Sunday, December 15, 2024

ಮಾನವ ಹಕ್ಕುಗಳ ಆಯೋಗದ ನ್ಯಾಯಾಂಗದ ಸದಸ್ಯ ಎಸ್.ಕೆ.ವಂಟಿಗೋಡಿ ಜಿಲ್ಲಾಸ್ಪತ್ರೆಗೆ ಭೇಟಿ- ಪರಿಶೀಲನೆ : ಜಿಲ್ಲಾಸ್ಪತ್ರೆಯ ಕಾರ್ಯನಿರ್ವಹಣೆೆಗೆ ಪ್ರಶಂಸೆ


ವಿಜಯಪುರ:  ನ್ಯಾಯಾಂಗ ಸದಸ್ಯರು ಕರ್ನಾಟಕ ಮಾನವ ಹಕ್ಕುಗಳ ಆಯೋಗದ ನ್ಯಾಯಾಂಗ ಸದಸ್ಯರಾದ ಎಸ್.ಕೆ.ವಂಟಿಗೋಡಿ ಅವರು ಭಾನುವಾರ ಜಿಲ್ಲಾ ಆಸ್ಪತ್ರೆಯ ವಿವಿಧ ವಿಭಾಗಗಳಿಗೆ ಭೇಟಿ ನೀಡಿ, ಕೂಲಕುಂಷವಾಗಿ ಪರಿಶೀಲನೆ ನಡೆಸಿದರು.

ಆಸ್ಪತ್ರೆಯಲ್ಲಿ ವಿವಿಧ ವಿಭಾಗಗಳಿಗೆ ಭೇಟಿ ನೀಡಿ ಸ್ವಚ್ಚತೆ ಹಾಗೂ ಔಷಧಿಗಳ ಸಂಗ್ರಹಣೆಗೆ ಅವರು ್ಗ ಪ್ರಶಂಸೆ ವ್ಯಕ್ತಪಡಿಸಿದರು.


ಆಸ್ಪತ್ರೆಗೆ ಬರುವ ರೋಗಿಗಳಿಗೆ ಸರಿಯಾಗಿ ಔಷಧೋಪಚಾರ ಹಾಗೂ ಸೂಕ್ತ ಚಿಕಿತ್ಸೆ ಒದಗಿಸಬೇಕು ಎಂದು ವೈದ್ಯಾಧಿಕಾರಿಗಳಿಗೆ ಸೂಚಿಸಿದ ಅವರು, ಎಮ್.ಆರ್.ಐ. ಸಿ.ಟಿ. ಸ್ಕ್ಯಾನ್ ಸಮರ್ಪಕವಾಗಿ ನಿರ್ವಹಿಸಬೇಕು. ರೋಗಿಗಳಿಗೆ ಯಾವುದೇ ತೊಂದರೆಯಾಗದAತೆ ನೋಡಿಕೊಳ್ಳಲು ಕೃಷ್ಣಾ ಡೈಗೋಸ್ಟೀಕ್ ಪುಣೆ ಸಂಸ್ಥೆಯ ಆಪರೇಟಿಂಗ್ ಮ್ಯಾನೇಜರ್ ಯೋಗೇಶ ಸರವೋರ್, ಲಿಗಲ್ ಅಡವೈಸರ್ ಹಾಗೂ ಎಚ್.ಆರ್. ಪಿಲಿಪ್ ಸಾಮಂತೆ, ಎಮ್.ಆರ್.ಐ. ಮ್ಯಾನೇಜರ್ ವಿಶಾಲ ಜಂಗಮ ಇವರಿಗೆ ಸೂಚನೆ ನೀಡಿದರು.

ಜಿಲ್ಲಾಸ್ಪತ್ರೆಯ ಶಸ್ತ್ರಚಿಕಿತ್ಸಕರಾದ ಡಾ,ಶಿವಾನಂದ ಮಾಸ್ತಿಹೊಳಿ ಅವರು ಜಿಲ್ಲಾಸ್ಪತ್ರೆಯ ವಿವಿಧ ವಿಭಾಗದ ಕುರಿತು ಮಾಹಿತಿ ನೀಡಿದರು.

 ಈ ಸಂಧರ್ಬದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಿಧಿಕಾರಿ ಡಾ. ಸಂಪತ್ ಗುಣಾರಿ ಹಾಗೂ ಆಸ್ಪತ್ರೆಯ ಆರ್.ಎಮ.ಓ. ಡಾ: ಚಂದು ರಾಠೋಡ, ಎಬಿ-ಎಆರ್.ಕೆ. ನೋಡಲ್ ಅಧಿಕಾರಿಗಳಾದ ಡಾ:ಎ.ಜಿ.ಬಿರಾದಾರ, ಡಾ.ಶಶಿಕಲಾ ಹಿರೇಮನಿ, ವಿಜಯಪುರ ತಹಶೀಲ್ದಾರರಾದ ಪ್ರಶಾಂತ ಚನಗೊಂಡ ಉಪಸ್ಥಿತರಿದ್ದರು.

ರಾಜ್ಯಾದ್ಯಂತ ಆಸಕ್ತರಿಗೆ ವಿಶೇಷ ಸೂಚನೆ:

ಯುವ ಪ್ರತಿಭೆಗಳು, ಹಿರಿ-ಕಿರಿ ಆಸಕ್ತ ಸಾಹಿತಿ, ಕವಿ, ಲೇಖಕರಿಗೆ ಈ ದಿವಸ ವೇದಿಕೆ ಕಲ್ಪಿಸುತ್ತಿದೆ. ಆಸಕ್ತರು ತಮ್ಮ ಸ್ವ ರಚಿತ ಲೇಖನ, ಕಥೆ, ಕವನ , ಶಾಲಾ ಕಾಲೇಜಿನ, ವಿಶ್ವವಿದ್ಯಾಲಯ ವರದಿ, ಹೋರಾಟಗಾರರ ಮನವಿ, ತಮ್ಮ  ಜಿಲ್ಲೆ, ಪಟ್ಟಣ, ತಾಲೂಕು, ಗ್ರಾಮಗಳಲ್ಲಿನ  ಸಮಸ್ಯೆಗಳು ಸೇರಿದಂತೆ ಇತರೆ ಸುದ್ದಿ ಹಾಗೂ ಜಾಹೀರಾತುಗಳನ್ನು ಪ್ರಕಟಿಸಲು ಇಂದೇ ಸಂಪರ್ಕಿಸಿರಿ.

ಸಂಪಾದಕರು ಈ ದಿವಸ ಕನ್ನಡ ದಿನ ಪತ್ರಿಕೆ ವ್ಯಾಟ್ಸಪ್ ಸಂಖ್ಯೆ : 7204279187 / 9900378892 ತಾವು ಟೈಪಿಸಿ eedivasa@gmail.com ಈ ಮೇಲ್ ಗೂ ಮೇಲ್ ಸೆಂಡ್ ಮಾಡಿದರೆ ಪ್ರಕಟಿಸಲಾಗುವುದು.

No comments:

Post a Comment