪ್ರಧಾನಿಗಳು ಸಿಂದಗಿ ಉಪಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿ ನಾಜೀಯಾ ಶಕೀಲ ಅಂಗಡಿ ಯವರು ಗೆಲವು ನಿಶ್ಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಅದಕ್ಕಾಗಿ ಜಿಲ್ಲೆಯ ಹಾಗೂ ತಾಲ್ಲೂಕಿನ ಕಾರ್ಯಕರ್ತರೆಲ್ಲರು ಅಭ್ಯರ್ಥಿಯ ಗೆಲವಿಗಾಗಿ ಅಹರ್ನಿಶಿಯಾಗಿ ದುಡಿಯುವದಲ್ಲದೆ ಸಿಂದಗಿಕ್ಷೇತ್ರದ ಮನೆಮನೆಗೆ ಪಕ್ಷದ ಕೊಡುಗೆಗಳನು ತಲುಪಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸಬೇಕು. ಅತ್ಯಂತ ಒಗ್ಗಟ್ಟು ಪ್ರದರ್ಶನ ಮಾಡುವ ಮೂಲಕ ನಮ್ಮ ಗೆಲುವಿನ ಪತಾಕೆ ಹಾರಿಸುವರೊಂದಿಗೆ ಮುಂದಿನ 2023 ಚುನಾವಣೆಗೆ ಪ್ರೇರಣೆ ಯಾಗಲಿದೆ. ಎಂದು ಹೇಳಿದರು. ಸಭೆಯಲ್ಲಿ ಸಂಸದರಾ ಪ್ರಜ್ವಲ್ ರೇವಣ್ಣ ಮಾತನಾಡಿ,ಯುವಕರೆಲ್ಲರು ಪಕ್ಷದ ಸಿದ್ಧಾಂತ ಮೇಲೆ ದುಡಿಯಲು ನಾನು ಬೆನ್ನೆಲುಬಾಗಿ ನಿಲ್ಲುವೆ ಎಂದು ಕರೆ ನೀಡಿದರು.
ಮಲ್ಲಿಕಾರ್ಜುನ ಯಂಡಿಗೇರಿ ಅಧ್ಯಕ್ಷತೆ ವಹಿಸಿದ್ದರು. ಸಭೆಯಲ್ಲಿ ನಾಗಠಾಣ ಶಾಸಕ ಡಾ. ದೇವಾನಂದ ಎಫ್ ಚವ್ಹಾಣ , ಡಾ. ಸುನೀತಾ ದೇವಾನಂದ ಚವ್ಹಾಣ, ಬಿ ಜಿ ಪಾಟೀಲ, ರಾಜಗೌಡ ಪಾಟೀಲ, ರಿಯಾಜ ಫಾರೂಕಿ, ಯಾಕೂಬ ಕೂಪರ, ಕೌಸರ ಶೇಖ, ಹುಸೇನ ಬಾಗಾಯತ, ಸುನಿಲ್ ರಾಠೋಡ, ಸಿದ್ದು ಕಾಮತ್, ಸ್ನೇಹಾ ಶೆಟ್ಟಿ, ಡಾ. ಶಮಶರಅಲಿ ಮುಲ್ಲಾ, ಪಕ್ಷದ ಮುಖಂಡರು ಕಾರ್ಯಕರ್ತರು ಉಪಸ್ಥಿತರಿದ್ದರು.
Sunday, October 17, 2021
ಕೆಆರ್ ಎಸ್ ಪರ ಮತ ಯಾಚನೆ
ಈ ದಿವಸ ವಾರ್ತೆ
ವಿಜಯಪುರ: ಸಿಂದಗಿ ವಿಧಾನಸಭಾ ವ್ಯಾಪ್ತಿಯ ಮಲಘಾಣ, ಸೋಮಜಾಳ ಆಸಂಗಿಹಾಳ ದೇವರ ನಾವದಗಿ ಕುಮಸಿ ಗ್ರಾಮಗಳಲ್ಲಿ KRS ಪಕ್ಷದ ಕಾರ್ಯಕರ್ತರು ಅಭ್ಯರ್ಥಿ ಪರ ಮತಯಾಚಿಸಿದರು.
ಈ ಸಂದರ್ಭದಲ್ಲಿ ರಾಜ್ಯ ಸಂಘಟನಾ ಕಾರ್ಯದರ್ಶಿ ಮಲ್ಲಿಕಾರ್ಜುನ ಭಟ್ರಹಳ್ಳಿ, ಸೋಮಸುಂದರ, ಜಿಲ್ಲಾಧ್ಯಕ್ಷರಾದ ಅಪ್ಪನಗೌಡ ಕೆ ಪಾಟೀಲ್, ಜಿಲ್ಲಾ ಯುವ ಘಟಕದ ಅಧ್ಯಕ್ಷ ಶಿವಕುಮಾರ್ ಯಡಹಳ್ಳಿ ಭಾಗವಹಿಸಿದ್ದರು.
ಲಂಚ ಮುಕ್ತ ಸಮಾಜಕ್ಕೆ ಕೆಆರ್ ಎಸ್ ಬೆಂಬಲಿಸಿ: ಡಾ. ಸುನೀಲಕುಮಾರ ಹೆಬ್ಬಿ
ಈ ದಿವಸ ವಾರ್ತೆ
ವಿಜಯಪುರ: ಉತ್ತಮ ಹಾಗೂ ಲಂಚ ಮುಕ್ತ ಸಮಾಜ ನಿರ್ಮಾಣಕ್ಕಾಗಿ ತಮ್ಮ ಅಮೂಲ್ಯ ಮತವನ್ನು ತಮಗೆ ನೀಡುವಂತೆ ಸಿಂದಗಿ ಉಪ ಚುನಾವಣೆ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ಅಭ್ಯರ್ಥಿ ಡಾ.ಸುನೀಲಕುಮಾರ ಹೆಬ್ಬ ಸಿಂದಗಿ ಪಟ್ಟಣದಲ್ಲಿ ಮತಯಾಚನೆ ಮಾಡಿದರು.
ಇಲ್ಲಿನ ಬಸವೇಶ್ವರ ವೃತ್ತದಿಂದ ಚುನಾವಣೆ ಪ್ರಚಾರ ಆರಂಭಿಸಿ, ಮೋರಟಗಿ, ಮನ್ನಾಪುರ, ಯಂಕಂಚಿ, ಕೈನೂರ, ಕುಲೇಕುಮಟಗಿ, ಹಿರೇಸಾವಳಗಿ ಭಾಗದಲ್ಲಿ ಕೆಆರ್ ಎಸ್ ಪಕ್ಷದ ವತಿಯಿಂದ ಪ್ರಚಾರ ನಡೆಸಿದರು.
ಈ ಸಂದರ್ಭ ಸೋಮಸುಂದರ, ಕೆಆರ್ ಎಸ್ ಜಿಲ್ಲಾಧ್ಯಕ್ಷ ಅಪ್ಪನಗೌಡ ಪಾಟೀಲ ಮತ್ತಿತರರು ಇದ್ದರು.
ವರದಿ: ಕಲ್ಲಪ್ಪ ಶಿವಶರಣ
ಮೊ: 7204279187