ಎಲ್ಲೆಲ್ಲೂ ಕೊರೊನ ಅವಾಂತರ....
ಕಾಪಾಡಲೇ ಬೇಕು ಸಾಮಾಜಿಕ ಅಂತರ..
ಕೊರೊನ ಅವಾಂತರದಲಿ ಬಡವನ ಪಾಡ ಕೇಳೋರು ಯಾರು??
ಸೀಲ್ ಡೌನ್ ಲೊಕ್ಡೌನ್ ನಡುವಿನ ಜೀವನದ ಬೇಗೆಯ ಅನುಭವಿಸೋರಾ ಪಾಡ ಗಮನಿಸೋರು ಯಾರು??
ತುತ್ತಿನ ಚೀಲವ ತುಂಬಿಸೋ ಕೈಗಳ ಕಟ್ಟಿ ಹಾಕಿ ಅವರದಲ್ಲದ ತಪ್ಪಿಗೆ ಪರಿತಪಿಸೋ ಜೀವಕೆ ಆಧಾರ ಆಗೋರು ಯಾರು??
ಒಂದು ಹೊತ್ತಿನ ತುತ್ತಿಗೆ ದುಡಿಯೋ ಜೀವಕೆ ಮರುಜೀವವ ಕೊಡಲು ಸಂಜೀವಿನಿಯ ಕೊಡೋರು ಯಾರು??
ಸಂಕಷ್ಟ ಕಾಲದಲ್ಲೂ ಅಳಿದವರ ಹೆಸರ ಉಳಿಸಲು ಕಟ್ಟಿಸೋ ಸ್ಮಾರಕಗಳ ಹೆಸರಲಿ ನೋಟುಗಳ ಸುರಿಯುವಿರಿ...
ಬದುಕಿರುವವರ ಉಸಿರ ಉಳಿಸುವ ಕಾರ್ಯಕ್ಕಾಗಿ ನೋಟುಗಳ ಸುರಿಯಿರಿ...
ಉಸಿರ ಉಳಿಸಿದರೆ ನಿಮ್ಮ ಹೆಸರು ಅಮರವಾಗೋದು.
ರಾಜನಂತೆ ಮೆರೆಯೋ ರಾಜಕಾರಣಿಗಳೇ...
ಬೇಡವಾದನೆ ನಿಮ್ಮ ಮತಭಾಂದವ ನಿಮಗೀಗಾ..
ಅಧಿಕಾರದ ಗದ್ದುಗೆ ಏರಲು ಕಂತೆ ಕಂತೆ ನೋಟುಗಳ ಸುರಿದಿರಲ್ಲ ಅಭಿಮತಗಳಿಗಾಗಿ...
ಜನಪ್ರತಿನಿಧಿ ಎಂಬ ಬಿರುದು ಹೊತ್ತ ನಿಮಗೀಗಾ..
ಬಿರುದು ಕೊಟ್ಟೋರಾ ಹಿತ ಕಾಯುವ ಸಮಯವೀಗಾ..
ಸುರಿಯಿರಿ ಕಂತೆ ಕಂತೆ ನೋಟುಗಳ ಇದೀಗಾ..
ಬಡವರ ಜೀವವ ಉಳಿಸಿಕೊಡುವ ಪುಣ್ಯದ ಕಾರ್ಯಕ್ಕಾಗಿ
ತುತ್ತಿನ ಚೀಲವ ತುಂಬಿಸಿ ಕೊಡುವ ಸಲುವಾಗಿ..
ಬಡವನ ಆರೋಗ್ಯವ ಕಾಪಾಡುವುದಾಕ್ಕಾಗಿ...
ಗದ್ದುಗೆ ಏರಿರುವ ನಿಮಗೀಗಾ..
ಮತದಾರನ ಸೇವೆಯ ಮಾಡುವ ಭಾಗ್ಯ ದೊರಕಿರುವಾಗ..
ನಿಮ್ಮಯ ನೋಟುಗಳ ಸುರಿಯಿರಿ ಬಡವನ ಜೀವನಕ್ಕಾಗಿ
ಕಂತೆ ಕಂತೆ ನೋಟುಗಳ ಸುರಿಯಿರಿ ಬಡವನ ಆರೋಗ್ಯಕ್ಕಾಗಿ..
ಮತದಾನದ ವೇಳೆಯಲಿ ಅಮೂಲ್ಯ ಮತವೆಂದು ಬಣ್ಣಿಸುವ ನೀವುಗಳೇ..
ಅಮೂಲ್ಯ ಜೀವಕೆ ಬೆಲೆ ಕೊಡುವುದಾ ನೋಡಿದರೆ ಮುಂದಿನ ಚುನಾವಣೆಯಲಿ ನಿಮ್ಮ ಮತಬೇಟೆಯ ಕಾರ್ಯದ ಚಿಂತೆ ನಿಮಗಿಲ್ಲ..
ನಿಮ್ಮ ಮತದಾರರ ಕ್ಷೇತ್ರವ ದತ್ತುಪಡೆಯುವ ಮನಸ ಮಾಡಿ...
ಕೊರೊನ ಮುಕ್ತ ಕ್ಷೇತ್ರಕ್ಕಾಗಿ ನಿಮ್ಮ ಅಧಿಕಾರವ ಮುಡಿಪಾಗಿಡಿ..
ಜನತಾ ಸೇವೆಯೇ ಜನಾರ್ಧನ ಸೇವೆಯೇ ಎಂಬುದ ತಿಳಿಯಿರಿ..
ಸಂಕಷ್ಟ ಕಾಲದಲಿ ತೋರಿಸಿ ನಿಮ್ಮ ಪೌರುಷವ..
ದ್ವೇಷದ ರಾಜಕಾರಣವ ಬಿಟ್ಟು, ಪಕ್ಷಭೇದವ ತೊರೆದು ಜನರಿಗಾಗಿ ಹೋರಾಡಿ
ಜೀವನ ಪರ್ಯಂತ ಹಣವ ಸುರಿಯದೆ ಗದ್ದುಗೆಯಲಿ ಮೆರೆದಾಡುವಿರಿ..
ಸಮಿತ ಶೆಟ್ಟಿ
ಸಿದ್ಧಕಟ್ಟೆ
No comments:
Post a Comment