Sunday, December 15, 2024

ಮಾನವ ಹಕ್ಕುಗಳ ಆಯೋಗದ ನ್ಯಾಯಾಂಗದ ಸದಸ್ಯ ಎಸ್.ಕೆ.ವಂಟಿಗೋಡಿ ಜಿಲ್ಲಾಸ್ಪತ್ರೆಗೆ ಭೇಟಿ- ಪರಿಶೀಲನೆ : ಜಿಲ್ಲಾಸ್ಪತ್ರೆಯ ಕಾರ್ಯನಿರ್ವಹಣೆೆಗೆ ಪ್ರಶಂಸೆ


ವಿಜಯಪುರ:  ನ್ಯಾಯಾಂಗ ಸದಸ್ಯರು ಕರ್ನಾಟಕ ಮಾನವ ಹಕ್ಕುಗಳ ಆಯೋಗದ ನ್ಯಾಯಾಂಗ ಸದಸ್ಯರಾದ ಎಸ್.ಕೆ.ವಂಟಿಗೋಡಿ ಅವರು ಭಾನುವಾರ ಜಿಲ್ಲಾ ಆಸ್ಪತ್ರೆಯ ವಿವಿಧ ವಿಭಾಗಗಳಿಗೆ ಭೇಟಿ ನೀಡಿ, ಕೂಲಕುಂಷವಾಗಿ ಪರಿಶೀಲನೆ ನಡೆಸಿದರು.

ಆಸ್ಪತ್ರೆಯಲ್ಲಿ ವಿವಿಧ ವಿಭಾಗಗಳಿಗೆ ಭೇಟಿ ನೀಡಿ ಸ್ವಚ್ಚತೆ ಹಾಗೂ ಔಷಧಿಗಳ ಸಂಗ್ರಹಣೆಗೆ ಅವರು ್ಗ ಪ್ರಶಂಸೆ ವ್ಯಕ್ತಪಡಿಸಿದರು.


ಆಸ್ಪತ್ರೆಗೆ ಬರುವ ರೋಗಿಗಳಿಗೆ ಸರಿಯಾಗಿ ಔಷಧೋಪಚಾರ ಹಾಗೂ ಸೂಕ್ತ ಚಿಕಿತ್ಸೆ ಒದಗಿಸಬೇಕು ಎಂದು ವೈದ್ಯಾಧಿಕಾರಿಗಳಿಗೆ ಸೂಚಿಸಿದ ಅವರು, ಎಮ್.ಆರ್.ಐ. ಸಿ.ಟಿ. ಸ್ಕ್ಯಾನ್ ಸಮರ್ಪಕವಾಗಿ ನಿರ್ವಹಿಸಬೇಕು. ರೋಗಿಗಳಿಗೆ ಯಾವುದೇ ತೊಂದರೆಯಾಗದAತೆ ನೋಡಿಕೊಳ್ಳಲು ಕೃಷ್ಣಾ ಡೈಗೋಸ್ಟೀಕ್ ಪುಣೆ ಸಂಸ್ಥೆಯ ಆಪರೇಟಿಂಗ್ ಮ್ಯಾನೇಜರ್ ಯೋಗೇಶ ಸರವೋರ್, ಲಿಗಲ್ ಅಡವೈಸರ್ ಹಾಗೂ ಎಚ್.ಆರ್. ಪಿಲಿಪ್ ಸಾಮಂತೆ, ಎಮ್.ಆರ್.ಐ. ಮ್ಯಾನೇಜರ್ ವಿಶಾಲ ಜಂಗಮ ಇವರಿಗೆ ಸೂಚನೆ ನೀಡಿದರು.

ಜಿಲ್ಲಾಸ್ಪತ್ರೆಯ ಶಸ್ತ್ರಚಿಕಿತ್ಸಕರಾದ ಡಾ,ಶಿವಾನಂದ ಮಾಸ್ತಿಹೊಳಿ ಅವರು ಜಿಲ್ಲಾಸ್ಪತ್ರೆಯ ವಿವಿಧ ವಿಭಾಗದ ಕುರಿತು ಮಾಹಿತಿ ನೀಡಿದರು.

 ಈ ಸಂಧರ್ಬದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಿಧಿಕಾರಿ ಡಾ. ಸಂಪತ್ ಗುಣಾರಿ ಹಾಗೂ ಆಸ್ಪತ್ರೆಯ ಆರ್.ಎಮ.ಓ. ಡಾ: ಚಂದು ರಾಠೋಡ, ಎಬಿ-ಎಆರ್.ಕೆ. ನೋಡಲ್ ಅಧಿಕಾರಿಗಳಾದ ಡಾ:ಎ.ಜಿ.ಬಿರಾದಾರ, ಡಾ.ಶಶಿಕಲಾ ಹಿರೇಮನಿ, ವಿಜಯಪುರ ತಹಶೀಲ್ದಾರರಾದ ಪ್ರಶಾಂತ ಚನಗೊಂಡ ಉಪಸ್ಥಿತರಿದ್ದರು.

ರಾಜ್ಯಾದ್ಯಂತ ಆಸಕ್ತರಿಗೆ ವಿಶೇಷ ಸೂಚನೆ:

ಯುವ ಪ್ರತಿಭೆಗಳು, ಹಿರಿ-ಕಿರಿ ಆಸಕ್ತ ಸಾಹಿತಿ, ಕವಿ, ಲೇಖಕರಿಗೆ ಈ ದಿವಸ ವೇದಿಕೆ ಕಲ್ಪಿಸುತ್ತಿದೆ. ಆಸಕ್ತರು ತಮ್ಮ ಸ್ವ ರಚಿತ ಲೇಖನ, ಕಥೆ, ಕವನ , ಶಾಲಾ ಕಾಲೇಜಿನ, ವಿಶ್ವವಿದ್ಯಾಲಯ ವರದಿ, ಹೋರಾಟಗಾರರ ಮನವಿ, ತಮ್ಮ  ಜಿಲ್ಲೆ, ಪಟ್ಟಣ, ತಾಲೂಕು, ಗ್ರಾಮಗಳಲ್ಲಿನ  ಸಮಸ್ಯೆಗಳು ಸೇರಿದಂತೆ ಇತರೆ ಸುದ್ದಿ ಹಾಗೂ ಜಾಹೀರಾತುಗಳನ್ನು ಪ್ರಕಟಿಸಲು ಇಂದೇ ಸಂಪರ್ಕಿಸಿರಿ.

ಸಂಪಾದಕರು ಈ ದಿವಸ ಕನ್ನಡ ದಿನ ಪತ್ರಿಕೆ ವ್ಯಾಟ್ಸಪ್ ಸಂಖ್ಯೆ : 7204279187 / 9900378892 ತಾವು ಟೈಪಿಸಿ eedivasa@gmail.com ಈ ಮೇಲ್ ಗೂ ಮೇಲ್ ಸೆಂಡ್ ಮಾಡಿದರೆ ಪ್ರಕಟಿಸಲಾಗುವುದು.

15-12-2024 EE DIVASA KANNADA DAILY NEWS PAPER

Saturday, December 14, 2024

ವಿಜಯಪುರ ಜಿಲ್ಲೆಗೆ ನ್ಯಾಯಯುತವಾಗಿ ಸಿಗಬೇಕಾಗಿರುವ 371 ಜೆ ಕಲ್ಯಾಣ ಕರ್ನಾಟಕ ಮೀಸಲಾತಿ ಕುರಿತು ಜನಪ್ರತಿನಿಧಿಗಳು ಅಧಿವೇಶನದಲ್ಲಿ ಧ್ವನಿ ಎತ್ತಲು ಆಗ್ರಹ




 ಈ ದಿವಸ ಕನ್ನಡ ದಿನ ಪತ್ರಿಕೆ ವಾರ್ತೆ 

ವಿಜಯಪುರ: ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷ ಸೇರಿದಂತೆ ವಿವಿಧ ರಾಜಕೀಯ ಮುಖಂಡರುಗಳು ವಿಜಯಪುರ ಜಿಲ್ಲೆಯ ಯುವ ಜನರ ಮತ ಪಡೆಯುವಗೋಸ್ಕರ ವಿಜಯಪುರ ಜಿಲ್ಲೆಗೆ ರಾಜಕೀಯ ಹಿತಾಸಕ್ತಿಗಾಗಿ ಈ ಹಿಂದೆ ತಪ್ಪಿ ಹೋಗಿರುವ 371 ಜೆ ಕಲ್ಯಾಣ ಕರ್ನಾಟಕ ಮೀಸಲಾತಿಯನ್ನು ಒದಗಿಸುವುದಾಗಿ ಭರವಸೆ ನೀಡಿದ್ದರು. ಚುನಾವಣೆ ಮುಗಿದ ನಂತರ ಯಾವೊಬ್ಬ ಜನಪ್ರತಿನಿಧಿಗಳು ವಿಜಯಪುರ ಜಿಲ್ಲೆಗೆ ನ್ಯಾಯಯುತವಾಗಿ ಸಿಗಬೇಕಾಗಿರುವ ಶೈಕ್ಷಣಿಕ ಹಾಗೂ ಔದ್ಯೋಗಿಕ ಮೀಸಲಾತಿಯಾಗಿರುವ 371ಜೆ ಬಗ್ಗೆ ಮಾತನಾಡದೇ ಜಿಲ್ಲೆಯ ಯುವ ಜನತೆಗೆ ಜನಪ್ರತಿನಿಧಿಗಳು ಅನ್ಯಾಯ ಎಸಗುತ್ತಿರುವುದು ಖಂಡನೀಯವಾದುದು ಕೂಡಲೇ ಬೆಳಗಾವಿಯಲ್ಲಿ ಜರುಗುತ್ತಿರುವ ಚಳಿಗಾಲದ ಅಧಿವೇಶನದಲ್ಲಿ ವಿಜಯಪುರ ಜಿಲ್ಲೆಗೆ ನ್ಯಾಯಯುತವಾಗಿ ಸಿಗಬೇಕಾಗಿರುವ 371ಜೆ ಮೀಸಲಾತಿ ಬಗ್ಗೆ ಪಕ್ಷಾತೀತವಾಗಿ ಧ್ವನಿ ಎತ್ತಿ ರಾಜ್ಯ ಸರ್ಕಾರದಿಂದ ಕೇಂದ್ರಕ್ಕೆ ಶಿಫಾರಸ್ಸು ಕಳುಹಿಸಲು ಮುಂದಾಗಬೇಕೆAದು ಕರ್ನಾಟಕ ರಾಜ್ಯ ಪದವೀಧರ ಒಕ್ಕೂಟದ ಅಧ್ಯಕ್ಷ ಲಾಯಪ್ಪ ಇಂಗಳೆ ಹಾಗೂ ಕಾರ್ಯಾಧ್ಯಕ್ಷರಾದ ಕಲ್ಲಪ್ಪ ಶಿವಶರಣ ಅವರು ಜಂಟಿಯಾಗಿ ಒತ್ತಾಯಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿದ ಅವರು, ವಿಜಯಪುರ ಜಿಲ್ಲೆಯು ನಂಜುAಡಪ್ಪ ವರದಿಯ ಪ್ರಕಾರ ಆರ್ಥಿಕ, ಸಾಮಾಜಿಕ, ಶೈಕ್ಷಣಿಕವಾಗಿ ಹಿಂದುಳಿದಿರುವ ಜಿಲ್ಲೆಯಾಗಿದೆ. ಈ ಹಿಂದೆ 1724 ವರೆಗೆ ಅಖಂಡ ವಿಜಯಪುರ ಜಿಲ್ಲೆ ಹೈದ್ರಾಬಾದ ನಿಜಾಮನ ಆಡಳಿತದಲ್ಲಿತ್ತು ಎಂಬುದು ಸರ್ಕಾರದ ಗೆಜಿಟಿಯರ್‌ನಲ್ಲಿ ದಾಖಲಾಗಿದೆ. ಸ್ವಾತಂತ್ರö್ಯಪೂರ್ವದಲ್ಲಿ ಜಿಲ್ಲೆಯ ಮಗ್ದ ಜನರ ಮೇಲೆ ರಜಾಕರ ಘೋರ ಹಾವಳಿ ನಡೆದಿರುವ ಬಗ್ಗೆ ಐತಿಹಾಸಿಕ ದಾಖಲೆಗಳು ಸಾರಿ ಹೇಳುತ್ತಿವೆ. ಐತಿಹಾಸಿಕವಾಗಿ ವಿಜಯಪುರ ಜಿಲ್ಲೆ ಅನ್ಯಾಯಕ್ಕೊಳಪಟ್ಟಿದೆ. ಮದ್ರಾಸ್ ಪ್ರಾಂತದಲ್ಲಿರುವ ಬಳ್ಳಾರಿ ಜಿಲ್ಲೆಯನ್ನು ಸೇರಿಸಲು ಅಲ್ಲಿನ ಜನಪ್ರತಿನಿಧಿಗಳು ತಮ್ಮ ರಾಜಕೀಯ ಹಿತಾಸಕ್ತಿ ಮರೆತು ಅಂದಿನ ಸರ್ಕಾರದ ಮೇಲೆ ಒತ್ತಡ ತಂದು ಮೀಸಲಾತಿ ಲಾಭವನ್ನು ಅಲ್ಲಿನ ಯುವ ಜನತೆಗೆ ಒದಗಿಸಿ ಯಶಸ್ವಿಯಾದರು.
ನ್ಯಾಯಯುತವಾಗಿ ವಿಜಯಪುರ ಜಿಲ್ಲೆಗೆ ಸಿಗಬೇಕಾಗಿದ್ದ ಮೀಸಲಾತಿಯ ಬಗ್ಗೆ ಕರ್ನಾಟಕ 5ನೇ ವಿಧಾನ ಸಭೆಯ ಮುದ್ದೇಬಿಹಾಳದ ಶಾಸಕರಾಗಿದ್ದ ದಿವಂಗತ ಎಂ.ಎA. ಸಜ್ಜನ ಅವರು ಅಂದಿನ ಕೇಂದ್ರ ಮತ್ತು ರಾಜ್ಯ ಸರ್ಕಾರ ಮತ್ತು ವಿಜಯಪುರ ಮತ್ತು ಬಾಗಲಕೋಟ ಎಲ್ಲ ಜನಪ್ರತಿನಿಧಿಗಳಿಗೆ ಪತ್ರ ಬರೆದು ಒತ್ತಾಯಿಸಿದ್ದರೂ ಕೂಡಾ ಅಂದು ಅಧಿಕಾರದಲ್ಲಿದ್ದ ಜಿಲ್ಲೆಯ ಯಾವೊಬ್ಬ ಜನಪ್ರತಿನಿಧಿಯು ಜಿಲ್ಲೆಗೆ ಸಿಗಬೇಕಾಗಿದ್ದ ವಿಶೇಷ ಸ್ಥಾನ ಮಾನದ ಬಗ್ಗೆ ಮಾತನಾಡದೆ ತಮಗೆ ಅಧಿಕಾರ ನೀಡಿದ ಜನರಿಗೆ, ಮತದಾರರಿಗೆ ಐತಿಹಾಸಿಕ ದ್ರೋಹ ಬಗೆದರು.
ಹಲವು ವರ್ಷಗಳಿಂದ ಕರ್ನಾಟಕ ರಾಜ್ಯ ಪದವೀಧರ ಒಕ್ಕೂಟದಿಂದ ದಾಖಲೆ ಸಮೇತವಾಗಿ ಜನರಿಗೆ ಮನವರಿಕೆ ಮಾಡುವ ಕೆಲಸ ಪ್ರಾರಂಭಿಸಿದ ನಂತರ ಪ್ರಾದೇಶಿಕ ಪಕ್ಷವಾದ ಕರ್ನಾಟಕ ರಾಷ್ಟç ಸಮಿತಿ ಮತ್ತು ಪಕ್ಷೇತರ ಅಭ್ಯರ್ಥಿ ಮಲ್ಲಿಕಾರ್ಜುನ ಕೆಂಗನಾಳ, ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಪ್ರೊ. ರಾಜು ಆಲಗೂರ ಅವರು ತಮ್ಮ ಪ್ರಣಾಳಿಕೆಯಲ್ಲಿ ಜಿಲ್ಲೆಗೆ 371 ಜೆ ಮೀಸಲಾತಿ ನೀಡುವುದಾಗಿ ಭರವಸೆ ನೀಡಿದ್ದರು. ಜೊತೆಗೆ ಭಾರತೀಯ ಜನತಾ ಪಕ್ಷದ ಹಿರಿಯ ಮುಖಂಡರು ವಿಜಯಪುರ ನಗರದ ಶಾಸಕರಾದ ಬಸನಗೌಡ ಆರ್ ಪಾಟೀಲ ಯತ್ನಾಳ ಅವರು ಮಾಧ್ಯಮ ಹೇಳಿಕೆ ನೀಡಿ ಜಿಲ್ಲೆಗೆ ನ್ಯಾಯಯುತಗಿ ಸಿಗಬೇಕಾದ ಮೀಸಲಾತಿ ಬಗ್ಗೆ ಯಾವುದೇ ಹೋರಾಟಕ್ಕೂ ಸಿದ್ಧ ಎಂದು ಹೇಳಿದ್ದರು. ಚುನಾವಣೆ ಮುಗಿದ ನಂತರ ಯಾರೊಬ್ಬರು ಕೂಡಾ ಮೀಸಲಾತಿ ಬಗ್ಗೆ ಮಾತನಾಡದೆ ಇರುವುದು ದುರಂತದ ವಿಷಯ. ಕೂಡಲೇ ಲೋಕಸಭೆ ಚುನಾವಣೆಯಲ್ಲಿ ತಾ ಮುಂದು ನಾ ಮುಂದು ಎಂದು ಹೇಳಿಕೆ ನೀಡಿ ಪ್ರತಿಷ್ಠೆ ಮೆರೆದು ಜಿಲ್ಲೆಯ ಜನತೆಗೆ ಭರವಸೆ ನೀಡಿರುವ ಎಲ್ಲ ಪಕ್ಷದ ಮುಖಂಡರು ಚಳಿಗಾಲದ ಅಧಿವೇಶನದಲ್ಲಿ ಪಕ್ಷ ಬೇದ ಮರೆತು ವಿಜಯಪುರ ಬಾಗಲಕೋಟ ಅವಳಿ ಜಿಲ್ಲೆಯನ್ನು ಪ್ರತಿನಿಧಿಸುವ ಸಚಿವರು, ಶಾಸಕರು ಹಾಗೂ ವಿಧಾನ ಪರಿಷತ್ತಿನ ಸದಸ್ಯರುಗಳು ವಿದ್ಯಾರ್ಥಿಗಳ ಶೈಕ್ಷಣಿಕ, ಔದ್ಯೋಗಿಕ ಹಿತ ದೃಷ್ಟಿಯಿಂದ ಹಾಗೂ ಜಿಲ್ಲೆಯ ಸಮಗ್ರ ಅಭಿವೃದ್ಧಿಗಾಗಿ 371 ಜೆ ಮೀಸಲಾತಿ ಕುರಿತು ಧ್ವನಿ ಎತ್ತಬೇಕು. ಜಿಲ್ಲೆಯನ್ನು ಮೀಸಲಾತಿಯಿಂದ ಬಿಟ್ಟು ಹೋದ ಪ್ರದೇಶವೆಂದು ಪರಿಗಣಿಸಿ ಜಿಲ್ಲೆಗೆ ನ್ಯಾಯಯುತವಾಗಿ ಕಲ್ಯಾಣ ಕರ್ನಾಟಕ ಮೀಸಲಾತಿ ಒದಗಿಸಲು ಮುಂದಾಗಬೇಕೆಂದು ಆಗ್ರಹಿಸಿದ್ದಾರೆ.

ರಾಜ್ಯಾದ್ಯಂತ ಆಸಕ್ತರಿಗೆ ವಿಶೇಷ ಸೂಚನೆ:

ಯುವ ಪ್ರತಿಭೆಗಳು, ಹಿರಿ-ಕಿರಿ ಆಸಕ್ತ ಸಾಹಿತಿ, ಕವಿ, ಲೇಖಕರಿಗೆ ಈ ದಿವಸ ವೇದಿಕೆ ಕಲ್ಪಿಸುತ್ತಿದೆ. ಆಸಕ್ತರು ತಮ್ಮ ಸ್ವ ರಚಿತ ಲೇಖನ, ಕಥೆ, ಕವನ , ಶಾಲಾ ಕಾಲೇಜಿನ, ವಿಶ್ವವಿದ್ಯಾಲಯ ವರದಿ, ಹೋರಾಟಗಾರರ ಮನವಿ, ತಮ್ಮ  ಜಿಲ್ಲೆ, ಪಟ್ಟಣ, ತಾಲೂಕು, ಗ್ರಾಮಗಳಲ್ಲಿನ  ಸಮಸ್ಯೆಗಳು ಸೇರಿದಂತೆ ಇತರೆ ಸುದ್ದಿ ಹಾಗೂ ಜಾಹೀರಾತುಗಳನ್ನು ಪ್ರಕಟಿಸಲು ಇಂದೇ ಸಂಪರ್ಕಿಸಿರಿ.

ಸಂಪಾದಕರು ಈ ದಿವಸ ಕನ್ನಡ ದಿನ ಪತ್ರಿಕೆ ವ್ಯಾಟ್ಸಪ್ ಸಂಖ್ಯೆ : 7204279187 / 9900378892 ತಾವು ಟೈಪಿಸಿ eedivasa@gmail.com ಈ ಮೇಲ್ ಗೂ ಮೇಲ್ ಸೆಂಡ್ ಮಾಡಿದರೆ ಪ್ರಕಟಿಸಲಾಗುವುದು.

Friday, December 13, 2024

ಬುದ್ದ, ಬಸವಣ್ಣ, ಅಂಬೇಡ್ಕರರ ತತ್ವ ಸಿದ್ಧಾಂತಗಳು ಪ್ರಸ್ತುತ ಅತ್ಯಗತ್ಯ : ಪಾಟೀಲ

ಈ ದಿವಸ ಕನ್ನಡ ದಿನ ಪತ್ರಿಕೆ ವಾರ್ತೆ

 ವಿಜಯಪುರ: ಭಗವಾನ ಬುದ್ದ ಬಸವಣ್ಣ ಹಾಗೂ ಅಂಬೇಡ್ಕರರ ತತ್ವ ಸಿದ್ಧಾಂತಗಳು ಪ್ರಸ್ತುತ ಅತ್ಯಗತ್ಯವಾಗಿವೆ ಎಂದು ಡಾ.ಫ.ಗು. ಹಳಕಟ್ಟಿ ತಾಂತ್ರಿಕ ಮಹಾವಿದ್ಯಾಲಯದ ವಿಶ್ರಾಂತ ಪ್ರಾಚಾರ್ಯ ಡಾ.ಜೆ.ಎಸ್. ಪಾಟೀಲ ಹೇಳಿದರು.

 ಸಾರಿಪುತ್ರ ಬೋದಿದಮ್ಮ ಬುದ್ದ ವಿಹಾರದಲ್ಲಿ ಜರುಗಿದ ವೈ.ಎಚ್.ಲಂಬು ವಿರಚಿತ “ಬುದ್ದ ದರ್ಶನ” ಕೃತಿ ಲೋಕಾರ್ಪಣೆಗೊಳಿಸಿ, ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

 ದೇಶದಲ್ಲಿ ಸಂವಿಧಾನ ಅಪಾಯದ ಅಂಚಿನಲ್ಲಿದೆ. ಪ್ರಭಲರು ಪ್ರಜಾಪ್ರಭುತ್ವ ವ್ಯವಸ್ಥೆಯ ವಿರುದ್ದ ಸಾಗುತ್ತಿದ್ದಾರೆ. ಭಗವಾನ ಬುದ್ದನ ಸಂದೇಶಗಳನ್ನು ಪಠ್ಯಕ್ರಮದಲ್ಲಿ ಅಳವಡಿಸುವ ಅತ್ಯವಶ್ಯಕವಾಗಿದೆ ಎಂದರು.

 ಈ ಸಂದರ್ಭ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ನಿವೃತ್ತ ನಿರ್ಧೇಶಕ ಮಲ್ಲಿಕಾರ್ಜುನ.ಜಿ.ಕೆಳಗಡೆÀ ಮತಾನಾಡಿ, ಬುದ್ದನ ಅಧ್ಯಾತ್ಮಿಕ ಚಿಂತನಗಳ ಕುರಿತು ಗೋಷ್ಠಿಗಳನ್ನು ಏರ್ಪಡಿಸಬೇಕೆಂದರು ಮತ್ತು ದುಖಕ್ಕೆ ಕಾರಣವಾಗುವ ನಾಲ್ಕು ಮಹಾ ಸತ್ಯವ್ನನು ಬೋದಿಸಿದ ಬುದ್ದ ದುಖಃ ನಿರ್ವಾಣೆಗಾಗಿ ಪಂಚಶೀಲ ಗಳನ್ನು ಅಷ್ಠಾಂಗ ಮಾರ್ಗ್ರಗಳನ್ನು ಅನುಸರಿಸಿ ಪ್ರತಿಯೊಬ್ಬರು ಪ್ರಬುದ್ದರಾಗಿ ಸಮಜದಲ್ಲಿ ಬದುಕಬೇಕೆಂದು ಒತ್ತಿ ಹೇಳಿದರು.

 ಈ ಸಂದರ್ಭ ಕಸಾಪ ಅಧ್ಯಕ್ಷ ಹಾಸಿಂಪೀರ ವಾಲಿಕಾರ ಮಾತನಾಡಿ, ಬುದ್ದ ದರ್ಶನ ಗ್ರಂಥ ಸಂಶೋಧನಾತ್ಮಕ ಗ್ರಂಥವಾಗಿದೆೆÉ. ಈ ಗ್ರಂಥ ಐ.ಎ.ಎಸ್. ಹಾಗೂ ಕೆ.ಎ.ಎಸ್. ಪರೀಕ್ಷೆಗಳಿಗೆ ತುಂಬ ಉಪಯುಕ್ತ ವಾಗುತ್ತದೆ. ಭಗವಾನ ಬುದ್ದರ ಜೀವನ ಚರಿತ್ರ ವಿಶ್ವಕ್ಕೆಲ್ಲ ಆದರ್ಶವಾಗಿದ್ದು ಮಾನವೀಯ ಮೌಲ್ಯಗಳ ಆಧಾರಿತ ಸಂಸ್ಕೃತಿಯನ್ನು ನಾವೆಲ್ಲ ಕಾಣಲು ಸಾಧ್ಯ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

 ಚೌಧ್ದ ಧರ್ಮ ಅತ್ಯಂತ ಸರಳ ಹಾಗೂ ಮಾನವೀಯತೆಯ ಪ್ರತೀಕವಾಗಿದೆ. ಮಾನವರನ್ನು ಮಾನವರನ್ನಾಗಿ ಕಾಣುವದೇ ಬೌಧ್ದ ಧಮ. ಇಂದು ಈ ಕ್ಲಿಷ್ಟಕರ ಸಮಾಜಕ್ಕೆ ಬುದ್ದರ ಸಂದೇಶಗಳು ಸರ್ವಕಾಲಿಕ ಎಂದರು.

 ಈ ಸಂದರ್ಭ ಸಿಕ್ಯಾಬ್ ಮಹಿಳಾ ಪದವಿಪೂರ್ವ ಕಾಲೇಜಿನ ಉಪನ್ಯಾಸಕ ಯು.ಎನ್.ಕುಂಟೋಜಿ ಕೃತಿ ಪರಿಚಯಿಸಿ ಮಾತನಾಡಿ, ಅಶೋಕ ಸಾಮ್ರಾಟ ಕಳಿಂಗಯುದ್ದದಲ್ಲಿ ವಿಜಯ ಪಡೆದರು ಜೀವಹಾನಿಕಂಡು ಬೌಧ್ದ ಧರ್ಮ ಸ್ವೀಕರಿಸಿ ವಿಶ್ವಕ್ಕೆಲ್ಲ ಶಾಂತಿಯ ಸಂದೇಶ ಮೂಲಕ ಬೌಧ್ದ ಧರ್ಮದ ಶ್ರೇಷ್ಠೆತೆಯನ್ನು ಸಾರಿದರು. ಕನ್ನಡ ಸಾರಸ್ವತ ಲೋಕಕ್ಕೆ “ಬುದ್ದದರ್ಶನ” ಕೃತಿ ತುಂಬ ಉಪಯುಕ್ತ ಗ್ರಂಥವಾದೆ ಎಂದರು. ಈ ಸಂದರ್ಭ ಕೃತಿ ಲೇಖಕ ವೈ.ಎಚ್.ಲಂಬು ಮಾತನಾಡಿ ಬುದ್ದ, ಬಸವ, ಮತ್ತು ಅಂಬೇಡ್ಕರರ ವಿಚಾರದಾರೆಗಳು ವಿದ್ಯಾರ್ಥಿ ಜೀವನದಿಂದಲೆ ನನಗೆ ಹಂಬಲವಿದುದ್ದರಿAದ ಕೃತಿ ರಚಿಸಲು ಸಾದ್ಯವಾಯಿತು ಎಂದರು ಮತ್ತು ಕೃತಿ ಹೊರಬರಲು ಕಾರಣರಾದ ಎಲ್ಲರಿಗೂ ತಮ್ಮ ಧನ್ಯತಾಭಾವ ವ್ಯಕ್ತಪಡಿಸಿದರು. 

 ಈ ಸಂದರ್ಭದಲ್ಲಿ ಸಾಬು ಚಲವಾದಿ. ಬಸವರಾಜ ಚಲವಾದಿ ಮಾತನಾಡಿದರು. 

 ಸಾನ್ನಿಧ್ಯವಹಿಸಿದ ಸಾರಿಪುತ್ರ ಬುದ್ದ ವಿಹಾರದ ಬೋದಿ ಕೀರ್ತಿ ಭಂತೇಜಿ ಪ್ರಾರ್ಥಿಸಿದರು. ಎಸ್.ಎಲ್. ಇಂಗಳೇಶ್ವರ ಸ್ವಾಗತಿಸಿದರು. ನ್ಯಾಯವಾದಿ ದಾನೇಶ ಅವಟಿ ನಿರೂಪಿಸಿದರು. ಅರವಿಂದ ಲಂಬು ವಂದಿಸಿದರು. ಈ ಸಂದರ್ಭದಲ್ಲಿ ಸುಭಾಷ ಗುಡಿಮನಿ, ಅಡಿವೆಪ್ಪ ಸಾಲಗಲ್ಲ, ಕಲ್ಲಪ್ಪ ತೊರವಿ, ನಾಗರಾಜ ಲಂಬು, ಕೆ.ಎಮ್. ಕೂಡಲಿಗಿ, ಎ.ಡಿ. ಮುಲ್ಲಾ, ಮಹೇಶ ಕ್ಯಾತನ, ಮಲ್ಲಿಕಾರ್ಜುನ ಭೃಂಗಿಮಠ, ಶೇಷರಾವ ಮಾನೆ, ಎಂ.ಎಂ. ಖಾಲಾಸಿ, ಶಶಿಧರ ಲಂಬು, ಪ್ರಭಾಕರ ಬರಡ್ಡಿ, ಸುಕನ್ಯಾ ಲಂಬು, ಸೌಜನ್ಯ ಲಂಬು, ಭಾರತಿ ಹೊಸಮನಿ, ರುಕ್ಮಿಣಿದೇವಿ ಲಂಬು, ಶಾರದಾ ಹೊಸಮನಿ, ಅಶ್ವಿನಿ ಲಂಬು ಮುಂತಾದವರು ಉಪಸ್ಥಿತರಿದ್ದರು.

ರಾಜ್ಯಾದ್ಯಂತ ಆಸಕ್ತರಿಗೆ ವಿಶೇಷ ಸೂಚನೆ:

ಯುವ ಪ್ರತಿಭೆಗಳು, ಹಿರಿ-ಕಿರಿ ಆಸಕ್ತ ಸಾಹಿತಿ, ಕವಿ, ಲೇಖಕರಿಗೆ ಈ ದಿವಸ ವೇದಿಕೆ ಕಲ್ಪಿಸುತ್ತಿದೆ. ಆಸಕ್ತರು ತಮ್ಮ ಸ್ವ ರಚಿತ ಲೇಖನ, ಕಥೆ, ಕವನ , ಶಾಲಾ ಕಾಲೇಜಿನ, ವಿಶ್ವವಿದ್ಯಾಲಯ ವರದಿ, ಹೋರಾಟಗಾರರ ಮನವಿ, ತಮ್ಮ  ಜಿಲ್ಲೆ, ಪಟ್ಟಣ, ತಾಲೂಕು, ಗ್ರಾಮಗಳಲ್ಲಿನ  ಸಮಸ್ಯೆಗಳು ಸೇರಿದಂತೆ ಇತರೆ ಸುದ್ದಿ ಹಾಗೂ ಜಾಹೀರಾತುಗಳನ್ನು ಪ್ರಕಟಿಸಲು ಇಂದೇ ಸಂಪರ್ಕಿಸಿರಿ.

ಸಂಪಾದಕರು ಈ ದಿವಸ ಕನ್ನಡ ದಿನ ಪತ್ರಿಕೆ ವ್ಯಾಟ್ಸಪ್ ಸಂಖ್ಯೆ : 7204279187 / 9900378892 ತಾವು ಟೈಪಿಸಿ eedivasa@gmail.com ಈ ಮೇಲ್ ಗೂ ಮೇಲ್ ಸೆಂಡ್ ಮಾಡಿದರೆ ಪ್ರಕಟಿಸಲಾಗುವುದು.

ದೇಸಿ ಸನ್ಮಾನ ಪ್ರಶಸ್ತಿ ಪ್ರದಾನ 15ರಂದು

 


ಈ ದಿವಸ ಕನ್ನಡ ದಿನ ಪತ್ರಿಕೆ ವಾರ್ತೆ

ವಿಜಯಪುರ: ಪಟ್ಟಣದ ನೆಲೆ ಪ್ರಕಾಶನ ಸಂಸ್ಥೆಯಡಿ ಎಂ.ಎಂ.ಪಡಶೆಟ್ಟಿ ಸಾಂಸ್ಕೃತಿಕ ಪ್ರತಿಷ್ಠಾನ ವತಿಯಿಂದ 2024ನೇ ಸಾಲಿನ ದೇಸಿ ಸನ್ಮಾನ ಪ್ರಶಸ್ತಿ ಪ್ರದಾನ ಸಮಾರಂಭ ಡಿ.15 ರಂದು ಬೆಳಿಗ್ಗೆ 10 ಗಂಟೆಗೆ ಇಲ್ಲಿಯ ಸಾರಂಗಮಠದ ಆವರಣದ ಸಭಾಭವನದಲ್ಲಿ ನಡೆಯಲಿದೆ.

ಬಾಗಲಕೋಟೆ ಜಿಲ್ಲೆ ಜಮಖಂಡಿಯ ಜಾನಪದ ವಿದ್ವಾಂಸ ಸಂಗಮೇಶ ಬಿರಾದಾರ ಅವರಿಗೆ 'ದೇಸಿ ಸನ್ಮಾನ' ಪ್ರಶಸ್ತಿ ಸಂಗಮೇಶ ಹಾಗೂ ₹11 ಸಾವಿರ ನಗದು, ಪ್ರಶಸ್ತಿ ಪತ್ರ ಮತ್ತು ಪುಸ್ತಕವನ್ನು ಬಿರಾದಾರ ನ್ಯೂಜಿಲೆಂಡ್‌ನ ಆಕ್ಲಂಡ್ ಬಸವ ಸಮಿತಿ ಸಂಸ್ಥಾಪಕ ಅಧ್ಯಕ್ಷ ಲಿಂಗಣ್ಣ ಕಲಬುರ್ಗಿ ಪ್ರಶಸ್ತಿ ಪ್ರದಾನ ಮಾಡುವರು.

ಸಾರಂಗಮಠದ ಪೀಠಾಧ್ಯಕ್ಷ ಪ್ರಭು ಸಾರಂಗದೇವ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ವಿಜಯಪುರ ಫ.ಗು.ಹಳಕಟ್ಟಿ ಸಂಶೋಧನಾ ಕೇಂದ್ರದ ಕಾರ್ಯದರ್ಶಿ ಎಂ.ಎಸ್.ಮದಭಾವಿ ಅಧ್ಯಕ್ಷತೆ ವಹಿಸುವರು.

ಪುರಸಭೆ ಅಧ್ಯಕ್ಷ ಶಾಂತವೀರ ಬಿರಾದಾರ ಪುಸ್ತಕ ಬಿಡುಗಡೆ ಮಾಡುವರು. ವಿಜಯಪುರ ಚಾಣಕ್ಯ ಕರಿಯರ್ ಅಕಾಡೆಮಿ ಸಂಸ್ಥಾಪಕ ಎನ್.ಎಂ.ಬಿರಾದಾರ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು ಎಂದು ಪ್ರತಿಷ್ಠಾನದ ಸಂಚಾಲಕ ಚನ್ನಪ್ಪ ಕಟ್ಟಿ ತಿಳಿಸಿದ್ದಾರೆ.

ರಾಜ್ಯಾದ್ಯಂತ ಆಸಕ್ತರಿಗೆ ವಿಶೇಷ ಸೂಚನೆ:

ಯುವ ಪ್ರತಿಭೆಗಳು, ಹಿರಿ-ಕಿರಿ ಆಸಕ್ತ ಸಾಹಿತಿ, ಕವಿ, ಲೇಖಕರಿಗೆ ಈ ದಿವಸ ವೇದಿಕೆ ಕಲ್ಪಿಸುತ್ತಿದೆ. ಆಸಕ್ತರು ತಮ್ಮ ಸ್ವ ರಚಿತ ಲೇಖನ, ಕಥೆ, ಕವನ , ಶಾಲಾ ಕಾಲೇಜಿನ, ವಿಶ್ವವಿದ್ಯಾಲಯ ವರದಿ, ಹೋರಾಟಗಾರರ ಮನವಿ, ತಮ್ಮ  ಜಿಲ್ಲೆ, ಪಟ್ಟಣ, ತಾಲೂಕು, ಗ್ರಾಮಗಳಲ್ಲಿನ  ಸಮಸ್ಯೆಗಳು ಸೇರಿದಂತೆ ಇತರೆ ಸುದ್ದಿ ಹಾಗೂ ಜಾಹೀರಾತುಗಳನ್ನು ಪ್ರಕಟಿಸಲು ಇಂದೇ ಸಂಪರ್ಕಿಸಿರಿ.

ಸಂಪಾದಕರು ಈ ದಿವಸ ಕನ್ನಡ ದಿನ ಪತ್ರಿಕೆ ವ್ಯಾಟ್ಸಪ್ ಸಂಖ್ಯೆ : 7204279187 / 9900378892 ತಾವು ಟೈಪಿಸಿ eedivasa@gmail.com ಈ ಮೇಲ್ ಗೂ ಮೇಲ್ ಸೆಂಡ್ ಮಾಡಿದರೆ ಪ್ರಕಟಿಸಲಾಗುವುದು.



14-12-2024 EE DIVASA KANNADA DAILY NEWS PAPER