ಈ ದಿವಸ ವಾರ್ತೆ
ವಿಜಯಪುರ: ಉತ್ತಮ ಹಾಗೂ ಲಂಚ ಮುಕ್ತ ಸಮಾಜ ನಿರ್ಮಾಣಕ್ಕಾಗಿ ತಮ್ಮ ಅಮೂಲ್ಯ ಮತವನ್ನು ತಮಗೆ ನೀಡುವಂತೆ ಸಿಂದಗಿ ಉಪ ಚುನಾವಣೆ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ಅಭ್ಯರ್ಥಿ ಡಾ.ಸುನೀಲಕುಮಾರ ಹೆಬ್ಬ ಸಿಂದಗಿ ಪಟ್ಟಣದಲ್ಲಿ ಮತಯಾಚನೆ ಮಾಡಿದರು.
ಇಲ್ಲಿನ ಬಸವೇಶ್ವರ ವೃತ್ತದಿಂದ ಚುನಾವಣೆ ಪ್ರಚಾರ ಆರಂಭಿಸಿ, ಮೋರಟಗಿ, ಮನ್ನಾಪುರ, ಯಂಕಂಚಿ, ಕೈನೂರ, ಕುಲೇಕುಮಟಗಿ, ಹಿರೇಸಾವಳಗಿ ಭಾಗದಲ್ಲಿ ಕೆಆರ್ ಎಸ್ ಪಕ್ಷದ ವತಿಯಿಂದ ಪ್ರಚಾರ ನಡೆಸಿದರು.
ಈ ಸಂದರ್ಭ ಸೋಮಸುಂದರ, ಕೆಆರ್ ಎಸ್ ಜಿಲ್ಲಾಧ್ಯಕ್ಷ ಅಪ್ಪನಗೌಡ ಪಾಟೀಲ ಮತ್ತಿತರರು ಇದ್ದರು.
ವರದಿ: ಕಲ್ಲಪ್ಪ ಶಿವಶರಣ
ಮೊ: 7204279187
No comments:
Post a Comment