Saturday, March 29, 2025

ಸಿಹಿ-ಕಹಿ ಬೆಸಗುವ ಹಬ್ಬ ಯುಗಾದಿ

ಹೂವುಗಳ ರಾಜ ಗುಲಾಬಿ, ಹಣ್ಣುಗಳ ರಾಜ ಮಾವು, ಪ್ರಾಣಿಗಳ ರಾಜ ಸಿಂಹ, ಪಕ್ಷಿಗಳ ರಾಜ ಜುಜುರಾಣ ಹಾಗೂ ಋತುಗಳ ರಾಜ ವಸಂತ ಋತು. ಈ ಋತುವೇ ನಮ್ಮ ದೇಶದ ಹೊಸ ವರ್ಷ. ಹೌದು ಪ್ರಂಪಚಾದ್ಯಂತ ಜನವರಿ 1ರಂದು ಹೊಸ ವರ್ಷಾಚರಣೆ ಮಾಡಿದರೇ ನಮ್ಮ ಭಾರತೀಯರ ಪಾಲಿಗೆ ಯುಗಾದಿಯೇ ಹೊಸ ವರ್ಷಾಚರಣೆ. ಯುಗ ಎಂದರೆ ಅವಧಿ, ಆದಿ ಅಂದರೆ ಆರಂಭ ಹೊಸ ಯುಗದ ಆರಂಭವೇ ಯುಗಾದಿ. ಚಳಿಗಾಲದ ತರುವಾಯ ವಸಂತ ಋತುವಿನ ಪ್ರಾರಂಭವು ಗಿಡ-ಮರಗಳಲ್ಲಿ ಹೊಸತನದ ಚಿಗುರನ್ನು ನೀಡುತ್ತದೆ. ಜೀವನದಲ್ಲಿ ಬರುವಂತಹ ಸಿಹಿ-ಕಹಿ ಘಟನೆಗಳನ್ನು ಸರಿ ಸಮಾನವಾಗಿ ಎದುರಿಸುವ ಸಂದೇಶ ಸಾರುವ ಆಚರಣೆ, ಹಳೆಯ ಕೆಟ್ಟ ಘಟನೆಗಳಿಂದ ಹೊಸತನದಲ್ಲಿ ಹೆಜ್ಜೆಯಿಡುವುದರ ಸಂಕೇತವಾಗಿ ಈ ಹಬ್ಬವನ್ನು ದಿನ ಬೇವು-ಬೆಲ್ಲ ಸೇವಿಸಲಾಗುವುದು. 

ಪುರಾಣಗಳ ಪ್ರಕಾರ ಬ್ರಹ್ಮ ದೇವರು ಬ್ರಹ್ಮಾಂಡವನ್ನು ಸೃಷ್ಟಿಸಲು ಪ್ರಾರಂಭ ಮಾಡಿದ್ದು ಈ ಯುಗಾದಿ ದಿನ ದಿಂದ  ಎಂದು ಹೇಳಲಾಗುತ್ತದೆ. ಆದ್ದರಿಂದ ಯುಗಾದಿಯ ದಿನವನ್ನು ಬ್ರಹ್ಮಾಂಡ ಸೃಷ್ಟಿಯ ಮೊದಲ ದಿನವೆಂದು ನಂಬಲಾಗಿದೆ.

ಹೊಸ ವರ್ಷಾಚರಣೆಯ ಒಂದು ಹಬ್ಬ ನಾಮ ಹಲವು: ಯುಗಾದಿ ಹಬ್ಬವನ್ನು ದೇಶಾದ್ಯಂತ ಹೊಸ ವರ್ಷಾಚರಣೆಯ ಸಂಕೇತವಾಗಿ ಆಚರಿಸಿದರೂ ಸಹ ಎಲ್ಲ ಕಡೆ ಆಚರಣೆ ಯುಗಾದಿ ಎಂಬ ನಾಮದ ಬದಲು ವಿಭಿನ್ನ ನಾಮಗಳಿಂದ ಆಚರಿಸಲಾಗುತ್ತದೆ. ಮಹಾರಾಷ್ಟ್ರ, ಮಧ್ಯಪ್ರದೇಶ ರಾಜ್ಯಗಳಲ್ಲಿ, ದಾದ್ರಾ ಮತ್ತು ನಗರ ಹವೇಲಿ ಮತ್ತು ದಿಯು ಮತ್ತು ದಮನ್ ಕೇಂದ್ರಾಡಳಿತ ಪ್ರದೇಶಗಳಲ್ಲಿ ‘ಗುಡಿ ಪಾಡ್ವಾ' ಎಂಬ ಹೆಸರಿನಿಂದ ಯುಗಾದಿ ಹಬ್ಬವನ್ನು ಆಚರಿಸಿದರೆ, ಪಂಜಾಬ್‍ನಲ್ಲಿ ‘ಬೈಸಾಖಿ', ತಮಿಳುನಾಡಿನಲ್ಲಿ ‘ಪುತಾಂಡು', ರಾಜಸ್ಥಾನದಲ್ಲಿ ‘ಥಾಪನಾ' ಮತ್ತು ಕರ್ನಾಟಕದಲ್ಲಿ ‘ಯುಗಾದಿ’ ಎಂಬ ಹೆಸರಿನಿಂದ ಈ ಹಬ್ಬವನು ಆಚರಿಸಲಾಗುತ್ತದೆ.

ವಸಂತ ಋತುವಿನಲ್ಲಿ ಗಿಡಮರಗಳ ಮೇಲೆ ಹಸಿರು ಹೊದಿಕೆ, ಹೂವು, ಹಣ್ಣು ಕಾಯಿಗಳ ಸಂಪತ್ತು, ಹೂದೋಟಗಳಲ್ಲಿ ಉದ್ಯಾನವನಗಳಲ್ಲಿ ಬೇರೆ ಬೇರೆ ಪ್ರದೇಶಗಳಿಂದ ಬರುವ ವಲಸೆ ಪಕ್ಷಿಗಳ ಕಲರವ ನೋಡುವುದೇ ಮನಸ್ಸಿಗೆ ಮುದ ನೀಡುತ್ತದೆ. ಪ್ರಕೃತಿ ಶೋಬೆಯನ್ನು ಇಮ್ಮಡಿಗೊಳಿಸುವ ಈ ಋತುವನ್ನು  “ಋತುಗಳ ರಾಜ”ಎಂದು ಕರೆಯಲಾಗುತ್ತದೆ. 

ಕವಿಗಳಾದ ಬಿ.ಎಂ.ಶ್ರೀಕಂಠಯ್ಯ ನವರು ತಮ್ಮ ಕವಿತೆಯೊಂದರಲ್ಲಿ 'ವಸಂತ ಬಂದ ಋತುಗಳ ರಾಜ ತಾ ಬಂದ....' ಉಲ್ಲೇಖಿಸಿದಂತೆ ಕವಿಗಳಿಗೆ ಕವಿತೆ ಬರೆಯಲು ಸ್ಫೂರ್ತಿದಾಯಕವಾದ ಋತು ಈ ವಸಂತ ಋತು ಎನ್ನುವುರಲ್ಲಿ ಎರಡು ಮಾತಿಲ್ಲ.


-ವಿದ್ಯಾಶ್ರೀ ಹೊಸಮನಿ 

ಪ್ರಶಿಕ್ಷಣಾರ್ಥಿ, ವಾರ್ತಾ ಇಲಾಖೆ

ವಿಜಯಪುರ

ರಾಜ್ಯಾದ್ಯಂತ ಆಸಕ್ತರಿಗೆ ವಿಶೇಷ ಸೂಚನೆ:

ಯುವ ಪ್ರತಿಭೆಗಳು, ಹಿರಿ-ಕಿರಿ ಆಸಕ್ತ ಸಾಹಿತಿ, ಕವಿ, ಲೇಖಕರಿಗೆ ಈ ದಿವಸ ವೇದಿಕೆ ಕಲ್ಪಿಸುತ್ತಿದೆ. ಆಸಕ್ತರು ತಮ್ಮ ಸ್ವ ರಚಿತ ಲೇಖನ, ಕಥೆ, ಕವನ , ಶಾಲಾ ಕಾಲೇಜಿನ, ವಿಶ್ವವಿದ್ಯಾಲಯ ವರದಿ, ಹೋರಾಟಗಾರರ ಮನವಿ, ತಮ್ಮ  ಜಿಲ್ಲೆ, ಪಟ್ಟಣ, ತಾಲೂಕು, ಗ್ರಾಮಗಳಲ್ಲಿನ  ಸಮಸ್ಯೆಗಳು ಸೇರಿದಂತೆ ಇತರೆ ಸುದ್ದಿ ಹಾಗೂ ಜಾಹೀರಾತುಗಳನ್ನು ಪ್ರಕಟಿಸಲು ಇಂದೇ ಸಂಪರ್ಕಿಸಿರಿ.

ಸಂಪಾದಕರು ಈ ದಿವಸ ಕನ್ನಡ ದಿನ ಪತ್ರಿಕೆ ವ್ಯಾಟ್ಸಪ್ ಸಂಖ್ಯೆ : 7204279187 / 9900378892 ತಾವು ಟೈಪಿಸಿ eedivasa@gmail.com ಈ ಮೇಲ್ ಗೂ ಮೇಲ್ ಸೆಂಡ್ ಮಾಡಿದರೆ ಪ್ರಕಟಿಸಲಾಗುವುದು.



ಬೇವು ಬೆಲ್ಲ ಎರಡರ ಸಮಾಗಮವೇ ಬದುಕು


ನಮ್ಮಉತ್ತರ ಕರ್ನಾಟಕದ ಸಂಸ್ಕೃತಿಯೇ ಹಾಗೆ, ಪ್ರತಿಯೊಂದು ಆಚರಣೆಯನ್ನು ನಾನಾವಿಧವಾದ ಪ್ರಯೋಜನಗಳ ದೃಷ್ಟಿಯಲ್ಲಿ ವಿಮರ್ಶಿಸಿ ವಿಧಿಸಿರುತ್ತದೆ. ಈ ಆಚರಣೆಗಳು ಏನೇನು, ಯಾಕೆ ಆಚರಿಸುತ್ತೇವೆ ಎನ್ನುವುದು ನಮಗೆ ಗೊತ್ತಿಲ್ಲದಿರಬಹುದು , ಆದರೆ ಅದರ ಉಪಯೋಗವಿಲ್ಲ ಎಂದೇನಿಲ್ಲ. ಉದಾಹರಣೆಗೆ ಯುಗಾದಿಯ ಎಳ್ಳು-ಬೆಲ್ಲ , ಏಕಾದಶಿಯ ಉಪವಾಸ, ಧನುರ್ಮಾಸದ ಹುಗ್ಗಿ (ಪೊಂಗಲ್) ಹೀಗೆ ಎಲ್ಲವೂ ಆರೋಗ್ಯದ ದೃಷ್ಟಿಯಿಂದ ಆಯಾ ಕಾಲಕ್ಕೆ ಅತ್ಯುತ್ತಮ ದೀಪಾವಳಿಯ ಗೋಪೂಜೆ, ನವರಾತ್ರಿಯ ಗಜಾಶ್ವಾದಿಗಳ ಪೂಜೆಗಳು ಮನುಷ್ಯ ಮತ್ತು ಪ್ರಾಣಿಗಳ ನಡುವೆ ಬಾಂಧವ್ಯವನ್ನು ಧೃಡಗೊಳಿಸಲು ಸಹಾಯಕ. ಹೀಗೆ ಎಲ್ಲ ಆಚರಣೆಗಳೂ ಒಂದು ವೈಶಿಷ್ಟ್ಯಪೂರ್ಣವಾದ ಗಂಭೀರವಾದ ಅರ್ಥವನ್ನು ಹೊಂದಿವೆ.


ಇದರಂತೆ ನಮ್ಮ ನವವರ್ಷವಾದ ಯುಗಾದಿಯೂ ಒಂದು ವಿಶಿಷ್ಟವಾದ ಆಚರಣೆ. ಜನವರಿ ಒಂದರಂದು ಹೊಸವರ್ಷವೆನ್ನಲು ಬದಲಾಗುವುದು ಕ್ಯಾಲೆಂಡರ್ ಒಂದೇ. ಆದರೆ ಯುಗಾದಿಯಂದು ಹಾಗಲ್ಲ. ಪೂರ್ಣಪ್ರಕೃತಿಯು ಮಾಗಿಯ ಚಳಿಗೆ ನಿರಾಭರಣೆಯಾಗಿ ನಂತರದ ವಸಂತಕ್ಕೆ ಹಸಿರ ಸಿರಿಯ ಹೊದ್ದು ಅಲಂಕೃತಳಾಗುವ ಸಮಯ. ಮಾವಿನ ಚಿಗುರಿನ ತೋರಣ, ಕೋಗಿಲೆಯ ಪಂಚಮದ ದನಿಯ ಸುಪ್ರಭಾತ ಒಂದು ಹೊಸಪ್ರಪಂಚವನ್ನೇ ಸ್ವಾಗತಿಸುತ್ತದೆ. ಅಂತಹ ಯುಗಾದಿಯ ಸಮಯವಲ್ಲವೇ ಹೊಸವರ್ಷ.


ನಿಜವಾಗಿಯೂ ನೈಸರ್ಗಿಕ ವಾತಾವರಣವನ್ನು ಅನುಭವಿಸುವವರು, ಆರಾಧಿಸುವವರು ಹೊಸ ಚೈತನ್ಯದೊಂದಿಗೆ ಈ ಯುಗಾದಿಯನ್ನೇ ಹೊಸವರ್ಷವೆಂದು ಸ್ವಾಗತಿಸಲು ಉತ್ಸುಕನಾಗಿರುತ್ತಾನೆ. ಒಂದು ಸಂವತ್ಸರ ಚಕ್ರವು ಮುಗಿದು ಹೊಸ ವರ್ಷಪ್ರಾರಂಭವಾಗುವ ಸಮಯವೇ ಯುಗಾದಿ. ಹಾಗಾಗಿ ಯುಗಾದಿ ಹಬ್ಬವು ಸಂವತ್ಸರಾರಂಭ, ನವವರ್ಷಪ್ರತಿಪದಾ ಎಂಬ ಬೇರೆ ಬೇರೆ ಹೆಸರಿನಿಂದ ಕರೆಯಲ್ಪಡುತ್ತದೆ.


ಪ್ರತಿ ಮನೆಯನ್ನೂ ತಳಿರು ತೋರಣಗಳಿಂದ ಅಲಂಕರಿಸುತ್ತಾರೆ. ಪ್ರತಿಯೊಬ್ಬರು ಅಭ್ಯಂಜನವನ್ನು ಮಾಡಿಕೊಳ್ಳಬೇಕು. ವಿಪ್ರರೊಡನೆ ಪೂಜೆಗಳನ್ನು ಉತ್ಸವಗಳನ್ಮು ಆಚರಿಸುತ್ತಾರೆ. ದೇವ- ಗುರುಗಳಿಗೆ ನೂತನ ವಸ್ತ್ರಾದಿಗಳನ್ನು ಸಮರ್ಪಿಸುವುದರ ಜೊತೆಗೆ ಸ್ತ್ರೀ-ಮಕ್ಕಳಾದಿಯಾಗಿ ಎಲ್ಲರೂ ಹೊಸ ವಸ್ತ್ರಗಳನ್ನು ಧರಿಸುತ್ತಾರೆ. ನಂತರ ತಿಥಿ ವಾರ ನಕ್ಷತ್ರ ಯೋಗ ಕರಣಗಳೆಂಬ ಪಂಚ ಅಂಶಗಳನ್ನೊಳಗೊಂಡ ಪಂಚಾಂಗವನ್ನು ಪೂಜಿಸಿ ವರ್ಷಫಲವನ್ನು ಶ್ರವಣ ಮಾಡಬೇಕು ಎನ್ನುವುದೇ ಇದರ ತಾತ್ಪರ್ಯ.


ಇದರ ಜೊತೆಗೆ ಬೇವುಬೆಲ್ಲದ ಸೇವನೆ ಎಲ್ಲರಿಗೂ ತಿಳಿದಿರುವ ಸಂಪ್ರದಾಯವೇ ಆಗಿದೆ. ಬೇವಿನ ಎಲೆಯು ನಮ್ಮ ದೇಹಕ್ಕೆ ಬಿಸಿಲಿನ ವೇಗವನ್ನು ತಡೆಯುವ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ. ಬೆಲ್ಲವೂ ಆರೋಗ್ಯದಾಯಕ'. ಇಂತಹ ಅತ್ಯುತ್ತಮ ಬೇವು-ಬೆಲ್ಲ ನಮ್ಮ ಆರೋಗ್ಯದ ದೃಷ್ಟಿಯಿಂದಷ್ಟೇ ಅಲ್ಲದೆ ಮಾನಸಿಕವಾಗಿ ಸುಖದುಃಖಗಳನ್ನು ಸಮಾನವಾಗಿ ಸ್ವೀಕರಿಸಬೇಕೆಂದು ತಿಳಿಸುತ್ತದೆ. ಏರಿಳಿತದ ಜೀವನದಲ್ಲಿ "ಸುಖದುಃಖ"  ಎಂಬ ಗೀತವಾಕ್ಯದಂತೆ ಬದುಕಬೇಕು ಎನ್ನುವುದರ ಮೂಲಕವೇ ಈ ಯುಗಾದಿ ಹಬ್ಬವನ್ನು ಆಚರಿಸುತ್ತೇವೆ, ಹಾಗೂ ನಿಮ್ಮ ಬದುಕು ಬೇವು ಬೆಲ್ಲದಂತೆ ಸುಖ-ದುಃಖಗಳ ಆಗರ  ಸುಖ ಬಂದಾಗ ಹಿಗ್ಗದೆ, ದುಃಖ ಬಂದಾಗ ಕುಗ್ಗದೆ ಜೀವನ ನಡೆಸಿ ಈ ಯುಗಾದಿ ನಿಮ್ಮೆಲ್ಲಾ ಕಹಿ ನೋವುಗಳನೆಲ್ಲ ಮರೆಯಾಗಿಸಲಿ ಹೊಸವರ್ಷದ ಶುಭಾಶಯಗಳು.

ಶಿಲ್ಪಾ ಚವ್ಹಾಣ

ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯ ವಿಜಯಪುರ


ರಾಜ್ಯಾದ್ಯಂತ ಆಸಕ್ತರಿಗೆ ವಿಶೇಷ ಸೂಚನೆ:

ಯುವ ಪ್ರತಿಭೆಗಳು, ಹಿರಿ-ಕಿರಿ ಆಸಕ್ತ ಸಾಹಿತಿ, ಕವಿ, ಲೇಖಕರಿಗೆ ಈ ದಿವಸ ವೇದಿಕೆ ಕಲ್ಪಿಸುತ್ತಿದೆ. ಆಸಕ್ತರು ತಮ್ಮ ಸ್ವ ರಚಿತ ಲೇಖನ, ಕಥೆ, ಕವನ , ಶಾಲಾ ಕಾಲೇಜಿನ, ವಿಶ್ವವಿದ್ಯಾಲಯ ವರದಿ, ಹೋರಾಟಗಾರರ ಮನವಿ, ತಮ್ಮ  ಜಿಲ್ಲೆ, ಪಟ್ಟಣ, ತಾಲೂಕು, ಗ್ರಾಮಗಳಲ್ಲಿನ  ಸಮಸ್ಯೆಗಳು ಸೇರಿದಂತೆ ಇತರೆ ಸುದ್ದಿ ಹಾಗೂ ಜಾಹೀರಾತುಗಳನ್ನು ಪ್ರಕಟಿಸಲು ಇಂದೇ ಸಂಪರ್ಕಿಸಿರಿ.

ಸಂಪಾದಕರು ಈ ದಿವಸ ಕನ್ನಡ ದಿನ ಪತ್ರಿಕೆ ವ್ಯಾಟ್ಸಪ್ ಸಂಖ್ಯೆ : 7204279187 / 9900378892 ತಾವು ಟೈಪಿಸಿ eedivasa@gmail.com ಈ ಮೇಲ್ ಗೂ ಮೇಲ್ ಸೆಂಡ್ ಮಾಡಿದರೆ ಪ್ರಕಟಿಸಲಾಗುವುದು.


Wednesday, March 26, 2025

ನಿತ್ಯ ನೂತನವಾಗಿರುವ ರಂಗಭೂಮಿಯ ಸೊಬಗು..!

 

ರಂಗಭೂಮಿ ಇಂದಿಗೂ ತನ್ನ ಗತÀ ವೈಭವವನ್ನು ಕಾಪಾಡಿಕೊಂಡು ಕಲೆ, ನೃತ್ಯ, ಸಾಹಿತ್ಯದ ಹೊನಲನ್ನು ಪ್ರತಿಬಿಂಬಿಸುತ್ತಿದೆ.

ಕಲಿಕೆ, ದುಡಿಮೆ, ಗಳಿಕೆ, ಕೆಲಸದ ಒತ್ತಡ, ಸಂಬಂಧಗಳ ಹಿತದ ಜವಾಬ್ದಾರಿ ಹೀಗೆ ಹತ್ತು ಹಲವು ದಿನ ನಿತ್ಯಗಳ ಜಂಜಾಟದಲ್ಲಿ ಮನರಂಜನೆ ಎಂಬ ಅಸ್ತ್ರ ಮನಸ್ಸು, ಮಸ್ತಕಕ್ಕೆ ವಿಶ್ರಾಂತಿ ನೀಡುತ್ತದೆ. ಹಾಡು ಆಲಿಸುವುದು, ಕಥೆ, ಕಾದಂಬರಿ ಓದುವುದು, ಆಟವಾಡುವುದು, ಪ್ರವಾಸ ಹೋಗುವುದು,  ಸ್ಪೋಟ್ರ್ಸ್ರ, ಸಿನಿಮಾ, ರೀಲ್ಸ್ ವೀಕ್ಷಣೆಗಳಂತಹ ಮನರಂಜನೆಗಳು ಒತ್ತಡ ತಗ್ಗಿಸಿ ದಿನ ನಿತ್ಯ ಜಂಜಾಟದೊಂದಿಗೆ ಮನಸ್ಸಿಗೆ ಮದ ನೀಡಿ ಜೀವನದ ಬಂಡಿ ಮುನ್ನಡೆಸುವ ಅಡಿಪಾಯವಾಗಿವೆ. 

ಸೋಟ್ರ್ಸ್, ರೀಲ್ಸ್, ಸಿನಿಮಾದಂತಹ  ತಂತ್ರಜ್ಞಾನ ಮಾಧ್ಯಮಗಳು ಅವಿಷ್ಕಾರ ಗೊಳ್ಳುವ ಮುನ್ನ  ಮನರಂಜನೆಗಾಗಿ ರಂಗಭೂಮಿ, ವೃತ್ತಿಗಾಗಿ ರಂಗಭೂಮಿ ಎಂದು ಈ ರಂಗ ಪರದೆಯೂ ಜನರನ್ನು ಸೆಳೆಯುತ್ತಿತ್ತು. 

ರಾಮಾಯಣ, ಮಹಾಭಾರತ, ಸತ್ಯ ಹರಿಶ್ಚಂದ್ರ, ಸಮಾಜದಲ್ಲಿನ ದೌರ್ಜನ್ಯ, ತೊಡಕುಗಳಂತಹ ಸಾಂಸ್ಕøತಿ ಹಾಗೂ ಸಾಮಾಜಿಕ  ನಾಟಕಗಳಲ್ಲಿ ಸಿದ್ದಿಸಾಧಿಸಿ ಕಲಾವಿದರು ರಂಗಭೂಮಿಯಲ್ಲಿ ಪ್ರದರ್ಶನ ನೀಡುತ್ತಾ ಮನುರಂಜನೆಯೊಂದಿಗೆ ಸಂದೇಶಗಳ ಬುತ್ತಿಯನ್ನು ತಲೆಯಲ್ಲಿ ಮೆತ್ತಿ ಜಾಗೃತಿ ಮೂಡಿಸುವ ಕಾರ್ಯ ನಡೆಸಲು ಸಹಕಾರಿಯಾಗುತ್ತಿದ್ದವು. 

ರಂಗ ಪರದೆಯ ಮೇಲೆ ವೇಷ ತೊಟ್ಟು ನಟಿಸುವ ಕಲಾವಿದರ ಹಾವಭಾವ ನಟನೆ ಎದುರಿಗಿದ್ದ ವಿಕ್ಷಕರ ಗಮನ ಬೇರೆಲ್ಲೂ ಜಾರದೆ ಮಂತ್ರಮುಗ್ದರನ್ನಾಗಿ ಕೂರಿಸಿದರೇ ಅವರ ಉಡುಗೆ-ತೊಡುಗೆಗಳು, ಹಿನ್ನಲೇ ಧ್ವನಿ ಆ ನಾಟಕಕ್ಕೆ ಜೀವಕಳೆ ತುಂಬುತ್ತಿತ್ತು. 

ನಟನೆಯ ಹವ್ಯಾಸದಿಂದಲೋ, ಬದುಕು ಕಟ್ಟಿಕೊಳ್ಳಲು ಇದನ್ನೇ ವೃತ್ತಿಯನ್ನಾಗಿ ಮಾಡಿಕೊಂಡು ರಂಗಭೂಮಿ ಪ್ರವೇಶಿಸಿದ್ದ ಅದೆμÉ್ಟೂೀ ಕಲಾವಿದರು ತಮ್ಮ ನಟನಾ ಚಾತುರ್ಯದಿಂದ /ಪ್ರತಿಭೆಯಿಂದ   ಪ್ರಖ್ಯಾತಿ ಗಳಿಸಿ, ಸಾಧನೆಗೆ ಪ್ರತಿ ಪ್ರಶಸ್ತಿಯನ್ನು ಬಾಚಿಕೊಂಡಿದ್ದಾರೆ. 

ಸಿನಿಮಾ ಎಂಬ ಜಗಮಗಿಸುವ ಲೋಕಕ್ಕೆ ಕಾಲಿಟ್ಟಾಗ ರಂಗಭೂಮಿ ಕೊಂಡಿ ಕಳಚದೇ  ಜನಮನದಲ್ಲಿ ತನ್ನದೇ ಒಂದು ಛಾಪು ಮೂಡಿಸಿ ಈಗಲ್ಲೂ ಪ್ರಸ್ತುತದಲ್ಲಿದೆ. ಇದಕ್ಕೆ ಕಾರಣ ನೋಡುಗರ ಹವ್ಯಾಸ ಮತ್ತು ಕಲಾವಿದರ ಆಸಕ್ತಿ ಇದರೊಂದಿಗೆ ಯುವ ಪೀಳಿಗೆಗೆ ರಂಗಭೂಮಿಯ ಬಗ್ಗೆ ಪರಿಚಯಿಸಲು ಪ್ರತಿ ವರ್ಷ ವಿಶ್ವಾದ್ಯಂತ ರಂಗಭೂಮಿ ದಿನ ಆಚರಿಸಲಾಗುತ್ತಿದೆ. 

ಪ್ರತಿ ವರ್ಷ ಮಾರ್ಚ್ 27ರಂದು ವಿಶ್ವ ರಂಗಭೂಮಿ ದಿನಾಚರಣೆಯನ್ನು ವಿಶ್ವಾದ್ಯಂತ ಭಾಷೆ ಭೇದ, ಲಿಂಗ ಭೇದ ಆಚರಣೆ ಮಾಡುತ್ತಾ.. ರಂಗಭೂಮಮಿಯ ರಂಗು ಮಾಸದೇ ಜೀವಂತ ಉಳಿವಿಗೆ ಕಾರಣೀಕರ್ತವಾಗಿದೆ.  

ಅμÉ್ಟೀ ಅಲ್ಲದೆ ಸಿನಿಮಾ  ಎಂಟ್ರಿ ಕೊಡುವ ಮುನ್ನ ಅನೇಕ ನಟ-ನಟಿಯರು ನಟನೆಯ ಸೊಬಗನ್ನು ಹೊಂದಲು ರಂಗಭೂಮಿಯನ್ನು ಮೊದಲು ಆದ್ಯತೆ ನೀಡಿರುವುದನ್ನು ನಾವು ಗಮನಿಸಬಹುದು. 

ಸಿನಿಮಾ ಕಲಾವಿದರೊಂದಿಗೆ ರಂಗಭೂಮಿ ನಂಟು: ಶಾರುಕ್ ಖಾನ್, ಗಿರೀಶ್ ಕಾರ್ನಾಡ್, ಓಂ ಪುರಿ, ಪ್ರಕಾಶ ರಾಜ್, ಬೊಮನ್ ಇರಾನಿ, ಡಾ.ರಾಜಕುಮಾರ, ಶಬಾನಾ ಆಜ್ಮಿ, ಶಂಕರ ನಾಗ್, ಗುಬ್ಬಿ ವೀರಣ್ಣ, ಮಂಡ್ಯ ರಮೇಶ ಸಂಚಾರಿ ವಿಜಯರಂತಹ ಘಟಾನುಘಟಿ ಧಿಗ್ಗಜರು ರಂಗಭೂಮಿಯಲ್ಲಿ ನಟಿಸಿ ಸಿನಿಮಾ ರಂಗಕ್ಕೆ ಪಾದಾರ್ಪಣೆ ಮಾಡಿದವರು. 

ಹಿನ್ನಲೇ: ಅಂತರಾಷ್ಟ್ರೀಯ ರಂಗಭೂಮಿ ಸಂಸ್ಥೆಯೂ 1962ರಿಂದ ವಿಶ್ವ ರಂಗಭೂಮಿ ದಿನಾಚರಣೆಯನ್ನು ಮಾರ್ಚ್ 27ರಂದು ಆಚರಿಸಲು ಪ್ರಾರಂಭಿಸಿತು. ಇದರ ಬೆನ್ನಲೇ ಪ್ರತಿ ವರ್ಷ ರಂಗಭೂಮಿ ಮತ್ತು ಶಾಂತಿಯ ಸಂಸ್ಕøತಿ ಎಂಬ ಧ್ಯೇಯ ವಾಕ್ಯದೊಂದಿಗೆ ವಿಶ್ವ ರಂಗಭೂಮಿ ದಿನಾಚರಣೆಯನ್ನು ಆಚರಿಸಲಾಗುವುದು. 

ಯಾವುದೇ ಕಟ್, ಎಡಿಟ್  ಇಲ್ಲದೇ ಒಂದೇ ಶಾಟ್ ನಲ್ಲಿ ಸ್ಕೀನ್ ಪ್ಲೆ ಮಾಡಿ ತಮ್ಮ ನಟನಾ ಕಲೆಯಿಂದ  ವೀಕ್ಷಕರ ಮನಮುಟ್ಟುವಂತೆ ವಿಷಯ ಹೂರಣವನ್ನು ಉಣಬಡಿಸುವ ರಂಗಭೂಮಿ ಕಲಾವಿದರ ನಟನೆ ಯಾವ ಆಧುನಿಕ ತಂತ್ರಜ್ಞಾನ ಗಳಿಂದ ಮಾಸದೆ ನಿತ್ಯ ನೂತನವಾಗಿರಲಿ ಎಂಬುದೆ ನಮ್ಮ ಆಶಯ. 

- ವಿದ್ಯಾಶ್ರೀ ಹೊಸಮನಿ 

ಪ್ರಶಿಕ್ಷಣಾರ್ಥಿ , ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ

ವಿಜಯಪುರ


27-03-2025 EE DIVASA KANNADA DAILY NEWS PAPER