Saturday, June 29, 2024

ವಿಜಯಪುರದಲ್ಲಿ ಕೆಫೆ ಇನ್ ಉದ್ಘಾಟಿಸಿದ ಕನ್ನಡ ಹಾಸ್ಯ ಕಲಾವಿದ ಟೆನ್ನಿಸ್ ಕೃಷ್ಣ

ವಿಜಯಪುರ : ನಾನು ಜಾಸ್ತಿ ದುಡ್ಡು ಮಾಡಬೇಕಾಗಿದ್ರೆ ತೆಲುಗು ತಮಿಳು ಚಿತ್ರರಂಗಕ್ಕೆ ಹೋಗಬೇಕಾಗಿತ್ತು. ಆದ್ರೆ ಕನ್ನಡದ ಪ್ರೇಕ್ಷಕರು, ಅಭಿಮಾನಿಗಳು ಕೊಟ್ಟಿರೋ ಪ್ರೀತಿನೆ ಸಾಕು ಎಂದು ಕನ್ನಡದ ಚಿತ್ರಗಳಲ್ಲಿ ಹಾಸ್ಯ ಕಲಾವಿದನಾಗಿ ಪಾತ್ರ ಮಾಡುತ್ತಾ ಬಂದಿದ್ದೇನೆ, ಉತ್ತರ ರ‍್ನಾಟಕ ಭಾಗದ ಹಳ್ಳಿಗಳು ನನಗೆ ಚಿರಪರಿಚಿತ ಎಂದು ಕನ್ನಡದ ಖ್ಯಾತ ಹಾಸ್ಯ ಕಲಾವಿದ ಟೆನ್ನಿಸ್ ಕೃಷ್ಣ ಹೇಳಿದರು.

ವಿಜಯಪುರ ನಗರದ ಸೊಲ್ಲಾಪುರ ರಸ್ತೆಯಲ್ಲಿ ಕೆಫೆ ಇನ್ ಉದ್ಘಾಟಿಸಿ ಅವರು ಮಾತನಾಡಿದರು, ಡಾ,ರಾಜ್ ಕುಮಾರ್, ವಿಷ್ಣುರ‍್ಧನ್ ಸೇರಿದಂತೆ ಹಲವು ನಟರೊಂದಿಗೆ ಪಾತ್ರ ಮಾಡಿರೋದು ಪ್ರೇಕ್ಷಕರು ಅಭಿಮಾನಿಗಳ ಆಶರ‍್ವಾದದಿಂದ,ನಾನು ಹುಟ್ಟಿದ್ದು ಬೆಂಗಳೂರು,ಈಗ ಸಿಂಗಾಪುರ ಆಗಿದೆ‌. ನಮ್ಮ ತಂದೆ ಟೆನ್ನಿಸ್ ಕೋಚ್ ಆಗಿದ್ದರು .ನಾನು ಟೆನ್ನಿಸ್ ಕೋಚ್ ಆಗಿದ್ದೆ, ಚಿತ್ರರಂಗಕ್ಕೆ ಬಂದ್ಮೇಲೆ ಟೆನ್ನಿಸ್ ಕೃಷ್ಣ ಅಂತ ಹೆಸರು ಇಟ್ಟುಕೊಂಡೆ, ಚಿತ್ರರಂಗದಲ್ಲಿ ಹೊನ್ನಾಳಿ ಕೃಷ್ಣ, ಬೆಕ್ಕಿನ ಕಣ್ಣು ಕೃಷ್ಣ ಇದ್ದಾರೆ.ಹೀಗಾಗಿ ಟೆನ್ನಿಸ್ ಕೃಷ್ಣ ಎಂದು ಹೆಸರು ಬದಲಾಯಿಸಿಕೊಂಡೆ, ನಾನು ಒಂದೇ ಒಂದು ಡ್ರಾಪ್ ಸಹಿತ ಮದ್ಯ ಸೇವನೆ ಮಾಡೋಲ್ಲ, ಆದ್ರು ಕುಡಕನ ಪಾತ್ರ ಅಭಿನಯಿಸಿದ್ದೇನೆ ಎಂದು ಕಿಚ್ಚ ಸುದೀಪ್ ಅಭಿನಯದ ವೀರಮದಕರಿ ಸಿನೇಮಾದ ಕುಡುಕನ ಸನ್ನಿವೇಶದ ಡೈಲಾಗ್ ಹೇಳಿದ್ರು. ವಿಜಯಪುರದಲ್ಲಿ ಕೆಫೆ ಇನ್ ಉದ್ಘಾಟಿಸಿದ್ದು ನನಗೆ ಸಂತಸ ತಂದಿದೆ ಎಂದರು.ಇದೇ ವೇಳೆ ತಮ್ಮ ಕೆಲವು ಅಭಿನಯದ ಚಿತ್ರಗಳ ಡೈಲಾಗ್ ಹೇಳಿ  ಪ್ರೇಕ್ಷಕರನ್ನು ರಂಜಿಸಿದ್ರು. ಯುವ ಮುಖಂಡ ರಾಮನಗೌಡ ಬಸನಗೌಡ ಪಾಟೀಲ್ ಯತ್ನಾಳ್ ಮಾತನಾಡಿ, ವಿಜಯಪುರ ನಗರ ಬೆಳೆಯುತ್ತಿದೆ, ಜೊತೆಗೆ ಹೊಟೇಲ್ ಉದ್ಯಮವೂ ಸಹ ಪೂರಕವಾಗಿ ಬೆಳೆಯುತ್ತಿದ್ದು, ಕೆಫೆ ಇನ್ ಸುತ್ತಲೂ ಕಾಲೇಜಿಗಳಿದ್ದು, ವ್ಯಾಪಾರಕ್ಕೆ ಪೂರಕವಾಗಿದೆ ಎಂದರು. ವೇದಿಕೆ ಮೇಲೆ ಕಲ್ಪನಾ ಚಿತ್ರದ ನರ‍್ಮಾಪಕ ಚಿದಂಬರಂ,  ಟೌನ್ ಪ್ಯಾಲೇಸ್ ಮಾಲೀಕ ಹನುಮಂತರಾಯಗೌಡ ಬಿರಾದಾರ, ಕೆಫೆ ಇನ್ ಮಾಲೀಕ ಉಮೇಶ್  ತೊಂಡಿಕಟ್ಟಿ , ಸಂತೋಷ್ ಗಣಿ, ರಾಜು ಬಿಜ್ಜರಗಿ, ಯಶ್ವಂತ್ ಗುಗ್ಗರಿ, ಅಭಿಲಾಷ್ ಹಳಕಟ್ಟಿ , ಮುನಾಫ್ ಇನಾಂದಾರ್, ಶಿವಾನಂದ ತೊಂಡಿಕಟ್ಟಿ , ಈರಣ್ಣ ತೊಂಡಿಕಟ್ಟಿ ಸೇರಿದಂತೆ ಹಲವರಿದ್ದರು.

ರಾಜ್ಯಾದ್ಯಂತ ಆಸಕ್ತರಿಗೆ ವಿಶೇಷ ಸೂಚನೆ:

ಯುವ ಪ್ರತಿಭೆಗಳು, ಹಿರಿ-ಕಿರಿ ಆಸಕ್ತ ಸಾಹಿತಿ, ಕವಿ, ಲೇಖಕರಿಗೆ ಈ ದಿವಸ ವೇದಿಕೆ ಕಲ್ಪಿಸುತ್ತಿದೆ. ಆಸಕ್ತರು ತಮ್ಮ ಸ್ವ ರಚಿತ ಲೇಖನ, ಕಥೆ, ಕವನ , ಶಾಲಾ ಕಾಲೇಜಿನ, ವಿಶ್ವವಿದ್ಯಾಲಯ ವರದಿ, ಹೋರಾಟಗಾರರ ಮನವಿ, ತಮ್ಮ  ಜಿಲ್ಲೆ, ಪಟ್ಟಣ, ತಾಲೂಕು, ಗ್ರಾಮಗಳಲ್ಲಿನ  ಸಮಸ್ಯೆಗಳು ಸೇರಿದಂತೆ ಇತರೆ ಸುದ್ದಿ ಹಾಗೂ ಜಾಹೀರಾತುಗಳನ್ನು ಪ್ರಕಟಿಸಲು ಇಂದೇ ಸಂಪರ್ಕಿಸಿರಿ.

ಸಂಪಾದಕರು ಈ ದಿವಸ ಕನ್ನಡ ದಿನ ಪತ್ರಿಕೆ ವ್ಯಾಟ್ಸಪ್ ಸಂಖ್ಯೆ : 7204279187 / 9900378892 ತಾವು ಟೈಪಿಸಿ eedivasa@gmail.com ಈ ಮೇಲ್ ಗೂ ಮೇಲ್ ಸೆಂಡ್ ಮಾಡಿದರೆ ಪ್ರಕಟಿಸಲಾಗುವುದು.

ಸರಕಾರೀ ಶಾಲೆಗೇ ಅಭಿನಂದನಾ ಗ್ರಂಥ ಸಲ್ಲಿಸಿದ ಹಳೆಯ ವಿದ್ಯಾರ್ಥಿಗಳು


ಆಲಮಟ್ಟಿ: ಇಲ್ಲಿನ

ಸರಕಾರಿ  ಶಾಲೆಯ ಹಳೆಯ ವಿದ್ಯಾರ್ಥಿಗಳು ತಮ್ಮ ಶಾಲೆಯ ೬೦ನೆಯ ವರ್ಷಾಚರಣೆಯ ಸಂದರ್ಭದಲ್ಲಿ ಕಲಿತ ಶಾಲೆ ಅಕ್ಷರ ತೋರಣ ಎಂಬ ಅಭಿನಂದನ ಗ್ರಂಥವನ್ನು ಅರ್ಪಿಸಿರುವುದು ಇಡೀ ರಾಜ್ಯಕ್ಕೆ ಮಾದರಿ ಕೆಲಸವಾಗಿದೆ ಎಂದು ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಬಣ್ಣಿಸಿದರು.

ಇಲ್ಲಿನ ಸಮುದಾಯ ಭವನದಲ್ಲಿ ಕರ್ನಾಟಕ ಗಾಂ ಮಂಜಪ್ಪ ಹರ್ಡೇಕರ ಪ್ರೇರಿತ ಎಂಪಿಎಸ್ ಮತ್ತು ಎಂಎಚ್‌ಎ.  ಶಾಲೆಗಳ ಹಳೆಯ ವಿದ್ಯಾರ್ಥಿಗಳ ಬಳಗದಿಂದ ಹಮ್ಮಿಕೊಂಡ 'ಕಲಿತ ಶಾಲೆಗೆ ಅಕ್ಷರ ತೋರಣ' ಹಾಗೂ ಗುರು ಶಿಷ್ಯರ ಮಹಾಸಂಗಮ ಕಾರ್ಯಕ್ರಮದಲ್ಲಿ ಶುಕ್ರವಾರ  ಗ್ರಂಥ ಬಿಡುಗಡೆಗೊಳಿಸಿ ಅವರು ಮಾತನಾಡಿದ ಅವರು, ಹುಟ್ಟಿದ ಊರು, ಹೆತ್ತ ತಂದೆ ತಾಯಿ, ಕಲಿತ ಶಾಲೆ, ಕಷ್ಟದಲ್ಲಿ ಸಹಾಯ ಮಾಡಿದವರನ್ನು ಎಂದೂ ಮರೆಯಬಾರದು. ಉತ್ತಮ ತಾಯಿ ನೂರು ಜನ ಶಿಕ್ಷಕರಿಗೆ ಸಮ. ಗುರು ಶಿಷ್ಯರ ಸಂಬಂಧ ಉತ್ತಮವಾಗಿರಬೇಕು ಎಂದು ಹೇಳಿದರು.
ಸರಕಾರೀ ಶಾಲೆಗಳ ಅಗತ್ಯವನ್ನು ಒತ್ತಿ ಹೇಳುತ್ತ, ತಾವು  ಶಿಕ್ಷಣ ಸಚಿವನಾಗಿದ್ದಾಗ ೧೦೩೯ ಪ್ರೌಢ ಶಾಲೆ ಮತ್ತು ೫೦೦ ಪಿಯು ಕಾಲೇಜ್‌ಗಳು ಮಂಜೂರು ಮಾಡಿ ೫ ಸಾವಿರ ಕೋಟಿ ರೂ.ಗಳನ್ನು ಕಟ್ಟಡಕ್ಕಾಗಿ ದೊರಕಿಸಿಕೊಟ್ಟಿದ್ದನ್ನು ನೆನಪಿಸಿಕೊಂಡರಲ್ಲದೆ, ಆಲಮಟ್ಟಿಯ ಎಂಎಚ್‌ಎಂ. ಶಿಕ್ಷಣ ಸಂಸ್ಥೆಯವರು ಡಿಪ್ಲೋಮಾ ಹಾಗೂ ಐಟಿಐ ಕಾಲೇಜ್ ಆರಂಭಿಸಲು ಪ್ರಸ್ತಾವನೆ  ಸಲ್ಲಿಸಿದರೆ ಮಂಜೂರು ಮಾಡಿಸುವ ಜವಾಬ್ದಾರಿ ನನ್ನದಾಗಿದೆ. ಎಂದರು.
ಮುಂದುವರಿದು ಮಾತನಾಡಿದ ಅವರು  ಗುರು ಶಿಷ್ಯರ ನಡುವಿನ ಸಂಬಂಧ ಜಗತ್ತಿನಲ್ಲಿ ಅತ್ಯಂತ ಶ್ರೇಷ್ಠವಾದದ್ದು, ಒಬ್ಬ ವ್ಯಕ್ತಿಯ ವ್ಯಕ್ತಿತ್ವವನ್ನು ರೂಪಿಸುವಲ್ಲಿ ಶಿಕ್ಷಕರ ಪಾತ್ರ ಅತ್ಯಂತ ಮಹತ್ವದ್ದು, ಗುರು ಶಿಷ್ಯರ ನಡುವಿನ ಸಂಬಂಧದ ಶ್ರೇಷ್ಠತೆಯನ್ನು ಇಂದಿನ ಯುವ ಜನಾಂಗ ಅರಿಯಬೇಕು ಎಂದು ಕರೆ ನೀಡಿದರು.
ಓದಿ ಉನ್ನತ ಮಟ್ಟದ ಹುದ್ದೆ ಅಲಂಕರಿಸಿದವರು ಇಂದು ತಮ್ಮ ಗುರುಗಳನ್ನು ನೆನೆದು ಓದಿದ ಶಾಲೆಗೆ ಅಕ್ಷರ ತೋರಣ ಕಟ್ಟಿದ ಹಳೆಯ ವಿದ್ಯಾರ್ಥಿಗಳ ಕಾರ್ಯ ಅಭಿನಂದನೀಯ ಹಾಗೂ ಅನುಕರಣೀಯ ವಾಗಿದ್ದು ಎಂದು ಅಭಿಪ್ರಾಯಪಟ್ಟರು.
ಕೃಷಿ ಪ್ರಧಾನವಾದ ಕುಟುಂಬದಲ್ಲಿ ಬೆಳೆದಿದ್ದ ತಾವು  ೮ ನೇ ತರಗತಿಯಲ್ಲಿರುವಾಗಲೇ ಅನಕ್ಷರಸ್ಥೆಯಾಗಿದ್ದ ತಮ್ಮ ಅಕ್ಕನಿಗೆ ಬಾಲ್ಯವಿವಾಹವಾಗಿದ್ದನ್ನು ನೆನಪಿಸಿಕೊಂಡ ಅವರು, " ಇದು ನನ್ನ ಮನಸ್ಸಿನ ಮೇಲೆ ಗಾ ಢವಾದ ಪರಿಣಾಮ ಬೀರಿತು. ಮುಂದೆ ನಾನು ಶಿಕ್ಷಣ ಸಚಿವನಾದ ಬಳಿಕ ಹೆಣ್ಣು ಮಕ್ಕಳ ಕಲಿಕೆಗೆ ಹೆಚ್ಚಿನ ಒತ್ತು ನೀಡಿದೆ. ಅಕ್ಕನ ಅನಕ್ಷರತೆಯೇ ಹೆಣ್ಣು ಮಕ್ಕಳ ಕಲಿಕೆಗೆ ಆದ್ಯತೆ ನೀಡಲು ಮೂಲ ಕಾರಣವಾಯ್ತು"  ಎಂದು ವಿವರಿಸಿದರು.
ಮುಂಡರಗಿ ತೋಂಟದಾರ್ಯಮಠದ ನಿಜಗುಣಪ್ರಭು ತೋಂಟದಾರ್ಯ ಶ್ರೀಗಳು ಮಾತನಾಡಿ, ಬಸವಣ್ಣನವರು ಸಾವಿರ ವರ್ಷಗಳ ಹಿಂದೆ ಅಕ್ಷರದ ಕ್ರಾಂತಿ ಮಾಡಿದರು. ಹೀಗಾಗಿ ಕೆಳವರ್ಗದ ಜನರೂ ಕೂಡ ವಚನ ಬರೆಯುಂತಾಯಿತು. ಕನ್ನಡ ಭಾಷೆ ಉಳಿವಿಗೆ ಬಸವಣ್ಣನವರು ಅನ್ಯ ರಾಜ್ಯಗಳಿಂದ ವಚನಕಾರರಿಂದ ಕನ್ನಡದಲ್ಲಿಯೇ ವಚನಗಳನ್ನು ಬರೆಯಿಸಿದರು. ಪ್ರಜಾಪ್ರಭುತ್ವ ಚಿಂತನೆ ಆರಂಭವಾಗಿದ್ದೆ ಬಸವನಬಾಗೇವಾಡಿಯಲ್ಲಿ ಅದನ್ನು ಕಟ್ಟಿದವರು ಬಸವಣ್ಣನವರು. ಪ್ರಜಾಪ್ರಭುತ್ವ ಜಾರಿಗಾಗಿಯೇ ವಚನಕ್ರಾಂತಿ ಮಾಡಿದರು ಎಂದರಲ್ಲದೆ ವಿಜಯಪುರ ಜಿಲ್ಲೆ ಶರಣರ ಕಾಲದಲ್ಲಿಯೇ ಶಿಕ್ಷಣ ಕ್ರಾಂತಿ ಮಾಡಿದ ಜಿಲ್ಲೆಯಾಗಿದೆ ಎಂದು ವಿಶ್ಲೇಷಿಸಿದರು.
ಆಲಮಟ್ಟಿಯಲ್ಲಿ  ಹರ್ಡೇಕರ ಮಂಜಪ್ಪನವರ ಜೀವನವನ್ನು ಸಾರುವ ಥೀಮ್ ಪಾರ್ಕ್ ಅವಶ್ಯಕತೆಯನ್ನು ಒತ್ತಿ ಹೇಳಿದ ಶ್ರೀಗಳು, ಹರ್ಡೇಕರ ಅವರ ಆಶಯದಂತೆ ನಿಸರ್ಗ ಚಿಕಿತ್ಸಾ ಕೇಂದ್ರದ ಸ್ಥಾಪನೆ ಮಾಡುವಂತೆ ಸರಕಾರಕ್ಕೆ ಒತ್ತಾಯಿಸಿದರು.
ವಿಜಯಪುರ ಡಿ.ಸಿ.ಸಿ. ಬ್ಯಾಂಕ್ ನಿರ್ದೇಶಕಿ ಸಂಯುಕ್ತಾ ಪಾಟೀಲ ಮಾತನಾಡಿ, ಬಹುತೇಕ ಶಾಸಕರು ತಮ್ಮ ಅನುದಾನವನ್ನು ಕೇವಲ ದೇವಸ್ಥಾನ ಮತ್ತು ಸಮುದಾಯ ಭವನಗಳಿಗೆ ನೀಡುವ ಬದಲು ಶಿಕ್ಷಣ ಕ್ಷೇತ್ರಕ್ಕೆ ನೀಡಬೇಕು. ದೇಶ ಮುಂದುವರೆಯಲು ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚಿನ ಒತ್ತು ಕೊಡಬೇಕಾಗಿದೆ. ಬಜೆಟ್‌ನಲ್ಲಿ ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚಿನ ಅನುದಾನವನ್ನು ಮೀಸಲಿಡಬೇಕು ಎಂದು ಪ್ರತಿಪಾಸಿದರು.
ವಿಧಾನ ಪರಿಷತ್ ಸದಸ್ಯ ಹಣಮಂತ ನಿರಾಣ  ಮಾತನಾಡಿ, ಇದೊಂದು ಹೃದಯ ಸ್ಪರ್ಶಿ ಹಾಗೂ ಮಾದರಿಯಾದ ಕಾರ್ಯಕ್ರಮ. ಕಲಿತ ಶಾಲೆಯನ್ನು ನೆನಪಿಸಿಕೊಂಡು ಗುರುನಮನ ಜತೆಗೆ ಶಾಲೆ ಕುರಿತ ಅಭಿನಂದನ ಗ್ರಂಥ ಬಿಡುಗಡೆ ಮಾಡಿರುವುದು ಸಂತೋಷ ತಂದಿದೆ. ಆಲಮಟ್ಟಿ ಶಿಕ್ಷಣ ಕ್ಷೇತ್ರವಾಗಿ ಹಾಗೂ ಪ್ರಮುಖ ಪ್ರವಾಸಿ ತಾಣವಾಗಿ ಇನ್ನಷ್ಟು ಬೆಳೆಯಲು, ಆಲಮಟ್ಟಿಯಲ್ಲಿ ಯಾತ್ರಿ ನಿವಾಸ ಹಾಗೂ ಕಲ್ಯಾಣ ಮಂಟಪದ  ಅವಶ್ಯಕತೆ ಇದೆ ಅಂದು ಅಭಿಪ್ರಾಯ ಪಟ್ಟರು.
ಕೃಷ್ಣಾ ಭಾಗ್ಯ ಜಲ ನಿಗಮದ ವ್ಯವಸ್ಥಾಪಕ ನಿರ್ದೇಶಕ ಮೋಹನರಾಜ್ ಕೆ.ಪಿ.  ಮಾತನಾಡಿ ಸಾಮಾನ್ಯವಾಗಿ ಒಂದೊಂದು ಬ್ಯಾಚಿನವರು ಗುರುವಂದನ ಮಾಡುವುದನ್ನು ಕಾಣುತ್ತೇವೆ, ಆದರೆ ೬೦ ವರ್ಷಗಳ ಎಲ್ಲ ಬ್ಯಾಚಿನವರು ಸೇರಿ ಗುರುಶಿಷ್ಯರ ಮಹಾಸಂಗಮ ಬಹುಷಃ ಕರ್ನಾಟಕದಲ್ಲಿ ಎಲ್ಲಿಯೂ ನಡೆದಿಲ್ಲ ಎಂದು ಹೇಳಿದರು.
ಮಾಜಿ ಸಚಿವರಾದ ಎಸ್.ಕೆ.ಬೆಳ್ಳುಬ್ಬಿ, ವಿಧಾನ ಪರಿಷತ್ ಮಾಜಿ ಸದಸ್ಯ ಅರುಣ ಶಹಾಪುರ, ಬೇಲೂರಿನ ಗುರುಬಸವ ಮಠದ ಮಹಾಂತ ಸ್ವಾಮೀಜಿ, ಗದಗದ ತೋಂಟದಾರ್ಯ ವಿದ್ಯಾಪೀಠದ ಆಡಳಿತಾಧಿಕಾರಿ ಶಿವಾನಂದ ಪಟ್ಟಣಶೆಟ್ಟಿ, ಕ್ಷೇತ್ರ ಶಿಕ್ಷಣಾಧಿಕಾರಿ ವಸಂತ ರಾಠೋಡ, ಸದಾಶಿವ ದಳವಾಯಿ ಸೇರಿದಂತೆ ಇತರರಿದ್ದರು.
ಇದೇ ಸಂದರ್ಭದಲ್ಲಿ ಎಂಪಿಎಸ್ ಮತ್ತು ಎಂಎಚ್‌ಎಂ  ಪ್ರೌಢ ಶಾಲೆಯ ಸುಮಾರು ೭೦ ನಿವೃತ್ತ ಹಾಗೂ ಹಾಲಿ  ಗುರುಗಳು-ಗುರುಮಾತೆಯರನ್ನು ಸನ್ಮಾನಿಸಲಾಯಿತು.  ಚಂದ್ರಶೇಖರ ನುಗ್ಲಿ, ಸಂಗಮೇಶ ಮೆಣಸಿನಕಾಯಿ, ವಿಠ್ಠಲ್ ಪಾಟೀಲ್, ಸಾವಿತ್ರಿ ಹಿರೆಗೊಂಡ, ಶೈಲಶ್ರೀ ಜೋಶಿ, ತನುಜಾ ಪೂಜಾರಿ, ಸಂಗಮೇಶ್ ಚನ್ನಿಗಾವಿ ಮುಂತಾದವರು ಉಪಸ್ಥಿತರಿದ್ದರು.
ಮಧ್ಯಾಹ್ನ 'ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸುವುದು ಹೇಗೆ?' ಎಂಬ ವಿಷಯಾಗಿ ಸದ್ಯದ ವಿದ್ಯಾರ್ಥಿಗಳೊಂದಿಗೆ ಹಳೆಯ ಸಾಧಕ ವಿದ್ಯಾರ್ಥಿಗಳಾದ ಬೆಂಗಳೂರಿನ ಜಯದೇವ ಹೃದ್ರೋಗ ಆಸ್ಪತ್ರೆಯ ಪ್ರಾಧ್ಯಾಪಕ ಡಾ.ಅರುಣ ಉಳ್ಳಾಗಡ್ಡಿ, ಹಿರಿಯ ಕೆ. ಎ. ಎಸ್. ಅಧಿಕಾರಿ  ಮಮತಾ ಹೊಸಗೌಡರ, ಪೊಲೀಸ್ ಇನ್ಸ್ಪೆಕ್ಟರ್ ಗಳಾದ ರಮೇಶ ರೊಟ್ಟಿ, ಸಚಿನ ಚಲವಾದಿ, ಸಂಗಮೇಶ ದಿಡಗಿನಾಳ, ಪುಣೆಯ ಚಾರ್ಟರ್ಡ್ ಅಕೌಂಟಂಟ್ ವಾಣಿಶ್ರೀ ಅಮರಗೊಂಡ, ಸರಕಾರೀ ಅಭಿಯೋಜಕಿ ಗೀತಾ ಹೊಸಗಣಿಗೇರ, ಆರ್ಕಿಟೆಕ್ಟ್ ಸತೀಶ್ ನಡುವಿನಮನಿ, ಸಂವಾದ ನಡೆಸಿದರು.

ರಾಜ್ಯಾದ್ಯಂತ ಆಸಕ್ತರಿಗೆ ವಿಶೇಷ ಸೂಚನೆ:

ಯುವ ಪ್ರತಿಭೆಗಳು, ಹಿರಿ-ಕಿರಿ ಆಸಕ್ತ ಸಾಹಿತಿ, ಕವಿ, ಲೇಖಕರಿಗೆ ಈ ದಿವಸ ವೇದಿಕೆ ಕಲ್ಪಿಸುತ್ತಿದೆ. ಆಸಕ್ತರು ತಮ್ಮ ಸ್ವ ರಚಿತ ಲೇಖನ, ಕಥೆ, ಕವನ , ಶಾಲಾ ಕಾಲೇಜಿನ, ವಿಶ್ವವಿದ್ಯಾಲಯ ವರದಿ, ಹೋರಾಟಗಾರರ ಮನವಿ, ತಮ್ಮ  ಜಿಲ್ಲೆ, ಪಟ್ಟಣ, ತಾಲೂಕು, ಗ್ರಾಮಗಳಲ್ಲಿನ  ಸಮಸ್ಯೆಗಳು ಸೇರಿದಂತೆ ಇತರೆ ಸುದ್ದಿ ಹಾಗೂ ಜಾಹೀರಾತುಗಳನ್ನು ಪ್ರಕಟಿಸಲು ಇಂದೇ ಸಂಪರ್ಕಿಸಿರಿ.

ಸಂಪಾದಕರು ಈ ದಿವಸ ಕನ್ನಡ ದಿನ ಪತ್ರಿಕೆ ವ್ಯಾಟ್ಸಪ್ ಸಂಖ್ಯೆ : 7204279187 / 9900378892 ತಾವು ಟೈಪಿಸಿ eedivasa@gmail.com ಈ ಮೇಲ್ ಗೂ ಮೇಲ್ ಸೆಂಡ್ ಮಾಡಿದರೆ ಪ್ರಕಟಿಸಲಾಗುವುದು.

Thursday, June 27, 2024

28-06-2024 EE DIVASA KANNADA DAILY NEWS PAPER

ಜೂನ್ 29 ರಂದು ಎಸ್.ಎಂ.ಎನ್. ಸೌಹಾರ್ದ ಸಂಘದ ವಂಚಿತ ಗ್ರಾಹಕರ ಹೋರಾಟ ಸಮಿತಿ ಸಭೆ

 ಈ ದಿವಸ ಕನ್ನಡ ದಿನ ಪತ್ರಿಕೆ ವಾರ್ತೆ

ವಿಜಯಪುರ : ಹೋರಾಟದ ಮುಂದಿನ ರೂಪರೇಷೆ ಚರ್ಚಿಸಲು ದಿನಾಂಕ 24.06.2024, ಸೋಮವಾರ ವಿಜಯಪುರದಲ್ಲಿ ಸಭೆ ಕರೆಯಲಾಗಿತ್ತು. ನಮ್ಮ ಹೋರಾಟದ ನೇತೃತ್ವ ವಹಿಸಿರುವ ರೈತ ಮುಖಂಡ ಅರವಿಂದ ಕುಲಕರ್ಣಿ ಅವರು ಕೆಲ ಕಾರಣಗಳಿಂದ ಈ ಸಭೆಯನ್ನು ದಿನಾಂಕ 29.06.2024, ಶನಿವಾರ ಬೆಳಗ್ಗೆ 10.30 ಗಂಟೆಗೆ ವಿಜಯಪುರದ ಗಗನ್ ಮಹಲ್‌ದಲ್ಲಿ ನಡೆಸಲು ನಿರ್ಣಯಿಸಿದ್ದಾರೆ. ಆದ ಕಾರಣ ಎಸ್.ಎಂ.ಎನ್. ವಂಚಿತ ಎಲ್ಲ ಬಾಂಧವರು ಶನಿವಾರ ನಡೆಯುವ ಸಭೆಗೆ ತಪ್ಪದೇ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಸಲಹೆ ಸೂಚನೆ ನೀಡಬಹುದಾಗಿದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ಎಸ್.ಎಂ.ಎನ್. ಸೌಹಾರ್ದ ಸಂಘದ ವಂಚಿತ ಗ್ರಾಹಕರ ಹೋರಾಟ ಸಮಿತಿ ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದೆ.

ರಾಜ್ಯಾದ್ಯಂತ ಆಸಕ್ತರಿಗೆ ವಿಶೇಷ ಸೂಚನೆ:

ಯುವ ಪ್ರತಿಭೆಗಳು, ಹಿರಿ-ಕಿರಿ ಆಸಕ್ತ ಸಾಹಿತಿ, ಕವಿ, ಲೇಖಕರಿಗೆ ಈ ದಿವಸ ವೇದಿಕೆ ಕಲ್ಪಿಸುತ್ತಿದೆ. ಆಸಕ್ತರು ತಮ್ಮ ಸ್ವ ರಚಿತ ಲೇಖನ, ಕಥೆ, ಕವನ , ಶಾಲಾ ಕಾಲೇಜಿನ, ವಿಶ್ವವಿದ್ಯಾಲಯ ವರದಿ, ಹೋರಾಟಗಾರರ ಮನವಿ, ತಮ್ಮ  ಜಿಲ್ಲೆ, ಪಟ್ಟಣ, ತಾಲೂಕು, ಗ್ರಾಮಗಳಲ್ಲಿನ  ಸಮಸ್ಯೆಗಳು ಸೇರಿದಂತೆ ಇತರೆ ಸುದ್ದಿ ಹಾಗೂ ಜಾಹೀರಾತುಗಳನ್ನು ಪ್ರಕಟಿಸಲು ಇಂದೇ ಸಂಪರ್ಕಿಸಿರಿ.

ಸಂಪಾದಕರು ಈ ದಿವಸ ಕನ್ನಡ ದಿನ ಪತ್ರಿಕೆ ವ್ಯಾಟ್ಸಪ್ ಸಂಖ್ಯೆ : 7204279187 / 9900378892 ತಾವು ಟೈಪಿಸಿ eedivasa@gmail.com ಈ ಮೇಲ್ ಗೂ ಮೇಲ್ ಸೆಂಡ್ ಮಾಡಿದರೆ ಪ್ರಕಟಿಸಲಾಗುವುದು.

ರಾಗಂ ಅವರ "ಯೋಗಸ್ಥ" ಕೃತಿ ಲೋಕರ್ಪಣೆ ಸಮಾರಂಭ'

 ಈ ದಿವಸ ಕನ್ನಡ ದಿನ ಪತ್ರಿಕೆ ವಾರ್ತೆ
ವಿಜಯಪುರ : ವಿಜಯಪುರ ಜಿಲ್ಲೆ ಚಡಚಣ ಪಟ್ಟಣದ ಪ್ರಸ್ತುತ ಬೆಂಗಳೂರು ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಇಂಗ್ಲಿಷ್ ಉಪನ್ಯಾಸಕ ಡಾ. ರಾಜಶೇಖರ ಗಂಗಯ್ಯ.ಮಠಪತಿ (ರಾಗಂ) ಅವರು ರಚಿಸಿದ ಸಂತೆಯಿAದ ಸಂತನೆಡೆಗೆ "ಯೋಗಸ್ಥ" ಕೃತಿ ದ್ವಿತೀಯ ಮುದ್ರಣ ಶನಿವಾರ ದಿನಾಂಕ: 29-06-2024 ರಂದು ಬೆಳಿಗ್ಗೆ 10-00 ಘಂಟೆಗೆ ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನ ತೆಲಸಂಗ ಗ್ರಾಮದ ಶ್ರೀ ಗುರುಬಸಪ್ಪ ರೋಡಗಿ ಕಲ್ಯಾಣ ಮಂಟಪದಲ್ಲಿ ಲೋಕಾರ್ಪಣೆಗೊಳ್ಳಲಿದೆ.
ರಾಜಶೇಖರ ಮಠಪತಿ ರಾಗಂ ಅವರು ಭೀಮಾ ತೀರದ ಕರ್ನಾಟಕ--ಮಹಾರಾಷ್ಟ್ರದ ಗಡಿಯಂಚಿನ ಗ್ರಾಮೀಣ ಸೊಗಡಿನ ಸಂತರ, ಸಾಹಿತಿಗಳ ಜನ ಪದರ ಗಟ್ಟಿ ಸಂಸ್ಕೃತಿಯಲ್ಲಿ ಬೆಳೆದು, 50 ರ ಕಿರಿಯ ಪ್ರಾಯದಲ್ಲಿಯೇ ನೂರೊಂದು ಮೌಲಿಕ ಕೃತಿಗಳನ್ನು ರಚಿಸಿ ಸಾರಸ್ವತ ಲೋಕದ ಹಿರಿಮೆಯನ್ನು ಹೆಚ್ಚಿಸಿದ ಪ್ರತಿಭಾವಂತ ಸಾಹಿತಿ.
ಹಿಂದಿ ಚಲನಚಿತ್ರದ ಹಿರಿಯ ನಿರ್ದೇಶಕ ಏ.ಕೆ.ಅಬ್ಬಾಸ್ ಅವರ ಜೀವನ ಸಾಧನೆ ಕುರಿತು ಮಹತ್ವಪೂರ್ಣ ಗ್ರಂಥ ಬರೆದು ಡಾಕ್ಟರೇಟ್ ಪದವಿಯನ್ನು ಪಡೆದಿದ್ದಾರೆ. ಶ್ರೇಷ್ಠ ಸಾಹಿತಿಗಳಾದ ಹಲಸಂಗಿ ಗೆಳೆಯರ ಬಳಗದ ಹಿರಿಯ ಸಾಹಿತಿ ಸಿಂಪಿ ಲಿಂಗಣ್ಣ ಅವರ ಒಡನಾಟ, ಶಿಶು ಸಂಗಮೇಶ, ಶಂ.ಗು. ಬಿರದಾರರಂಥ ಅನೇಕ ಸಾಹಿತ್ಯ ದಿಗ್ಗಜರ, ಶಿಕ್ಷಕರ ಮಾರ್ಗದರ್ಶನ. ಆಚಾರ ವಿಚಾರ ಸಂಸ್ಕೃತಿಯುಳ್ಳ ಶಿಕ್ಷಕ ತಂದೆ-ತಾಯಿಯ ಸಂಸ್ಕಾರದಲ್ಲಿ ಬೆಳೆದು. ಪೂಜ್ಯ ಶ್ರೀ ಸಿದ್ದೇಶ್ವರ ಸ್ವಾಮೀಜಿ ಅವರ ಅಚ್ಚು ಮೆಚ್ಚಿನ ಶಿಷ್ಯರಾಗಿದ್ಧವರು. ಪೂಜ್ಯ ಶ್ರೀ ಸಿದ್ದೇಶ್ವರ ಸ್ವಾಮೀಜಿ ಅವರ ಕುರಿತು ಮಹತ್ವಪೂರ್ಣ ಹಲವಾರು ವಿಚಾರಗಳನ್ನು ಈ ಸಂತೆಯಿAದ ಸಂತನವರೆಗೆ ಎಂಬ ಅಡಿಬರಹ ಹೊಂದಿದ “ಯೋಗಸ್ಥ” ಕೃತಿ ಇತ್ತೀಚೆಗೆ ಕಳೆದ ಹದಿನೈದು ದಿನಗಳ ಹಿಂದೆ ಗುಡೂರಿನಲ್ಲಿ ಸಾಹಿತ್ಯ ಪ್ರಿಯರಿಂದ ಬಿಡುಗಡೆಗೊಂಡು, ಕೇವಲ ಹದಿನೈದು ದಿನಗಳಲ್ಲಿ ಸಾವಿರಾರು ಕೃತಿಗಳು ಓದುಗರ ಕೈಸೇರಿ ಓದುಗರಿಂದ ಬೇಡಿಕೆ ಹೆಚ್ಚಿದ್ದು ಈಗ ಮತ್ತೇ ಸಾವಿರಾರು ಕೃತಿಗಳು ಬಿಡುಗಡೆಗೆ ಸಿದ್ಧಗೊಂಡಿವೆ. ಇದೇ ಶನಿವಾರ ತೆಲಸಂಗ ಗ್ರಾಮದ ಸಮಸ್ತ ಜನತೆಯ ಸಹಕಾರದೊಂದಿಗೆ ಲೋಕಾರ್ಪಣೆಗೊಳ್ಳಲಿವೆ. ಅಂದಿನ ಕೃತಿ ಬಿಡುಗಡೆ ಸಮಾರಂಭದಲ್ಲಿ ಬೆಂಗಳೂರಿನ ಆಧ್ಯಾತ್ಮ ಚಿಂತಕರಾದ ಶ್ರೀ ಜಂಬುನಾಥ ಮಳಿಮಠ ಅವರು ದಿವ್ಯ ಸಾನಿಧ್ಯ ವಹಿಸಲಿದ್ದಾರೆ. ಯೋಗಸ್ಥ ಕೃತಿಯನ್ನು ತೆಲಸಂಗ ಹಿರೇಮಠದ ಶ್ರೀ ವೀರೇಶ ದೇವರು ತಮ್ಮ ಅಮೃತ ಹಸ್ತದಿಂದ ಲೋಕಾರ್ಪಣೆಗೊಳಿಸಲಿದ್ದಾರೆ. ಕೃತಿಯ ಕುರಿತು ಕಜ್ಜಿಡೋಣಿಯ ಶ್ರೀ ಕೃಷ್ಣಾನಂದ ಶರಣರು ಆಶಯ ನುಡಿಗಳನ್ನು ಹೇಳಲಿದ್ದಾರೆ. ವಿಜಯಪುರ ಡಿವೈಎಸ್ಪಿ ಬಸವರಾಜ್ ಯಲಿಗಾರ. ಲೋಕಾಯುಕ್ತ ಡಿವೈಎಸ್ಪಿ ಸುರೇಶ ರೆಡ್ಡಿ ಅಭಿನಂದನಾ ನುಡಿಗಳನ್ನು ಹೇಳಲಿದ್ದಾರೆ. ಮುಖ್ಯ ಅತಿಥಿಗಳಾಗಿ ಬೆಂಗಳೂರಿನ ವೀರಲೋಕ, ವಿಷ್ಣುಸೇನೆ ಅಧ್ಯಕ್ಷ ವೀರಕಪುತ್ರ ಶ್ರೀನಿವಾಸ, ಹುಮನಾಬಾದ ಕಾಲೇಜು ಉಪನ್ಯಾಸಕ ದಿಲೀಪ್ ಕುಮಾರ್ ಪತಂಗೆ, ಅಕ್ಕಲಕೋಟೆ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ಗುರುಲಿಂಗಪ್ಪ ಡಬಾಲೆ, ಅಶೋಕ ಖೇಣಿ ಯೂಥ್ ಮೂವಮೆಂಟ್ ವಿಜಯಪುರ ಜಿಲ್ಲಾ ಘಟಕ ಅಧ್ಯಕ್ಷ ಕುಶರಾಜ ಪರಣ್ಣವರ ಮುಂತಾದವರು ಭಾಗವಹಿಸಲಿದ್ದಾರೆ.
ಇದೆ ಸಂದರ್ಭದಲ್ಲಿ ಬಹುಮುಖ ಪ್ರತಿಭೆಯ ಉಪನ್ಯಾಸಕ ಕವಿ,ಸಾಹಿತಿ,ಖ್ಯಾತ ವಾಗ್ಮಿ, ಕೃತಿಕಾರ ರಾಜಶೇಖರ ಮಠಪತಿ (ರಾಗಂ) ಅವರನ್ನು ಹಾಗು ವಿವಿಧ ಕ್ಷೇತ್ರಗಳ ಅನೇಕ ಸಾಧಕರ ಸನ್ಮಾನ ಜರುಗಲಿದೆ. ಕಾರಣ ವಿಜಯಪುರ,ಅಥಣಿ, ತೆಲಸಂಗ ಗ್ರಾಮದ ಸುತ್ತ ಮುತ್ತಲಿನ ಸಮಸ್ತ ಜನತೆ ಉಪಸ್ಥಿತರಿದ್ದು ಶೋಭೆ ತರಬೇಕೆಂದು ಕಾರ್ಯಕ್ರಮ ಸಂಯೋಜಕರಾದ ನ್ಯಾಯವಾದಿ ದಾನೇಶ ಅವಟಿ, ಯುವ ಮುಖಂಡ ಸಂತೋಷ ಹತ್ತಿ ಪತ್ರಿಕಾ ಪ್ರಕಟಣೆಯಲ್ಲಿ ವಿನಂತಿಸಿದ್ದಾರೆ.

ರಾಜ್ಯಾದ್ಯಂತ ಆಸಕ್ತರಿಗೆ ವಿಶೇಷ ಸೂಚನೆ:

ಯುವ ಪ್ರತಿಭೆಗಳು, ಹಿರಿ-ಕಿರಿ ಆಸಕ್ತ ಸಾಹಿತಿ, ಕವಿ, ಲೇಖಕರಿಗೆ ಈ ದಿವಸ ವೇದಿಕೆ ಕಲ್ಪಿಸುತ್ತಿದೆ. ಆಸಕ್ತರು ತಮ್ಮ ಸ್ವ ರಚಿತ ಲೇಖನ, ಕಥೆ, ಕವನ , ಶಾಲಾ ಕಾಲೇಜಿನ, ವಿಶ್ವವಿದ್ಯಾಲಯ ವರದಿ, ಹೋರಾಟಗಾರರ ಮನವಿ, ತಮ್ಮ  ಜಿಲ್ಲೆ, ಪಟ್ಟಣ, ತಾಲೂಕು, ಗ್ರಾಮಗಳಲ್ಲಿನ  ಸಮಸ್ಯೆಗಳು ಸೇರಿದಂತೆ ಇತರೆ ಸುದ್ದಿ ಹಾಗೂ ಜಾಹೀರಾತುಗಳನ್ನು ಪ್ರಕಟಿಸಲು ಇಂದೇ ಸಂಪರ್ಕಿಸಿರಿ.

ಸಂಪಾದಕರು ಈ ದಿವಸ ಕನ್ನಡ ದಿನ ಪತ್ರಿಕೆ ವ್ಯಾಟ್ಸಪ್ ಸಂಖ್ಯೆ : 7204279187 / 9900378892 ತಾವು ಟೈಪಿಸಿ eedivasa@gmail.com ಈ ಮೇಲ್ ಗೂ ಮೇಲ್ ಸೆಂಡ್ ಮಾಡಿದರೆ ಪ್ರಕಟಿಸಲಾಗುವುದು.