ನವಮಾಸ ಹೊತ್ತು
ರಕ್ತ ಮಾಂಸ ತುಂಬಿ
ಆಕಾರ ಕೊಟ್ಟ
ಗರ್ಭಕೆ ಕಪ್ಪನೆ
ಕಾರ್ಮೊಡ ಕವಿದು
ಬದುಕಿನ ಕ್ಷಣ ಕ್ಷಣವು
ದುರಗಮನವಾಗಿ
ಸಂಚಾರಿಸುತ್ತಿರಲು
ಬೇಡಾ ತಾಯಿ
ಸಾಕು ಮಾಡು
ಗರ್ಭಧರಿಸಿ
ಧರೆಯನ್ನು ಕಾಣಿಸುವದು
ಹಾಲುಣಿಸುವಾಗ
ಕಚ್ಚಿಕಚ್ಚಿ ಹೀರಿದ ಮೊಲೆ ತೊಟ್ಟು
ಆಕಾಶಕ್ಕೆ ಬಾಯತೆರೆದು
ನಿಂತರು ಹಸಿದ ಹೊಟ್ಟೆಗೆ
ಮಾಂಸದ ಹಾಲುಣಿಸಿ
ನಗುವ ಹಾಗೆ ಮಾಡಿದ
ನಿನಗೆ ಇವತ್ತು ಬೀದಿಗೆ
ತಂದಿಕ್ಕಿದ್ದಾರೆ ಮರುಳರು
ನೆತ್ತಿಯ ಬಡಿತ ಹೆಚ್ಚಸಬಾರದೆಂದು
ಗಂಧ ಮಿಶ್ರಿತ ದ್ರವ್ಯವನ್ನು
ಸವರಿ ಮುದ್ದಾಗಿ ತಿಡಿದ
ನಿನ್ನ ಕೊಮಲ ಬೆರಳಿಗೆ
ಹಾದಿ ಬೀದಿ ಕಸಗುಡಿಸಲು
ಹಚ್ಚಿ ಮೆರೆಯುತ್ತಿದ್ದಾರೆ
ಸಾಕು ತಾಯಿ ಧರೆಗೆ ಎಂದು
ಕರೆಯಬೇಡ
ಮೆತ್ತನೆಯ ಹಾಸಿಗೆ ಹೊದಿಕೆ ಮಾಡಿ ಮಲಗಲೆಂದು
ಕೈಯನ್ನೆ ದಿಂಬವಾಗಿಸಿ ಪಕ್ಕಕ್ಕೆ ಜಾರಿ ನಿದ್ರೆಮಾಡಿದ ನಿನಗೆ ಸ್ವಾರ್ಥ ತುಂಬಿದ
ಮನುಜ ಹುಚ್ಚಿ ಪಟ್ಟಕಟ್ಟಿ
ರೈಲ್ವೆ ಬಸ್ಸಸ್ಟಾಂಡಗಳಲ್ಲಿ
ದಿನ ನಿತ್ಯ ಮಲಗುವಂತೆ
ಮಾಡಿ ಹೆಂಡರ ಮಕ್ಕಳಜೊತೆ
ಕುರ್ಲಾನ ಹಾಸಿಗೆಯಲ್ಲಿ
ಮೂಢತ್ವದಿಂದ ಕಾಲು ಚಾಚಿ
ಮಲಗಿದ್ದಾನೆ ತಾಯೇ
ಹಾಲುಂಡ ಎದೆಗೆ
ಚೂರಿಇರಿಸಿದ ಮನುಷ್ಯ
ಇನ್ನೆಂದು ಬದಲಾದಾನು
ದಯವಿಟ್ಟು ಬಿಕ್ಕಳಿಸಬೇಡ
ಮತ್ತೆ ಮರುಕಳಿಸುತ್ತೆ
ಬಿಕ್ಕಳಿಕೆಯ ನಾದ
ಹೊರಬರುವ ಕಾಲ
ಡಾ.ಸುಜಾತಾ.ಸಿ
👌🙏
ReplyDelete