Friday, September 15, 2023

ನಾಳೆ ದಕ್ಷಿಣ ವಾರಣಾಸಿ ವಿಜಯಪುರ ನರಸಿಂಹ ದೇವರು ಗ್ರಂಥ ಲೋಕಾರ್ಪಣೆ


ಈ ದಿವಸ ವಾರ್ತೆ

ವಿಜಯಪುರ: ನರಸಿಂಹ ದೇವ ಟ್ರಸ್ಟ್ ದೇವಸ್ಥಾನ ಜೀರ್ಣೋದ್ಧಾರ ಸಮಿತಿ (ರಿ), ಹಾಗೂ ರಾಷ್ಟ್ರೀಯ ಸಂಶೋಧನಾ ವೇದಿಕೆ ವಿಜಯಪುರ ಇವರ ಸಂಯುಕ್ತ ಆಶ್ರಯದಲ್ಲಿ ಕ.ವಿ.ವಿ. ಧಾರವಾಡ ಗೌರವ ಉಪನ್ಯಾಸಕ ಹಾಗೂ ರಾಷ್ಟೀಯ ಸಂಶೋಧನಾ ವೇದಿಕೆಯ ಗೌರವ ಅಧ್ಯಕ್ಷರಾದ ಡಾ. ಸಂಗಮೇಶ ಕಲ್ಯಾಣಿ ವಿರಚಿತ ದಕ್ಷಿಣ ವಾರಣಾಸಿ ವಿಜಯಪುರ ನರಸಿಂಹ ದೇವರು ಗ್ರಂಥ ಲೋಕಾರ್ಪಣೆ ಸಮಾರಂಭ ಕಾರ್ಯಕ್ರಮವು ನಗರದ ಶ್ರೀ ನರಸಿಂಹ ದೇವಸ್ಥಾನ ವಿಜಯಪುರದಲ್ಲಿ ದಿನಾಂಕ : 16-09-2023 ರಂದು ಬೆಳಿಗ್ಗೆ 10.30 ಗಂಟೆಗೆ ಜರುಗಲಿದೆ.


ವಿಜಯಪುರ ನಗರ ಶಾಸಕರಾದ ಬಸನಗೌಡ. ಆರ್. ಪಾಟೀಲ ಯತ್ನಾಳ ಗ್ರಂಥ ಬಿಡುಗಡೆಗೊಳಿಸಲಿದ್ದಾರೆ. ವಿಜಯಪುರದ ಗಣ್ಯ ವ್ಯಾಪಾರಸ್ಥರಾದ ವಿಶ್ವನಾಥ ಭೋಗಶೆಟ್ಟಿ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಶ್ರೀ ನರಸಿಂಹ ದೇಷ ಟ್ರಸ್ಟ್ ವಿಜಯಪುರದÀ ಅಧ್ಯಕ್ಷರಾದ ಸುಭಾಷ ಪೂಜಾರಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ರಾಷ್ಟ್ರೀಯ ಸಂಶೋಧನಾ ವೇದಿಕೆ ಅಧ್ಯಕ್ಷರಾದ ಲಾಯಪ್ಪ ಇಂಗಳೆ ಗ್ರಂಥ ಪರಿಚಯಿಸಲಿದ್ದಾರೆ.

ಕ.ವಿ.ವಿ. ಧಾರವಾಡ ಗೌರವ ಉಪನ್ಯಾಸಕರಾದ ಡಾ. ಸಂಗಮೇಶ ಕಲ್ಯಾಣಿ, ಕರ್ನೂಲಿನ ಗಣ್ಯವರ್ತಕರಾದ ಸಾಯಿ ಶಿವಕುಮಾರ, ಪೂಜಾರಿ ಮನೆತನದ ಹಿರಿಯರಾದ ಮಹಾದೇವಿ ಪೂಜಾರಿ, ನರಸಿಂಹ ದೇವರ ಟ್ರಸ್ಟ್ ಹಾಗೂ ಸಿದ್ಧಸಿರಿ ಸೌಹಾರ್ದ ನಿರ್ದೇಶಕರಾದ ಶಿವಾನಂದ ಅಣ್ಣೆಪ್ಪನವರ, ಶ್ರೀ ಸಿದ್ದೇಶ್ವರ ಕಲಾ ಮಹಾವಿದ್ಯಾಲಯದ ವಿಶ್ರಾಂತ ಪ್ರಾಚಾರ್ಯರಾದ ಪ್ರೊ. ವಿ.ವಿ ಹಿರೇಮಠ, ಶ್ರೀ ನರಸಿಂಹ ದೇವ ಟ್ರಸ್ಟ್ ವಿಜಯಪುರ ಕಾರ್ಯದರ್ಶಿ ಶಿವಶರಣ ಕಲ್ಲೂರ, ಹಾಗೂ ಟ್ರಸ್ಟಿನ ನಿರ್ದೇಶಕರಾದ ರಮೇಶ ಬನ್ನಟ್ಟಿ ಉಪಸ್ಥಿತಿ ವಹಿಸಲಿದ್ದಾರೆ ಎಂದು ಶ್ರೀ ನರಸಿಂಹದೇವ ಟ್ರಸ್ಟಿಗಳಾದ ಮಹೇಂದ್ರ ಪೂಜಾರಿ ಹಾಗೂ ವಿರೇಂದ್ರ ಪಾಟೀಲ ಜಂಟಿಯಾಗಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

No comments:

Post a Comment