Saturday, January 22, 2022

ಜಿಲ್ಲೆಯಲ್ಲಿ ಶನಿವಾರ 305 ಮಂದಿಗೆ ಕೊರೋನಾ ದೃಢ

ಈ ದಿವಸ ವಾರ್ತೆ 

 ವಿಜಯಪುರ: ಜಿಲ್ಲೆಯಲ್ಲಿ ಶನಿವಾರ 305 ಮಂದಿಗೆ ಕೊರೋನಾ ಸೋಂಕು ದೃಢಪಟ್ಟಿದ್ದು, 79 ಸೋಂಕಿತರು ಗುಣಮುಖಂಡ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ. ನಗರದಲ್ಲಿ 98, ವಿಜಯಪುರ ಗ್ರಾಮೀಣ 16, ಬಬಲೇಶ್ವರ 7, ತಿಕೋಟಾ 5, ಬಸವನಬಾಗೇವಾಡಿ 29, ಕೊಲ್ಹಾರ 12, ನಿಡಗುಂದಿ 8, ಇಂಡಿ 43, ಚಡಚಣ 20, ಮುದ್ದೇಬಿಹಾಳ 6, ಸಿಂದಗಿ 55, ದೇವರಹಿಪ್ಪರಗಿ 5 ಹಾಗೂ ಇತರೆ ಜಿಲ್ಲೆಯ ಓರ್ವ ಸೇರಿದಂತೆ 305 ಜನರಿಗೆ ಸೋಂಕು ತಗುಲಿದೆ.

ವೃದ್ಧೆ ಸಾವು: ಜಿಲ್ಲೆಯಲ್ಲಿ ಕೋವಿಡ್ ಸೋಂಕಿಗೆ 70 ವರ್ಷ ವೃದ್ಧೆಯೊಬ್ಬಳು ಸಾವಿಗೀಡಾಗಿದ್ದಾಳೆ. ವೃದ್ಧೆ ತೀವ್ರ ಉಸಿರಾಟ ತೊಂದರೆ, ಹೊಟ್ಟೆ ನೋವು, ಎಚ್‌ಟಿಎನ್, ಟೈಪ್ 2 ಡಯಾಬಿಟಿಸ್ ಸಂಬAಧಿತ ಕಾಯಿಲೆಗಳಿಂದ ಬಳಲಿ ಕಲಬುರಗಿಯಿಂದ ಆಗಮಿಸಿ ನಗರದ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದಳು. ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದು, ಕೋವಿಡ್ ಎರಡೂ ಪಡೆದುಕೊಂಡಿದ್ದಳು. ಮೃತಳ ಅಂತ್ಯ ಸಂಸ್ಕಾರ ಶಿಷ್ಟಾಚಾರದಂತೆ ನೆರವೇರಿಸಲಾಗಿದೆ ಎಂದು ಜಿಲ್ಲಾಧಿಕಾರಿ ಪಿ.ಸುನೀಲಕುಮಾರ ತಿಳಿಸಿದ್ದಾರೆ.

Thursday, January 20, 2022

21-01-2022 EE DIVASA KANNADA DAILY NEWS PAPER

ಮಹಿಳಾ ವಿವಿಗೆ ಕೊರೋನಾ ದಾಳಿ

 ಈ ದಿವಸ ವಾರ್ತೆ

ವಿಜಯಪುರ: ಐದಕ್ಕಿಂತ ಹೆಚ್ಚು ವಿದ್ಯಾರ್ಥಿನಿಯರಿಗೆ ಕೊರೊನಾ ಸೋಂಕು ತಗುಲಿರುವ ಹಿನ್ನೆಲೆಯಲ್ಲಿ ಮತ್ತು ಕೊರೊನಾ ಸಾಂಕ್ರಾಮಿಕ ರೋಗವು ವ್ಯಾಪಕವಾಗಿ ಹರಡುತ್ತಿರುವುದನ್ನು ತಡೆಗಟ್ಟುವ ಸಲುವಾಗಿ ಈ ತಿಂಗಳ 27ರವರೆಗೆ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿ ಲಯಕ್ಕೆ ರಜೆ ಘೋಷಿಸಲಾಗಿದೆ. ವಿಶ್ವವಿದ್ಯಾನಿಲಯದಲ್ಲಿ ಐದಕ್ಕಿಂತ ಹೆಚ್ಚು ಕೊರೊನಾ ಸೋಂಕಿನ ಪ್ರಕರಣಗಳು ವರದಿಯಾದಲ್ಲಿ ವಿವಿಗೆ ಒಂದು ವಾರ ರಜೆ ಘೋಷಿಸುವಂತೆ ಜಿಲ್ಲಾಧಿಕಾರಿಗಳು ಆದೇಶ ನೀಡಿದ್ದ ಹಿನ್ನೆಲೆಯಲ್ಲಿ ರಜೆ ಘೋಷಿಸಲಾಗಿದೆ ಎಂದು ವಿವಿ ಪ್ರಕಟಣೆ ತಿಳಿಸಿದೆ.ರಜಾ ಅವಧಿಯಲ್ಲಿ ಬೋಧಕ-ಬೋಧಕೇತರ ಸಿಬ್ಬಂದಿ ಕೇಂದ್ರ ಸ್ಥಾನ ಬಿಡದಿರಲು ಮತ್ತು ತುರ್ತು ಕೆಲಸಗಳಿದ್ದಾಗ ವಿವಿಗೆ ಹಾಜರಾಗುವಂತೆ ಆದೇಶ ನೀಡಲಾಗಿದೆ.