Wednesday, July 15, 2020
ಜನಸಂಖ್ಯೆ ಹೆಚ್ಚಳವನ್ನು ನಿಯಂತ್ರಿಸಲು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿ
ಈ ದಿವಸ ವಾರ್ತೆ
ವಿಜಯಪುರ : ದೇಶದಲ್ಲಿ ವೇಗವಾಗಿ ಬೆಳೆಯುತ್ತಿರುವ ಜನಸಂಖ್ಯೆಯಿಂದಾಗಿ ಅನೇಕ ಸಮಸ್ಯೆಗಳು ಉದ್ಭಣಗೊಳ್ಳುತ್ತಿರುವುದಕ್ಕೆ ಕಾರಣವಾಗುತ್ತಿದೆ. ಈ ಕಾಣದಿಂದಾಗಿ ಜನಸಂಖ್ಯೆ ಹೆಚ್ಚಳವನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ಕೆ ಜಿಲ್ಲಾ ಆರೋಗ್ಯ ಇಲಾಖೆ ಮುಂದಾಗಿದೆ ಎಂದು ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ರಾಜೇಶ್ವರಿ ಗೋಲಗೆರಿ ಅವರು ತಿಳಿಸಿದರು.
ನಗರದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಭಾಂಗಣದಲ್ಲಿಂದು ವಿಶ್ವ ಜನಸಂಖ್ಯಾ ದಿನಾಚರಣೆ ಅಂಗವಾಗಿ ನಡೆದ ಜನಸಂಖ್ಯಾ ಸ್ಥಿತಿಗತಿ ಹಾಗೂ ಕುಟುಂಬ ಕಲ್ಯಾಣ ಸೇವೆಗಳ ಕುರಿತು ನಡೆದ ಕಾರ್ಯಾಗಾರದಲ್ಲಿ ಮಾತನಾಡಿದ ಅವರು ಜನಸಂಖ್ಯೆ ಹೆಚ್ಚಳದ ಪರಿಣಾಮ ನಾವು ಹಾಗೂ ನಮ್ಮ ಮುಂದಿನ ತಲೆಮಾರುಗಳು ಹೆಚ್ಚಿನ ತೊಂದರೆಗಳನ್ನು ಅನುಭವಿಸುವಂತಾಗಿದೆ. ನಗರ ಪ್ರದೇಶಗಳಲ್ಲಿ ಜನಸಂಖ್ಯೆ ಹೆಚ್ಚಳದಿಂದ ಕೊಳಚೆ ಪ್ರದೇಶಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ಅಪೌಷ್ಠಿಕೆ, ಸಾಂಕ್ರಾಮಿಕ ರೋಗಗಳು ಹೆಚಳಕ್ಕೆ ಕಾರಣವಾಗಿದೆ. ಬಡತನ ಹೆಚ್ಚಳ, ನಿರುದ್ಯೋಗ ಸೇರಿದಂತೆ ವಿವಿಧ ಸಮಸ್ಯೆಗಳಿಗೆ ಜನಸಂಖ್ಯೆ ಕಾರಣವಾಗಿದೆ ಎಂದು ತಿಳಿಸಿದರು.
ಜಿಲ್ಲಾ ರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಜನಸಂಖ್ಯೆ ನಿಯಂತ್ರಣ ಮಾಡುವ ನಿಟ್ಟಿನಲ್ಲಿ ಅನೇಕ ರೀತಿಯಲ್ಲಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲಾಗುತ್ತಿದ್ದು. ವಿವಾಹಿತರು, ಮಹಿಳೆಯರು, ಯುವಕ/ಯುವತಿಯರಿಗೆ ಜನಸಂಖ್ಯೆ ಹೆಚ್ಚಳದಿಂದಾಗುವ ಪರಿಣಾಮಗಳನ್ನು ತಿಳಿಸಲಾಗುತ್ತಿದೆ. ವಿವಾಹಿತರು ಜನನ ಅಂತರವನ್ನು ಕಾಪಾಡಿ, ಜನನ ಅಂತರವನ್ನು ಕನಿಷ್ಠ ಒಂದು ಮಗುವಿನಿಂದ ಮತ್ತೊಂದು ಮಗುವಿಗೆ 4 ವರ್ಷ ಅಂತರವಿರಬೇಕು, ಎರಡು ಮಕ್ಕಳಾದ ಮೇಲೆ ಸ್ವಪ್ರೇರಿತವಾಗಿ ಬರುವ ಪುರುಷರಿಗೆ ಎನ್‍ಎಸ್‍ವಿ(ಪುರುಷರ ಸಂತಾನ ಹರಣ ಚಿಕಿತ್ಸೆ) ಮಾಡಿಸಿಕೊಳ್ಳಲು ಜಾಗೃತಿ ಮೂಡಿಸಲಾಗುತ್ತಿದೆ ಎಂದರು.
ಬಾಲ್ಯ ವಿವಾಹ ತಡೆಗಟ್ಟುವ ನಿಟ್ಟಿನಲ್ಲಿ ಸರ್ಕಾರ ಅನೇಕ ಕಾನೂನುಗಳನ್ನು ಜಾರಿಗೆ ತಂದಿದೆ. ಚಿಕ ್ಕಕುಟುಂಬ ಚೊಕ್ಕ ಕುಟುಂಬ ಎನ್ನುವ ಘೋಷವಾಖ್ಯದೊಂದಿಗೆ ಜನರಲ್ಲಿ ಜಾಗೃತಿ ಮೂಡಿಸಲಾಗುತ್ತಿದ್ದು, ಜಿಲ್ಲೆಯಲ್ಲೂ ವಿವಿಧ ರೀತಿಯಲ್ಲಿ ಗ್ರಾಮಿಣ ಭಾಗದಲ್ಲಿ ಹಾಗೂ ನಗರ ಪ್ರದೇಶಗಳಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ ಎಂದರು.
ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಸುರೇಶ ಹೊಸಮನಿ ಅವರು ಮಾತನಾಡಿ ಜನಸಂಖ್ಯೆ ನಿಯಂತ್ರಣ ಮಾಡುವ ನಿಟ್ಟಿನಲ್ಲಿ ಆರೋಗ್ಯ ಇಲಾಖೆ ಅನೇಕ ಕುಟುಂಬ ಕಲ್ಯಾಣ ಯೊಜನೆಗಳನ್ನು ಜಾರಿಗೆ ತಂದಿದ್ದು ಇದರಿಂದ ನವ ವಿವಾಹಿತರು ಈ ವಿಧಾನಗಳನ್ನು ಅಳವಡಿಸುವುದರಿಂದ ಮೊದಲ ಮಗುವನ್ನು 2 ವರ್ಷಗಳ ನಂತರ ಪಡೆಯಬಹುದು. ಮಕ್ಕಳ ಮಧ್ಯೆ ಮೂರರಿಂದ ನಾಲ್ಕು ವರ್ಷಗಳ ಅಂತರವನ್ನು ಕಾಯ್ದುಕೊಳ್ಳಬಹುದು, ತಾಯಿ ಮರಣ ಮತ್ತು ಶಿಶು ಮರಣ ಪ್ರಮಾಣವನ್ನು ತಗ್ಗಿಸಬಹುದಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಮಲೇರಿಯಾ ನಿಯಂತ್ರಣಾಧಿಕಾರಿ ಜೈಬುನಿಸಾ ಬೀಳಗಿ, ಟಿ.ಎಚ್.ಇ.ಓ ಬಾಗವಾನ, ಕುಂಬಾರ ಸೇರಿದಂತೆ ಆರೋಗ್ಯ ಇಲಾಖೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು.
Tuesday, July 14, 2020
ಜಿಲ್ಲೆಯಲ್ಲಿ ಇಂದು ಚಿಕಿತ್ಸೆ ಫಲಕಾರಿಯಾಗದೆ 3 ಕೋವಿಡ್ ಸೋಂಕಿತರ ನಿಧನ : ಶಿಷ್ಟಾಚಾರದಂತೆ ಅಂತ್ಯಕ್ರಿಯೆ
ವಿಜಯಪುರ : ಜಿಲ್ಲೆಯಲ್ಲಿ ಇಂದಿನ ವೈದ್ಯಕೀಯ ವರದಿಯನ್ವಯ ಮೂವ್ವರು ಕೋವಿಡ್-೧೯ ಪಾಸಿಟಿವ್ ರೋಗಿಗಳು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ ಎಂದು ಜಿಲ್ಲಾಧಿಕಾರಿ ವೈ.ಎಸ್ ಪಾಟೀಲ ಅವರು ತಿಳಿಸಿದ್ದಾರೆ.
ಅದರಂತೆ ವಿಜಯಪುರ ನಗರದ ಶಾಪೇಟಿ, ಸ್ಟೇಶನ್ ಹಿಂದಿನ ರಸ್ತೆಯ ನಿವಾಸಿಯಾದ ೫೫ ವರ್ಷದ ಪುರುಷ (ರೋಗಿ ಸಂಖ್ಯೆ – ೨೪೭೭೩) ಕೋವಿಡ್ ಪಾಸಿಟಿವ್ ವ್ಯಕ್ತಿಯು ದಿನಾಂಕ ೦೫-೦೭-೨೦೨೦ ರಂದು ನಿಮೋನಿಯಾ, ಜ್ವರ, ತೀವ್ರ ಉಸಿರಾಟ ತೊಂದರೆ ಲಕ್ಷಣಗಳಿಂದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ನಂತರ ಕೋವಿಡ್ ಪಾಸಿಟಿವ್ ಎಂದು ದೃಢಪಟ್ಟು ದಿನಾಂಕ ೧೧-೭-೨೦೨೦ ರಂದು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ವಿಜಯಪುರ ನಗರದ ಮುರಾಣಕೇರಿ ಕಾಲನಿಯ ನಿವಾಸಿಯಾದ ೫೦ ವರ್ಷದ ಪುರುಷ (ರೋಗಿ ಸಂಖ್ಯೆ – ೩೧೮೮೦) ಕೋವಿಡ್ ಪಾಸಿಟಿವ್ ವ್ಯಕ್ತಿಯು ದಿನಾಂಕ ೧೦-೦೭-೨೦೨೦ ರಂದು ೧೨.೪೨ ಗಂಟೆಗೆ ಜ್ವರ, ತೀವ್ರ ಉಸಿರಾಟ ತೊಂದರೆ ಲಕ್ಷಣಗಳಿಂದ ಮತ್ತು ನಾಲ್ಕು ವರ್ಷಗಳಿಂದ ಸಕ್ಕರೆ ಕಾಯಿಲೆ, ರಕ್ತದೊತ್ತಡ, ೨ ವರ್ಷಗಳಿಂದ ಹೃದಯ ಸಂಬAಧಿ ಕಾಯಿಲೆಗಳಿಂದ ಬಳಲಿ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದರು. ನಂತರ ಕೋವಿಡ್ ಪಾಸಿಟಿವ್ ಎಂದು ದೃಢಪಟ್ಟು ದಿನಾಂಕ ೧೦-೭-೨೦೨೦ ರಂದು ೯.೦೦ ಗಂಟೆಗೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ಅದೇ ರೀತಿ ವಿಜಯಪುರ ನಗರದ ಕಾಳಿಕಾ ನಗರ, ಆಶ್ರಮದ ನಿವಾಸಿಯಾದ ೬೮ ವರ್ಷದ ಪುರುಷ (ರೋಗಿ ಸಂಖ್ಯೆ – ೩೫೨೧೬) ಕೋವಿಡ್ ಪಾಸಿಟಿವ್ ವ್ಯಕ್ತಿಯು ದಿನಾಂಕ ೦೭-೦೭-೨೦೨೦ ರಂದು ಕೆಮ್ಮು, ತೀವ್ರ ಉಸಿರಾಟ ತೊಂದರೆ ಲಕ್ಷಣಗಳಿಂದ ಮತ್ತು ಏಳು ವರ್ಷಗಳಿಂದ ಸಕ್ಕರೆ ಕಾಯಿಲೆಯಿಂದ ಬಳಲಿ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ನಂತರ ಕೋವಿಡ್ ಪಾಸಿಟಿವ್ ಎಂದು ದೃಢಪಟ್ಟು ದಿನಾಂಕ ೧೩-೭-೨೦೨೦ ರಂದು ೯.೦೦ ಗಂಟೆಗೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಈ ಮೃತರ ಅಂತ್ಯಕ್ರಿಯೆಯನ್ನು ಶಿಷ್ಟಾಚಾರದಂತೆ ನೆರವೇರಿಸಲಾಗಿದೆ ಅವರು ತಿಳಿಸಿದ್ದಾರೆ.
Monday, July 13, 2020
ಸೇವೆಯ ಮಾಡುವ ಭಾಗ್ಯವಿದು...
ಎಲ್ಲೆಲ್ಲೂ ಕೊರೊನ ಅವಾಂತರ....
ಕಾಪಾಡಲೇ ಬೇಕು ಸಾಮಾಜಿಕ ಅಂತರ..
ಕೊರೊನ ಅವಾಂತರದಲಿ ಬಡವನ ಪಾಡ ಕೇಳೋರು ಯಾರು??
ಸೀಲ್ ಡೌನ್ ಲೊಕ್ಡೌನ್ ನಡುವಿನ ಜೀವನದ ಬೇಗೆಯ ಅನುಭವಿಸೋರಾ ಪಾಡ ಗಮನಿಸೋರು ಯಾರು??
ತುತ್ತಿನ ಚೀಲವ ತುಂಬಿಸೋ ಕೈಗಳ ಕಟ್ಟಿ ಹಾಕಿ ಅವರದಲ್ಲದ ತಪ್ಪಿಗೆ ಪರಿತಪಿಸೋ ಜೀವಕೆ ಆಧಾರ ಆಗೋರು ಯಾರು??
ಒಂದು ಹೊತ್ತಿನ ತುತ್ತಿಗೆ ದುಡಿಯೋ ಜೀವಕೆ ಮರುಜೀವವ ಕೊಡಲು ಸಂಜೀವಿನಿಯ ಕೊಡೋರು ಯಾರು??
ಸಂಕಷ್ಟ ಕಾಲದಲ್ಲೂ ಅಳಿದವರ ಹೆಸರ ಉಳಿಸಲು ಕಟ್ಟಿಸೋ ಸ್ಮಾರಕಗಳ ಹೆಸರಲಿ ನೋಟುಗಳ ಸುರಿಯುವಿರಿ...
ಬದುಕಿರುವವರ ಉಸಿರ ಉಳಿಸುವ ಕಾರ್ಯಕ್ಕಾಗಿ ನೋಟುಗಳ ಸುರಿಯಿರಿ...
ಉಸಿರ ಉಳಿಸಿದರೆ ನಿಮ್ಮ ಹೆಸರು ಅಮರವಾಗೋದು.
ರಾಜನಂತೆ ಮೆರೆಯೋ ರಾಜಕಾರಣಿಗಳೇ...
ಬೇಡವಾದನೆ ನಿಮ್ಮ ಮತಭಾಂದವ ನಿಮಗೀಗಾ..
ಅಧಿಕಾರದ ಗದ್ದುಗೆ ಏರಲು ಕಂತೆ ಕಂತೆ ನೋಟುಗಳ ಸುರಿದಿರಲ್ಲ ಅಭಿಮತಗಳಿಗಾಗಿ...
ಜನಪ್ರತಿನಿಧಿ ಎಂಬ ಬಿರುದು ಹೊತ್ತ ನಿಮಗೀಗಾ..
ಬಿರುದು ಕೊಟ್ಟೋರಾ ಹಿತ ಕಾಯುವ ಸಮಯವೀಗಾ..
ಸುರಿಯಿರಿ ಕಂತೆ ಕಂತೆ ನೋಟುಗಳ ಇದೀಗಾ..
ಬಡವರ ಜೀವವ ಉಳಿಸಿಕೊಡುವ ಪುಣ್ಯದ ಕಾರ್ಯಕ್ಕಾಗಿ
ತುತ್ತಿನ ಚೀಲವ ತುಂಬಿಸಿ ಕೊಡುವ ಸಲುವಾಗಿ..
ಬಡವನ ಆರೋಗ್ಯವ ಕಾಪಾಡುವುದಾಕ್ಕಾಗಿ...
ಗದ್ದುಗೆ ಏರಿರುವ ನಿಮಗೀಗಾ..
ಮತದಾರನ ಸೇವೆಯ ಮಾಡುವ ಭಾಗ್ಯ ದೊರಕಿರುವಾಗ..
ನಿಮ್ಮಯ ನೋಟುಗಳ ಸುರಿಯಿರಿ ಬಡವನ ಜೀವನಕ್ಕಾಗಿ
ಕಂತೆ ಕಂತೆ ನೋಟುಗಳ ಸುರಿಯಿರಿ ಬಡವನ ಆರೋಗ್ಯಕ್ಕಾಗಿ..
ಮತದಾನದ ವೇಳೆಯಲಿ ಅಮೂಲ್ಯ ಮತವೆಂದು ಬಣ್ಣಿಸುವ ನೀವುಗಳೇ..
ಅಮೂಲ್ಯ ಜೀವಕೆ ಬೆಲೆ ಕೊಡುವುದಾ ನೋಡಿದರೆ ಮುಂದಿನ ಚುನಾವಣೆಯಲಿ ನಿಮ್ಮ ಮತಬೇಟೆಯ ಕಾರ್ಯದ ಚಿಂತೆ ನಿಮಗಿಲ್ಲ..
ನಿಮ್ಮ ಮತದಾರರ ಕ್ಷೇತ್ರವ ದತ್ತುಪಡೆಯುವ ಮನಸ ಮಾಡಿ...
ಕೊರೊನ ಮುಕ್ತ ಕ್ಷೇತ್ರಕ್ಕಾಗಿ ನಿಮ್ಮ ಅಧಿಕಾರವ ಮುಡಿಪಾಗಿಡಿ..
ಜನತಾ ಸೇವೆಯೇ ಜನಾರ್ಧನ ಸೇವೆಯೇ ಎಂಬುದ ತಿಳಿಯಿರಿ..
ಸಂಕಷ್ಟ ಕಾಲದಲಿ ತೋರಿಸಿ ನಿಮ್ಮ ಪೌರುಷವ..
ದ್ವೇಷದ ರಾಜಕಾರಣವ ಬಿಟ್ಟು, ಪಕ್ಷಭೇದವ ತೊರೆದು ಜನರಿಗಾಗಿ ಹೋರಾಡಿ
ಜೀವನ ಪರ್ಯಂತ ಹಣವ ಸುರಿಯದೆ ಗದ್ದುಗೆಯಲಿ ಮೆರೆದಾಡುವಿರಿ..
ಸಮಿತ ಶೆಟ್ಟಿ
ಸಿದ್ಧಕಟ್ಟೆ
Sunday, July 12, 2020
Saturday, July 11, 2020
Subscribe to:
Posts (Atom)

