Friday, December 13, 2024

ಬುದ್ದ, ಬಸವಣ್ಣ, ಅಂಬೇಡ್ಕರರ ತತ್ವ ಸಿದ್ಧಾಂತಗಳು ಪ್ರಸ್ತುತ ಅತ್ಯಗತ್ಯ : ಪಾಟೀಲ

ಈ ದಿವಸ ಕನ್ನಡ ದಿನ ಪತ್ರಿಕೆ ವಾರ್ತೆ

 ವಿಜಯಪುರ: ಭಗವಾನ ಬುದ್ದ ಬಸವಣ್ಣ ಹಾಗೂ ಅಂಬೇಡ್ಕರರ ತತ್ವ ಸಿದ್ಧಾಂತಗಳು ಪ್ರಸ್ತುತ ಅತ್ಯಗತ್ಯವಾಗಿವೆ ಎಂದು ಡಾ.ಫ.ಗು. ಹಳಕಟ್ಟಿ ತಾಂತ್ರಿಕ ಮಹಾವಿದ್ಯಾಲಯದ ವಿಶ್ರಾಂತ ಪ್ರಾಚಾರ್ಯ ಡಾ.ಜೆ.ಎಸ್. ಪಾಟೀಲ ಹೇಳಿದರು.

 ಸಾರಿಪುತ್ರ ಬೋದಿದಮ್ಮ ಬುದ್ದ ವಿಹಾರದಲ್ಲಿ ಜರುಗಿದ ವೈ.ಎಚ್.ಲಂಬು ವಿರಚಿತ “ಬುದ್ದ ದರ್ಶನ” ಕೃತಿ ಲೋಕಾರ್ಪಣೆಗೊಳಿಸಿ, ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

 ದೇಶದಲ್ಲಿ ಸಂವಿಧಾನ ಅಪಾಯದ ಅಂಚಿನಲ್ಲಿದೆ. ಪ್ರಭಲರು ಪ್ರಜಾಪ್ರಭುತ್ವ ವ್ಯವಸ್ಥೆಯ ವಿರುದ್ದ ಸಾಗುತ್ತಿದ್ದಾರೆ. ಭಗವಾನ ಬುದ್ದನ ಸಂದೇಶಗಳನ್ನು ಪಠ್ಯಕ್ರಮದಲ್ಲಿ ಅಳವಡಿಸುವ ಅತ್ಯವಶ್ಯಕವಾಗಿದೆ ಎಂದರು.

 ಈ ಸಂದರ್ಭ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ನಿವೃತ್ತ ನಿರ್ಧೇಶಕ ಮಲ್ಲಿಕಾರ್ಜುನ.ಜಿ.ಕೆಳಗಡೆÀ ಮತಾನಾಡಿ, ಬುದ್ದನ ಅಧ್ಯಾತ್ಮಿಕ ಚಿಂತನಗಳ ಕುರಿತು ಗೋಷ್ಠಿಗಳನ್ನು ಏರ್ಪಡಿಸಬೇಕೆಂದರು ಮತ್ತು ದುಖಕ್ಕೆ ಕಾರಣವಾಗುವ ನಾಲ್ಕು ಮಹಾ ಸತ್ಯವ್ನನು ಬೋದಿಸಿದ ಬುದ್ದ ದುಖಃ ನಿರ್ವಾಣೆಗಾಗಿ ಪಂಚಶೀಲ ಗಳನ್ನು ಅಷ್ಠಾಂಗ ಮಾರ್ಗ್ರಗಳನ್ನು ಅನುಸರಿಸಿ ಪ್ರತಿಯೊಬ್ಬರು ಪ್ರಬುದ್ದರಾಗಿ ಸಮಜದಲ್ಲಿ ಬದುಕಬೇಕೆಂದು ಒತ್ತಿ ಹೇಳಿದರು.

 ಈ ಸಂದರ್ಭ ಕಸಾಪ ಅಧ್ಯಕ್ಷ ಹಾಸಿಂಪೀರ ವಾಲಿಕಾರ ಮಾತನಾಡಿ, ಬುದ್ದ ದರ್ಶನ ಗ್ರಂಥ ಸಂಶೋಧನಾತ್ಮಕ ಗ್ರಂಥವಾಗಿದೆೆÉ. ಈ ಗ್ರಂಥ ಐ.ಎ.ಎಸ್. ಹಾಗೂ ಕೆ.ಎ.ಎಸ್. ಪರೀಕ್ಷೆಗಳಿಗೆ ತುಂಬ ಉಪಯುಕ್ತ ವಾಗುತ್ತದೆ. ಭಗವಾನ ಬುದ್ದರ ಜೀವನ ಚರಿತ್ರ ವಿಶ್ವಕ್ಕೆಲ್ಲ ಆದರ್ಶವಾಗಿದ್ದು ಮಾನವೀಯ ಮೌಲ್ಯಗಳ ಆಧಾರಿತ ಸಂಸ್ಕೃತಿಯನ್ನು ನಾವೆಲ್ಲ ಕಾಣಲು ಸಾಧ್ಯ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

 ಚೌಧ್ದ ಧರ್ಮ ಅತ್ಯಂತ ಸರಳ ಹಾಗೂ ಮಾನವೀಯತೆಯ ಪ್ರತೀಕವಾಗಿದೆ. ಮಾನವರನ್ನು ಮಾನವರನ್ನಾಗಿ ಕಾಣುವದೇ ಬೌಧ್ದ ಧಮ. ಇಂದು ಈ ಕ್ಲಿಷ್ಟಕರ ಸಮಾಜಕ್ಕೆ ಬುದ್ದರ ಸಂದೇಶಗಳು ಸರ್ವಕಾಲಿಕ ಎಂದರು.

 ಈ ಸಂದರ್ಭ ಸಿಕ್ಯಾಬ್ ಮಹಿಳಾ ಪದವಿಪೂರ್ವ ಕಾಲೇಜಿನ ಉಪನ್ಯಾಸಕ ಯು.ಎನ್.ಕುಂಟೋಜಿ ಕೃತಿ ಪರಿಚಯಿಸಿ ಮಾತನಾಡಿ, ಅಶೋಕ ಸಾಮ್ರಾಟ ಕಳಿಂಗಯುದ್ದದಲ್ಲಿ ವಿಜಯ ಪಡೆದರು ಜೀವಹಾನಿಕಂಡು ಬೌಧ್ದ ಧರ್ಮ ಸ್ವೀಕರಿಸಿ ವಿಶ್ವಕ್ಕೆಲ್ಲ ಶಾಂತಿಯ ಸಂದೇಶ ಮೂಲಕ ಬೌಧ್ದ ಧರ್ಮದ ಶ್ರೇಷ್ಠೆತೆಯನ್ನು ಸಾರಿದರು. ಕನ್ನಡ ಸಾರಸ್ವತ ಲೋಕಕ್ಕೆ “ಬುದ್ದದರ್ಶನ” ಕೃತಿ ತುಂಬ ಉಪಯುಕ್ತ ಗ್ರಂಥವಾದೆ ಎಂದರು. ಈ ಸಂದರ್ಭ ಕೃತಿ ಲೇಖಕ ವೈ.ಎಚ್.ಲಂಬು ಮಾತನಾಡಿ ಬುದ್ದ, ಬಸವ, ಮತ್ತು ಅಂಬೇಡ್ಕರರ ವಿಚಾರದಾರೆಗಳು ವಿದ್ಯಾರ್ಥಿ ಜೀವನದಿಂದಲೆ ನನಗೆ ಹಂಬಲವಿದುದ್ದರಿAದ ಕೃತಿ ರಚಿಸಲು ಸಾದ್ಯವಾಯಿತು ಎಂದರು ಮತ್ತು ಕೃತಿ ಹೊರಬರಲು ಕಾರಣರಾದ ಎಲ್ಲರಿಗೂ ತಮ್ಮ ಧನ್ಯತಾಭಾವ ವ್ಯಕ್ತಪಡಿಸಿದರು. 

 ಈ ಸಂದರ್ಭದಲ್ಲಿ ಸಾಬು ಚಲವಾದಿ. ಬಸವರಾಜ ಚಲವಾದಿ ಮಾತನಾಡಿದರು. 

 ಸಾನ್ನಿಧ್ಯವಹಿಸಿದ ಸಾರಿಪುತ್ರ ಬುದ್ದ ವಿಹಾರದ ಬೋದಿ ಕೀರ್ತಿ ಭಂತೇಜಿ ಪ್ರಾರ್ಥಿಸಿದರು. ಎಸ್.ಎಲ್. ಇಂಗಳೇಶ್ವರ ಸ್ವಾಗತಿಸಿದರು. ನ್ಯಾಯವಾದಿ ದಾನೇಶ ಅವಟಿ ನಿರೂಪಿಸಿದರು. ಅರವಿಂದ ಲಂಬು ವಂದಿಸಿದರು. ಈ ಸಂದರ್ಭದಲ್ಲಿ ಸುಭಾಷ ಗುಡಿಮನಿ, ಅಡಿವೆಪ್ಪ ಸಾಲಗಲ್ಲ, ಕಲ್ಲಪ್ಪ ತೊರವಿ, ನಾಗರಾಜ ಲಂಬು, ಕೆ.ಎಮ್. ಕೂಡಲಿಗಿ, ಎ.ಡಿ. ಮುಲ್ಲಾ, ಮಹೇಶ ಕ್ಯಾತನ, ಮಲ್ಲಿಕಾರ್ಜುನ ಭೃಂಗಿಮಠ, ಶೇಷರಾವ ಮಾನೆ, ಎಂ.ಎಂ. ಖಾಲಾಸಿ, ಶಶಿಧರ ಲಂಬು, ಪ್ರಭಾಕರ ಬರಡ್ಡಿ, ಸುಕನ್ಯಾ ಲಂಬು, ಸೌಜನ್ಯ ಲಂಬು, ಭಾರತಿ ಹೊಸಮನಿ, ರುಕ್ಮಿಣಿದೇವಿ ಲಂಬು, ಶಾರದಾ ಹೊಸಮನಿ, ಅಶ್ವಿನಿ ಲಂಬು ಮುಂತಾದವರು ಉಪಸ್ಥಿತರಿದ್ದರು.

ರಾಜ್ಯಾದ್ಯಂತ ಆಸಕ್ತರಿಗೆ ವಿಶೇಷ ಸೂಚನೆ:

ಯುವ ಪ್ರತಿಭೆಗಳು, ಹಿರಿ-ಕಿರಿ ಆಸಕ್ತ ಸಾಹಿತಿ, ಕವಿ, ಲೇಖಕರಿಗೆ ಈ ದಿವಸ ವೇದಿಕೆ ಕಲ್ಪಿಸುತ್ತಿದೆ. ಆಸಕ್ತರು ತಮ್ಮ ಸ್ವ ರಚಿತ ಲೇಖನ, ಕಥೆ, ಕವನ , ಶಾಲಾ ಕಾಲೇಜಿನ, ವಿಶ್ವವಿದ್ಯಾಲಯ ವರದಿ, ಹೋರಾಟಗಾರರ ಮನವಿ, ತಮ್ಮ  ಜಿಲ್ಲೆ, ಪಟ್ಟಣ, ತಾಲೂಕು, ಗ್ರಾಮಗಳಲ್ಲಿನ  ಸಮಸ್ಯೆಗಳು ಸೇರಿದಂತೆ ಇತರೆ ಸುದ್ದಿ ಹಾಗೂ ಜಾಹೀರಾತುಗಳನ್ನು ಪ್ರಕಟಿಸಲು ಇಂದೇ ಸಂಪರ್ಕಿಸಿರಿ.

ಸಂಪಾದಕರು ಈ ದಿವಸ ಕನ್ನಡ ದಿನ ಪತ್ರಿಕೆ ವ್ಯಾಟ್ಸಪ್ ಸಂಖ್ಯೆ : 7204279187 / 9900378892 ತಾವು ಟೈಪಿಸಿ eedivasa@gmail.com ಈ ಮೇಲ್ ಗೂ ಮೇಲ್ ಸೆಂಡ್ ಮಾಡಿದರೆ ಪ್ರಕಟಿಸಲಾಗುವುದು.

No comments:

Post a Comment