Friday, September 15, 2023
ನಾಳೆ ದಕ್ಷಿಣ ವಾರಣಾಸಿ ವಿಜಯಪುರ ನರಸಿಂಹ ದೇವರು ಗ್ರಂಥ ಲೋಕಾರ್ಪಣೆ
ಈ ದಿವಸ ವಾರ್ತೆ
ವಿಜಯಪುರ: ನರಸಿಂಹ ದೇವ ಟ್ರಸ್ಟ್ ದೇವಸ್ಥಾನ ಜೀರ್ಣೋದ್ಧಾರ ಸಮಿತಿ (ರಿ), ಹಾಗೂ ರಾಷ್ಟ್ರೀಯ ಸಂಶೋಧನಾ ವೇದಿಕೆ ವಿಜಯಪುರ ಇವರ ಸಂಯುಕ್ತ ಆಶ್ರಯದಲ್ಲಿ ಕ.ವಿ.ವಿ. ಧಾರವಾಡ ಗೌರವ ಉಪನ್ಯಾಸಕ ಹಾಗೂ ರಾಷ್ಟೀಯ ಸಂಶೋಧನಾ ವೇದಿಕೆಯ ಗೌರವ ಅಧ್ಯಕ್ಷರಾದ ಡಾ. ಸಂಗಮೇಶ ಕಲ್ಯಾಣಿ ವಿರಚಿತ ದಕ್ಷಿಣ ವಾರಣಾಸಿ ವಿಜಯಪುರ ನರಸಿಂಹ ದೇವರು ಗ್ರಂಥ ಲೋಕಾರ್ಪಣೆ ಸಮಾರಂಭ ಕಾರ್ಯಕ್ರಮವು ನಗರದ ಶ್ರೀ ನರಸಿಂಹ ದೇವಸ್ಥಾನ ವಿಜಯಪುರದಲ್ಲಿ ದಿನಾಂಕ : 16-09-2023 ರಂದು ಬೆಳಿಗ್ಗೆ 10.30 ಗಂಟೆಗೆ ಜರುಗಲಿದೆ.
ವಿಜಯಪುರ ನಗರ ಶಾಸಕರಾದ ಬಸನಗೌಡ. ಆರ್. ಪಾಟೀಲ ಯತ್ನಾಳ ಗ್ರಂಥ ಬಿಡುಗಡೆಗೊಳಿಸಲಿದ್ದಾರೆ. ವಿಜಯಪುರದ ಗಣ್ಯ ವ್ಯಾಪಾರಸ್ಥರಾದ ವಿಶ್ವನಾಥ ಭೋಗಶೆಟ್ಟಿ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಶ್ರೀ ನರಸಿಂಹ ದೇಷ ಟ್ರಸ್ಟ್ ವಿಜಯಪುರದÀ ಅಧ್ಯಕ್ಷರಾದ ಸುಭಾಷ ಪೂಜಾರಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ರಾಷ್ಟ್ರೀಯ ಸಂಶೋಧನಾ ವೇದಿಕೆ ಅಧ್ಯಕ್ಷರಾದ ಲಾಯಪ್ಪ ಇಂಗಳೆ ಗ್ರಂಥ ಪರಿಚಯಿಸಲಿದ್ದಾರೆ.
ಕ.ವಿ.ವಿ. ಧಾರವಾಡ ಗೌರವ ಉಪನ್ಯಾಸಕರಾದ ಡಾ. ಸಂಗಮೇಶ ಕಲ್ಯಾಣಿ, ಕರ್ನೂಲಿನ ಗಣ್ಯವರ್ತಕರಾದ ಸಾಯಿ ಶಿವಕುಮಾರ, ಪೂಜಾರಿ ಮನೆತನದ ಹಿರಿಯರಾದ ಮಹಾದೇವಿ ಪೂಜಾರಿ, ನರಸಿಂಹ ದೇವರ ಟ್ರಸ್ಟ್ ಹಾಗೂ ಸಿದ್ಧಸಿರಿ ಸೌಹಾರ್ದ ನಿರ್ದೇಶಕರಾದ ಶಿವಾನಂದ ಅಣ್ಣೆಪ್ಪನವರ, ಶ್ರೀ ಸಿದ್ದೇಶ್ವರ ಕಲಾ ಮಹಾವಿದ್ಯಾಲಯದ ವಿಶ್ರಾಂತ ಪ್ರಾಚಾರ್ಯರಾದ ಪ್ರೊ. ವಿ.ವಿ ಹಿರೇಮಠ, ಶ್ರೀ ನರಸಿಂಹ ದೇವ ಟ್ರಸ್ಟ್ ವಿಜಯಪುರ ಕಾರ್ಯದರ್ಶಿ ಶಿವಶರಣ ಕಲ್ಲೂರ, ಹಾಗೂ ಟ್ರಸ್ಟಿನ ನಿರ್ದೇಶಕರಾದ ರಮೇಶ ಬನ್ನಟ್ಟಿ ಉಪಸ್ಥಿತಿ ವಹಿಸಲಿದ್ದಾರೆ ಎಂದು ಶ್ರೀ ನರಸಿಂಹದೇವ ಟ್ರಸ್ಟಿಗಳಾದ ಮಹೇಂದ್ರ ಪೂಜಾರಿ ಹಾಗೂ ವಿರೇಂದ್ರ ಪಾಟೀಲ ಜಂಟಿಯಾಗಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Thursday, September 14, 2023
ಜಿಲ್ಲಾಸ್ಪತ್ರೆಯ ಹಿರಿಯ ಆಪ್ತ ಸಮಾಲೋಚಕ ರವಿ ಕಿತ್ತೂರ ಅವರ ಮಾತೋಶ್ರೀ ಇನ್ನಿಲ್ಲ.
ಬಸವ್ವ ಸಿದ್ಧಪ್ಪ ಕಿತ್ತೂರ
ಈ ದಿವಸ ವಾರ್ತೆ
ವಿಜಯಪುರ : ಇಲ್ಲಿನ ಜಿಲ್ಲಾಸ್ಪತ್ರೆಯ ಹಿರಿಯ ಆಪ್ತ ಸಮಾಲೋಚಕ ರವಿ ಕಿತ್ತೂರ ಅವರ ಮಾತೋಶ್ರೀ ಬಸವ್ವ ಸಿದ್ಧಪ್ಪ ಕಿತ್ತೂರ ( 82) ಗುರುವಾರ ಹೃದಯಾಘಾತದಿಂದ ನಿಧನರಾದರು.
ಮೃತರಿಗೆ ಪತಿ, ಎಂಟು ಜನ ಪುತ್ರರು, ಇಬ್ಬರು ಪುತ್ರಿಯರಿದ್ದಾರೆ.
Wednesday, September 13, 2023
ಗಂಗಾ ಕಲ್ಯಾಣ: ಬಾಕಿ ಅರ್ಜಿಗಳನ್ನು ಎರಡು ತಿಂಗಳಲ್ಲಿ ಪೂರ್ಣಗೊಳಿಸಿ: ಮುಖ್ಯಮಂತ್ರಿ ಸಿದ್ದರಾಮಯ್ಯ ಖಡಕ್ ಸೂಚನೆ
ಈ ದಿವಸ ವಾರ್ತೆ
ಜೇಬಲ್ಲಿ ಇಟ್ಕೊಂಡು ಏನ್ ಮಾಡ್ತಾ ಇದೀರ?
ವಿದ್ಯುತ್ ಉಪಕೇಂದ್ರ ಆರಂಭಿಸಲು ಮತ್ತು ಟ್ರಾನ್ಸ್ ಫಾರ್ಮರ್ ಲೈನ್ ಗೆ ಭೂಮಿ ಒದಗಿಸುವಂತೆ ಎಷ್ಟು ಅರ್ಜಿಗಳು ಬಂದಿವೆ ಎಂದು ಮುಖ್ಯಮಂತ್ರಿಗಳು ಪ್ರಶ್ನಿಸಿದರು. ಇದಕ್ಕೆ ಅಧಿಕಾರಿಯೊಬ್ಬರ ಉತ್ತರದಿಂದ ಅಸಮಾಧಾನಗೊಂಡ ಸಿಎಂ ಆ ಅರ್ಜಿಗಳನ್ನು ಜೇಬಿನಲ್ಲಿ ಇಟ್ಕೊಂಡು ಏನ್ ಮಾಡ್ತಾ ಇದೀರ ಮೊದಲು ಆ ಎಲ್ಲಾ ಅರ್ಜಿಗಳ ಬೇಡಿಕೆ ಪೂರ್ಣಗೊಳಿಸಿ ಎಂದು ಸೂಚಿಸಿದರು.
ಬೆಂಗಳೂರು ಸೆ 23: ಗಂಗಾ ಕಲ್ಯಾಣ ಕೊಳವೆ ಬಾವಿ ವಿದ್ಯುದೀಕರಣಕ್ಕೆ 1948 ಅರ್ಜಿಗಳು ಬಾಕಿ ಉಳಿದಿರುವ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಮುಖ್ಯಮಂತ್ರಿಗಳು ಇದನ್ನು ಇನ್ನು ಎರಡು ತಿಂಗಳಲ್ಲಿ ಪೂರ್ಣಗೊಳಿಸಿ ಎಂದು ಸ್ಪಷ್ಟ ಸೂಚನೆ ನೀಡಿದರು.
ಇಂದು ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಮುಂದುವರೆದ ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ಸಭೆಯಲ್ಲಿ ಇಂಧನ ಇಲಾಖೆಯ ಹಿರಿಯ ಅಧಿಕಾರಿಗಳಿಗೆ ಈ ಸೂಚನೆ ನೀಡಿದರು.
ಎಸ್ಕಾಂಗಳು ವಿದ್ಯುಚ್ಛಕ್ತಿ ಸಂಪರ್ಕ ಒದಗಿಸುವುದಕ್ಕೆ ಅನಗತ್ಯ ವಿಳಂಬ ಮಾಡಕೂಡದು. ಶುಲ್ಕ ಪಾವತಿಸಿಲ್ಲ ಎಂದು ಬಾಕಿ ಉಳಿಸಿಕೊಳ್ಳಬಾರದು. ಇದಕ್ಕೆ ಟ್ರಾನ್ಸ್‌ಫಾರ್ಮರ್ ಗಳು ಇಲ್ಲ, ಕಂಬಗಳಿಲ್ಲ ಎಂಬ ನೆಪಗಳನ್ನು ಹೇಳಬಾರದು ಎಂದು ಇಂಧನ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.
ಜೆಸ್ಕಾಂ ಮತ್ತು ಹೆಸ್ಕಾಂ ಗಳಲ್ಲಿ ಬಾಕಿ ಅರ್ಜಿಗಳ ಸಂಖ್ಯೆ ಹೆಚ್ಚಿರುವುದನ್ನು ಪರಿಶೀಲಿಸಿದ ಮುಖ್ಯಮಂತ್ರಿಗಳು ಅಭಿಯಾನ ಕೈಗೆತ್ತಿಕೊಂಡು ವಿದ್ಯುದೀಕರಣ ಕೈಗೊಳ್ಳಲು ಸೂಚಿಸಿದರು.
ಗಂಗಾ ಕಲ್ಯಾಣ ಯೋಜನೆಯಡಿ ಬೋರ್ ವೆಲ್ ಕೊರೆಯುವುದು ಹಾಗೂ ವಿದ್ಯುದೀಕರಣದಲ್ಲಿ ಅನಗತ್ಯವಾಗಿ ವಿಳಂಬ ಮಾಡಬಾರದು. ಈ ವಿಳಂಬ ನೀತಿ ಅಪರಾಧ ಎಂದು ಮುಖ್ಯಮಂತ್ರಿಗಳು ಎಚ್ಚರಿಕೆ ನೀಡಿದರು.




