Thursday, June 27, 2024

ರಾಗಂ ಅವರ "ಯೋಗಸ್ಥ" ಕೃತಿ ಲೋಕರ್ಪಣೆ ಸಮಾರಂಭ'

 ಈ ದಿವಸ ಕನ್ನಡ ದಿನ ಪತ್ರಿಕೆ ವಾರ್ತೆ
ವಿಜಯಪುರ : ವಿಜಯಪುರ ಜಿಲ್ಲೆ ಚಡಚಣ ಪಟ್ಟಣದ ಪ್ರಸ್ತುತ ಬೆಂಗಳೂರು ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಇಂಗ್ಲಿಷ್ ಉಪನ್ಯಾಸಕ ಡಾ. ರಾಜಶೇಖರ ಗಂಗಯ್ಯ.ಮಠಪತಿ (ರಾಗಂ) ಅವರು ರಚಿಸಿದ ಸಂತೆಯಿAದ ಸಂತನೆಡೆಗೆ "ಯೋಗಸ್ಥ" ಕೃತಿ ದ್ವಿತೀಯ ಮುದ್ರಣ ಶನಿವಾರ ದಿನಾಂಕ: 29-06-2024 ರಂದು ಬೆಳಿಗ್ಗೆ 10-00 ಘಂಟೆಗೆ ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನ ತೆಲಸಂಗ ಗ್ರಾಮದ ಶ್ರೀ ಗುರುಬಸಪ್ಪ ರೋಡಗಿ ಕಲ್ಯಾಣ ಮಂಟಪದಲ್ಲಿ ಲೋಕಾರ್ಪಣೆಗೊಳ್ಳಲಿದೆ.
ರಾಜಶೇಖರ ಮಠಪತಿ ರಾಗಂ ಅವರು ಭೀಮಾ ತೀರದ ಕರ್ನಾಟಕ--ಮಹಾರಾಷ್ಟ್ರದ ಗಡಿಯಂಚಿನ ಗ್ರಾಮೀಣ ಸೊಗಡಿನ ಸಂತರ, ಸಾಹಿತಿಗಳ ಜನ ಪದರ ಗಟ್ಟಿ ಸಂಸ್ಕೃತಿಯಲ್ಲಿ ಬೆಳೆದು, 50 ರ ಕಿರಿಯ ಪ್ರಾಯದಲ್ಲಿಯೇ ನೂರೊಂದು ಮೌಲಿಕ ಕೃತಿಗಳನ್ನು ರಚಿಸಿ ಸಾರಸ್ವತ ಲೋಕದ ಹಿರಿಮೆಯನ್ನು ಹೆಚ್ಚಿಸಿದ ಪ್ರತಿಭಾವಂತ ಸಾಹಿತಿ.
ಹಿಂದಿ ಚಲನಚಿತ್ರದ ಹಿರಿಯ ನಿರ್ದೇಶಕ ಏ.ಕೆ.ಅಬ್ಬಾಸ್ ಅವರ ಜೀವನ ಸಾಧನೆ ಕುರಿತು ಮಹತ್ವಪೂರ್ಣ ಗ್ರಂಥ ಬರೆದು ಡಾಕ್ಟರೇಟ್ ಪದವಿಯನ್ನು ಪಡೆದಿದ್ದಾರೆ. ಶ್ರೇಷ್ಠ ಸಾಹಿತಿಗಳಾದ ಹಲಸಂಗಿ ಗೆಳೆಯರ ಬಳಗದ ಹಿರಿಯ ಸಾಹಿತಿ ಸಿಂಪಿ ಲಿಂಗಣ್ಣ ಅವರ ಒಡನಾಟ, ಶಿಶು ಸಂಗಮೇಶ, ಶಂ.ಗು. ಬಿರದಾರರಂಥ ಅನೇಕ ಸಾಹಿತ್ಯ ದಿಗ್ಗಜರ, ಶಿಕ್ಷಕರ ಮಾರ್ಗದರ್ಶನ. ಆಚಾರ ವಿಚಾರ ಸಂಸ್ಕೃತಿಯುಳ್ಳ ಶಿಕ್ಷಕ ತಂದೆ-ತಾಯಿಯ ಸಂಸ್ಕಾರದಲ್ಲಿ ಬೆಳೆದು. ಪೂಜ್ಯ ಶ್ರೀ ಸಿದ್ದೇಶ್ವರ ಸ್ವಾಮೀಜಿ ಅವರ ಅಚ್ಚು ಮೆಚ್ಚಿನ ಶಿಷ್ಯರಾಗಿದ್ಧವರು. ಪೂಜ್ಯ ಶ್ರೀ ಸಿದ್ದೇಶ್ವರ ಸ್ವಾಮೀಜಿ ಅವರ ಕುರಿತು ಮಹತ್ವಪೂರ್ಣ ಹಲವಾರು ವಿಚಾರಗಳನ್ನು ಈ ಸಂತೆಯಿAದ ಸಂತನವರೆಗೆ ಎಂಬ ಅಡಿಬರಹ ಹೊಂದಿದ “ಯೋಗಸ್ಥ” ಕೃತಿ ಇತ್ತೀಚೆಗೆ ಕಳೆದ ಹದಿನೈದು ದಿನಗಳ ಹಿಂದೆ ಗುಡೂರಿನಲ್ಲಿ ಸಾಹಿತ್ಯ ಪ್ರಿಯರಿಂದ ಬಿಡುಗಡೆಗೊಂಡು, ಕೇವಲ ಹದಿನೈದು ದಿನಗಳಲ್ಲಿ ಸಾವಿರಾರು ಕೃತಿಗಳು ಓದುಗರ ಕೈಸೇರಿ ಓದುಗರಿಂದ ಬೇಡಿಕೆ ಹೆಚ್ಚಿದ್ದು ಈಗ ಮತ್ತೇ ಸಾವಿರಾರು ಕೃತಿಗಳು ಬಿಡುಗಡೆಗೆ ಸಿದ್ಧಗೊಂಡಿವೆ. ಇದೇ ಶನಿವಾರ ತೆಲಸಂಗ ಗ್ರಾಮದ ಸಮಸ್ತ ಜನತೆಯ ಸಹಕಾರದೊಂದಿಗೆ ಲೋಕಾರ್ಪಣೆಗೊಳ್ಳಲಿವೆ. ಅಂದಿನ ಕೃತಿ ಬಿಡುಗಡೆ ಸಮಾರಂಭದಲ್ಲಿ ಬೆಂಗಳೂರಿನ ಆಧ್ಯಾತ್ಮ ಚಿಂತಕರಾದ ಶ್ರೀ ಜಂಬುನಾಥ ಮಳಿಮಠ ಅವರು ದಿವ್ಯ ಸಾನಿಧ್ಯ ವಹಿಸಲಿದ್ದಾರೆ. ಯೋಗಸ್ಥ ಕೃತಿಯನ್ನು ತೆಲಸಂಗ ಹಿರೇಮಠದ ಶ್ರೀ ವೀರೇಶ ದೇವರು ತಮ್ಮ ಅಮೃತ ಹಸ್ತದಿಂದ ಲೋಕಾರ್ಪಣೆಗೊಳಿಸಲಿದ್ದಾರೆ. ಕೃತಿಯ ಕುರಿತು ಕಜ್ಜಿಡೋಣಿಯ ಶ್ರೀ ಕೃಷ್ಣಾನಂದ ಶರಣರು ಆಶಯ ನುಡಿಗಳನ್ನು ಹೇಳಲಿದ್ದಾರೆ. ವಿಜಯಪುರ ಡಿವೈಎಸ್ಪಿ ಬಸವರಾಜ್ ಯಲಿಗಾರ. ಲೋಕಾಯುಕ್ತ ಡಿವೈಎಸ್ಪಿ ಸುರೇಶ ರೆಡ್ಡಿ ಅಭಿನಂದನಾ ನುಡಿಗಳನ್ನು ಹೇಳಲಿದ್ದಾರೆ. ಮುಖ್ಯ ಅತಿಥಿಗಳಾಗಿ ಬೆಂಗಳೂರಿನ ವೀರಲೋಕ, ವಿಷ್ಣುಸೇನೆ ಅಧ್ಯಕ್ಷ ವೀರಕಪುತ್ರ ಶ್ರೀನಿವಾಸ, ಹುಮನಾಬಾದ ಕಾಲೇಜು ಉಪನ್ಯಾಸಕ ದಿಲೀಪ್ ಕುಮಾರ್ ಪತಂಗೆ, ಅಕ್ಕಲಕೋಟೆ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ಗುರುಲಿಂಗಪ್ಪ ಡಬಾಲೆ, ಅಶೋಕ ಖೇಣಿ ಯೂಥ್ ಮೂವಮೆಂಟ್ ವಿಜಯಪುರ ಜಿಲ್ಲಾ ಘಟಕ ಅಧ್ಯಕ್ಷ ಕುಶರಾಜ ಪರಣ್ಣವರ ಮುಂತಾದವರು ಭಾಗವಹಿಸಲಿದ್ದಾರೆ.
ಇದೆ ಸಂದರ್ಭದಲ್ಲಿ ಬಹುಮುಖ ಪ್ರತಿಭೆಯ ಉಪನ್ಯಾಸಕ ಕವಿ,ಸಾಹಿತಿ,ಖ್ಯಾತ ವಾಗ್ಮಿ, ಕೃತಿಕಾರ ರಾಜಶೇಖರ ಮಠಪತಿ (ರಾಗಂ) ಅವರನ್ನು ಹಾಗು ವಿವಿಧ ಕ್ಷೇತ್ರಗಳ ಅನೇಕ ಸಾಧಕರ ಸನ್ಮಾನ ಜರುಗಲಿದೆ. ಕಾರಣ ವಿಜಯಪುರ,ಅಥಣಿ, ತೆಲಸಂಗ ಗ್ರಾಮದ ಸುತ್ತ ಮುತ್ತಲಿನ ಸಮಸ್ತ ಜನತೆ ಉಪಸ್ಥಿತರಿದ್ದು ಶೋಭೆ ತರಬೇಕೆಂದು ಕಾರ್ಯಕ್ರಮ ಸಂಯೋಜಕರಾದ ನ್ಯಾಯವಾದಿ ದಾನೇಶ ಅವಟಿ, ಯುವ ಮುಖಂಡ ಸಂತೋಷ ಹತ್ತಿ ಪತ್ರಿಕಾ ಪ್ರಕಟಣೆಯಲ್ಲಿ ವಿನಂತಿಸಿದ್ದಾರೆ.

ರಾಜ್ಯಾದ್ಯಂತ ಆಸಕ್ತರಿಗೆ ವಿಶೇಷ ಸೂಚನೆ:

ಯುವ ಪ್ರತಿಭೆಗಳು, ಹಿರಿ-ಕಿರಿ ಆಸಕ್ತ ಸಾಹಿತಿ, ಕವಿ, ಲೇಖಕರಿಗೆ ಈ ದಿವಸ ವೇದಿಕೆ ಕಲ್ಪಿಸುತ್ತಿದೆ. ಆಸಕ್ತರು ತಮ್ಮ ಸ್ವ ರಚಿತ ಲೇಖನ, ಕಥೆ, ಕವನ , ಶಾಲಾ ಕಾಲೇಜಿನ, ವಿಶ್ವವಿದ್ಯಾಲಯ ವರದಿ, ಹೋರಾಟಗಾರರ ಮನವಿ, ತಮ್ಮ  ಜಿಲ್ಲೆ, ಪಟ್ಟಣ, ತಾಲೂಕು, ಗ್ರಾಮಗಳಲ್ಲಿನ  ಸಮಸ್ಯೆಗಳು ಸೇರಿದಂತೆ ಇತರೆ ಸುದ್ದಿ ಹಾಗೂ ಜಾಹೀರಾತುಗಳನ್ನು ಪ್ರಕಟಿಸಲು ಇಂದೇ ಸಂಪರ್ಕಿಸಿರಿ.

ಸಂಪಾದಕರು ಈ ದಿವಸ ಕನ್ನಡ ದಿನ ಪತ್ರಿಕೆ ವ್ಯಾಟ್ಸಪ್ ಸಂಖ್ಯೆ : 7204279187 / 9900378892 ತಾವು ಟೈಪಿಸಿ eedivasa@gmail.com ಈ ಮೇಲ್ ಗೂ ಮೇಲ್ ಸೆಂಡ್ ಮಾಡಿದರೆ ಪ್ರಕಟಿಸಲಾಗುವುದು.

No comments:

Post a Comment