ವಿಜಯಪುರ : ಕೆಪಿಟಿಸಿಎಲ್ ವತಿಯಿಂದ ಎರಡನೇ ತ್ರೈಮಾಸಿಕ ದುರಸ್ತಿ ಹಾಗೂ ನಿರ್ವಹಣಾ ಕಾರ್ಯ ಕೈಗೊಳ್ಳುತ್ತಿರುವ ಹಿನ್ನೆಲೆಯಲ್ಲಿ 220 ಕೆವಿ ವಿಜಯಪುರ 110/33/11 ಕೆವಿ ಜುಮನಾಳ, ವಿಜಯಪುರ ಸಿಟಿ, ಕೆಐಎಡಿಬಿ ವಿಜಯಪುರ, ಭೂತನಾಳ, 33 ಕೆವಿ ತಿಡಗುಂದಿ, ಅರಕೇರಿ ಎಲ್ ಐಎಸ್, 33 ಕೆವಿ ಹೊನ್ನುಟಗಿ, 33 ಕೆವಿ ನಾಗಠಾಣ, ಮಮದಾಪೂರ, ಬೆಳ್ಳುಬ್ಬಿ, ದೇವರಗೆಣ್ಣೂರ, ಶಿರಬೂರ, ಬಬಲೇಶ್ವರ, ಕಂಬಾಗಿ, ಕಾಖಂಡಕಿ, ನಿಡೋಣಿ, ತಿಕೋಟ, ತೊರವಿ, ಹೊನವಾಡ, ಕನಮಡಿ ಹಾಗೂ ಟಕ್ಕಳಕಿ 110/33/11 ಕೆವಿ ವಿದ್ಯುತ್ ಉಪ ಕೇಂದ್ರಗಳ ಮಾರ್ಗಗಳಲ್ಲಿ ಸೆ.25 ರಂದು ಬೆಳಿಗ್ಗೆ 9:00 ರಿಂದ ಸಂಜೆ 4:00 ಗಂಟೆಯವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ.
ಆದ್ದರಿಂದ ಸಾರ್ವಜನಿಕರು ಹಾಗೂ ಗ್ರಾಹಕರು ಹೆಸ್ಕಾಂ ಜೊತೆ ಸಹಕರಿಸಬೇಕೆಂದು ಹೆಸ್ಕಾಂ ಕಾರ್ಯ ಮತ್ತು ಪಾಲನಾ ವಿಭಾಗದ ಕಾರ್ಯನಿರ್ವಾಹಕ ಅಭಿಯಂತರರು (ಪ್ರ) ಪ್ರಕಟಣೆಯಲ್ಲಿ ವಿನಂತಿ ಮಾಡಿಕೊಂಡಿದ್ದಾರೆ.
ರಾಜ್ಯಾದ್ಯಂತ ಆಸಕ್ತರಿಗೆ ವಿಶೇಷ ಸೂಚನೆ :
ಸುದ್ದಿ ಹಾಗೂ ಜಾಹೀರಾತುಗಳನ್ನು ಪ್ರಕಟಿಸಲು ಇಂದೇ ಸಂಪರ್ಕಿಸಿರಿ.ಸಂಪಾದಕರು ಈ ದಿವಸ ಕನ್ನಡ ದಿನ ಪತ್ರಿಕೆ ವ್ಯಾಟ್ಸಪ್ ಸಂಖ್ಯೆ : 7204279187 / 9900378892 ತಾವು ಟೈಪಿಸಿ eedivasa@gmail.com ಈ ಮೇಲ್ ಗೂ ಮೇಲ್ ಸೆಂಡ್ ಮಾಡಿದರೆ ಪ್ರಕಟಿಸಲಾಗುವುದು.
No comments:
Post a Comment