Wednesday, August 7, 2024
ರಾಜ್ಯದಾದ್ಯಂತ ಅನಿರ್ದಿಷ್ಟ ಕಾಲಾವಧಿಗೆ ಮುಷ್ಕರಕ್ಕೆ ನಿರ್ಧಾರ ಶಿಕ್ಷಕರ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಜಿಲ್ಲಾ ಶಿಕ್ಷಕರ ಸಂಘದಿ0ದ ಮನವಿ
ವಿಜಯಪುರ : ಶಿಕ್ಷಕರ ಹಲವು ಬೇಡಿಕೆಗಳ ಈಡೇರಿಕೆಗಾಗಿ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಜಿಲ್ಲಾ ಘಟಕದಿಂದ ಇಂದು ವಿಜಯಪುರ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ಶಿಕ್ಷಕರ ವಿವಿಧ ಬೇಡಿಕೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಕ್ರಮ ವಹಿಸುವಂತೆ ಅಪರ ಜಿಲ್ಲಾಧಿಕಾರಿಗಳಿಗೆ ಹಾಗೂ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಮತ್ತು ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕರಿಗೆ ಸಂಘದ ಜಿಲ್ಲಾಧ್ಯಕ್ಷರಾದ ಜಿ.ಎಸ್. ಬೆವನೂರ ಇವರ ನೇತೃತ್ವದಲ್ಲಿ ಮನವಿ ಸಲ್ಲಿಸಿ, ದಿನಾಂಕ : 12-08-2024 ರಂದು ಬೆಂಗಳೂರಿನಲ್ಲಿ ಬೃಹತ್ ಪ್ರತಿಭಟನೆಯನ್ನು ರಾಜ್ಯದ ಸಮಸ್ತ ಶಿಕ್ಷಕರು ಕೈಗೊಳ್ಳುವ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ಇದಕ್ಕೆ ಸರಕಾರ ಸಕರಾತ್ಮಕವಾಗಿ ಸ್ಪಂಧಿಸದಿದ್ದಲ್ಲಿ ರಾಜ್ಯಾದ್ಯಂತ PSಖಿ ಶಿಕ್ಷಕರು ಶಾಲಾ ಕರ್ತವ್ಯಕ್ಕೆ ಗೈರು ಹಾಜರಾಗುವ ಮೂಲಕ ಅನಿರ್ಧಿಷ್ಟ ಮುಷ್ಕರ ಕೈಗೊಳ್ಳಲಾಗುವುದು ಎಂದು ಅವರು ಎಚ್ಚರಿಸಿದ್ದಾರೆ.
2017 ರವರೆಗೆ ನೇಮಕವಾದ ಶಿಕ್ಷಕರನ್ನು 1 ರಿಂದ 7ಕ್ಕೆ ನೇಮಕವಾದ ಶಿಕ್ಷಕರೆಂದು ಪರಿಗಣಿಸಿ, ಉಲ್ಲೇಖ (1)ರ ಹೊಸ ವೃಂದ ಮತ್ತು ನೇಮಕಾತಿ ನಿಯಮಗಳು, 2017ರ ನಂತರ ನೇಮಕವಾದ ಶಿಕ್ಷಕರಿಗೆ ಅನ್ವಯಿಸಬೇಕು ಹಾಗೂ ಯಾವುದೇ ಕಾರಣಕ್ಕೂ 2016ಕ್ಕಿಂತ ಮೊದಲು ನೇಮಕಾತಿಯಾದವರಿಗೆ ಪೂರ್ವಾನ್ವಯಗೊಳಿಸಬಾರದು ಹಾಗೂ ಪದವಿ ಪೂರೈಸಿದ ಎಲ್ಲರಿಗೂ ಸೇವಾ ಜೇಷ್ಠತೆಯೊಂದಿಗೆ “ಪದವೀಧರ ಶಿಕ್ಷಕರೆಂದು” ಪದನಾಮೀಕರಿಸುವುದು. ವೃಂದ ಮತ್ತು ನೇಮಕಾತಿ ನಿಯಮಗಳು 2016 ಕ್ಕಿಂತ ಮುಂಚೆ ನೇಮಕಾತಿ ಹೊಂದಿದ ಶಿಕ್ಷಕರಿಗೆ ಅನ್ವಯವಾಗುವುದಿಲ್ಲ ಎಂದು ಕಾರ್ಯಾದೇಶ ಹೊರಡಿಸಿ, ಮೂಲತ: 1-7/8 ಕ್ಕೆ ನೇಮಕ ಹೊಂದಿದವರನ್ನು PSಖಿ ಎಂದು ಪದನಾಮ ಮಾಡಿ 1-5 ಕ್ಕೆ ಸೀಮಿತಗೊಳಿಸಿರುವುದನ್ನು ಹಿಂಪಡೆಯಬೇಕು ಎಂದು ಅವರು ಮನವಿ ಮಾಡಿಕೊಂಡಿದ್ದಾರೆ.
ಅರ್ಹ ವಿದ್ಯಾರ್ಹತೆ ಪೂರೈಸಿದ 2016ಕ್ಕಿಂತ ಮೊದಲು ನೇಮಕಾತಿಯಾದ ಎಲ್ಲಾ 1 ರಿಂದ 8ನೇ ತರಗತಿಗೆ ಪ್ರಾಥಮಿಕ ಶಾಲಾ ಶಿಕ್ಷಕರ ಸಂಖ್ಯೆ ಮುಗಿಯುವವರೆಗೂ ಈ ಮೊದಲಿನಂತೆ ಅರ್ಹತೆಯ ಆಧಾರದ ಮೇಲೆ ಪ್ರೌಢ ಶಾಲೆಗೆ ಬಡ್ತಿ ನೀಡಬೇಕು. ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಈ ಪೂರ್ವದಂತೆ ಮುಖ್ಯ ಗುರುಗಳ ಹಾಗೂ ಹಿರಿಯ ಮುಖ್ಯ ಗುರುಗಳ ಹುದ್ದೆಗೆ ಸೇವಾ ಜೇಷ್ಠತೆಯ ಆಧಾರದ ಮೇಲೆ ಬಡ್ತಿ ನೀಡಬೇಕು. ಅರ್ಹ ವಿದ್ಯಾರ್ಹತೆ (ಪದವಿ+ಶಿಕ್ಷಣ ತರಬೇತಿ) ಹೊಂದಿದ 2016ಕ್ಕಿಂತ ಪೂರ್ವದಲ್ಲಿ ನೇಮಕಾತಿ ಆಗಿರುವ ಪ್ರಾಥಮಿಕ ಶಾಲಾ ಸಹ ಶಿಕ್ಷಕರಿಗೆ ಸೇವಾ ಜೇಷ್ಠತೆಯ ರಕ್ಷಣೆ (ಅಚಿಡಿಡಿಥಿ ಈoಡಿತಿಚಿಡಿಜiಟಿg Seಟಿioಡಿiಣಥಿ) ಯೊಂದಿಗೆ ಬಡ್ತಿ ನೀಡುವುದ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಲಾಗಿದೆ.
ಈ ಸಂದರ್ಭದಲ್ಲಿ ರಾಜ್ಯ ಕೋಶಾಧ್ಯಕ್ಷರಾದ ಸುರೇಶ ಶೇಡಶ್ಯಾಳ ಅರ್ಜುನ.ಜಿ. ಲಮಾಣಿ, ಜುಬೇರ ಕೆರೂರ, ಬಿ.ಟಿ. ಗೌಡರ, ರವೀಂದ್ರ ಉಗಾರ, ನಿಜು ಎಂ. ಮೇಲಿನಕೇರಿ, ಎಮ್.ಎಮ್. ವಾಲಿಕಾರ, ಶ್ರೀಮತಿ ಪುಷ್ಪಾ ಗಚ್ಚಿನಮಠ, ಶ್ರೀಮತಿ ರೇಣುಕಾ ಆಳೂರ, ಶ್ರೀಮತಿ ಎಸ್.ಎಸ್. ಕುಲಕರ್ಣಿ, ಗಿರಿಶ ಗತಾಟೆ, ಟಿ.ಕೆ. ಜಂಬಗಿ, ಆರ್.ಆರ್. ಹುಣಶಿಗಿಡದ, ಎಸ್.ಎನ್. ಪಡಶೆಟ್ಟಿ, ಸಾಹೇಬಲಾಲ ದಳವಾಯಿ, ಎಚ್. ಎಮ್. ಚಿತ್ತರಕಿ, ವಾಯ್. ಟಿ. ಪಾಟೀಲ, ಆನಂದ ಭೂಸನೂರ, ಎ.ಬಿ. ಧಡಕೆ, ಎಸ್.ಎಸ್. ಸೊನ್ನಗಿ, ಎ.ಎಚ್. ವಾಲಿಕಾರ, ಶ್ರೀ ಬಿ.ಎಸ್. ಮಠ, ಎಮ್.ಎಸ್. ಮುಕಾರ್ತಿಹಾಳ, ಬಿ.ಟಿ. ವಜ್ಜಲ, ಬಿ.ಎಸ್. ಮಜ್ಜಗಿ, ಹಾಗೂ ಎಸ್.ಡಿ. ಪಾಟೀಲ, ಶ್ರೀವಾನಂದ ಮಂಗಾನವರ, ಎಸ್.ಆರ್. ಪಾಟೀಲ ಮತ್ತು ಎಲ್ಲ ತಾಲೂಕುಗಳ ಕಾರ್ಯದರ್ಶಿಗಳು, ಪದಾಧಿಕಾರಿಗಳು, ಪ್ರತಿನಿಧಿಗಳು, ಶಿಕ್ಷಕರು ಭಾಗವಹಿಸಿದ್ದರು.
ರಾಜ್ಯಾದ್ಯಂತ ಆಸಕ್ತರಿಗೆ ವಿಶೇಷ ಸೂಚನೆ:
ಯುವ ಪ್ರತಿಭೆಗಳು, ಹಿರಿ-ಕಿರಿ ಆಸಕ್ತ ಸಾಹಿತಿ, ಕವಿ, ಲೇಖಕರಿಗೆ ಈ ದಿವಸ ವೇದಿಕೆ ಕಲ್ಪಿಸುತ್ತಿದೆ. ಆಸಕ್ತರು ತಮ್ಮ ಸ್ವ ರಚಿತ ಲೇಖನ, ಕಥೆ, ಕವನ , ಶಾಲಾ ಕಾಲೇಜಿನ, ವಿಶ್ವವಿದ್ಯಾಲಯ ವರದಿ, ಹೋರಾಟಗಾರರ ಮನವಿ, ತಮ್ಮ ಜಿಲ್ಲೆ, ಪಟ್ಟಣ, ತಾಲೂಕು, ಗ್ರಾಮಗಳಲ್ಲಿನ ಸಮಸ್ಯೆಗಳು ಸೇರಿದಂತೆ ಇತರೆ ಸುದ್ದಿ ಹಾಗೂ ಜಾಹೀರಾತುಗಳನ್ನು ಪ್ರಕಟಿಸಲು ಇಂದೇ ಸಂಪರ್ಕಿಸಿರಿ.
ಸಂಪಾದಕರು ಈ ದಿವಸ ಕನ್ನಡ ದಿನ ಪತ್ರಿಕೆ ವ್ಯಾಟ್ಸಪ್ ಸಂಖ್ಯೆ : 7204279187 / 9900378892 ತಾವು ಟೈಪಿಸಿ eedivasa@gmail.com ಈ ಮೇಲ್ ಗೂ ಮೇಲ್ ಸೆಂಡ್ ಮಾಡಿದರೆ ಪ್ರಕಟಿಸಲಾಗುವುದು.
Tuesday, August 6, 2024
ಹಿರಿಯ ಹೋರಾಟಗಾರ ಭೀಮಶಿ ಕಲಾದಗಿ ಅವರಿಗೆ ಸರ್ಕಾರಿ ಗೌರವ
ವಿಜಯಪುರ: ಹಿರಿಯ ರೈತ ಮುಖಂಡ ಶ್ರೀ ಶ್ರೀಶಿ ಕಲಾದಗಿ ಅವರ ಅಂತ್ಯಕ್ರಿಯೆ ಸರಕಾರಿ ಇಂಡಿ ಉಪ ವಿಭಾಗಾಧಿಕಾರಿ ಅಭಿದ್ ಗದ್ಯಾಳ ನೇತೃತ್ವದಲ್ಲಿ ಸರಕಾರಿ ಪೊಲೀಸ್ ಗೌರವದೊಂದಿಗೆ ಇಂದು ತಾಲೂಕಿನ ಹಂಜಗಿ ಗ್ರಾಮದ ತೋಟದಲ್ಲಿ ನೆರವೇರಿತು. ಈ ಸಂಧರ್ಭದಲ್ಲಿ ಇಂಡಿ ಆಡಳಿತದ ಅಧಿಕಾರಿಗಳು ಸೇರಿದಂತೆ ವಿವಿಧ ಅಧಿಕಾರಿಗಳು, ವಿಜಯಪುರ ಜಿಲ್ಲೆ ಸೇರಿದಂತೆ ನಾಡಿನ ಹಲವು ಪ್ರಮುಖ ಸಾವಿರಾರು ಅಭಿಮಾನಿಗಳು ಹಾಗೂ ಕುಟುಂಬಸ್ಥರು ಇದ್ದರು.
Monday, August 5, 2024
ಅಗಲಿದ ಹಿರಿಯ ಹೋರಾಟಗಾರ ಭೀಮಶಿ ಕಲಾದಗಿ ಅವರಿಗೆ ಸಕಲ ಸರಕಾರಿ ಗೌರವ ಸಲ್ಲಿಸಲು ಒತ್ತಾಯ
ವಿಜಯಪುರ ಜಿಲ್ಲೆಯ ಹಿರಿಯ ಹೋರಾಟಗಾರ, ಕಮ್ಯುನಿಷ್ಟ ಮುಖಂಡ ಭೀಮಶಿ ಕಲಾದಗಿ (87) ಸೋಮವಾರ ರಾತ್ರಿ 9.40 ಗಂಟೆಗೆ ವಿಧಿವಶರಾಗಿದ್ದಾರೆ.
ತಮ್ಮ ಜನಪರ ಹೋರಾಟಗಳಿಂದ ನಾಡಿನಾದ್ಯಂತ ಹೆಸರಾಗಿದ್ದ ಭೀಮಶಿ ಕಲಾದಗಿಯವರು ಬರಗಾಲ ಭೀಮಶಿ ಎಂದೇ ಪ್ರಸಿದ್ಧ ಪಡೆದಿದ್ದರು. ಜಿಲ್ಲೆಯಲ್ಲಿ ಮುಳವಾಡ ಏತನೀರಾವರಿ ಸೇರಿದಂತೆ ಸಮಗ್ರ ನೀರಾವರಿಗಾಗಿ, ರೈತರಿಗಾಗಿ, ಕಾರ್ಮಿಕರಿಗಾಗಿ, ದಲಿತರಿಗಾಗಿ ಅಲ್ಲದೆ ಅನ್ಯಾಯ, ದೌರ್ಜನ್ಯಕ್ಕೆ ಒಳಗಾದವರ ಧ್ವನಿಯಾಗಿ ಜೀವನವಿಡಿ ಹೋರಾಟ ಮಾಡಿದ್ದರು.ಅವರ ಅಗಲಿಕೆಯಿಂದ ಹಿರಿಯ ಹೋರಾಟದ ಹಿರಿಯ ಕೊಂಡಿಯೊಂದು ಕಳಚಿದಂತಾಗಿದೆ.
ತಮ್ಮ ನೇರ ನಡೆ- ನುಡಿಯ ಹೋರಾಟದಿಂದ ಆಳುವ ವರ್ಗ ಹಾಗೂ ಸರ್ಕಾರಗಳನ್ನು ಬಡಿದೆಬ್ಬಿಸುತ್ತಿದ್ದರು ಹಿರಿಯ ಚೇತನ ಕಲಾದಗಿ ಅವರು ಹಾಕಿದ ಹೋರಾಟದ ಮಾರ್ಗ ಜಿಲ್ಲೆಯಲ್ಲಿ ಹೋರಾಟವನ್ನು ಮುನ್ನಡೆಸಲಿದೆ. ಜಿಲ್ಲೆಯಲ್ಲಿ ಜನಪರ ಹೋರಾಟ ಮುನ್ನಡೆಸಿದ ನಾಯಕನಿಗೆ ಆಳುವ ಸರಕಾರಗಳು ಜೀವಿತ ಅವಧಿಯಲ್ಲಿ ಗುರುತಿಸಲಿಲ್ಲ ಅವರ ಹೋರಾಟಗಳು ಜನಪರ ಆಗಿದ್ದು ಬಹುಷಃ ಮುಳುವಾಯಿತೇನೋ? ಯಾರ್ಯಾರನ್ನೋ ಸನ್ಮಾನಿಸಿ ಗೌರವಿಸುವ ಸರಕಾರ ಕಲಾದಗಿ ಅವರನ್ನು ಯಾಕೆ ಗುರುತಿಸಲಿಲ್ಲ ಎಂಬುದು ರಾಜ್ಯದ ಪ್ರತಿಯೊಬ್ಬರಿಗೂ ಕಾಡುವ ಪ್ರಶ್ನೆಯಾಗಿದೆ .ಸರಕಾರ ಕೊಡುವ ಮಾನ ಸಮ್ಮಾನಗಳಿಗೆ ಜೋತು ಬೀಳದ ನೇರ ನಿಷ್ಟುರ ಧೃಡ ವ್ಯಕ್ತಿತ್ವ ಕಲಾದಗಿ ಅವರದಾಗಿತ್ತು. ಕೊನೆ ಪಕ್ಷ ರಾಜ್ಯ ಸರಕಾರ ಸರಕಾರಿ ಸಕಲ ಗೌರವದೊಂದಿಗೆ ಅವರಿಗೆ ಅಂತಿಮ ನಮನ ಸಲ್ಲಿಸಿ ಜನಪರ ಹೋರಾಟಗಾರನಿಗೆ ನೈಜ ಗೌರವ ಸಲ್ಲಿಸಬೇಕು ಎಂಬುದು ರಾಜ್ಯದ ಪ್ರತಿಯೊಬ್ಬ ಅವರ ಅಭಿಮಾನಿಯ ಒತ್ತಾಯವಾಗಿದೆ . ಕೂಡಲೇ ರಾಜ್ಯ ಸರಕಾರ ಮತ್ತು ಜಿಲ್ಲಾಡಳಿತ ಅಂತಿಮ ಸಂಸ್ಕಾರದ ಉಸ್ತುವಾರಿ ತೆಗೆದುಕೊಂಡು ರಾಜ್ಯದ ಮೂಲೆ ಮೂಲೆಯಿಂದ ಬರುವ ವಿವಿಧ ಸಂಘಟನೆಗಳ ಮುಖಂಡರು, ರೈತರು, ಕಾರ್ಮಿಕರು ಹಾಗೂ ಪ್ರತಿಯೊಬ್ಬ ಅವರ ಅಭಿಮಾನಿಗಳಿಗೆ ಅಂತಿಮ ದರ್ಶನಕ್ಕೆ ಅವಕಾಶ ಮಾಡಿಕೊಟ್ಟು ಜನಪರ ಹೋರಾಟಗಾರನಿಗೆ ಗೌರವದಿಂದ ಕಳಿಸಿಕೊಡಬೇಕೆಂದು ಕಾಂ. ಭೀಮಶಿ ಕಲಾದಗಿ ಅವರ ಅಭಿಮಾನಿಗಳು ವಿನಂತಿಸಿಕೊಂಡಿದ್ದಾರೆ.


