ಈ ದಿವಸ ವಾರ್ತೆ
ವಿಜಯಪುರ: ದಲಿತ ಸಾಹಿತ್ಯ ಪರಿಷತ್ತು (ರಿ) ರಾಜ್ಯ ಘಟಕ ಗದಗ ಹಾಗೂ ಜಿಲ್ಲಾ ಘಟಕ ವಿಜಯಪುರ ಬೆಳ್ಳಿ ಸಂಭ್ರಮದ ನಿಮಿತ್ಯ ಜುಲೈ ೨೯, ಮತ್ತು ೩೦- ೨೦೨೩ ರಂದು ಎರಡು ದಿನಗಳ ಕಾಲ ನಡೆಯುವ ೧೦ ನೇ ಅಖಿಲ ಭಾರತ ದಲಿತ ಸಾಹಿತ್ಯ ಸಮ್ಮೇಳನದ ಪೂರ್ವ ಸಿದ್ದತೆಗಾಗಿ 3ನೇ ಪೂರ್ವ ಭಾವಿ ಸಭೆಯನ್ನು ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜು ವಿಜಯಪುರದಲ್ಲಿ ದಿನಾಂಕ ೯/೭/೨೦೨೩ ರಂದು ಬೆಳಿಗ್ಗೆ 10.00 ಗಂಟೆಗೆ ಕರೆಯಲಾಗಿದೆ.
ಈ ಪೂರ್ವಭಾವಿ ಸಭೆಗೆ ದಸಾಪದ ರಾಜ್ಯ/ಜಿಲ್ಲಾ/ತಾಲ್ಲೂಕಿನ ಎಲ್ಲ ಪದಾಧಿಕಾರಿಗಳು, ದಲಿತ ಸಾಹಿತಿಗಳು, ಪ್ರಗತಿಪರ ಚಿಂತಕರು,ಮತ್ತು ದಲಿತ ಸಂಘರ್ಷ ಸಮಿತಿಯ ಪದಾಧಿಕಾರಿಗಳು ಈ ಸಭೆಗೆ ಆಗಮಿಸಲು ರಾಜ್ಯ ಘಟಕದ ಅಧ್ಯಕ್ಷರಾದ ಡಾ. ಅರ್ಜುನ ಗೊಳಸಂಗಿ, ಬೆಳಗಾವಿ ವಿಭಾಗೀಯ ಸಂಯೋಜಕರಾದಕರಾದ ಡಾ.ಸುಜಾತಾ ಚಲವಾದಿ,ವಿಜಯಪುರ ,ಜಿಲ್ಲಾ ಘಟಕದ ಅಧ್ಯಕ್ಷರಾದ ಶ್ರೀ ಬಸವರಾಜ ಜಾಲವಾದಿ ಜಂಟಿಯಾಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
No comments:
Post a Comment