Wednesday, May 27, 2020

ಕೆ–ಸೆಟ್ 2020 ಪರೀಕ್ಷೆಗಾಗಿ ಸಿದ್ಧತೆ ನಡೆಸುತ್ತಿರುವ ಅಭ್ಯರ್ಥಿಗಳಿಗಾಗಿ ತಜ್ಞರಿಂದ ಉಚಿತ ಆನ್‍ಲೈನ್ ತರಬೇತಿ
ಈ ದಿವಸ ವಾರ್ತೆ
ವಿಜಯಪುರ: ಕೆ–ಸೆಟ್ 2020 ಪರೀಕ್ಷೆಗಾಗಿ ಸಿದ್ಧತೆ ನಡೆಸುತ್ತಿರುವ ಅಭ್ಯರ್ಥಿಗಳಿಗಾಗಿ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವ ವಿದ್ಯಾಲಯವು ತಜ್ಞರಿಂದ ಉಚಿತ ಆನ್‍ಲೈನ್ ತರಬೇತಿ  ಹಮ್ಮಿ
ಕೊಂಡಿದೆ ಎಂದು ಕುಲಸಚಿವೆ ಪ್ರೊ.ಆರ್.ಸುನಂದಮ್ಮ ತಿಳಿಸಿದ್ದಾರೆ.ತರಬೇತಿ ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳೆರಡರಲ್ಲೂ ನಡೆಯಲಿದೆ. ಮಹಿಳಾ ವಿವಿಯ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಅಕ್ಕ ಟಿ.ವಿ, ಯುಟ್ಯೂಬ್ ನ್ಯೂಸ್ ಚಾನೆಲ್ ಹಾಗೂ ಫೇಸ್‍ಬುಕ್ ಲೈವ್‍ನಲ್ಲಿ ಜೂನ್ 3ರಿಂದ 19ರ ವರೆಗೆ ಬೆಳಿಗ್ಗೆ 11ರಿಂದ 12 ಗಂಟೆವರೆಗೆ ಹಾಗೂ ಸಂಜೆ 4ರಿಂದ 5 ಹಾಗೂ 7ರಿಂದ 8ರ ವರೆಗೆ ಪ್ರಸಾರ ಆಗಲಿದೆ.ಹೆಸರು ನೋಂದಾಯಿಸಿಕೊಂಡವರಿಗೆ ಮಾತ್ರ ಇ–ಸರ್ಟಿಫಿಕೇಟ್ ನೀಡಲಾಗುವುದು. ಹೆಸರು ನೋಂದಾಯಿಸಿಕೊಳ್ಳಲು https://forms.gle/CX6xfkFyEXppgHaN7 ಲಿಂಕ್ ಬಳಸಬೇಕು ಹಾಗೂ ಮಾಹಿತಿಗಾಗಿ jmcakkatv@gmail.com ಗೆ ಇ ಮೇಲ್ ಮಾಡಬಹುದು ಎಂದು  ಪ್ರಕಟನೆ ತಿಳಿಸಿದೆ.

Tuesday, May 26, 2020

27-05-2020 EE DIVASA KANNADA DAILY NEWS PAPER

ವಿಜಯಪುರ ಜಿಲ್ಲೆಯಲ್ಲಿ ಸೋಂಕಿತರು 76 ಕ್ಕೆ ಏರಿಕೆ: ಡಿಸಿ ವೈ ಎಸ್. ಪಾಟೀಲ್

ಈ ದಿವಸ ವಾರ್ತೆ
ವಿಜಯಪುರ: ಜಿಲ್ಲೆಯಲ್ಲಿ ಮಂಗಳವಾರ ಆರು ಜನರಲ್ಲಿ ಕೊರೋನಾ ಸೋಂಕು ಪತ್ತೆಯಾಗಿದ್ದು, ನಾಲ್ವರು ಮೃತಪಟ್ಟಿರುವುದು ಸೇರಿದಂತೆ ಸೋಂಕಿತರ ಸಂಖ್ಯೆ 76 ಕ್ಕೆ ಏರಿಕೆಯಾಗಿದೆ ಎಂದು ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ ಹೇಳಿದರು.

ಈ ಕುರಿತು ಮಾಹಿತಿ ನೀಡಿದ ಅವರು, ಮಹಾರಾಷ್ಟದಿಂದ ಆಗಮಿಸಿದ ಕಾರ್ಮಿಕರಾದ ರೋಗಿ ಸಂಖ್ಯೆ 2203ರ 18 ವರ್ಷದ ಯುವಕ, ರೋಗಿ ಸಂಖ್ಯೆ 2204ರ 34 ವರ್ಷದ ಪುರುಷ, ರೋಗಿ ಸಂಖ್ಯೆ 2205ರ 30 ವರ್ಷದ ಪುರುಷ, ರೋಗಿ ಸಂಖ್ಯೆ 2206ರ 60 ವರ್ಷದ ವೃದ್ಧ, ರೋಗಿ ಸಂಖ್ಯೆ 2207ರ 17 ವರ್ಷದ ಯುವಕ ಹಾಗೂ ರೋಗಿ ಸಂಖ್ಯೆ 2283ರ 12 ವರ್ಷದ ಬಾಲಕನಿಗೆ ಸೋಂಕು ದೃಢಪಟ್ಟಿದೆ. ಸೇವಾ ಸಿಂಧು ಪಾಸ್ ಮೂಲಕ ಮಹಾರಾಷ್ಟದಿಂದ ಜಿಲ್ಲೆಗೆ ಆಗಮಿಸಿದ ಇವರನ್ನು ಕ್ವಾರಂಟೈನ್‌ನಲ್ಲಿ ಇಡಲಾಗಿತ್ತು. ಈಗಾಗಲೇ ಸೋಂಕಿನಿಂದ ಬಳಲುತ್ತಿದ್ದವರಲ್ಲಿ 44 ಜನರು ಗುಣಮುಖಗೊಂಡು, ಜಿಲ್ಲಾಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ, ಇನ್ನುಳಿದ ಸೋಂಕಿತರಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದರು.

Monday, May 25, 2020

26-05-2020 EE DIVASA KANNADA DAILY NEWS PAPER

ವಿಜಯಪುರದಲ್ಲಿ 70 ಪಾಸಿಟಿವ್ ಪ್ರಕರಣಗಳು ದೃಢ :  ಇಬ್ಬರು  ಗುಣಮುಖ ರೋಗಿಗಳು  ಆಸ್ಪತ್ರೆಯಿಂದ ಬಿಡುಗಡೆ
ಈ ದಿವಸ ವಾರ್ತೆ ವಿಜಯಪುರ: ಕೋವಿಡ್-19ದಿಂದ ಗುಣಮುಖರಾದ ಇಬ್ಬರು ಇಂದು ಜಿಲ್ಲಾ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದು ,ಈವರೆಗೆ ಒಟ್ಟು 44 ರೋಗಿಗಳು ಗುಣಮುಖರಾಗಿದ್ದಾರೆ ಎಂದು  ಜಿಲ್ಲಾಧಿಕಾರಿ ವೈ. ಎಸ್ ಪಾಟೀಲ್ ಅವರು ತಿಳಿಸಿದ್ದಾರೆ.
ಇಂದು ರೋಗಿ ಸಂಖ್ಯೆ 594(22 ವರ್ಷದ ಯುವ ಕ) ಹಾಗೂ ರೋಗಿ ಸಂಖ್ಯೆ 856(20 ವರ್ಷದ ಯುವತಿ) ಗುಣಮುಖರಾಗಿ,ಬಿಡುಗಡೆ ಹೊಂದಿದ್ದು
ಅದರಂತೆ  ಸಧ್ಯ ಆಸ್ಪತ್ರೆಯಲ್ಲಿ  22 ಸಕ್ರಿಯ ಕೋವಿಡ್-19 ರೋಗಿಗಳಿದ್ದು, ಪರಿಣಾಮಕಾರಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.
 ಜಿಲ್ಲೆಯಲ್ಲಿ ಇಂದು ದಿನಾಂಕ 25-೦5-2020 ರಂದು ಒಬ್ಬರಿಗೆ ಕೋವಿಡ್-೧೯ ಸೊಂಕು ತಗುಲಿರುವುದು ದೃಡಪಟ್ಟಿದೆ. ರೋಗಿ ಸಂಖ್ಯೆ: 2136(28 ವರ್ಷದ ಮಹಿಳೆ ) ಮಹಾರಾಷ್ಟ್ರ ಪ್ರವಾಸದ ಹಿನ್ನೆಲೆ  ಹೊಂದಿದ್ದಾರೆ.  ಅವರಿಗೆ  ಕ್ವಾರೈಂಟನ್ ಮಾಡಿ ,ಅವಶ್ಯಕ ಚಿಕಿತ್ಸೆಯನ್ನು ಜಿಲ್ಲಾಸ್ಪತ್ರೆಯಲ್ಲಿ ನೀಡಲಾಗುತ್ತಿದೆ.
ಜಿಲ್ಲೆಯಲ್ಲಿ ಈವರೆಗೆ ಒಟ್ಟು 70 ಪಾಸಿಟಿವ್ ಪ್ರಕರಣಗಳು ದೃಢಪಟ್ಟಿದ್ದು, ಇದರಲ್ಲಿ 44 ಜನರು ಗುಣಮುಖರಾಗಿ ಜಿಲ್ಲಾಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ.


ಇನ್ನುಳಿದ 22ಕೋವಿಡ್ ಸೋಂಕಿತ ರೋಗಿಗಳಿದ್ದು,ನಾಲ್ವರು ಮೃತಪಟ್ಟಿದ್ದಾರೆ.
ಜಿಲ್ಲೆಯಲ್ಲಿ ಈವರೆಗೆ ವಿದೇಶ ಸೇರಿದಂತೆ ಇತರ ಪ್ರದೇಶಗಳಿಂದ.  14,954 ಜನರು ಬಂದ ಬಗ್ಗೆ ವರದಿಯಾಗಿದ್ದು, ಇವರ ಮೇಲೆ ತೀವ್ರ ನಿಗಾ ಇಡಲಾಗಿದೆ.  1866  -ಜನರು 28 ದಿನಗಳ ಐಸೋಲೇಶನ್ ಅವಧಿ ಪೂರ್ಣಗೊಳಿಸಿದ್ದಾರೆ. 13,042 ಜನರು (1 ರಿಂದ 28ದಿನಗಳ) ರಿಪೋರ್ಟಿಂಗ್  ಅವಧಿಯಲ್ಲಿದ್ದು, ಈವರೆಗೆ  12,466 ಜನರ ಗಂಟಲು ದ್ರವ ಮಾದರಿಯನ್ನು ಸಂಗ್ರಹಿಸಿದ್ದು, 4,263 ಜನರ ನೆಗೆಟಿವ್ ವರದಿ ಬಂದಿದೆ. ಇನ್ನೂ 8133 ಜನರ ಗಂಟಲು ದ್ರವ ಮಾದರಿ ಪರೀಕ್ಷಾ ವರದಿ ಬರಬೇಕಾಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.
ಈ ಗುಣಮುಖ ರೋಗಿಗಳ ಬಿಡುಗಡೆ  ಸಂದರ್ಭದಲ್ಲಿ ಡಾ ಶರಣಪ್ಪ  ಕಟ್ಟಿ, ಡಾ ಲಕ್ಕಣ್ಣವರ್,ಡಾ ಸಂದೀಪ್ ಸಜ್ಜನ್ ,ಆರ್. ಎನ್ ಸಾವಳಗಿ,ಡಾ ಬಿರಾದಾರ್ ,ಡಾ ಇಂಗಳೆ,ಜಗದೀಶ್  ಮಾಣಕರ್ ,ಜಿ.ಸಿ ಉಪಾಸೆ,ಅಶೋಕ್ ಬೆಳ್ಳಣ್ಣವರ್,ಸಂತೋಷ ಬಿರಾದಾರ್, ಅಜಿತ್ ಕೊಟ್ನಿಸ್ ಉಪಸ್ಥಿತರಿದ್ದರು.

Sunday, May 24, 2020

ಜಿಲ್ಲೆಯಲ್ಲಿ ಈವರೆಗೆ ೬೯ ಪಾಸಿಟಿವ್ ಪ್ರಕರಣಗಳು ದೃಢ : ಇಂದು ಓರ್ವನಲ್ಲಿ ಕೋವಿಡ್-೧೯ ಸೋಂಕು

ಈ ದಿವಸ ವಾರ್ತೆ ವಿಜಯಪುರ: ಜಿಲ್ಲೆಯಲ್ಲಿ ಇಂದು ದಿನಾಂಕ ೨೪-೦೫-೨೦೨೦ ರಂದು ಒಬ್ಬರಿಗೆ ಕೋವಿಡ್-೧೯ ಸೊಂಕು ತಗುಲಿರುವುದು ದೃಡಪಟ್ಟಿದೆ. ರೋಗಿ ಸಂಖ್ಯೆ: ೨೦೧೧ (೮೦ ವರ್ಷದ ವೃದ್ಧ) ಹಾಗೂ ಇವರು ತೀವ್ರ ರೀತಿಯ ಶ್ವಾಸಕೋಶ ತೊಂದರೆಯಿಂದ ಬಳಲುತ್ತಿದ್ದು, ಅವಶ್ಯಕ ಚಿಕಿತ್ಸೆಯನ್ನು ಜಿಲ್ಲಾಸ್ಪತ್ರೆಯಲ್ಲಿ ನೀಡಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ವೈ.ಎಸ್ ಪಾಟೀಲ ಅವರು ತಿಳಿಸಿದ್ದಾರೆ.

ಜಿಲ್ಲೆಯಲ್ಲಿ ಈವರೆಗೆ ಒಟ್ಟು ೬೯ ಪಾಸಿಟಿವ್ ಪ್ರಕರಣಗಳು ದೃಢಪಟ್ಟಿದ್ದು, ಇದರಲ್ಲಿ ೪೨ ಜನರು ಗುಣಮುಖರಾಗಿ ಜಿಲ್ಲಾಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ. ಇನ್ನುಳಿದ ೨೩ ಕೋವಿಡ್ ಸೋಂಕಿತ ರೋಗಿಗಳು ಸಕ್ರಿಯ ರೋಗಿಗಳಾಗಿದ್ದಾರೆ ಎಂದು ಅವರು ತಿಳಿಸಿದ್ದಾರೆ. 

ಜಿಲ್ಲೆಯಲ್ಲಿ ಈವರೆಗೆ ವಿದೇಶ ಸೇರಿದಂತೆ ಇತರ ಪ್ರದೇಶಗಳಿಂದ ೧೧,೧೫೩ ಜನರು ಬಂದ ಬಗ್ಗೆ ವರದಿಯಾಗಿದ್ದು, ಇವರ ಮೇಲೆ ತೀವ್ರ ನಿಗಾ ಇಡಲಾಗಿದೆ. ೧೭೪೪ ಜನರು ೨೮ ದಿನಗಳ ಐಸೋಲೇಶನ್ ಅವಧಿ ಪೂರ್ಣಗೊಳಿಸಿದ್ದಾರೆ. ೯೩೬೩ ಜನರು (೧ ರಿಂದ ೨೮ ದಿನಗಳ) ರಿರ್ಪೋಟಿಂಗ್ ಅವಧಿಯಲ್ಲಿದ್ದು, ಈವರೆಗೆ ಒಟ್ಟು ೪ ಜನ ಕೋವಿಡ್-೧೯ ರೋಗಿಗಳು ಮೃತಪಟ್ಟಿದ್ದಾರೆ. ೧೧,೬೭೯ ಜನರ ಗಂಟಲು ದ್ರವ ಮಾದರಿಯನ್ನು ಸಂಗ್ರಹಿಸಿದ್ದು, ೪೦೬೬ ಜನರ ನೆಗೆಟಿವ್ ವರದಿ ಬಂದಿದೆ. ಇನ್ನೂ ೭೫೪೪ ಜನರ ಗಂಟಲು ದ್ರವ ಮಾದರಿ ಪರೀಕ್ಷಾ ವರದಿ ಬರಬೇಕಾಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.

ಜೀವಭಯದೊಳಗೆ ಜೀವನ ತೆವಳುತ್ತಿದೆ, ಸಾಗುತ್ತಿಲ್ಲ!

ಸಾಗುವ ದಾರಿ, 
ಹೊಸತೆನಿಸುತ್ತಿದೆ, 
ಹೆಜ್ಜೆ ಹಾಕಲಾಗದೆ.
ಸಂಶಯ, ಹೆಜ್ಜೆ-ಹೆಜ್ಜೆಗೂ ತಾಕಿ, 
ಹೆಜ್ಜೆ ಹಿಂಜರಿಯುತ್ತಿದೆ.
ಜೀವಭಯದೊಳಗೆ, 
ಜೀವನ ತೆವಳುತಿದೆ,  ಸಾಗುತ್ತಿಲ್ಲ!

ಕೈಮುಟ್ಟಿ, ಕಾಲು ತಾಗಿಸಿ, 
ಜೋಲಿ ಹೊಡೆದು, ಜೋತುಬಿದ್ದು
ಹತ್ತುತ್ತಿದ್ದ, ಬಸ್ಸು ಓಡುತ್ತಿದೆ.
ಜನ ಮುಟ್ಟುತ್ತಿಲ್ಲ,  ಹತ್ತುತ್ತಿಲ್ಲ.
ಬದುಕ ಭಯದೊಳಗೆ, 
ಬದುಕು ನಡೆಯುತ್ತಿದೆ, ಓಡುತ್ತಿಲ್ಲ!

ಮನೆ ತೆರೆದಿದೆ, 
ಮನ ತೆರೆಯುತ್ತಿಲ್ಲ.
ಕಾಲಿಟ್ಟರೆ, ಮುಖವರಳಿಸಿ, 
ನೀರು ಕೊಡುತ್ತಿದ್ದವರು, 
ದೂರವಾಗುತ್ತಿದ್ದಾರೆ!
ಉಸಿರಭಯದೊಳಗೆ, 
ಉಸಿರು ಉಸಿರುತ್ತಿದೆ, ಮಾತಾಗುತ್ತಿಲ್ಲ !

ಅಂಬರೀಷ ಎಸ್. ಪೂಜಾರಿ