🖋 ಪ್ರಿಯಾ ಪ್ರಾಣೇಶ ಹರಿದಾಸ
ರಂಗಸ್ವಾಮಿ ಅಂದು ಬೆಳಗ್ಗೆ ವಾಕಿಂಗ ಅಂತ ಹೊರ ಬಿದ್ದು ಕಾಶಿಗೆ ಹೋಗಲು ಸ್ಠೇಶನ್ಗೆ ಬರ್ತಾನೆ.ಮನೆ ಬಿಟ್ಟು ಹೋರಡುವದು ನಿರ್ಧಾರ ಮಾಡಿಯೇ ರಿಸರ್ವೆಶನ ಮಾಡಿಸಿದ್ದ.ಮೂವತ್ತು ಸಾವಿರ ಪೆನಶನ ಇದ್ದರು ,ಮಗ ಅರವಿಂದ ಮತ್ತು ಸೊಸೆ ಸುನಯನಾ ಚೆನ್ನಾಗಿ ನೋಡ್ತಿದ್ದಿಲ್ಲ ,ಅದಕ್ಕಾಗಿ
ಮನೆ ಬಿಟ್ಟು ಹೋರಡುವದು ತೀರ್ಮಾನಿಸಿದ್ದ..ಬಾಳ ಸಂಗಾತಿ ಹೋಗಿ ಆಗಲೇ ಐದು ವರ್ಷ ಆಗಿತ್ತು.
ರೇಲ್ವೆ ಸ್ಠೇಶನಲ್ಲಿ ಟ್ರೇನ ಬರುವದು
ಎರಡು ತಾಸು ತಡ ಎಂದು ಅನೌಂನ್ಸ ಮಾಡಿದ್ದರು.
ಆಗ ಅಲ್ಲಿಯೇ ಬೆಂಚ ಮೇಲೆ ಕುಳಿತನು.ಅವನಿಗೆ ಅಂದು ತನ್ನ ಊರು ಮತ್ತು ಜನ ಬಿಟ್ಟು ಹೋಗುತ್ತಿದ್ದನಲ್ಲಾ ಅಂತ ದುಃಖ ಉಮ್ಮಳಿಸಿ ಬಂತು.ಆದರೂ
ತಡೆದುಕೊಂಡ ,ಈ ಕಣ್ಣೀರಿಗೆ ಯಾವ ಪ್ರತಿಫಲ ಇಲ್ಲ ಅಂತ ಸುಮ್ಮನಾದ.ಅಂದು ಬಿಟ್ಟು ಹೋರಡುವಾಗ ಎಲ್ಲವು ಹೊಸತನದಲಿ ನೋಡುವ ಹಾಗೆ ನೋಡತೊಡಗಿದ.
ಮನಸ್ಸಿನಲ್ಲಿ ಜೀವನದ ಒದೊಂದು ಚಿತ್ರಣ ಕಣ್ಣ ಮುಂದೆ ಬರತೊಡಗಿತು.
ಎಲ್ಲರ ಮುಂದೆ ಮಗನ ಬಗ್ಗೆ ಬಹಳ ಹೇಳಿಕೊಳ್ಳುತ್ತಿದ್ದದ್ದು.ಅದೇ ಮಗ ಇಂದು
ತಾತ್ಸಾರವಾಗಿ ನೋಡಿದ್ದರ ಪರಿಣಾಮ ನಾನು ಮನೆ ಬಿಡುವ ಹಾಗಾಯಿತು.ಇಂದು ನೆಲ,ಜಲ,ಸ್ನೇಹಿತರನ್ನು,ಭಂಧು ಬಳಗ ಯಾವುದು ಬೇಡವಾಯಿತು.ಎಲ್ಲವು ನಗಣ್ಯವೆನಿಸಿತು.ಜಗತ್ತೇ ಶೂನ್ಯವೆನಿಸಿತು.
ಆಗ ತನ್ನ ತಪ್ಪಿನ ಅರಿವಾಯಿತು.ದೊಡ್ಡ ಅಧಿಕಾರದಲ್ಲಿದ್ದಾಗ ತನ್ನ ಜಂಭದಿಂದ ಮಗನನ್ನು ಹಾಸ್ಟೆಲ್ಗೆ ಸೇರಿಸಿದ್ದ.ಸೂಟಿ ಬಂದ ಮೇಲೆ ಕಾಂಪಿಟೆಟಿವ್ ಸ್ಟಡಿ ಸಲುವಾಗಿ ಕ್ಲಾಸ ಹಾಕುವದು ,ಹೀಗೆ ಮಾಡಿ
ಮಗನನ್ನು ಒಂದು ದಿನ ಹತ್ತಿರ ಕರೆದು ಪ್ರೀತಿಯಿಂದ ಮಾತನಾಡಿಸಲಿಲ್ಲ ಮುದ್ದಿಸಲಿಲ್ಲ.
ಇದೆಲ್ಲಾ ಸ್ಥಿತಿ ಗೆ ನಮ್ಮ ಪೋಷಣೆ ಮತ್ತು ಸಂಸ್ಕಾರದ ವಿಫಲತೆ ಎಂದು.
"ಮಾಡಿದ್ದು ಉಣ್ಣೋ ಮಾರಾಯ" ಉಕ್ತಿ
ನೆನಪಾಯಿತು.ಆಗ ಮನಸ್ಸಿನಲ್ಲಿ ಇನ್ನು
ಚಿಂತಿಸಿ ಉಪಯೋಗವಿಲ್ಲ ಎಂದು
ಸುಮ್ಮನಾದ ,ಆಗಲೇ ಎರಡ ಹನಿ ಜಿನುಗಿದವು. ಅಷ್ಟರಾಗಲೇ ಟ್ರೇನ ಬರುವ ಸಪ್ಪಳಾಯಿತು.ಕಡೆ ಬಾರಿ ಬೆಂಚ ಮೇಲೆ
ಕೈ ಆಡಿಸಿ ಇದು ನನ್ನ ಊರಿನ ಕೊನೆಯ ಸ್ಪರ್ಷ ಅಂತ ಬೆಂಚನ್ನು ಮುಟ್ಟಿ ಎಲ್ಲ ಸುತ್ತಲೂ ನೋಡಿ ತನ್ನ ಸಿಟ್ ನಂಬರ ಇರುವ ಭೋಗಿ ಕನಫರ್ಮ ಮಾಡಿಕೊಂಡು
ಹತ್ತಿದನು.
ರಂಗಸ್ವಾಮಿ ಹೋದ ಮೇಲೆ ಈ ಮನುಜ ಜೀವಗಳಿಗಿಂತ ನಾವುಗಳಾದ ನಿರ್ಜೀವ ಕಲ್ಲು ,ಹಸಿರು ನಾವೇ ಲೇಸು ,ಅನ್ನುತ್ತಾ ತನ್ನನ್ನು ನೋಡಿ ನಗುತ್ತಿದ್ದಾವೆನೋ ಅನ್ನುವಂತೆ
ರಂಗಸ್ವಾಮಿಗೆ ಭಾಸವಾಯಿತು.
ಇತ್ತ ಅರವಿಂದ ರಾತ್ರಿ ಊಟದ ಸಮಯ ಕಳೆದರೂ ಹೋರಗಡೆ ಹೋಗಿ ಬರ್ತಿನಿ ಅಂತ ಹೇಳಿ ಹೋದ ಅಪ್ಪ ಬರದದ್ದು ನೋಡಿ , ಅರವಿಂದ ಅಪ್ಪನ ಸ್ನೇಹಿತರ ಮನೆಗೆ ಕಾಲ್ ಮಾಡಿ ವಿಚಾರಿಸಿದಾಗ ಎಲ್ಲಿಯೂ ಬಂದಿಲ್ಲ ಅನ್ನುವ ಸುದ್ದಿ ಸ್ಪಷ್ಟವಾಯಿತು.
ಸುನಯನಾ ! ಅಪ್ಪಾ ಹೋಗಬೇಕಾದರೆ ಏನಾದ್ರು ಹೇಳಿ ಹೋಗಿದ್ದಾರಾ ಅಂದಾಗ,
ನನಗೆ ಏನು ಹೇಳಿ ಹೋಗಿಲ್ಲರಿ. ದಿನದಂತೆ ಸಾಯಂಕಾಲ ವೇಳೆ ವಾಕಿಂಗಗೆ ಹೋಗುವ ಹಾಗೆ ಹೋಗಿದ್ದಾರೆ.ಕೈಲ್ಲಿ ಏನು ಇದ್ದಿಲ್ಲಾರಿ
ಅಂದಳು.
ಕೂಡಲೇ ಅರವಿಂದ ತನ್ನ ಅಪ್ಪನ ರೂಮಗೆ ಹೋಗಿ ನೋಡಿದಾಗ ಎಲ್ಲ ವಸ್ತುಗಳು ಇದ್ದ ಜಾಗದಲ್ಲಿಯೇ ಇದ್ದವು.
ಒಳಗೆ ಹೋಗಿ ತಡಕಾಡಿದ ನಂತರ ಟೇಬಲ ಮೇಲೆ ಮಾತ್ರೆಯ ಡಬ್ಬಿಯ ಮೇಲೆ ಒಂದು ಕವರ ನೋಡಿ , ತಗೆದುಕೊಂಡು ಒಳಗಿನ
ಚೀಟಿಯನ್ನು ತಗೆದು ಓದ ತೊಡಗಿದನು.
ಪ್ರೀತಯ ಮಗ ಅರವಿಂದ ನಿನ್ನ ತಂದೆಯ ಶುಭಾಶಿರ್ವಾದಗಳು.ಇಂದು
ನಾನು ಮನೆ ಬಿಟ್ಟು ಹೋರಟಿರುವೆ. ನನ್ನನು ಹುಡುಕಲು ಪ್ರಯತ್ನಿಸಬೇಡ.
ನಾನು ಆತ್ಮಹತ್ಯೆ ಮಾಡಿಕೊಳ್ಳುವ ಹೇಡಿ ಅಲ್ಲ , ಹೀಗಾಗಿ ನಿಮ್ಮಿಂದ ದೇಹ ದೂರ ಹೋದರು ನನ್ನ ಪ್ರೀತಿ ಆಶಿರ್ವಾದ ನಿಮ್ಮಗಳ ಜೊತೆ ಇರುತ್ತದೆ. ಮನೆ ,ಒಂದು ಸೈಟು ಮೊಮ್ಮಗನ ಹೆಸರಿಗೆ ಬರೆದಿರುವೆ
ಇನ್ನು ಎಂಟು ಲಕ್ಷ ಫಿಕ್ಸಡ ಡಿಪಾಸಿಟ
ಹಣವನ್ನು ನಾನೇ ಇಟ್ಟು ಕೊಂಡಿರುವೆ . ಈಗ ನಾನು ಯಾವ ಊರಿಗೆ ಹೋರಟಿದ್ದೆನೋ ಅಲ್ಲಿಯ ವೃಧ್ಧಾಶ್ರಮದಲ್ಲಿರುತ್ತೆನೆ.ಹಾಗೆ ಉಳಿದ ಬಡ್ಡಿ ಹಣದಲ್ಲಿ ವೃಧ್ಧಾಶ್ರಮ , ಅಬಲಾಶ್ರಮಕ್ಕೆ ಸಮಾಜ ಸೇವೆ ಮಾಡಲು
ವಿನಿಯೋಗ ಮಾಡುತ್ತೆನೆ. ನಾನು ಅರಾಮದಿಂದ ಇರುತ್ತೆನೆ . ನನ್ನ ಹುಡುಕುವ ಪ್ರಯತ್ನ ಮಾಡಬೇಡ.
ನಾನು ತೀರಿ ಹೋದ ಮೇಲೆ ಆ ಹಣ ನಿನಗೆ ಸೇರುತ್ತದೆ. ಮುಂದೆ ನನ್ನ ಅಪರ ಕ್ರಿಯೆಗಳನ್ನು ಅಚ್ಚುಕಟ್ಟಾಗಿ ಮಾಡು.
ನಾನು ಮತ್ತು ಇವಳು ನಿನ್ನನ್ನು ಬೆಳಿಸುವಲ್ಲಿ ನಮ್ಮ ಅಂತಸ್ಥಿಕೆಯಲ್ಲಿ,
ಮಾನವೀಯ ಮೌಲ್ಯಗಳನ್ನು ಕಲಿಸಲಿಲ್ಲ.
ದಯವಿಟ್ಟು ನಿನ್ನ ಮಗನಿಗೆ ಈಗಿನಿಂದಲೇ
ಸಂಸ್ಕಾರ ಮತ್ತು ಮಾನವೀಯ ಮೌಲ್ಯಗಳನ್ನು ಕಲಿಸು.
ಇದೇ ನಿಮ್ಮ ಅಪ್ಪನ ಮನದ ಮಾತ
ಇಂತಿ ನಿಮ್ಮ ತಂದೆ
ರಂಗಸ್ವಾಮಿ
ಓದಿದಾಗ ಅರವಿಂದ ಮತ್ತು ಸುನಯನಾಳ ಕಣ್ಣಲ್ಲಿ ದುಃಖ ಉಮ್ಮಳಿಸಿ
ಬಂದು ಅತ್ತಾಗ ಕೊನೆಗೆ ಅರಿವಾಗಿದ್ದು
"ಮಿಂಚಿ ಹೋದ ಕಾಲಕ್ಕೆ ಚಿಂತಿಸಿ ಫಲವಿಲ್ಲ" ಎಂಬ ಗಾದೆ ಮಾತು ನಿಜವಾಯಿತು.
No comments:
Post a Comment