Monday, October 18, 2021

ನಾಜೀಯಾ ಶಕೀಲ ಅಂಗಡಿ ಯವರು ಗೆಲವು ನಿಶ್ಚಿತ



 ಈ ದಿವಸ ವಾರ್ತೆ

ವಿಜಯಪುರ : ನಗರದಲ್ಲಿರುವ ಜೆಡಿಎಸ್ ಕೇಂದ್ರ ಕಛೇರಿಯಲ್ಲಿ ನಡೆದ ಜಿಲ್ಲಾ ಮಟ್ಟದ ಮುಖಂಡರ ಸಭೆಯಲ್ಲಿ ಮಾತನಾಡಿದ  ಹೆಚ್ ಡಿ ದೇವೇಗೌಡರು ಮಾಜಿ ಪ್ರಧಾನಿಗಳು ಸಿಂದಗಿ ಉಪಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿ ನಾಜೀಯಾ ಶಕೀಲ ಅಂಗಡಿ ಯವರು ಗೆಲವು ನಿಶ್ಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಅದಕ್ಕಾಗಿ ಜಿಲ್ಲೆಯ ಹಾಗೂ ತಾಲ್ಲೂಕಿನ ಕಾರ್ಯಕರ್ತರೆಲ್ಲರು ಅಭ್ಯರ್ಥಿಯ ಗೆಲವಿಗಾಗಿ ಅಹರ್ನಿಶಿಯಾಗಿ ದುಡಿಯುವದಲ್ಲದೆ ಸಿಂದಗಿಕ್ಷೇತ್ರದ ಮನೆಮನೆಗೆ ಪಕ್ಷದ ಕೊಡುಗೆಗಳನು ತಲುಪಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸಬೇಕು. ಅತ್ಯಂತ ಒಗ್ಗಟ್ಟು ಪ್ರದರ್ಶನ ಮಾಡುವ ಮೂಲಕ ನಮ್ಮ ಗೆಲುವಿನ ಪತಾಕೆ ಹಾರಿಸುವರೊಂದಿಗೆ ಮುಂದಿನ 2023 ಚುನಾವಣೆಗೆ ಪ್ರೇರಣೆ ಯಾಗಲಿದೆ. ಎಂದು ಹೇಳಿದರು. ಸಭೆಯಲ್ಲಿ ಸಂಸದರಾ ಪ್ರಜ್ವಲ್ ರೇವಣ್ಣ ಮಾತನಾಡಿ,ಯುವಕರೆಲ್ಲರು ಪಕ್ಷದ ಸಿದ್ಧಾಂತ ಮೇಲೆ ದುಡಿಯಲು ನಾನು ಬೆನ್ನೆಲುಬಾಗಿ ನಿಲ್ಲುವೆ ಎಂದು ಕರೆ ನೀಡಿದರು.

ಮಲ್ಲಿಕಾರ್ಜುನ ಯಂಡಿಗೇರಿ ಅಧ್ಯಕ್ಷತೆ ವಹಿಸಿದ್ದರು. ಸಭೆಯಲ್ಲಿ ನಾಗಠಾಣ ಶಾಸಕ ಡಾ. ದೇವಾನಂದ ಎಫ್ ಚವ್ಹಾಣ , ಡಾ. ಸುನೀತಾ ದೇವಾನಂದ ಚವ್ಹಾಣ, ಬಿ ಜಿ ಪಾಟೀಲ, ರಾಜಗೌಡ ಪಾಟೀಲ, ರಿಯಾಜ ಫಾರೂಕಿ, ಯಾಕೂಬ ಕೂಪರ, ಕೌಸರ ಶೇಖ, ಹುಸೇನ ಬಾಗಾಯತ, ಸುನಿಲ್ ರಾಠೋಡ, ಸಿದ್ದು ಕಾಮತ್, ಸ್ನೇಹಾ ಶೆಟ್ಟಿ, ಡಾ. ಶಮಶರಅಲಿ  ಮುಲ್ಲಾ, ಪಕ್ಷದ ಮುಖಂಡರು ಕಾರ್ಯಕರ್ತರು ಉಪಸ್ಥಿತರಿದ್ದರು.

No comments:

Post a Comment