ಈ ದಿವಸ ವಾರ್ತೆ
ವಿಜಯಪುರ: ಪುಣ್ಯಕೋಟಿ ಗೋ ರಕ್ಷಾ ಕೇಂದ್ರಕ್ಕೆ ಖುದ್ದಾಗಿ ಆಗಮಿಸಿ ಮೇವಿನ ಅಗತ್ಯತೆಯನ್ನು ತಿಳಿದ ಸಹೃದಯಿಗಳು. ಮರುಕ್ಷಣವೇ ಗೋಮಾತೆಯ ಮೇಲಿನ ಕಾಳಜಿಯಿಂದ ಶನಿವಾರ ದಂದು ಬುರಣಾಪೂರದಲ್ಲಿನ ಪುಣ್ಯಕೋಟಿ ಗೋರಕ್ಷಾ ಕೇಂದ್ರಕ್ಕೆ ಐದು ಟ್ರ್ಯಾಕ್ಟರಗಳ ಮೇವನ್ನು ಅಪ್ಪುಗೌಡ ಪಾಟೀಲ ಯತ್ನಾಳರವರು ದಾನವಾಗಿ ನೀಡಿದರು. ಈ ಸಂದರ್ಭದಲ್ಲಿ ಬಸನಗೌಡ ಬಿರಾದಾರ ಮಾತನಾಡಿ, ತಮ್ಮ ಸಹಾಯಕ್ಕೆ ನಮ್ಮ ಇಡೀ ಪುಣ್ಯಕೋಟಿ ತಂಡವು ಋಣಿಯಾಗಿದೆ. ಇಲ್ಲಿಯವರೆಗೂ ತಾವು ನಮ್ಮ ಪುಣ್ಯಕೋಟಿಗಿ ಒಬ್ಬ ಬಂಧುವಾಗಿ ಹಾಗೇಯೆ ಬೆನ್ನೆಲುಬಾಗಿ ಇದ್ದಿರಿ. ನಿಮ್ಮ ಸಹಾಯ ಸಹಕಾರ ಸದಾ ಕಾಲ ಹೀಗೆ ಇರಲಿ ಎಂದು ಆಶಿಸುತ್ತೇವೆ. ತಮಗೆ ತಾಯಿ ಗೋಮಾತೆಯು ಆಯುರಾರೋಗ್ಯ ಮತ್ತು ಸಕಲ ಸಿರಿ ಸಂಪತ್ತನ್ನು ಕೊಟ್ಟು ಕಾಪಾಡಲಿ ಎಂದು ಹಾರೈಸಿದರು.
No comments:
Post a Comment