Tuesday, June 9, 2020
Monday, June 8, 2020
ಬಿಕ್ಕಳಿಸಿದ ಅವ್ವ
ನವಮಾಸ ಹೊತ್ತು
ರಕ್ತ ಮಾಂಸ ತುಂಬಿ
ಆಕಾರ ಕೊಟ್ಟ
ಗರ್ಭಕೆ ಕಪ್ಪನೆ
ಕಾರ್ಮೊಡ ಕವಿದು
ಬದುಕಿನ ಕ್ಷಣ ಕ್ಷಣವು
ದುರಗಮನವಾಗಿ
ಸಂಚಾರಿಸುತ್ತಿರಲು
ಬೇಡಾ ತಾಯಿ
ಸಾಕು ಮಾಡು
ಗರ್ಭಧರಿಸಿ
ಧರೆಯನ್ನು ಕಾಣಿಸುವದು
ಹಾಲುಣಿಸುವಾಗ
ಕಚ್ಚಿಕಚ್ಚಿ ಹೀರಿದ ಮೊಲೆ ತೊಟ್ಟು
ಆಕಾಶಕ್ಕೆ ಬಾಯತೆರೆದು
ನಿಂತರು ಹಸಿದ ಹೊಟ್ಟೆಗೆ
ಮಾಂಸದ ಹಾಲುಣಿಸಿ
ನಗುವ ಹಾಗೆ ಮಾಡಿದ
ನಿನಗೆ ಇವತ್ತು ಬೀದಿಗೆ
ತಂದಿಕ್ಕಿದ್ದಾರೆ ಮರುಳರು
ನೆತ್ತಿಯ ಬಡಿತ ಹೆಚ್ಚಸಬಾರದೆಂದು
ಗಂಧ ಮಿಶ್ರಿತ ದ್ರವ್ಯವನ್ನು
ಸವರಿ ಮುದ್ದಾಗಿ ತಿಡಿದ
ನಿನ್ನ ಕೊಮಲ ಬೆರಳಿಗೆ
ಹಾದಿ ಬೀದಿ ಕಸಗುಡಿಸಲು
ಹಚ್ಚಿ ಮೆರೆಯುತ್ತಿದ್ದಾರೆ
ಸಾಕು ತಾಯಿ ಧರೆಗೆ ಎಂದು
ಕರೆಯಬೇಡ
ಮೆತ್ತನೆಯ ಹಾಸಿಗೆ ಹೊದಿಕೆ ಮಾಡಿ ಮಲಗಲೆಂದು
ಕೈಯನ್ನೆ ದಿಂಬವಾಗಿಸಿ ಪಕ್ಕಕ್ಕೆ ಜಾರಿ ನಿದ್ರೆಮಾಡಿದ ನಿನಗೆ ಸ್ವಾರ್ಥ ತುಂಬಿದ
ಮನುಜ ಹುಚ್ಚಿ ಪಟ್ಟಕಟ್ಟಿ
ರೈಲ್ವೆ ಬಸ್ಸಸ್ಟಾಂಡಗಳಲ್ಲಿ
ದಿನ ನಿತ್ಯ ಮಲಗುವಂತೆ
ಮಾಡಿ ಹೆಂಡರ ಮಕ್ಕಳಜೊತೆ
ಕುರ್ಲಾನ ಹಾಸಿಗೆಯಲ್ಲಿ
ಮೂಢತ್ವದಿಂದ ಕಾಲು ಚಾಚಿ
ಮಲಗಿದ್ದಾನೆ ತಾಯೇ
ಹಾಲುಂಡ ಎದೆಗೆ
ಚೂರಿಇರಿಸಿದ ಮನುಷ್ಯ
ಇನ್ನೆಂದು ಬದಲಾದಾನು
ದಯವಿಟ್ಟು ಬಿಕ್ಕಳಿಸಬೇಡ
ಮತ್ತೆ ಮರುಕಳಿಸುತ್ತೆ
ಬಿಕ್ಕಳಿಕೆಯ ನಾದ
ಹೊರಬರುವ ಕಾಲ
ಡಾ.ಸುಜಾತಾ.ಸಿ
ರಾಷ್ಟ್ರೀಯ ಅಪರಾಧ ನಿಯಂತ್ರಣ ಮಂಡಳಿಗೇ ನೇಮಕ
ಪೊಲೀಸ್ ಇಲಾಖೆ ಅಧಿಕಾರಿ ಸಿಬ್ಬಂದಿಗಳಿಗೆ ಇಂದಿನಿಂದ ಜಿಲ್ಲಾ ಪ್ರಮಾಣಿತ ಕಾರ್ಯಾಚರಣೆ ವಿಧಾನ ಜಾರಿ -ಎಸ್.ಪಿ. ಅನುಪಮ್ ಅಗರವಾಲ್
ಮೈಕ್ರೋಪೈನಾನ್ಸ ಸಂಸ್ಥೆ ವತಿಯಿಂದ ಪೋಲಿಸ್ ಠಾಣೆಯ ಸಿಬ್ಬಂದಿಗಳಿಗೆ ಮಾಸ್ಕ ಮತ್ತು ಸ್ಯಾನಿಟೈಸರ್ ವಿತರಣೆ
Sunday, June 7, 2020
ಬಸವನಬಾಗೇವಾಡಿ ತಾಲೂಕಿಗೂ ಬಂತು ಕೊರೋನಾ
ಈ ದಿವಸ ವಾರ್ತೆ
ಬಸವನಬಾಗೇವಾಡಿ: ತಾಲೂಕಿನಲ್ಲಿ ಪಾಸಿಟಿವ್ ಪ್ರಕರಣಗಳು ಕಂಡು ಬಂದ ಪ್ರದೇಶಗಳನ್ನು ಕಂಟೇನ್ಮೆಂಟ್ ಝೋನ್ ಪ್ರದೇಶಗಳನ್ನಾಗಿ ನೋಟಿಪಿಕೇಶನ್ ಮಾಡಲಾಗಿದೆ ಇದರಿಂದಾಗಿ ಅಲ್ಲಿನ ಪ್ರದೇಶಗಳಿಗೆ ಸಾರ್ವಜನಿಕ ಪ್ರವೇಶವನ್ನು ನಿರ್ಬಂಧಿಸಲಾಗಿದೆ.
ಪಟ್ಟಣದ ಪುರಸಭೆ ವ್ಯಾಪ್ತಿಯ ಜಾಲಿಹಾಳ ತಾಂಡಾ, ಬಳ್ಳಾವೂರ ತಾಂಡಾ, ತಾಲೂಕಿನ ಕರಭಂಟನಾಳ ತಾಂಡಾ, ಇಂಗಳೇಶ್ವರ ತಾಂಡಾ, ಬ್ಯಾಕೋಡ ಪ್ರದೇಶಗಳು ಕಂಟೇನ್ಮೆಂಟ್ ಝೋನ್ ಪ್ರದೇಶಗಳಾಗಿವೆ
ಇದೂವರೆಗೂ ಇಂಗಳೇಶ್ವರವ ತಾಂಡಾದಲ್ಲಿ,7 ಬ್ಯಾಕೋಡದಲ್ಲಿ1, ಜಾಲಿಹಾಳ ತಾಂಡಾದಲ್ಲಿ 1, ಬೂದಿಹಾಳದಲ್ಲಿ 1, ಸಂಕನಾಳದಲ್ಲಿ 2, ಬಳ್ಳಾವೂರ ತಾಂಡಾದಲ್ಲಿ 4, ಉಪ್ಪಲದಿನ್ನಿಯಲ್ಲಿ 2, ನಾಗವಾಡದಲ್ಲಿ 1, ಪಾಸಿಟಿವ್ ಪ್ರಕರಣಗಳು ಕಂಡು ಬಂದಿವೆ, ಈಗಾಗಲೇ ಸಂಕನಾಳದಲ್ಲಿ 14 ದಿನ ಅವದಿ ಮುಗಿದ ಕಂಟೇನ್ಮೆಂಟ್ ಝೋನ್ ಪ್ರದೇಶಗಳಲ್ಲಿರುವ ಜನರ ಆರೋಗ್ಯದ ಮೇಲೆ ನಮ್ಮ ಸಿಬ್ಬಂದಿಗಳು ನಿಗಾ ವಹಿಸಿದ್ದಾರೆ,
ಸಣ್ಣ ಪುಟ್ಟ ಆರೋಗ್ಯ ಸಮಸ್ಯ ಕಂಡು ಬಂದರೆ ನಮ್ಮ ಸಿಬ್ಬಂದಿಗಳು ಅಲ್ಲಿಯೇ ಚಿಕಿತ್ಸೆ ನೀಡುತ್ತಾರೆ,14 ದಿನಗಳ ಕಾಲ ಈ ಪ್ರದೇಶಗಳಲ್ಲಿ ನಮ್ಮ ಸಿಬ್ಬಂದಿಗಳು ಜನರು ಆರೋಗ್ಯದ ಕುರಿತು ಸಮೀಕ್ಷೇ ಮಾಡುತ್ತಾರೆ, ಇನ್ನೂ ಅಖಂಡ ತಾಲೂಕಿನಲ್ಲಿ 300-400
ಜನರ ಗಂಟಲು ದ್ರವ ಪರಿಕ್ಷೇ ವರದಿ ಬರಬೇಕಾಗಿದೆ ಎಂದು ತಾಲೂಕಾ ವೈದ್ಯಾಧಿಕಾರಿ ಡಾ, ಎಸ್ ಎಸ್ ಒತಗೇರಿ ತಿಳಿಸಿದರು.
ಕಂಟೇನ್ಮೆಂಟ್ ಝೋನ್ ಪ್ರದೇಶಗಳ ಸಂಪೂರ್ಣ ಲಾಕ್ ಡೌನ್ ಇರಲಿದೆ ಅಲ್ಲಿನ ಜನರು ತಮಗೆ ಅಗತ್ಯವಿರುವ ದಿನಸಿ ತರಕಾರಿ ಸೇರಿದಂತೆ ವಸ್ತುಗಳನ್ನು ಹಣ ನೀಡಿ ಪಂಚಾಯಿತಿ ಸಿಬ್ಬಂದಿಗಳಿಂದ ಪಡೆಯಬಹುದಾಗಿದೆ ಜನರು ಯಾವುದೇ ಕಾರಣಕ್ಕೂ ಮನೆಯಿಂದ ಹೂರಬಾರದಂತೆ ಸೂಚಿಸಲಾಗಿದೆ ಆರೋಗ್ಯ ಇಲಾಖೆ ಸಿಬ್ಬಂದಿಗಳು ಅಲ್ಲಿನ ಜನರ ಆರೋಗ್ಯದ ಕುರಿತು ನಿಗಾ ವಹಿಸುವರು ಎಂದು ತಹಶೀಲ್ದಾರ ಎಂ,ಎನ್ ಬಳಗಾರ ತಿಳಿಸಿದರು.





