Tuesday, June 2, 2020

ಕಥೆ :- ಮಿಂಚಿ ಹೋದ ಕಾಲ



🖋 ಪ್ರಿಯಾ ಪ್ರಾಣೇಶ ಹರಿದಾಸ

         ರಂಗಸ್ವಾಮಿ ಅಂದು ಬೆಳಗ್ಗೆ ವಾಕಿಂಗ ಅಂತ ಹೊರ ಬಿದ್ದು ಕಾಶಿಗೆ ಹೋಗಲು ಸ್ಠೇಶನ್ಗೆ ಬರ್ತಾನೆ.ಮನೆ ಬಿಟ್ಟು ಹೋರಡುವದು ನಿರ್ಧಾರ ಮಾಡಿಯೇ ರಿಸರ್ವೆಶನ ಮಾಡಿಸಿದ್ದ.ಮೂವತ್ತು ಸಾವಿರ ಪೆನಶನ ಇದ್ದರು ,ಮಗ  ಅರವಿಂದ ಮತ್ತು ಸೊಸೆ ಸುನಯನಾ ಚೆನ್ನಾಗಿ ನೋಡ್ತಿದ್ದಿಲ್ಲ ,ಅದಕ್ಕಾಗಿ 
ಮನೆ ಬಿಟ್ಟು ಹೋರಡುವದು ತೀರ್ಮಾನಿಸಿದ್ದ..ಬಾಳ ಸಂಗಾತಿ ಹೋಗಿ ಆಗಲೇ ಐದು ವರ್ಷ ಆಗಿತ್ತು.
 ರೇಲ್ವೆ ಸ್ಠೇಶನಲ್ಲಿ ಟ್ರೇನ ಬರುವದು
 ಎರಡು  ತಾಸು ತಡ ಎಂದು ಅನೌಂನ್ಸ ಮಾಡಿದ್ದರು.

        ಆಗ ಅಲ್ಲಿಯೇ ಬೆಂಚ ಮೇಲೆ ಕುಳಿತನು.ಅವನಿಗೆ ಅಂದು ತನ್ನ ಊರು ಮತ್ತು ಜನ ಬಿಟ್ಟು ಹೋಗುತ್ತಿದ್ದನಲ್ಲಾ ಅಂತ ದುಃಖ ಉಮ್ಮಳಿಸಿ ಬಂತು.ಆದರೂ
ತಡೆದುಕೊಂಡ ,ಈ ಕಣ್ಣೀರಿಗೆ ಯಾವ ಪ್ರತಿಫಲ ಇಲ್ಲ ಅಂತ ಸುಮ್ಮನಾದ.ಅಂದು ಬಿಟ್ಟು ಹೋರಡುವಾಗ ಎಲ್ಲವು ಹೊಸತನದಲಿ ನೋಡುವ ಹಾಗೆ ನೋಡತೊಡಗಿದ.

        ಮನಸ್ಸಿನಲ್ಲಿ ಜೀವನದ ಒದೊಂದು ಚಿತ್ರಣ ಕಣ್ಣ ಮುಂದೆ ಬರತೊಡಗಿತು.
ಎಲ್ಲರ ಮುಂದೆ ಮಗನ ಬಗ್ಗೆ ಬಹಳ ಹೇಳಿಕೊಳ್ಳುತ್ತಿದ್ದದ್ದು.ಅದೇ ಮಗ ಇಂದು
ತಾತ್ಸಾರವಾಗಿ ನೋಡಿದ್ದರ ಪರಿಣಾಮ ನಾನು ಮನೆ ಬಿಡುವ ಹಾಗಾಯಿತು.ಇಂದು ನೆಲ,ಜಲ,ಸ್ನೇಹಿತರನ್ನು,ಭಂಧು ಬಳಗ ಯಾವುದು ಬೇಡವಾಯಿತು.ಎಲ್ಲವು ನಗಣ್ಯವೆನಿಸಿತು.ಜಗತ್ತೇ ಶೂನ್ಯವೆನಿಸಿತು.

ಆಗ ತನ್ನ ತಪ್ಪಿನ ಅರಿವಾಯಿತು.ದೊಡ್ಡ ಅಧಿಕಾರದಲ್ಲಿದ್ದಾಗ ತನ್ನ ಜಂಭದಿಂದ ಮಗನನ್ನು  ಹಾಸ್ಟೆಲ್ಗೆ ಸೇರಿಸಿದ್ದ.ಸೂಟಿ ಬಂದ ಮೇಲೆ ಕಾಂಪಿಟೆಟಿವ್ ಸ್ಟಡಿ ಸಲುವಾಗಿ ಕ್ಲಾಸ ಹಾಕುವದು ,ಹೀಗೆ ಮಾಡಿ
ಮಗನನ್ನು ಒಂದು ದಿನ ಹತ್ತಿರ ಕರೆದು ಪ್ರೀತಿಯಿಂದ ಮಾತನಾಡಿಸಲಿಲ್ಲ ಮುದ್ದಿಸಲಿಲ್ಲ.

       ಇದೆಲ್ಲಾ ಸ್ಥಿತಿ ಗೆ ನಮ್ಮ ಪೋಷಣೆ ಮತ್ತು ಸಂಸ್ಕಾರದ ವಿಫಲತೆ ಎಂದು.
"ಮಾಡಿದ್ದು ಉಣ್ಣೋ ಮಾರಾಯ" ಉಕ್ತಿ
ನೆನಪಾಯಿತು.ಆಗ ಮನಸ್ಸಿನಲ್ಲಿ ಇನ್ನು
ಚಿಂತಿಸಿ ಉಪಯೋಗವಿಲ್ಲ ಎಂದು
ಸುಮ್ಮನಾದ ,ಆಗಲೇ ಎರಡ ಹನಿ ಜಿನುಗಿದವು. ಅಷ್ಟರಾಗಲೇ ಟ್ರೇನ ಬರುವ ಸಪ್ಪಳಾಯಿತು.ಕಡೆ ಬಾರಿ ಬೆಂಚ ಮೇಲೆ
ಕೈ ಆಡಿಸಿ ಇದು ನನ್ನ ಊರಿನ ಕೊನೆಯ ಸ್ಪರ್ಷ ಅಂತ ಬೆಂಚನ್ನು ಮುಟ್ಟಿ  ಎಲ್ಲ ಸುತ್ತಲೂ ನೋಡಿ ತನ್ನ ಸಿಟ್ ನಂಬರ ಇರುವ ಭೋಗಿ ಕನಫರ್ಮ ಮಾಡಿಕೊಂಡು
ಹತ್ತಿದನು.

        ರಂಗಸ್ವಾಮಿ ಹೋದ ಮೇಲೆ ಈ ಮನುಜ ಜೀವಗಳಿಗಿಂತ ನಾವುಗಳಾದ ನಿರ್ಜೀವ ಕಲ್ಲು ,ಹಸಿರು  ನಾವೇ ಲೇಸು ,ಅನ್ನುತ್ತಾ  ತನ್ನನ್ನು ನೋಡಿ ನಗುತ್ತಿದ್ದಾವೆನೋ ಅನ್ನುವಂತೆ
ರಂಗಸ್ವಾಮಿಗೆ ಭಾಸವಾಯಿತು.

   ಇತ್ತ ಅರವಿಂದ   ರಾತ್ರಿ ಊಟದ ಸಮಯ ಕಳೆದರೂ ಹೋರಗಡೆ ಹೋಗಿ ಬರ್ತಿನಿ ಅಂತ ಹೇಳಿ ಹೋದ ಅಪ್ಪ ಬರದದ್ದು ನೋಡಿ , ಅರವಿಂದ ಅಪ್ಪನ ಸ್ನೇಹಿತರ ಮನೆಗೆ ಕಾಲ್ ಮಾಡಿ ವಿಚಾರಿಸಿದಾಗ ಎಲ್ಲಿಯೂ ಬಂದಿಲ್ಲ ಅನ್ನುವ ಸುದ್ದಿ ಸ್ಪಷ್ಟವಾಯಿತು.
ಸುನಯನಾ ! ಅಪ್ಪಾ ಹೋಗಬೇಕಾದರೆ ಏನಾದ್ರು ಹೇಳಿ ಹೋಗಿದ್ದಾರಾ ಅಂದಾಗ,
ನನಗೆ ಏನು ಹೇಳಿ ಹೋಗಿಲ್ಲರಿ. ದಿನದಂತೆ ಸಾಯಂಕಾಲ ವೇಳೆ ವಾಕಿಂಗಗೆ ಹೋಗುವ ಹಾಗೆ ಹೋಗಿದ್ದಾರೆ.ಕೈಲ್ಲಿ ಏನು ಇದ್ದಿಲ್ಲಾರಿ
ಅಂದಳು.

     ಕೂಡಲೇ ಅರವಿಂದ‌ ತನ್ನ ಅಪ್ಪನ ರೂಮಗೆ ಹೋಗಿ ನೋಡಿದಾಗ ಎಲ್ಲ ವಸ್ತುಗಳು ಇದ್ದ ಜಾಗದಲ್ಲಿಯೇ ಇದ್ದವು.
ಒಳಗೆ ಹೋಗಿ ತಡಕಾಡಿದ ನಂತರ ಟೇಬಲ ಮೇಲೆ ಮಾತ್ರೆಯ ಡಬ್ಬಿಯ ಮೇಲೆ ಒಂದು ಕವರ ನೋಡಿ , ತಗೆದುಕೊಂಡು ಒಳಗಿನ
ಚೀಟಿಯನ್ನು ತಗೆದು ಓದ ತೊಡಗಿದನು.

        ಪ್ರೀತಯ ಮಗ ಅರವಿಂದ ನಿನ್ನ ತಂದೆಯ ಶುಭಾಶಿರ್ವಾದಗಳು.ಇಂದು
ನಾನು ಮನೆ ಬಿಟ್ಟು ಹೋರಟಿರುವೆ. ನನ್ನನು ಹುಡುಕಲು ಪ್ರಯತ್ನಿಸಬೇಡ. 
ನಾನು ಆತ್ಮಹತ್ಯೆ ಮಾಡಿಕೊಳ್ಳುವ ಹೇಡಿ ಅಲ್ಲ , ಹೀಗಾಗಿ ನಿಮ್ಮಿಂದ ದೇಹ ದೂರ ಹೋದರು ನನ್ನ ಪ್ರೀತಿ ಆಶಿರ್ವಾದ ನಿಮ್ಮಗಳ ಜೊತೆ ಇರುತ್ತದೆ.  ಮನೆ ,ಒಂದು ಸೈಟು  ಮೊಮ್ಮಗನ ಹೆಸರಿಗೆ ಬರೆದಿರುವೆ
 
          ಇನ್ನು ಎಂಟು ಲಕ್ಷ ಫಿಕ್ಸಡ ಡಿಪಾಸಿಟ
ಹಣವನ್ನು ನಾನೇ ಇಟ್ಟು ಕೊಂಡಿರುವೆ . ಈಗ ನಾನು ಯಾವ ಊರಿಗೆ ಹೋರಟಿದ್ದೆನೋ ಅಲ್ಲಿಯ ವೃಧ್ಧಾಶ್ರಮದಲ್ಲಿರುತ್ತೆನೆ.ಹಾಗೆ ಉಳಿದ ಬಡ್ಡಿ ಹಣದಲ್ಲಿ ವೃಧ್ಧಾಶ್ರಮ , ಅಬಲಾಶ್ರಮಕ್ಕೆ ಸಮಾಜ ಸೇವೆ ಮಾಡಲು
ವಿನಿಯೋಗ ಮಾಡುತ್ತೆನೆ. ನಾನು ಅರಾಮದಿಂದ ಇರುತ್ತೆನೆ . ನನ್ನ ಹುಡುಕುವ ಪ್ರಯತ್ನ ಮಾಡಬೇಡ.
ನಾನು ತೀರಿ ಹೋದ ಮೇಲೆ ಆ ಹಣ ನಿನಗೆ ಸೇರುತ್ತದೆ. ಮುಂದೆ ನನ್ನ ಅಪರ ಕ್ರಿಯೆಗಳನ್ನು ಅಚ್ಚುಕಟ್ಟಾಗಿ ಮಾಡು.
 
            ನಾನು ಮತ್ತು ಇವಳು ನಿನ್ನನ್ನು  ಬೆಳಿಸುವಲ್ಲಿ ನಮ್ಮ ಅಂತಸ್ಥಿಕೆಯಲ್ಲಿ,
ಮಾನವೀಯ ಮೌಲ್ಯಗಳನ್ನು ಕಲಿಸಲಿಲ್ಲ.
ದಯವಿಟ್ಟು ನಿನ್ನ ಮಗನಿಗೆ ಈಗಿನಿಂದಲೇ
ಸಂಸ್ಕಾರ ಮತ್ತು ಮಾನವೀಯ ಮೌಲ್ಯಗಳನ್ನು ಕಲಿಸು.

   ‌ಇದೇ ನಿಮ್ಮ ಅಪ್ಪನ ಮನದ ಮಾತ
      ‌‌‌‌‌        
            ಇಂತಿ ನಿಮ್ಮ ತಂದೆ
         ‌    ‌‌      ರಂಗಸ್ವಾಮಿ

      ಓದಿದಾಗ ಅರವಿಂದ ಮತ್ತು ಸುನಯನಾಳ ಕಣ್ಣಲ್ಲಿ  ದುಃಖ ಉಮ್ಮಳಿಸಿ
ಬಂದು ಅತ್ತಾಗ ಕೊನೆಗೆ ಅರಿವಾಗಿದ್ದು
"ಮಿಂಚಿ ಹೋದ ಕಾಲಕ್ಕೆ ಚಿಂತಿಸಿ ಫಲವಿಲ್ಲ" ಎಂಬ ಗಾದೆ ಮಾತು ನಿಜವಾಯಿತು.

 

ಮಂಗಳವಾರ ಮತ್ತೆ 4 ಜನರಿಗೆ ಕೋವಿಡ್-19 ಸೋಂಕು ದೃಢ ಸೋಂಕಿತರ ಸಂಖ್ಯೆ 127ಕ್ಕೆ ಏರಿಕೆ



ಈ ದಿವಸ ವಾರ್ತೆ ವಿಜಯಪುರ:
ಜಿಲ್ಲೆಯಲ್ಲಿ ಈವರೆಗೆ ಒಟ್ಟು 127 ಕೋವಿಡ್-19 ಪಾಸಿಟಿವ್ ಪ್ರಕರಣಗಳು ದೃಢಪಟ್ಟಿದ್ದು, ಜಿಲ್ಲಾಸ್ಪತ್ರೆಯಲ್ಲಿ 62 ರೋಗಿಗಳು ಕೋವಿಡ್-19 ಪಾಸಿಟಿವ್ ಸಕ್ರಿಯ ರೋಗಿಗಳಾಗಿದ್ದಾರೆ. ಇಂದು 04 ಜನರಿಗೆ ಕೋವಿಡ್-19 ಸೋಂಕು ತಗುಲಿದ್ದು, ಮೂವ್ವರಿಗೆ ಮಹಾರಾಷ್ಟ್ರದ ಸಂಪರ್ಕದಿಂದ ಹಾಗೂ ಒಬ್ಬರಿಗೆ ಜಿಲ್ಲೆಯ ಕಂಟೇನ್ಮೆಂಟ್ ಜೋನ್‍ದಿಂದ ಸೋಂಕು ತಗುಲಿರುವ ಬಗ್ಗೆ ದೃಢಪಟ್ಟಿದೆ ಎಂದು ಜಿಲ್ಲಾಧಿಕಾರಿ ವೈ.ಎಸ್ ಪಾಟೀಲ ಅವರು ತಿಳಿಸಿದ್ದಾರೆ.

ಅದರಂತೆ ರೋಗಿ ಸಂಖ್ಯೆ 3662 (24 ವರ್ಷದ ಪುರುಷ), ರೋಗಿ ಸಂಖ್ಯೆ 3663 (19 ವರ್ಷದ ಯುವಕ), ರೋಗಿ ಸಂಖ್ಯೆ 3792 (55 ವರ್ಷದ ಪುರುಷ) ಇವರಿಗೆ ಮಹಾರಾಷ್ಟ್ರದ ಸಂಪರ್ಕದಿಂದ ಹಾಗೂ ರೋಗಿ ಸಂಖ್ಯೆ 3792 (32 ವರ್ಷದ ಮಹಿಳೆ)ಗೆ ಕೋವಿಡ್-19 ಸೋಂಕು ತಗುಲಿದೆ ಎಂದು ಅವರು ತಿಳಿಸಿದ್ದಾರೆ.

ಜಿಲ್ಲೆಯಲ್ಲಿ ಈವರೆಗೆ ವಿದೇಶ ಸೇರಿದಂತೆ ಇತರ ಪ್ರದೇಶಗಳಿಂದ 27384 ಜನರು ಬಂದ ಬಗ್ಗೆ ವರದಿಯಾಗಿದ್ದು, ಇವರ ಮೇಲೆ ತೀವ್ರ ನಿಗಾ ಇಡಲಾಗಿದೆ. ಒಟ್ಟು 127 ಕೋವಿಡ್ -19 ಪಾಸಿಟಿವ್ ಪ್ರಕರಣಗಳು ದೃಢಪಟ್ಟಿದ್ದಾರೆ. 7458 ಜನರು 28 ದಿನಗಳ ಐಸೋಲೇಶನ್ ಅವಧಿ ಪೂರ್ಣಗೊಳಿಸಿದ್ದಾರೆ. 19863 ಜನರು (1 ರಿಂದ 28 ದಿನಗಳ) ರಿಪೋರ್ಟಿಂಗ್ ಅವಧಿಯಲ್ಲಿದ್ದು, ಈವರೆಗೆ ಒಟ್ಟು 5 ಜನ ಕೋವಿಡ್-19 ರೋಗಿಗಳು ಮೃತಪಟ್ಟಿದ್ದಾರೆ. 58 ಜನರು ಕೋವಿಡ್-19 ರೋಗದಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದು, 64 ಜನರು ಆಸ್ಪತ್ರೆಯಲ್ಲಿರುವ ಕೋವಿಡ್-19 ಸಕ್ರಿಯ ರೋಗಿಗಳಾಗಿದ್ದಾರೆ.

 ಈವರೆಗೆ 24511 ಜನರ ಗಂಟಲು ದ್ರವ ಮಾದರಿಯನ್ನು ಸಂಗ್ರಹಿಸಿದ್ದು, 19952 ಜನರ ನೆಗೆಟಿವ್ ವರದಿ ಬಂದಿದೆ. ಇನ್ನೂ 4432 ಜನರ ಗಂಟಲು ದ್ರವ ಮಾದರಿ ಪರೀಕ್ಷಾ ವರದಿ ಬರಬೇಕಾಗಿದೆ ಎಂದು ಅವರು ತಿಳಿಸಿದ್ದಾರೆ.

03-06-2020 EE DIVASA KANNADA DAILY NEWS PAPER

Monday, June 1, 2020

02-06-2020 EE DIVASA KANNADA DAILY NEWS PAPER

ಶಿಕಾರಖಾನೆ ಏರಿಯಾದಲ್ಲಿ ಪೆಟ್ರೋಲ್, ಡಿಸೇಲ್ ಕಳ್ಳರ ಹಾವಳಿ..!



ವರದಿ: ಕಲ್ಲಪ್ಪ ಶಿವಶರಣ
ವಿಜಯಪುರ: ಬೈಕ್, ಅಟೋ ಪ್ಯಾಜ್ಯೋ ವಾಹನವನ್ನು ಮನೆಯಾಚೆ ರಸ್ತೆ ಬದಿಯಲ್ಲಿ ನಿಲ್ಲಿಸಿ ರಾತ್ರಿ ನೆಮ್ಮದಿ ಯಿಂದ ಮನೆಯಲ್ಲಿ ಸರಿಯಾಗಿ ನಿದ್ದೆ ಮಾಡದೆ ತಮ್ಮ ವಾಹನದ ಕುರಿತು ಸಾರ್ವಜನಿಕರು  ಪ್ರತಿದಿನ ಚಡಪಡಿಸುವ ಸ್ಥಿತಿ ನಿರ್ಮಾಣವಾಗಿದೆ.
ಹೌದು.. ನಗರದ ಶಿಕಾರಖಾನೆ ಸ್ಟೇಶನ್ ಬ್ಯಾಕ್ ರೋಡ್ ರಸ್ತೆಯಲ್ಲಿ ಇಂತಹದೊಂದು ಘಟನೆ 
ನಾಲ್ಕೈದು ದಿನಗಳಿಂದ ಪೆಟ್ರೋಲ್ ಕಳ್ಳತನ ಮಾಡುವುದರ ಜೊತೆ ವಾಹನ ಜಖಂ ಮಾಡಿ ಸಾರ್ವಜನಿಕರ ನೆಮ್ಮದಿಯನ್ನು ಖದೀಮರು ಹಾಳುಮಾಡುತ್ತಿದ್ದಾರೆ.
ಪೆಟ್ರೋಲ್ ಹಾಗೂ ಡಿಸೇಲ್ ರೇಟ್ ಹೆಚ್ಚಳವಾಗಿದ್ದರಿಂದ ವಾಹನ ಸವಾರ ಜೇಬಿಗೆ ಕತ್ತರಿ ಬಿದ್ದಂತಾಗಿದೆ. ಆದರೆ ಕೆಲ ಖದೀಮ ಕಳ್ಳರು ವಾಹನಗಳಲ್ಲಿನ ಪೆಟ್ರೋಲ್‍ಗಳನ್ನು ಕಳ್ಳತನಮಾಡಿ ಇದನ್ನೇ ತಮ್ಮ ಬಂಡವಾಳ ಮಾಡಿಕೊಳ್ಳುತ್ತಿದ್ದಾರೆ. ಶಿಕಾರಖಾನೆ ಬಡಾವಣೆಯ ಸ್ಟೇಶನ್ ಬ್ಯಾಕ್ ರೋಡ್ ರಸ್ತೆಯ ಪಕ್ಕದಲ್ಲಿ ರಾತ್ರಿವೇಳೆ ಮನೆಯ ರಸ್ತೆಯ ಬದಿ ಹಚ್ಚಿದ ಆಟೋ, ಪ್ಯಾಜೋ, ಬೈಕ್ ಗಳಲ್ಲಿನ ಪೆಟ್ರೋಲ್ ಬೆಳಗಾಗುತ್ತಿದ್ದಂತೆ ಮಂಗಮಾಯವಾಗುತ್ತಿದೆ.
ಶಿಕಾರಖಾನೆ ಸ್ಟೇಶನ್ ಬ್ಯಾಕ್ ರೋಡ್ ಹಳೆಯ ಇಂಡಸ್ಟ್ರಿ ಏರಿಯಾಗೆ ಹೊಂದಿಕೊಂಡಿದ್ದರಿಂದ ಈ ಭಾಗದಲ್ಲಿ ಕೆಲ ಜನ ಕಾರ್ಮಿಕರಾಗಿದ್ದು, ಈ ಕಾರ್ಖಾನೆ ಯಲ್ಲಿ ಕೆಲಸಮಾಡುವವರು, ಕಟ್ಟಡ ಕಾರ್ಮಿಕರು ಹಾಗೂ ಅಟೋ, ಪ್ಯಾಜೋ ಚಾಲಕರು ಹಾಗೂ  ಮೋಟಾರ್, ಬೈಕ್, ಮೆಕ್ಯಾನಿಕ್ ಕೆಲಸ ಮಾಡುವವರು ಸೇರಿದಂತೆ ಇನ್ನಿತರೆ ಕೂಲಿ ಕಾರ್ಮಿಕರು ಹೆಚ್ಚಾಗಿದ್ದಾರೆ. ಅಂದಿನ ದುಡಿಮೆ ಅಂದೇ ದುಡಿಯುವ ಇಂತಹ ಕಾರ್ಮಿಕರ ಬದುಕು ಸದ್ಯ ಕೊರೋನಾ ಹಾವಳಿಗೆ ಸಿಲುಕಿ ನುಚ್ಚು ನೂರಾಗಿದೆ. ಕಳೆದ ಒಂದೂವರೆ ತಿಂಗಳ ಹಿಂದೆ ಕೊರೋನಾ ನಿಯಂತ್ರಣಕ್ಕಾಗಿ ಕಟ್ಟು ನಿಟ್ಟಿನ ಲಾಕ್‍ಡೌನ್ ಜಾರಿ ಮಾಡಿದ್ದರಿಂದ  ಈ ಪ್ರದೇಶದ ಕಾರ್ಮಿಕರು, ಜನರು ಮನೆಯಲ್ಲಿಯೇ ಕೂಡುವಂತಾಗಿತ್ತು. 
ಸದ್ಯ 5 ನೇ ಹಂತದ ಲಾಕ್‍ಡೌನ್ ಸಂದರ್ಭ ಹಲವು ವಿಭಾಗಕ್ಕೆ ವಿನಾಯಿತಿ ನೀಡಿದ್ದರಿಂದ ಕಾರ್ಮಿಕರ ಬದುಕಿನ ಬಂಡಿ ಮತ್ತೆ ಆಮೆಗತಿಯಲ್ಲಿ ಸಾಗುತ್ತಿದೆ. ಆದರೆ ಆರ್ಥಿಕ ಹೊಡೆತ ಬಿದ್ದಿದ್ದರಿಂದ ಕಾರ್ಮಿಕರ ಬದುಕು ಇನ್ನು ಸಹಜ ಸ್ಥಿತಿಗೆ ಬಂದಿಲ್ಲ.  ಒಂದೆಡೆ ಕೆಲಸ ಇಲ್ಲದ ಪರಿಸ್ಥಿತಿ  ಇನ್ನೊಂದೆಡೆ ಆರ್ಥಿಕ ಹೊಡೆತಕ್ಕೆ ಸಿಲುಕಿ ಬದುಕು ಅನಾನೂಕೂಲತೆಯಿಂದ ಕೂಡಿದೆ. ಇಂತಹ ಸಂದರ್ಭ ಇತರೆ ಅವಶ್ಯಕ ವಸ್ತುಗಳ ಬೆಲೆ ಏರಿಕೆ ಗಾಯದ ಮೇಲೆ ಬರೆ ಎಳೆದಂತಾಗಿದೆ. 
ಇಂತಹ ಸಂದರ್ಭ ವಾಹನಗಳಲ್ಲಿನ ಪೆಟ್ರೋಲ್ ಕಳ್ಳರ ಹಾವಳಿ ಸಾರ್ವಜನಿಕರ ನೆಮ್ಮದಿಗೆ ಕೊಳ್ಳಿ ಇಟ್ಟಂತಾಗಿದೆ. 
ಖದೀಮರ ಬಂಧಿಸಿ ; ಪೆಟ್ರೋಲ್ ಕಳ್ಳರ ಹಾವಳಿ ತಪ್ಪಿಸಿ : ಕಳೆದ ನಾಲ್ಕೈದು ದಿನಗಳಿಂದ ಶಿಕಾರಖಾನೆ ಬಡವಾಣೆಯಲ್ಲಿನ ವಾಹನಗಳ ಪೆಟ್ರೋಲ್ ಕಳ್ಳತನ ನಡೆಯುತ್ತಿದ್ದು ಈ ಖದೀಮ ಕಳ್ಳರನ್ನು ಪೊಲೀಸರು ಪತ್ತೆ ಹಚ್ಚಿ ಬಂಧಿಸಬೇಕು. 
ಈ ಭಾಗದಲ್ಲಿ ರಾತ್ರಿವೇಳೆ ಪೊಲೀಸರು ಇನ್ನಷ್ಟು ಹೆಚ್ಚಿನ ಗಂಟೆಯಲ್ಲಿ ಗಸ್ತು ತಿರುಗಿ ಈ ಪೆಟ್ರೋಲ್ ಕಳ್ಳರ ಹಾವಳಿಗೆ ಕಡಿವಾಣ ಹಾಕಬೇಕು. ಕಾರ್ಮಿಕರ ನೆಮ್ಮದಿಯನ್ನು ಹಾಳು ಮಾಡುತ್ತಿರುವ ಈ ಪೆಟ್ರೋಲ್  ಕಳ್ಳರ ಹಾವಳಿಯ ಹಿಂದಿರುವ ಖದೀಮರ ಮೂಲವನ್ನು ಪತ್ತೆ ಹಚ್ಚಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಬಡಾವಣೆಯ ನಿವಾಸಿಗಳು ಒತ್ತಾಯಿಸುತ್ತಾರೆ.

Sunday, May 31, 2020

ಲಾಕಡೌನ್ ಸಮಯದಲ್ಲಿ ಪುಣ್ಯಕೋಟಿಯ ಹಸಿವನ್ನುನಿಗಿಸಿದ ಅಪ್ಪುಗೌಡ ಪಾಟೀಲ ಯತ್ನಾಳ


ಈ ದಿವಸ ವಾರ್ತೆ
ವಿಜಯಪುರ: ಪುಣ್ಯಕೋಟಿ ಗೋ ರಕ್ಷಾ ಕೇಂದ್ರಕ್ಕೆ ಖುದ್ದಾಗಿ ಆಗಮಿಸಿ ಮೇವಿನ ಅಗತ್ಯತೆಯನ್ನು ತಿಳಿದ ಸಹೃದಯಿಗಳು. ಮರುಕ್ಷಣವೇ ಗೋಮಾತೆಯ ಮೇಲಿನ ಕಾಳಜಿಯಿಂದ ಶನಿವಾರ ದಂದು ಬುರಣಾಪೂರದಲ್ಲಿನ ಪುಣ್ಯಕೋಟಿ ಗೋರಕ್ಷಾ ಕೇಂದ್ರಕ್ಕೆ ಐದು ಟ್ರ್ಯಾಕ್ಟರಗಳ ಮೇವನ್ನು ಅಪ್ಪುಗೌಡ ಪಾಟೀಲ ಯತ್ನಾಳರವರು ದಾನವಾಗಿ ನೀಡಿದರು. ಈ ಸಂದರ್ಭದಲ್ಲಿ ಬಸನಗೌಡ ಬಿರಾದಾರ ಮಾತನಾಡಿ,  ತಮ್ಮ ಸಹಾಯಕ್ಕೆ ನಮ್ಮ ಇಡೀ ಪುಣ್ಯಕೋಟಿ ತಂಡವು ಋಣಿಯಾಗಿದೆ. ಇಲ್ಲಿಯವರೆಗೂ ತಾವು ನಮ್ಮ ಪುಣ್ಯಕೋಟಿಗಿ ಒಬ್ಬ ಬಂಧುವಾಗಿ ಹಾಗೇಯೆ ಬೆನ್ನೆಲುಬಾಗಿ ಇದ್ದಿರಿ. ನಿಮ್ಮ ಸಹಾಯ ಸಹಕಾರ ಸದಾ ಕಾಲ ಹೀಗೆ ಇರಲಿ ಎಂದು ಆಶಿಸುತ್ತೇವೆ. ತಮಗೆ ತಾಯಿ ಗೋಮಾತೆಯು ಆಯುರಾರೋಗ್ಯ ಮತ್ತು ಸಕಲ ಸಿರಿ ಸಂಪತ್ತನ್ನು ಕೊಟ್ಟು ಕಾಪಾಡಲಿ ಎಂದು ಹಾರೈಸಿದರು.

01-06-2020 EE DIVASA KANNADA DAILY NEWS PAPER