Sunday, May 24, 2020

ಜೀವಭಯದೊಳಗೆ ಜೀವನ ತೆವಳುತ್ತಿದೆ, ಸಾಗುತ್ತಿಲ್ಲ!

ಸಾಗುವ ದಾರಿ, 
ಹೊಸತೆನಿಸುತ್ತಿದೆ, 
ಹೆಜ್ಜೆ ಹಾಕಲಾಗದೆ.
ಸಂಶಯ, ಹೆಜ್ಜೆ-ಹೆಜ್ಜೆಗೂ ತಾಕಿ, 
ಹೆಜ್ಜೆ ಹಿಂಜರಿಯುತ್ತಿದೆ.
ಜೀವಭಯದೊಳಗೆ, 
ಜೀವನ ತೆವಳುತಿದೆ,  ಸಾಗುತ್ತಿಲ್ಲ!

ಕೈಮುಟ್ಟಿ, ಕಾಲು ತಾಗಿಸಿ, 
ಜೋಲಿ ಹೊಡೆದು, ಜೋತುಬಿದ್ದು
ಹತ್ತುತ್ತಿದ್ದ, ಬಸ್ಸು ಓಡುತ್ತಿದೆ.
ಜನ ಮುಟ್ಟುತ್ತಿಲ್ಲ,  ಹತ್ತುತ್ತಿಲ್ಲ.
ಬದುಕ ಭಯದೊಳಗೆ, 
ಬದುಕು ನಡೆಯುತ್ತಿದೆ, ಓಡುತ್ತಿಲ್ಲ!

ಮನೆ ತೆರೆದಿದೆ, 
ಮನ ತೆರೆಯುತ್ತಿಲ್ಲ.
ಕಾಲಿಟ್ಟರೆ, ಮುಖವರಳಿಸಿ, 
ನೀರು ಕೊಡುತ್ತಿದ್ದವರು, 
ದೂರವಾಗುತ್ತಿದ್ದಾರೆ!
ಉಸಿರಭಯದೊಳಗೆ, 
ಉಸಿರು ಉಸಿರುತ್ತಿದೆ, ಮಾತಾಗುತ್ತಿಲ್ಲ !

ಅಂಬರೀಷ ಎಸ್. ಪೂಜಾರಿ
ಕಥೆ

ಕೆಂಪು ಅರಮನೆ -ಹಸಿರು ಗುಡಿಸಲು

ಈಶ ಮತ್ತು ವಾಸ ಗೆಳೆಯರು. ಅಕ್ಕ ಪಕ್ಕ ಇದ್ದ ಅವರ ಮನೆಯ ಈರ್ವರು ಶಾಲೆ ವಿದ್ಯಾಭ್ಯಾಸದಲ್ಲಿ ಭಿನ್ನಭಿನ್ನ ರಾಗಿದ್ದರು. ಈಶ ಕನ್ನಡ ಮಾಧ್ಯಮ ಓದುತ್ತಿದ್ದರೆ ವಾಸ ಆಂಗ್ಲಮಾಧ್ಯಮ ಶಾಲೆಗೆ ಪ್ರವೇಶ ಪಡೆದಿದ್ದ. ಸೂಟು-ಬೂಟು ಆತನ ಸಮವಸ್ತ್ರವಾದರೆ ಈಶನದು ನೆಹರೂ ಶರ್ಟ್ ಪೈಜಮಾ ಗಾಂಧಿ ಟೊಪ್ಪಿಗೆ ಕೊಲ್ಹಾಪುರಿ ಪಾದರಕ್ಷೆ.

      ವಾಸ ಶಾಲೆಗೆ ಹೋಗಬೇಕಾದರೆ ವಾಹನ ಬಂದು ಕರೆದುಕೊಂಡು ಹೋಗಿ ಸಾಯಂಕಾಲ ಮರಳಿ ಮನೆಗೆ ಬಂದುಬಿಡುತ್ತಿತ್ತು. ಆದರೆ ಈಶನ ವಾಹನ ವೆಂದರೆ ಆತನ ಕಾಲುಗಳೇ. ಸರ್ಕಾರ ಕೊಡುವ ಬಿಸಿಊಟ ಮೊಟ್ಟೆ ಕುಡಿಯಲು ಹಾಲು ಆತನ ಉದರ ತುಂಬುತ್ತಿದ್ದವು.ಆದರೆ ವಾಸನದು  ಇಡ್ಲಿ-ಸಾಂಬಾರ್ ಚಪಾತಿ ಪಲ್ಲೆ ಜೀರಾ ರೈಸ್ ಮೃಷ್ಟಾನ್ನ ಭೋಜನ ವಾಗಿತ್ತು.

      ಹೀಗಿರುವಾಗ ಅವರು ಪ್ರೌಢಶಾಲೆಗೆ ಕಾಲಿಡುತ್ತಲೇ ವಾಸನಿಗೆ ಮೋಟಾರ್ಸೈಕಲ್, ಶಾಲೆಯಲ್ಲಿ ಆಡಲು ಕ್ರಿಕೆಟ್, ಜಿಮ್, ಕೇರಂ, ಕುಡಿಯಲು ಸಂಸ್ಕರಿಸಿದ ನೀರು. ಆದರೆ ಈಶ ಶಾಲೆಯ ಪಕ್ಕ ಹರಿಯುವ ಕೃಷ್ಣಾನದಿಯ ನೀರುಕುಡಿದು ತೋಟ ಪಟ್ಟಿಯಲ್ಲಿ ಆಟವಾಡಿ ಮನೆಯಲ್ಲಿ ರೊಟ್ಟಿ ಪುಂಡಿಪಲ್ಯ ಮೇಲೆ ಕುಡಿಯಲು ಮಜ್ಜಿಗೆ ಶಾಲೆಗೆ ಹೋಗಲು ಸೈಕಲ್ ಇವನಿಗೊದಗಿದವು. ಈಶ ನೇಗಿಲಯೋಗಿಯ ಮಗನಾದರೆ ವಾಸ ಧನಿಕನ ಮಗ.

     ಶಾಲೆಯ ಅಕಾಡೆಮಿಕ ವರ್ಷ ಮುಗಿಯುವ ಸಂದರ್ಭದಲ್ಲಿ ವಾಸನ ಶಾಲೆಯ ವಾರ್ಷಿಕ ಸ್ನೇಹ ಸಮ್ಮೇಳನ ಏರ್ಪಡಿಸಲಾಗಿತ್ತು ಆ ಸವಿನೆನಪಿಗಾಗಿ ಈಶ ಕಲಿಯುವ ಕನ್ನಡ ಮಾಧ್ಯಮ ಶಾಲೆ ವಾಸ ಓದುವ ಆಂಗ್ಲಮಾಧ್ಯಮ ಶಾಲೆಯವರೆಗೆ ರಸಪ್ರಶ್ನೆ , ಕಬಡ್ಡಿ ಭಾರದ ಗುಂಡು ಎಸೆತ ಸ್ಪರ್ಧೆ ಏರ್ಪಡಿಸಲಾಗಿತ್ತು.  ಪ್ರಾರಂಭವಾದಾಗ ತುರುಸಿನ ಸ್ಪರ್ಧೆ ಏರ್ಪಟ್ಟಿತ್ತು .ಮಾತೃಭಾಷೆಯಲ್ಲಿ ನದಿ ನೀರು ಕುಡಿದು ತೋಟಪಟ್ಟಿ ಸುತ್ತಾಡಿದ ಮಕ್ಕಳು ಸೋಲಿಲ್ಲದ ಸರದಾರ ರಾದರು

       ಅಂತೂ ಇಂತೂ ಡಿಗ್ರಿ ಓದಿ ಮುಗಿಸಿದ ಈರ್ವರ ದಾರಿ ವಿರುದ್ಧವಾಗಿದ್ದವು. ಈಶ ಚೆನ್ನಾಗಿ ಓದಿ ಡಿಗ್ರಿ ಪಾಸಾಗಿ ಸರ್ಕಾರದ ಉದ್ಯೋಗ ಅರಸದೆ ಭಾರತದ ಬೆನ್ನೆಲುಬಾದ. ಆದರೆ ವಾಸ ಮಾತ್ರ ಡಾಲರ್ ಸಂಬಳ ಗಳಿಸಲು ಉದ್ಯೋಗ ಪಡೆದು ಅಮೆರಿಕ ವಿಶ್ವದ ದೊಡ್ಡಣ್ಣನ ನೆಲ ಸ್ಪರ್ಶಿಸಿದ. ಕಾರು ಬಂಗಲೆ ಮತ್ತು ರತ್ನ ಎಲ್ಲವೂ ಅವನ ಪಾಲಿಗೆ ಬಂದವು. ಬಡವರ ಬಂಧು ತನ್ನ ತೋಟದಲ್ಲಿ ಬೆಳೆದ ದವಸ ಧಾನ್ಯ ಹಣ್ಣು-ಹಂಪಲು ದೀನದಲಿತರಿಗೆ ಬಡವ ನಿರ್ಗತಿಕರಿಗೆ ದಾನ ಮಾಡಿ ಕರ್ಣನಾದ . ವಾಸ ದೈತ್ಯ ಕಂಟಕ ತಂದೊಡ್ಡಿದ ಕೊರೋಣ ಹೆಮ್ಮಾರಿಯಿಂದ ಅಮೆರಿಕಾದಲ್ಲಿನ ಉದ್ಯೋಗ ಕಳೆದುಕೊಂಡು ಮರಳಿಗೂಡಿಗೆ ಬಂದ. ಅರಮನೆಯಲ್ಲಿ ಹುಟ್ಟಿ ಬೆಳೆದವ ಬೆಂಕಿ ಉಂಡು ನಾಲಿಗೆ ಸುಟ್ಟುಕೊಂಡ . ಕೈಕೆಸರು ಮಾಡಿಕೊಂಡವ ಮೊಸರುಂಡು ಹಾಯಾಗಿದ್ದ.                           -  ಮಂದಾಕಿನಿ  ಎಸ್.ಬಿರಾದರ್
           ವಿಜಯಪುರ
ಪವಿತ್ರ ಹಬ್ಬ ರಂಜಾನ್

ಆ ಭಗವಂತನ ಸೃಷ್ಟಿಯಲ್ಲಿ ನಾವೆಲ್ಲಾ ಒಂದೇ ಅಂದ ಮೇಲೆ ಯಾವ ಧರ್ಮವು ಮೇಲಲ್ಲ ಕೀಳಲ್ಲ, ನಾವೆಲ್ಲರೂ ಒಂದೇ. ಮನುಷ್ಯ ಹುಟ್ಟಿದ ತಕ್ಷಣ ಒಂದು ಜಾತಿಯ ಹೆಸರು ಸೂಚಿಸಬೇಕಾಯಿತು. ಧರ್ಮಗಳು ಹಲವು ಇದ್ದರೇನು ಎಲ್ಲರೂ ಪೂಜಿಸುವ ದೇವರು ಒಂದೇ ತಾನೆ?ಆದರೆ ಆಚರಿಸುವ ಪದ್ಧತಿಗಳು ಸಂಪ್ರದಾಯಗಳು ಬೇರೆ ಬೇರೆಯಷ್ಟೇ.
 ಬೌದ್ಧ, ಜೈನ ,ಹಿಂದೂ, ಕ್ರೈಸ್ತ, ಮುಸ್ಲಿಂ, ಎಂದು ನಾನಾ  ಧರ್ಮಗಳು ಇರುವವು.

ಧರ್ಮವೊಂದೇ ಪ್ರತಿಪಾದಿಸುವುದು ಎಲ್ಲರೂ ಒಂದೇ, ಅಹಿಂಸಾ ತತ್ವದಿಂದ ನಡೆಯಿರಿ. ದೇವರ ಪ್ರಾರ್ಥನೆಯಲ್ಲಿ ಭಾಗಿಯಾಗಿ ಶುದ್ಧ ಮನಸ್ಸುಗಳಿಂದ ಮಾನವೀಯತೆಯ ವ್ಯಕ್ತಿತ್ವ ಬೆಳೆಸಿಕೊಂಡು ಸತ್ಯ ನಿಷ್ಠೆಯಿಂದ ನಡೆದುಕೊಳ್ಳುವುದೇ ಧರ್ಮ.

ಅಹಿಂಸಾಥಾಯ ಲೋಕನಾಂ ಧರ್ಮ ಪ್ರವಚನಂ* ಎಂದು ಇನ್ನೊಬ್ಬರನ್ನು ಹಿಂಸಿಸಿ ಬದುಕಬಾರದು ಎಂಬುದು ಇದರ ತಾತ್ಪರ್ಯ.

ಪ್ರಭುವಾರ್ತಾಯ ಭೂತಾನಾಂ
ಧರ್ಮ ಪ್ರವಚನ ಗೃತಂ
ಏಷ್ಯ ಪ್ರಭವ ಸವಿಯುಕ್ತಾಹ
ಸಧರ್ಮ ಇತಿ ನಿಷ್ಞ
ಎಲ್ಲ ಧರ್ಮಗಳು ಎತ್ತರಕ್ಕೆ ಇರುವುದು ಎಲ್ಲ ಧರ್ಮೀಯರು ಕೈ ಹಿಡಿದು ಪ್ರತಿಯೊಬ್ಬರು ಮೇಲಕ್ಕೇರಬೇಕು ಮತ್ತೊಬ್ಬರನ್ನು ತುಳಿದು ನಾವು ಮೇಲಕ್ಕೆ ಎರುವುದಲ್ಲ ಅದು ಅಧರ್ಮ ಎಂಬುವುದು ತಿಳಿಯಬೇಕು.

ಹಾಗೆ ಮುಸ್ಲಿಮರ ಹಬ್ಬ ರಂಜಾನ್ ವು ಒಂದು ವಿಶೇಷವಾದ ಪವಿತ್ರವಾದ ಹಬ್ಬವಾಗಿದೆ.
 ಈದ್ ಮುಬಾರಕ್ ಈದ್ಎಂದರೆ ಹಬ್ಬ ,ಮುಬಾರಕ್ ಎಂದರೆ ಶುಭಾಶಯ, ಹಾಗೆ ನನ್ನ ಎಲ್ಲ ಮುಸ್ಲಿಂ ಬಂಧುಗಳಿಗೆ ರಂಜಾನ್ ಹಬ್ಬದ ಶುಭಾಶಯಗಳು ಕೋರುತ್ತಾ

ರಂಜಾನ್ ಹಬ್ಬದ ಮಹತ್ವವನ್ನು ಪ್ರಸ್ತಾಪಿಸುವೆ.
ಮಾನವ ತನ್ನ ಬದುಕಿನಲ್ಲಿ ಮಾಡುವ ಎಲ್ಲಾ ಪಾಪಗಳನ್ನು ವಿಮುಕ್ತಿಗೊಳಿಸಿಕೊಳ್ಳಲು, ಅಂದರೆ ಪರಿಹರಿಸಿಕೊಳ್ಳಲು ಇದೊಂದು ಸನ್ಮಾರ್ಗ ವೆಂದು ಈ ಹಬ್ಬ ಆಚರಿಸುವರು. ಎಲ್ಲ ಧರ್ಮಗಳಲ್ಲಿ ಅವರವರ ಸಂಪ್ರದಾಯದ ಕುರಿತಂತೆ ದೇವರಲ್ಲಿ ಪ್ರಾರ್ಥಿಸುವರು.

ಒಂದು ತಿಂಗಳು ರಂಜಾನ್ ತಿಂಗಳ ವಾಗಿ ಚಿಕ್ಕವರಿಂದ ಹಿಡಿದು ದೊಡ್ಡವರವರೆಗೂ ಉಪವಾಸ  (ರೋಜಾ) ಮಾಡುವುದುಂಟು ಕಟ್ಟುನಿಟ್ಟಿನ ಉಪವಾಸ ಮಾಡಿ ಈ ಒಂದು ತಿಂಗಳು ಸಹಾನುಭೂತಿಯ ತಿಂಗಳು ಸಹನೆಯ ತಿಂಗಳು ಎಂದೇ ಹೇಳಬಹುದಾಗಿದೆ.  ಈ ತಿಂಗಳಲ್ಲಿ ದಾನ ಧರ್ಮಗಳನ್ನು ಮಾಡುವುದು ಹೆಚ್ಚು.ಬಡವರಿಗೆ ನಿರ್ಗತಿಕರಿಗೆ ಅಬಲೆಯರಿಗೆ ಅಸಹಾಯಕ ಸ್ಥಿತಿಯಲ್ಲಿರುವ ಎಲ್ಲ ಜನರಿಗೂ ಈ ತಿಂಗಳ ಪೂರ್ತಿ ದಾನವನ್ನು ಮಾಡುತ್ತಾರೆ.ಅಲ್ಲಾಹ್ ಕೊಟ್ಟ ದುಡ್ಡನ್ನು ಇಂತಹ ದಾನ ಧರ್ಮಗಳನ್ನು ಮಾಡಿ  ಪಾಪಗಳನ್ನು ವಿಮುಕ್ತಿ ಗೊಳಿಸುವಂತಹ ಕಾರ್ಯ ಇದಾಗಿದೆ.
           ರಂಜಾನ್ ಆಚರಿಸುವ ದಿನದ ಹಿಂದಿನ ದಿನ ಚಂದ್ರ ಕಂಡಾಗಲೇ ಈ ಹಬ್ಬವನ್ನು  ಆಚರಿಸುತ್ತಾರೆ.
14 ಗಂಟೆಗಳ ಕಾಲ ಒಂದು ಹನಿ ನೀರು ಆಹಾರವನ್ನು ಸೇವಿಸದೆ ಕಟ್ಟುನಿಟ್ಟಿನ ಉಪವಾಸವನ್ನು ಕೈಗೊಂಡು, ಈ ತಿಂಗಳಲ್ಲಿ ಪ್ರತಿ ದಿನ ಕುರಾನ್ನನ್ನು ಸಹ ಓದುವವರು. ಕುರಾನ್ ಇದೊಂದು ಮಹಾ ಪವಿತ್ರವಾದ ಗ್ರಂಥ ಈ ಪುರಾಣವು ಮಾನವನ ಬದುಕಿನ ಬಗ್ಗೆ ಚಲಿಸಲಾಗುತ್ತದೆ ಮಹಮ್ಮದ್ ಪೈಗಂಬರ್ ಅವರಿಗೆ ಕೃತಜ್ಞತೆಯನ್ನು ಸಲ್ಲಿಸಲು ಈ ಹಬ್ಬವನ್ನು ಆಚರಿಸಲಾಗುತ್ತದೆ ಎಂದು ಕೊಡಾ ತಿಳಿಯಬಹುದು.  ಕುರಾನ್ ಆಶಯದಂತೆ ಜೀವನ ಸಾಗಿಸಬೇಕಾದರೆ ಅದಕ್ಕೆ ವಿಶೇಷ ತರಬೇತಿ ಬೇಕು. ಕುರಾನ್ ರೀತಿಯಲ್ಲಿ ಬದುಕಿದ ಮಹಮ್ಮದ್ ಪೈಗಂಬರ್ ಅವರ ಜೀವನ ಹೇಗಿತ್ತು, ಎಂದರೆ ಕುರಾನ್ ಪ್ರತಿ ಆದೇಶವೂ ಚಾಚು ತಪ್ಪದೆ ಪಾಲಿಸುತ್ತಿದ್ದರು ಅವರ ಜೀವನದಲ್ಲಿ ಆಳವಾಗಿ ಅಳವಡಿಸಿಕೊಂಡಿದ್ದರು.
1450 ವರ್ಷಗಳ ಹಿಂದೆ ನಿರಂತರ 23 ವರ್ಷಗಳ ಅವಧಿಯಲ್ಲಿ ನೀಡಿದ ಕಾಲಘಟ್ಟ ಮತ್ತು ಆಯಾ ಪರಿಸ್ಥಿತಿಗಳ ಹಿನ್ನೆಲೆಯಲ್ಲಿ ಪ್ರವಾದಿ ಮಹಮ್ಮದರು ಹಂತ ಹಂತವಾಗಿ ಕುರಾನ್ ಅವಿರ್ಭಾವ ಗೊಳಿಸಿದ್ದರು.

6236 ವಚನಗಳಿಂದ ಕೂಡಿರುವ ಅರಬ್ಬಿ ಭಾಷೆಯಲ್ಲಿರುವ ಈ ಗ್ರಂಥದಲ್ಲಿ 30 ವಿಭಾಗಗಳನ್ನು 114ಅಧ್ಯಾಯಗಳು ಇವೆ. ವಿಶ್ವದಲ್ಲಿರುವ ಜನತೆಗೆ ಮಾರ್ಗದರ್ಶಿ ಎಂದು ತನ್ನನ್ನು ಪರಿಚಯಿಸಿಕೊಳ್ಳುವ ಈ ಕುರಾನ್, ವಿಶ್ವದಲ್ಲಿ ಹೆಚ್ಚು ಓದುಗರನ್ನು ಹೊಂದಿದೆ ದುರಂತ ಎನ್ನುವ ಶ್ರೇಯ ಪಡೆದಿದೆ. ಕುರಾನ್ ಎಂಬ ಪದಕ್ಕೆ ವಿಶಿಷ್ಟವಾದ ಮಹತ್ವವಿದೆ ಕುರಾನ್ ಪ್ರತಿ ವಿಷಯದ ಬಗ್ಗೆ ಮಾತನಾಡುತ್ತದೆ.
ಜಗತ್ತಿನ ಸೃಷ್ಟಿ ವೈವಿಧ್ಯ ನೋಡಿ ಪಾಠ ಕಲಿಯಲು ಮನುಷ್ಯನಿಗೆ ಕರೆ ನೀಡುತ್ತದೆ ಮೂಲ ಅರಬಿ ಭಾಷೆಯಲ್ಲಿರುವ ಕುರಾನ್ ಇಂದು ಜಗತ್ತಿನ ಎಲ್ಲ ಭಾಷೆಗಳಿಗೆ ಭಾಷಾಂತರಗೊಂಡಿದೆ.ತನ್ನ ಆಕಾಂಕ್ಷೆಗಳನ್ನು ದೇವರ ಆದೇಶಗಳಿಗೆ ಅಧೀನ ಬರಿಸುವ ಶಕ್ತಿ ಮನುಷ್ಯನಿಗೆ ಸಿಗಬೇಕು, ಇದನ್ನು ಕುರಾನ್ ಕಲಿಸುತ್ತದೆ. ಜಾಗರೂಕತೆಯಿಂದ ಜೀವನ ಸಾಗಿಸಲು ಬೇಕಾದ ತರಬೇತಿ ಪ್ರತಿ ವರ್ಷ ರಂಜಾನ್ ತಿಂಗಳ ಪೂರ್ತಿ ಸಿಗುತ್ತದೆ. ಹಾಗಾಗಿ ಈ ಹಬ್ಬ ಪವಿತ್ರ ಹಬ್ಬವಾಗಿ ಆಚರಿಸಲಾಗುತ್ತದೆ ಎಲ್ಲರೂ ಸಂತಸದಿಂದ ಹೊಸ ಉಡುಪುಗಳನ್ನು ಧರಿಸಿ, ಖುಷಿಯಿಂದ ಸುರ್ಕುಂಬಾ ಎಂಬ ಪಾನೀಯವನ್ನು ಮಾಡಿ ಆಪ್ತ ಸ್ನೇಹಿತರಿಗೆ ಕರೆದು ಅಪ್ಪುಗೆಯಿಂದ ಪ್ರೀತಿಯಿಂದ ಶುಭಾಶಯ ಕೋರಿ  ಕುಡಿದು ಕುಪ್ಪಳಿಸುವ ಹಬ್ಬ ರಂಜಾನ್ ಹಬ್ಬ ಇದಾಗಿದೆ.

-ಮಮತಾ ಗುಮಶೆಟ್ಟಿ
 ವಿಜಯಪುರ

Saturday, May 23, 2020

ಈ ದಿವಸ ಸೆಲ್ಫಿ ವಿತ್ ಬ್ರದರ್..

---------------------------------------------------------------------

ಪ್ರಿಯಾಂಕಾ ಅನಂತ ಪೂರ್ ಸಹೋದರ ಬಸವರಾಜ್
---------------------------------------------------------------------

ಅಣ್ಣ ಅಪ್ಪುಗೌಡ ಪಾಟೀಲ (ಯತ್ನಾಳ) ಜೊತೆ ತಮ್ಮಾ ಪ್ರವೀಣಗೌಡ ಪಾಟೀಲ
---------------------------------------------------------------------

ಸದಾ "ರಕ್ಷಾ ಕವಚ" ನನ್ನ ಸಹೋದರ ಬಸವರಾಜ ಪಾಟೀಲ. ಮನೀಷಾ
---------------------------------------------------------------------
ಮಲ್ಲಿಕಾರ್ಜುನ ಕುಂಬಾರ ಅರಷಣಗಿ ಅವರು  ಅಣ್ಣ ತಮ್ಮಂದಿರೊಡನೆ ತೆಗೆದುಕೊಂಡ ಸೆಲ್ಪಿಯಲ್ಲಿ ಶ್ರೀಕಾಂತ್ ಹಾಗೂ ರಮೇಶ
---------------------------------------------------------------------

ನನಗೆ ಯಾವ ಯಾವುದೇ ಅಣ್ಣ-ತಮ್ಮಂದಿರರು   ಇಲ್ಲ. ನಾನೊಬ್ಬನೇ ಇರೋದು ನನ್ನ ಆತ್ಮೀಯ ಸ್ನೇಹಿತ ಪ್ರಾಣಸ್ನೇಹಿತ ಇವನೇ ನನಗೆ ಅಣ್ಣ ಮತ್ತು ತಮ್ಮ ನಾಗಿರುತ್ತಾನೆ.    
- ಚಂದ್ರಶೇಖರ ಹಾಗೂ ವಿನೋದ್ 

---------------------------------------------------------------------

ಹರೀಶ ಹಾಗೂ ತಂಗಿ ಹರ್ಷಿತಾ ಧಾಮಣ್ಣವರ
---------------------------------------------------------------------

ಡಾ. ರೇಶ್ಮಾ ಹಾಗೂ ತಮ್ಮ ಆದಿತ್ಯ

------------------------------------------------------------------

ಮಲ್ಲಿಕಾರ್ಜುನ ಹಾಗೂ ಅಕ್ಕ  ಸಾಹಿತ್ಯ

------------------------------------------------------------------

ಅಕ್ಷತಾ ಹಾಗೂ ಆದಿತ್ಯ

------------------------------------------------------------------

ತಂಗಿ ಪಲ್ಲವಿಯನ್ನು ಹೊತ್ತುಕೊಂಡ ಅಣ್ಣ ಅಮಿತ್

------------------------------------------------------------------

ಉಪಕಾರಾಗ್ರಹ ಗೋಕಾಕನ ಅಧೀಕ್ಷಕರು
 ಅಂಬರೀಷ ಪೂಜಾರಿ, ಅಣ್ಣಂದಿರಾದ
ಬೈಲಹೊಂಗಲ ತಾಲೂಕಿನ
 ಸರ್ಕಾರಿ ಪಿ.ಯು. ಕಾಲೇಜ್ ಸಂಪಗಾವ್ ಉಪನ್ಯಾಸಕ
 ಮಾರುತಿ ಪೂಜಾರಿ, ಯಕ್ಕುಂಡಿ. ತಾ ಬಬಲೇಶ್ವರನ
ಪ್ರಗತಿಪರ ರೈತರಾದ ಉದಯ ಪೂಜಾರಿ.

------------------------------------------------------------------

ಮುರಳಿಧರ್ ಅವರೊಂದಿಗೆ ಗುರುರಾಜ್

------------------------------------------------------------------

ಶಿವಾನಂದ.ಕಲಗೊಂಡ, ಉಮೇಶ.ಕಲಗೊಂಡ.                ಭರತೇಶ.ಕಲಗೊಂಡ.

------------------------------------------------------------------

ಅಣ್ಣನಾದ ಸಂತೋಷ ಗೆಳತಿಯ ಮದುವೆ ಸಂದರ್ಭದಲ್ಲಿ ತಂಗಿಯರಾದ ಭವಾನಿ ಪುಪ್ಪಾ ಕನ್ಯಾಕುಮಾರಿ ಲಕ್ಷ್ಮೀರೊಂದಿಗೆ ತೆಗೆದುಕೊಂಡ ಭಾವಚಿತ್ರ
------------------------------------------------------------------

ಮುದ್ದಿನ ತಂಗಿ ಆದ್ಯ ಜೊತೆ ವಿರಾಟ್ ಚಡಚಣ 
------------------------------------------------------------------

ಸಹೋದರ: ವಿನಾಯಕ ಪಾಟೀಲ  ಸಹೋದರಿ:ಮಂದಾಕಿನಿ 
------------------------------------------------------------------

ಅಣ್ಣ ಮನೋಜ ಅವರೊಂದಿಗೆ ತಂಗಿ ವಸುಂಧರಾ

-----------------------------------------------------------------

ಒಂದೇ ತಾಯಿಯ ಮಕ್ಕಳಲ್ಲ ಆದರೂ ಅಣ್ಣ ಅಕ್ಕ ತಮ್ಮ ತಂಗಿಯ ಹಾಗೆ ಎಲ್ಲರೂ ಇದ್ದೇವೆ. ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ  ಸಿದ್ರಾಮ ಜೋಗುರ, ನಿಂಗಯ್ಯ ಮಠ, ಮುಕ್ತಾಯಕ್ಕ ಕತ್ತಿ, ಲಕ್ಷ್ಮಿ ಗೋಗಿ, ಅಶ್ವಿನಿ ಜೋಗುರ ಹಾಗೂ ಮಾಹಾಂತೇಶ ನೂಲಾನವರ 
-----------------------------------------------------------------

ಅಣ್ಣ ಶಿವಾನಂದ ಅವರೊಂದಿಗೆ ತಂಗಿ ಡಾ. ಅನುಸೂಯ
-------------------------------------------------------------

ಗುರುಪ್ರಸಾದ ಮತ್ತು ಮಾಲಿಂಗೇಶ್  ಬಸರಕೋಡ  ವಿಜಯಪುರ
-------------------------------------------------------------

ಹಳೆ ಹುಬ್ಬಳ್ಳಿ ಬ್ರದರ್ಸ್
-------------------------------------------------------------------

ನಾನು ವಿಜುಗೌಡ ಕಾಳಶೆಟ್ಟಿ
ನನ್ನ ಆತ್ಮೀಯ ಸಹೋದರರು
ಕಿರಣ್ ಮತ್ತು ರಾಜು..

----------------------------------------------------

ತಂಗಿ ಆರಾಧ್ಯಳೊಂದಿಗೆ ಅಣ್ಣ ಅಲೋಕ 

----------------------------------------------------

ಸಿಂದಗಿಯ ಮಾಹಾಂತೇಶ ನೂಲಾನವರ, ಭಾಗ್ಯಶ್ರೀ ನಂದಿಮಠ, ಅಶ್ವಿನಿ ಅಂಕದ ಪ್ರಜ್ವಲ್ ಬಿರಾದಾರ್
----------------------------------------------------

ಹಳೇ ಹುಬ್ಬಳ್ಳಿ ಬ್ರದರ್ಸ್‌
----------------------------------------------------

ಅಕ್ಕ ಸ್ನೇಹಾಳೊಂದಿಗೆ ತಮ್ಮ ಪ್ರಶಾಂತ್
---------------------------------------------------

ವಿಜಯಪುರದ ಡಾ: ಸುರೇಶ, ಪ್ರಯೋಗಾಲಯ ತಂತ್ರಜ್ಞ ,ರಮೇಶ  ಪತ್ರಕರ್ತ ಪ್ರಕಾಶ ಕುಂಬಾರ ಸಹೊದರರು.
---------------------------------------------------

ಮುದ್ದೇಬಿಹಾಳ  ಶ್ರೀದೇವಿ ಬಡಿಗೇರ ತಮ್ಮ ಮೌನೇಶ ಬಡಿಗೇರ ಜೊತೆ ಒಂದ್ ಸೆಲ್ಫಿ
---------------------------------------------------

ತಮ್ಮ ಚೆನ್ನಯ್ಯ ನೊಂದಿಗೆ ಅಕ್ಕ ಭಾಗ್ಯ ಸಿಂದಗಿ
--------------------------------------------------

 ಸಹೋದರರೊಂದಿಗೆ ಅಕ್ಕ ಜ್ಯೋತಿ 

--------------------------------------------------

ಜಂಬಗಿ ಬ್ರದರ್ಸ್ ಆನಂದ ಗೌಡ, ಮಲ್ಲನಗೌಡ, ಅಮಿತ್ ಕುಮಾರ್

---------------------------------------------------

ಅಕ್ಕ ಭಾಗ್ಯಳೊಂದಿಗೆ ತಮ್ಮ ತುಷಾರ್

---------------------------------------------------

ಅಣ್ಣ ಅಮಿತ್ ಜೊತೆ ತಂಗಿಯರಾದ ಪಲ್ಲವಿ ಹಾಗೂ ಉಷೆ 

---------------------------------------------------

ತಮ್ಮ ಸುಮಿತ್ ನೊಂದಿಗೆ ಅಣ್ಣ ಸುಶಾಂತ್
---------------------------------------------------

ಸಹೋದರ ಜಗದೀಶನೊಂದಿಗೆ ತಂಗಿ ಜ್ಯೋತಿ.. ಸಿಂದಗಿ 
---------------------------------------------------

ಪುಟ್ಟ ಸಹೋದರಿ ಅವನಿ ಜೊತೆ ಪುಟಾಣಿ ಅನಿಕೇತ ಸಹೋದರದಿನದ ಸಂಭ್ರಮದಲ್ಲಿ.
---------------------------------------------------

ಪ್ರೀತಿಯ ತಂಗಿ ಪ್ರಿಯಾಂಕ ಜೊತೆ ಅಣ್ಣ ಚೇತನ ಸರಶೆಟ್ಟಿ, ವಿಜಯಪುರ 
---------------------------------------------------

ಗಿರಿಜಾ ಪಟ್ಟಣಶೆಟ್ಟಿ ಅವರು ಸಹೋದರ ಡಾ. ಮಹೇಶ್ ಅವರೊಂದಿಗೆ
---------------------------------------------------

ಮುದ್ದಿನ ಅಣ್ಣ ವಿಶ್ವ ನ ಜೊತೆ ಅಕ್ಕರೆಯ ತಂಗಿ ಅಕ್ಷತಾ ಬಸವನ ಬಾಗೇವಾಡಿ  ವಿಜಯಪುರ. 
---------------------------------------------------

ಅಣ್ಣ ಸಚಿನ್ ನೊಂದಿಗೆ ತಂಗಿ ಪ್ರಿಯಾಂಕ

---------------------------------------------------

Friday, May 22, 2020

ನಾಗಠಾಣ ಶಾಸಕರಿಂದ ಆಹಾರ ಕಿಟ್ ವಿತರಣೆ

ವಿಜಯಪುರ : ನಾಗಠಾಣ ವಿಧಾನಸಭಾ ಕ್ಷೇತ್ರದ  ಶಾಸಕ  ಡಾ.ದೇವಾನಂದ ಫೂ.ಚವ್ಹಾಣ ಅವರಿಂದ ಕ್ಷೇತ್ರ ವ್ಯಾಪ್ತಿಯ ಉತ್ನಾಳ ಎಲ್.ಟಿ.1,ಉತ್ನಾಳ ಎಲ್.ಟಿ 2, ಹೆಗಡಿಹಾಳ, ಮದಬಾವಿ, ಮದಬಾವಿ ಎಲ್.ಟಿ.2,      ಕುಮಟಗಿ ತಾಂಡಾ.ಕಗ್ಗೋಡ.  ಹಡಗಲಿತಾಂಡಾ 1&,2&3, ಆಹೇರಿತಾಂಡಾ1. ಶಿವಣಗಿ,ಹಾಗೂ  ಅಂಕಲಗಿ ಗ್ರಾಮಗಳಲ್ಲಿ ಕೊರೋನಾ ಕೋವಿಡ-19 ವೈರಸ್ ಹರಡದಂತೆ ತಡೆಯಲು ಮುನ್ನೆಚ್ಚರಿಕೆ ಕ್ರಮವಾಗಿ ಕ್ವಾರಂಟೈನ ಮಾಡಲಾದ ಜನರನ್ನು ಭೇಟಿ ಮಾಡಿ ಅವರ ಆರೋಗ್ಯ ವಿಚಾರಿಸಿ ನಂತರ ಅವರಿಗೆ ಊಟದ ವ್ಯವಸ್ಥೆ ಕಲ್ಪಿಸಲು ಆಹಾರ ಧಾನ್ಯಗಳ ವಿತರಣೆ ಮಾಡಿದರು.  ಈ ಸಂದರ್ಭದಲ್ಲಿ ಶಾಸಕರ ಧರ್ಮಪತ್ನಿ ಶ್ರೀಮತಿ.ಡಾ.ಸುನಿತಾ ದೇವಾನಂದ ಚವ್ಹಾಣ, ವಿಜಯಪುರ ತಹಶೀಲ್ದಾರ್ ಶ್ರೀಮತಿ. ಮೋಹನ ಕುಮಾರಿ ಹಾಗೂ ಕಂದಾಯ ಇಲಾಖೆ ಸಿಬ್ಬಂದಿಗಳು, ಗ್ರಾಮಗಳ ಪ್ರಮುಖರು, ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು, ಪೊಲೀಸ್ ಇಲಾಖೆ ಸಿಬ್ಬಂದಿಗಳು, ಆಶಾ ಕಾರ್ಯಕರ್ತರು, ಆರೋಗ್ಯ ಇಲಾಖೆ ಸಿಬ್ಬಂದಿಗಳು ಹಾಜರಿದ್ದರು.
ಕಣ್ಣಿಗೆ ಕಂಡಿದ್ದು

ವಿಜಯಪುರ : ಸಂಚಾರಿ ಠಾಣೆಯ ಪೇದೆ, ಶಿವಾನಂದ ಕಟ್ಟಿಮನಿ ಬೀದಿ ಶ್ವಾನಗಳ ಹಸಿವು ತಣಿಸಲು ಬ್ರೇಡ್ ಹಾಕಿ ಪ್ರಾಣಿ ಪ್ರೇಮ ಮೆರಯುತ್ತಿರುವುದು....
ಕಣ್ಣಿಗೆ ಕಂಡದ್ದು...

ವಿಜಯಪುರ: ಸುಡುವ  ರಣ ರಣ ಬಿಸಿಲಿನಲ್ಲಿ  ಬಸವಳಿದ ಗೋವಿಗೆ ನೀರುಣಿಸಿ ತಮ್ಮ ಕರ್ತವ್ಯ ಪ್ರಜ್ಞೆ ಯೊಂದಿಗೆ ಮಾನವೀಯ ಮೌಲ್ಯ ಪ್ರಜ್ಞೆ ಮೆರೆದ ಪೊಲೀಸ್ ಸಿಬ್ಬಂದಿ ಸಂಗಮೇಶ ಜೋಗಿನ್..

ಈ ದೃಶ್ಯದ ಹಿಂದೆ  ಗೋವು ತನ್ನ ಕರುವಿಗೆ ಹಾಲುಣಿಸುತ್ತಿರುವ  ಮನಮೋಹಕ  ದೃಶ್ಯ .. ನೋಡುಗರನ್ನು ಮೂಕವಿಸ್ಮಿತರನ್ನಾಗಿಸುತ್ತದೆ...