Saturday, July 8, 2023

ಆರ್‌ಸಿಯುಬಿ ನಾಮನಿರ್ದೇಶನ ಸದಸ್ಯರಾಗಿ ಮಣ್ಣೂರ ನೇಮಕ


ಈ ದಿವಸ ವಾರ್ತೆ
ವಿಜಯಪುರ: ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ವಿದ್ಯಾವಿಷಯಕ್ ಪರಿಷತ್ತಿನ ಪ್ರಾಧಿಕಾರಕ್ಕೆ ನಾಮ ನಿರ್ದೇಶನ ಸದಸ್ಯರನ್ನಾಗಿ ಕುಲಪತಿಗಳನುಮೋದನೆ ಮೇರೆಗೆ ವಿಜಯಪುರ ನಗರದ ವಿದ್ಯಾ ವರ್ಧಕ ಸಂಘ ವಿವಿಎಸ್ ಆರ್ಟ್ಸ್, ಕಾಮರ್ಸ್ ಮತ್ತು ಬಿಸಿಎ ಪದವಿ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಜಿ.ಎಚ್. ಮಣ್ಣೂರ ಅವರನ್ನು ನೇಮಕ ಮಾಡಲಾಗಿದೆ ಎಂದು ಅಧಿಸೂಚನೆಯನ್ನುಕುಲ ಸಚಿವರರಾದ ರಾಜಶ್ರೀ ಜೈನಾಪೂರ ಹೊರಡಿಸಿದ್ದಾರೆ. ಜಿ.ಎಚ್. ಮಣ್ಣೂರ ಅವರನ್ನು ದರಬಾರ  ಆಡಳಿತ ಮಂಡಳಿ ವರ್ಗದವರು, ಉಪನ್ಯಾಸಕ ಸಿಬ್ಬಂದಿ ಹಾಗೂಅಪಾರ ವಿದ್ಯಾರ್ಥಿ ಬಳಗದವರು ಅಭಿನಂದಿಸಿದ್ದಾರೆ.

ಸಮ್ಮೇಳನದ ಪೂರ್ವ ಸಿದ್ದತಾ ಸಭೆ

 ಈ ದಿವಸ ವಾರ್ತೆ

ವಿಜಯಪುರ: ದಲಿತ ಸಾಹಿತ್ಯ ಪರಿಷತ್ತು (ರಿ) ರಾಜ್ಯ ಘಟಕ ಗದಗ ಹಾಗೂ ಜಿಲ್ಲಾ ಘಟಕ ವಿಜಯಪುರ ಬೆಳ್ಳಿ ಸಂಭ್ರಮದ ನಿಮಿತ್ಯ‌ ಜುಲೈ ೨೯, ಮತ್ತು ೩೦- ೨೦೨೩ ರಂದು ಎರಡು ದಿನಗಳ ಕಾಲ ನಡೆಯುವ ೧೦ ನೇ ಅಖಿಲ ಭಾರತ ದಲಿತ ಸಾಹಿತ್ಯ ಸಮ್ಮೇಳನದ ಪೂರ್ವ  ಸಿದ್ದತೆಗಾಗಿ 3ನೇ ಪೂರ್ವ ಭಾವಿ ಸಭೆಯನ್ನು  ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜು ವಿಜಯಪುರದಲ್ಲಿ ದಿನಾಂಕ ೯/೭/೨೦೨೩ ರಂದು ಬೆಳಿಗ್ಗೆ 10.00 ಗಂಟೆಗೆ ಕರೆಯಲಾಗಿದೆ. 

ಈ  ಪೂರ್ವಭಾವಿ ಸಭೆಗೆ ದಸಾಪದ ರಾಜ್ಯ/ಜಿಲ್ಲಾ/ತಾಲ್ಲೂಕಿನ ಎಲ್ಲ ಪದಾಧಿಕಾರಿಗಳು, ದಲಿತ ಸಾಹಿತಿಗಳು, ಪ್ರಗತಿಪರ  ಚಿಂತಕರು,ಮತ್ತು ದಲಿತ ಸಂಘರ್ಷ ಸಮಿತಿಯ ಪದಾಧಿಕಾರಿಗಳು ಈ ಸಭೆಗೆ ಆಗಮಿಸಲು ರಾಜ್ಯ ಘಟಕದ ಅಧ್ಯಕ್ಷರಾದ ಡಾ. ಅರ್ಜುನ ಗೊಳಸಂಗಿ, ಬೆಳಗಾವಿ ವಿಭಾಗೀಯ ಸಂಯೋಜಕರಾದಕರಾದ ಡಾ.ಸುಜಾತಾ ಚಲವಾದಿ,ವಿಜಯಪುರ ,ಜಿಲ್ಲಾ ಘಟಕದ ಅಧ್ಯಕ್ಷರಾದ ಶ್ರೀ ಬಸವರಾಜ ಜಾಲವಾದಿ ಜಂಟಿಯಾಗಿ ಪ್ರಕಟಣೆಯಲ್ಲಿ  ತಿಳಿಸಿದ್ದಾರೆ.

ಸ್ಮರಣ ಸಂಚಿಕೆ ಕಥೆ, ಕವಿತೆ ಲೇಖನಗಳಿಗೆ ಆಹ್ವಾನ


 ಈ ದಿವಸ ವಾರ್ತೆ

ವಿಜಯಪುರ: ದಲಿತ ಸಾಹಿತ್ಯ ಪರಿಷತ್ತು (ರಿ) ರಾಜ್ಯ ಘಟಕ, ಗದಗ ವತಿಯಿಂದ ಜುಲೈ 29 ಹಾಗೂ 30- 2023 ರಂದು ವಿಜಯಪುರ ನಗರದ ಕಂದಗಲ್ಲ ಹಣಮಂತರಾಯ ರಂಗ ಮಂದಿರದಲ್ಲಿ 10ನೇ ಅಖಿಲ ಭಾರತ ದಲಿತ ಸಾಹಿತ್ಯ ಸಮ್ಮೇಳನ ಜರುಗಲಿದೆ. ಈ ಸಮ್ಮೇಳನದಲ್ಲಿ ಸ್ಮರಣ ಸಂಚಿಕೆ ತರಲಾಗುತ್ತಿದೆ ಹಾಗಾಗಿ, ದಲಿತ ಸಾಹಿತ್ಯ, ದಲಿತ ಚಳುವಳಿ ನಡೆದು ಬಂದ ದಾರಿ, ದಲಿತ ಸಮುದಾಯದ ಮುಂದಿನ ದಾರಿ, ಬಾಬಾ ಸಾಹೇಬ್ ಡಾ. ಅಂಬೇಡ್ಕರ್ ಅವರನ್ನು ಇಂದಿನ ಪೀಳಿಗೆಗ ಪರಿಚಯಿಸುವ ವಿಭಿನ್ನ ಲೇಖನಗಳು ಮತ್ತು ಕಥೆ, ಕವಿತೆ ಹಾಗೂ ಗಝಲ್ ಗಳನ್ನು ಈ ಸ್ಮರಣ ಸಂಚಿಕೆಗೆ ಕಳಿಸಬಹುದಾಗಿದೆ. 



ಆಸಕ್ತ ಕವಿ ಬರಹಗಾರರು ಜುಲೈ 16.07.2023 ರ ಒಳಗಾಗಿ dspayg@gmail.com ಮೇಲ್ ಐಡಿಗೆ ತಮ್ಮ ಲೇಖನ, ಕಥೆ, ಕವಿತೆ ಗಝಲ್ ಗಳನ್ನು ಕಳುಹಿಸಬಹುದು. ನುಡಿ ಮತ್ತು ಪಿಡಿಎಫ್ ಫೈಲ್ ಮಾಡಿ ಕಳಿಸಿಕೊಡಬಹುದಾಗಿದೆ ಸಂಪಾದಕ ಮಂಡಳಿ ಆಯ್ದವುಗಳನ್ನು ಮಾತ್ರ ಪ್ರಕಟಿಸಲಾಗುವುದು ಎಂದು ಪ್ರಕಟಣೆಯಲ್ಲಿ ದಲಿತ ಸಾಹಿತ್ಯ ಪರಿಷತ್ತಿನ ರಾಜ್ಯಾಧ್ಯಕ್ಷರಾದ ಡಾ. ಅರ್ಜುನ ಗೊಳಸಂಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Thursday, July 6, 2023

06-07-2023 EE DIVASA KANNADA DAILY NEWS PAPER

07-07-2023 EE DIVASA KANNADA DAILY NEWS PAPER

ಜಿಲ್ಲೆಯ ವಿವಿಧ ಗ್ರಾಮ ಪಂಚಾಯತಿಗಳಿಗೆ ಚುನಾವಣೆ ನಡೆಸಲು ದಿನಾಂಕ ನಿಗದಿಗೊಳಿಸಿ ಅಧಿಸೂಚನೆ ಪ್ರಕಟ

ಈ ದಿವಸ ವಾರ್ತೆ

ವಿಜಯಪುರ:  ಅವಧಿ ಮುಕ್ತಾಯವಾಗಲಿರುವ. ಜಿಲ್ಲೆಯ ಯಲಗೂರ, ಬಳಬಟ್ಟಿ ಗ್ರಾಮ ಪಂಚಾಯತಿಗಳಿಗೆ ಸಾರ್ವತ್ರಿಕ ಚುನಾವಣೆ ಹಾಗೂ ವಿವಿಧ ಕಾರಣಗಳಿಂದ ತೆರವಾಗಿರುವ  ಜಾಲಗೇರಿ, ಕುಂಟೋಜಿ, ಹುಲ್ಲೂರ, ಅಂಜುಟಗಿ ಹಾಗೂ ಗುಬ್ಬೇವಾಡ ಗ್ರಾಮ ಪಂಚಾಯತಿಯ ತೆರವಾದ ಸದಸ್ಯ ಸ್ಥಾನಗಳಿಗೆ ಉಪ ಚುನಾವಣೆ ನಡೆಸಲು ದಿನಾಂಕ ನಿಗದಿಗೊಳಿಸಿ ಜಿಲ್ಲಾ ಚುನಾವಣಾಧಿಕಾರಿಗಳಾದ ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರ ಅವರು ಅಧಿಸೂಚನೆ ಹೊರಡಿಸಿದ್ದಾರೆ.

ಅಧಿಸೂಚನೆ ವೇಳಾಪಟ್ಟಿಯಂತೆ ನಾಮಪತ್ರಗಳನ್ನು ಸಲ್ಲಿಸಲು  ದಿನಾಂಕ : 12-07-2023ರಂದು ಕೊನೆಯ ದಿನಾಂಕವಾಗಿದೆ.  ನಾಮಪತ್ರಗಳ ಪರಿಶೀಲನೆ ದಿನಾಂಕ :13-07-2023, ಉಮೇದುವಾರಿಕೆಯನ್ನು ಹಿಂತೆಗೆದುಕೊಳ್ಳಲು ದಿನಾಂಕ : 15-07-2023 ಕೊನೆಯ ದಿನವಾಗಿದೆ. ಮತದಾನ ಅವಶ್ಯವಿದ್ದರೆ ದಿನಾಂಕ : 23-07-2023 ಬೆಳಿಗ್ಗೆ 7ರಿಂದ ಸಂಜೆ 5ಗಂಟೆಯವರೆಗೆ ಮತದಾನ ಹಾಗೂ ದಿನಾಂಕ: 26-07-2023 ಚುನಾವಣೆಯನ್ನು ಯಾವ ದಿನಾಂಕಕ್ಕೆ ಮುಂಚೆ ಮುಕ್ತಾಯಗೊಳಿಸಬೇಕೋ ಆ ದಿನಾಂಕ ಮತ್ತು ದಿನವಾಗಿದೆ.