ಈ ದಿವಸ ವಾರ್ತೆ
ವಿಜಯಪುರ : ಜಿಲ್ಲೆಯಲ್ಲಿ ಈವರೆಗೆ ಒಟ್ಟು 122 ಕೋವಿಡ್-19 ಪಾಸಿಟಿವ್ ಪ್ರಕರಣಗಳು ದೃಢಪಟ್ಟಿದ್ದು, ಜಿಲ್ಲಾಸ್ಪತ್ರೆಯಲ್ಲಿ 62 ರೋಗಿಗಳು ಕೋವಿಡ್-19 ಪಾಸಿಟಿವ್ ಸಕ್ರಿಯ ರೋಗಿಗಳಾಗಿದ್ದಾರೆ. ಇಂದು 26 ಜನರಿಗೆ ಕೋವಿಡ್-19 ಸೋಂಕು ತಗುಲಿದ್ದು, ಮಹಾರಾಷ್ಟ್ರದ ಸಂಪರ್ಕದಿಂದ ಸೋಂಕು ತಗುಲಿರುವ ಬಗ್ಗೆ ದೃಢಪಟ್ಟಿದೆ ಎಂದು ಜಿಲ್ಲಾಧಿಕಾರಿ ವೈ.ಎಸ್ ಪಾಟೀಲ ಅವರು ತಿಳಿಸಿದ್ದಾರೆ. ಅದರಂತೆ ರೋಗಿ ಸಂಖ್ಯೆ 2923 (70 ವರ್ಷ - ಪುರುಷ), ರೋಗಿ ಸಂಖ್ಯೆ 2924 (55 ವರ್ಷ - ಪುರುಷ), ರೋಗಿ ಸಂಖ್ಯೆ 2925 (55 ವರ್ಷ ಮಹಿಳೆ), ರೋಗಿ ಸಂಖ್ಯೆ 2926 (38 ವರ್ಷ ಪುರುಷ), ರೋಗಿ ಸಂಖ್ಯೆ 2927 (28 ವರ್ಷ ಮಹಿಳೆ), ರೋಗಿ ಸಂಖ್ಯೆ 2928 (38 ವರ್ಷ ಪುರುಷ), ರೋಗಿ ಸಂಖ್ಯೆ 2929 (30 ವರ್ಷ ಪುರುಷ), ರೋಗಿ ಸಂಖ್ಯೆ 3011 (51 ವರ್ಷ ಪುರುಷ), ರೋಗಿ ಸಂಖ್ಯೆ 3013 (15 ವರ್ಷ ಬಾಲಕ), ರೋಗಿ ಸಂಖ್ಯೆ 3014 (46 ವರ್ಷ ಪುರುಷ), ರೋಗಿ ಸಂಖ್ಯೆ 3151 (04 ವರ್ಷ ಬಾಲಕಿ) ರೋಗಿ ಸಂಖ್ಯೆ 3152 (45 ವರ್ಷ – ಮಹಿಳೆ), ರೋಗಿ ಸಂಖ್ಯೆ 3153 (35 ವರ್ಷ – ಮಹಿಳೆ), ರೋಗಿ ಸಂಖ್ಯೆ 3154 (23 ವರ್ಷ ಯುವತಿ), ರೋಗಿ ಸಂಖ್ಯೆ 3157 (22 ವರ್ಷ ಯುವಕ), ರೋಗಿ ಸಂಖ್ಯೆ 3171 (33 ವರ್ಷ ಯುವಕ), ರೋಗಿ ಸಂಖ್ಯೆ 3172 (59 ವರ್ಷ ಪುರುಷ), ರೋಗಿ ಸಂಖ್ಯೆ 3173 (37 ವರ್ಷ ಪುರುಷ), ರೋಗಿ ಸಂಖ್ಯೆ 3174 (05 ವರ್ಷ ಬಾಲಕ), ರೋಗಿ ಸಂಖ್ಯೆ 3175 (02 ವರ್ಷ ಬಾಲಕ), ರೋಗಿ ಸಂಖ್ಯೆ 3176 (20 ವರ್ಷ ಯುವತಿ), ರೋಗಿ ಸಂಖ್ಯೆ 3177 (54 ವರ್ಷ ಮಹಿಳೆ) ರೋಗಿ ಸಂಖ್ಯೆ 3178 (30 ವರ್ಷ – ಯುವಕ), ರೋಗಿ ಸಂಖ್ಯೆ 3179 (22 ವರ್ಷ – ಯುವಕ), ರೋಗಿ ಸಂಖ್ಯೆ 3180 (25 ವರ್ಷ ಯುವತಿ), ರೋಗಿ ಸಂಖ್ಯೆ 3181 (03 ವರ್ಷ ಬಾಲಕಿ) ಇವರಿಗೆ ಮಹಾರಾಷ್ಟ್ರದ ಸಂಪರ್ಕದಿಂದ ಕೋವಿಡ್-19 ಸೋಂಕು ತಗುಲಿದೆ ಎಂದು ಅವರು ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ಈವರೆಗೆ ವಿದೇಶ ಸೇರಿದಂತೆ ಇತರ ಪ್ರದೇಶಗಳಿಂದ 27384 ಜನರು ಬಂದ ಬಗ್ಗೆ ವರದಿಯಾಗಿದ್ದು, ಇವರ ಮೇಲೆ ತೀವ್ರ ನಿಗಾ ಇಡಲಾಗಿದೆ. ಒಟ್ಟು 122 ಕೋವಿಡ್ -19 ಪಾಸಿಟಿವ್ ಪ್ರಕರಣಗಳು ದೃಢಪಟ್ಟಿದ್ದಾರೆ. 6838 ಜನರು 28 ದಿನಗಳ ಐಸೋಲೇಶನ್ ಅವಧಿ ಪೂರ್ಣಗೊಳಿಸಿದ್ದಾರೆ. 20486 ಜನರು (1 ರಿಂದ 28 ದಿನಗಳ) ರಿಪೋರ್ಟಿಂಗ್ ಅವಧಿಯಲ್ಲಿದ್ದು, ಈವರೆಗೆ ಒಟ್ಟು 5 ಜನ ಕೋವಿಡ್-19 ರೋಗಿಗಳು ಮೃತಪಟ್ಟಿದ್ದಾರೆ. 55 ಜನರು ಕೋವಿಡ್-19 ರೋಗದಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದು, 62 ಜನರು ಆಸ್ಪತ್ರೆಯಲ್ಲಿರುವ ಕೋವಿಡ್-19 ಸಕ್ರಿಯ ರೋಗಿಗಳಾಗಿದ್ದಾರೆ. ಈವರೆಗೆ 24511 ಜನರ ಗಂಟಲು ದ್ರವ ಮಾದರಿಯನ್ನು ಸಂಗ್ರಹಿಸಿದ್ದು, 17047ಜನರ ನೆಗೆಟಿವ್ ವರದಿ ಬಂದಿದೆ. ಇನ್ನೂ 7342 ಜನರ ಗಂಟಲು ದ್ರವ ಮಾದರಿ ಪರೀಕ್ಷಾ ವರದಿ ಬರಬೇಕಾಗಿದೆ. ಹಾಗೂ 21706 ಜನರನ್ನು ಹೋಮ್ ಕ್ವಾರಂಟೈನ್ ಮಾಡಲಾಗಿದ್ದು, 3025 ಜನರನ್ನು ಸಾಂಸ್ಥಿಕ ಕ್ವಾರಂಟೈನ್ ಮಾಡಲಾಗಿದೆ ಎಂದು ಅವರು ತಿಳಿಸಿದ್ದಾರೆ.
No comments:
Post a Comment