Tuesday, June 23, 2020
Monday, June 22, 2020
ಜಿಲ್ಲೆಯಲ್ಲಿ ಸೋಮವಾರ ಮತ್ತೆ 15 ಕೋವಿಡ್-19 ಪಾಸಿಟಿವ್ : ತ್ರಿಶತಕ ದಾಟಿದ ಕೋರೋನಾ
ಈ ದಿವಸ ವಾರ್ತೆ
ವಿಜಯಪುರ : ಜಿಲ್ಲೆಯಲ್ಲಿ ಈವರೆಗೆ ಒಟ್ಟು 301 ಕೋವಿಡ್-19 ಪಾಸಿಟಿವ್ ಪ್ರಕರಣಗಳು ದೃಢಪಟ್ಟಿದ್ದು, ಜಿಲ್ಲಾಸ್ಪತ್ರೆಯಲ್ಲಿ 74 ರೋಗಿಗಳು ಕೋವಿಡ್-19 ಪಾಸಿಟಿವ್ ಸಕ್ರಿಯ ರೋಗಿಗಳಾಗಿದ್ದಾರೆ. ಇಂದು ಮತ್ತೆ 15 ಕೋವಿಡ್-19 ಪಾಸಿಟಿವ್ ಪ್ರಕರಣಗಳು ದೃಢಪಟ್ಟಿದೆ ಎಂದು ಜಿಲ್ಲಾಧಿಕಾರಿ ವೈ.ಎಸ್ ಪಾಟೀಲ ಅವರು ತಿಳಿಸಿದ್ದಾರೆ.
ಜಿಲ್ಲೆಯ ಸೋಂಕಿತರಲ್ಲಿ ರೋಗಿ ಸಂಖ್ಯೆ 9170 (60 ವರ್ಷದ ಹೆಣ್ಣು) ರೋಗಿ ಸಂಖ್ಯೆ 9171 (20 ವರ್ಷದ ಹೆಣ್ಣು) ರೋಗಿ ಸಂಖ್ಯೆ 9172 (32 ವರ್ಷದ ಹೆಣ್ಣು) ರೋಗಿ ಸಂಖ್ಯೆ 9173 (28 ವರ್ಷದ ಹೆಣ್ಣು) ರೋಗಿ ಸಂಖ್ಯೆ 9175 (20 ವರ್ಷದ ಹೆಣ್ಣು) ರೋಗಿ ಸಂಖ್ಯೆ 9176 (70 ವರ್ಷದ ಗಂಡು) ಇವರಿಗೆ ರೋಗಿ ಸಂಖ್ಯೆ 6246 ದಿಂದ ಸೋಂಕು ತಗುಲಿರುವುದು ದೃಢಪಟ್ಟಿದೆ.
ರೋಗಿ ಸಂಖ್ಯೆ 9168 (20 ವರ್ಷದ ಹೆಣ್ಣು) ರೋಗಿ ಸಂಖ್ಯೆ 9169 (20 ವರ್ಷದ ಹೆಣ್ಣು) ರೋಗಿ ಸಂಖ್ಯೆ 9177 (30 ವರ್ಷದ ಗಂಡು) ರೋಗಿ ಸಂಖ್ಯೆ 9178 (20 ವರ್ಷದ ಗಂಡು) ರೋಗಿ ಸಂಖ್ಯೆ 9179 (52 ವರ್ಷದ ಹೆಣ್ಣು) ರೋಗಿ ಸಂಖ್ಯೆ 9182 (50 ವರ್ಷದ ಗಂಡು) ಇವರಿಗೆ ಐಎಲ್‍ಐ ಸೋಂಕು ತಗುಲಿರುವುದು ದೃಢಪಟ್ಟಿದೆ.
ರೋಗಿ ಸಂಖ್ಯೆ 9174 (68 ವರ್ಷದ ಹೆಣ್ಣು) ರೋಗಿ ಸಂಖ್ಯೆ 9181 (56 ವರ್ಷದ ಗಂಡು) ಇವರಿಗೆ ತೀವ್ರ ಉಸಿರಾಟದ ತೊಂದರೆ - ಸಾರಿ ಹಾಗೂ ರೋಗಿ ಸಂಖ್ಯೆ 9180 (33 ವರ್ಷದ ಗಂಡು) ಇವರಿಗೆ ರೋಗಿ ಸಂಖ್ಯೆ 6588 ದಿಂದ ಸೋಂಕು ತಗುಲಿರುವುದು ದೃಢಪಟ್ಟಿದೆ ಅವರು ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ಈವರೆಗೆ ವಿದೇಶ ಸೇರಿದಂತೆ ಇತರ ಪ್ರದೇಶಗಳಿಂದ 34132 ಜನರು ಬಂದ ಬಗ್ಗೆ ವರದಿಯಾಗಿದ್ದು, ಇವರ ಮೇಲೆ ತೀವ್ರ ನಿಗಾ ಇಡಲಾಗಿದೆ. ಇಲ್ಲಿಯವರೆಗೆ ಒಟ್ಟು 301 ಕೋವಿಡ್ -19 ಪಾಸಿಟಿವ್ ಪ್ರಕರಣಗಳು ದೃಢಪಟ್ಟಿದ್ದಾರೆ. 12808 ಜನರು 28 ದಿನಗಳ ಐಸೋಲೇಶನ್ ಅವಧಿ ಪೂರ್ಣಗೊಳಿಸಿದ್ದಾರೆ. 21097 ಜನರು (1 ರಿಂದ 28 ದಿನಗಳ) ರಿಪೋರ್ಟಿಂಗ್ ಅವಧಿಯಲ್ಲಿದ್ದು, ಈವರೆಗೆ ಒಟ್ಟು 7 ಜನ ಕೋವಿಡ್-19 ರೋಗಿಗಳು ಮೃತಪಟ್ಟಿದ್ದಾರೆ. 220 ಜನರು ಕೋವಿಡ್-19 ರೋಗದಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದು, 76 ಜನರು ಆಸ್ಪತ್ರೆಯಲ್ಲಿರುವ ಕೋವಿಡ್-19 ಸಕ್ರಿಯ ರೋಗಿಗಳಾಗಿದ್ದಾರೆ. ಈವರೆಗೆ 26989 ಜನರ ಗಂಟಲು ದ್ರವ ಮಾದರಿಯನ್ನು ಸಂಗ್ರಹಿಸಿದ್ದು, 26612 ಜನರ ನೆಗೆಟಿವ್ ವರದಿ ಬಂದಿದೆ. ಇನ್ನೂ 76 ಜನರ ಗಂಟಲು ದ್ರವ ಮಾದರಿ ಪರೀಕ್ಷಾ ವರದಿ ಬರಬೇಕಾಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.
Sunday, June 21, 2020
ಸೂರ್ಯಗ್ರಹಣವಂತೆ!
ಭೂಮಿ -ಭಾನು ಸಹಜ ಪಥದಲ್ಲಿ
ಚಲಿಸುತ್ತಿರಲು ಸರಳ ಚಲನೆಯಲ್ಲಿ
ಚಂದ್ರ ಬರಲು ಮಧ್ಯದಲ್ಲಿ
ಸೂರ್ಯಗ್ರಹಣವಂತೆ! ಧರಣಿಯಲಿ
ಬೆಳಕಿಗೆ ನೆರಳು ನೆರಳಾಗುವ ನೋಟ,
ನೆರಳು- ಬೆಳಕಿನಾಟ.
ಬಾನಬೆರಗು 'ಅವನಿ'ಗೆ ಬೆರಗಿನ ನೋಟ,
ಶಶಿ -ಭಾಸ್ಕರರಾಟ.
ಹಗಲೊಳಗೆ ಕತ್ತಲಾಗುವ
ಗಗನದ ಅದ್ಭುತ.
ಮನದೊಳಗೆ ದಿಗಿಲಾಗುವ
ಕೌತುಕದ ದಿಗಂತ.
ಮುಗಿಲ ಮೇಲಣ ಚೆಲುವು,
ಕಣ್ತುಂಬುವ ಬದಲು.
ಹೇಳುವರು ಗೊಂದಲ ಹಲವು,
ವಿವೇಕತೆಯೇ ಅದಲು-ಬದಲು.
ನೀರು ಕುಡಿಯದ ನಿರಾಹಾರ,
ಉಪವಾಸವಂತೆ.
ಭವಿಷ್ಯವೇ ಗೊತ್ತಿರದವರ
ರಾಶಿಫಲವಂತೆ.
ಬೆಡಗಿನಲ್ಲಿ ಭಾನುತೋರುವ
ಬಾನಾಟ,
ಕತ್ತಲೆ -ಬೆಳಕಿನಾಟ.
ಮುಗಿಲ ಮೇಲೆ ತೋರುವ.
ಮಿಗಿಲಾಟ,
ಅಂಧತೆಯೇ ಮೇಲಾಟ.
ಅಂಬರೀಷ ಎಸ್. ಪೂಜಾರಿ.
ಭೂಮಿ -ಭಾನು ಸಹಜ ಪಥದಲ್ಲಿ
ಚಲಿಸುತ್ತಿರಲು ಸರಳ ಚಲನೆಯಲ್ಲಿ
ಚಂದ್ರ ಬರಲು ಮಧ್ಯದಲ್ಲಿ
ಸೂರ್ಯಗ್ರಹಣವಂತೆ! ಧರಣಿಯಲಿ
ಬೆಳಕಿಗೆ ನೆರಳು ನೆರಳಾಗುವ ನೋಟ,
ನೆರಳು- ಬೆಳಕಿನಾಟ.
ಬಾನಬೆರಗು 'ಅವನಿ'ಗೆ ಬೆರಗಿನ ನೋಟ,
ಶಶಿ -ಭಾಸ್ಕರರಾಟ.
ಹಗಲೊಳಗೆ ಕತ್ತಲಾಗುವ
ಗಗನದ ಅದ್ಭುತ.
ಮನದೊಳಗೆ ದಿಗಿಲಾಗುವ
ಕೌತುಕದ ದಿಗಂತ.
ಮುಗಿಲ ಮೇಲಣ ಚೆಲುವು,
ಕಣ್ತುಂಬುವ ಬದಲು.
ಹೇಳುವರು ಗೊಂದಲ ಹಲವು,
ವಿವೇಕತೆಯೇ ಅದಲು-ಬದಲು.
ನೀರು ಕುಡಿಯದ ನಿರಾಹಾರ,
ಉಪವಾಸವಂತೆ.
ಭವಿಷ್ಯವೇ ಗೊತ್ತಿರದವರ
ರಾಶಿಫಲವಂತೆ.
ಬೆಡಗಿನಲ್ಲಿ ಭಾನುತೋರುವ
ಬಾನಾಟ,
ಕತ್ತಲೆ -ಬೆಳಕಿನಾಟ.
ಮುಗಿಲ ಮೇಲೆ ತೋರುವ.
ಮಿಗಿಲಾಟ,
ಅಂಧತೆಯೇ ಮೇಲಾಟ.
ಅಂಬರೀಷ ಎಸ್. ಪೂಜಾರಿ.
Saturday, June 20, 2020
ಒಬ್ಬ ಮಾದರಿ ವ್ಯಕ್ತಿ ನನ್ನ ತಂದೆ
“ಒಬ್ಬ ತಂದೆಯ ಮನಸ್ಸು ನಿಸರ್ಗದ ಮೇರುಕೃತಿಯಿದ್ದಂತೆ”
ಹಾಗೆ ನನ್ನ ತಂದೆ ನನ್ನ ಜೀವನದ ಒಬ್ಬ ಮಾದರಿ ವ್ಯಕ್ತಿಯಾಗಿದ್ದರು. ಅದೇ ತರಹ ಒಬ್ಬ ನಾಯಕನೂ ಮತ್ತು ಸ್ನೇಹಿತನೂ ಕೂಡ. ಅವರ ಆ ಒಂದು ಹೆಸರೇ ನನ್ನ ಜೀವನದ ಸ್ಪೂರ್ಥಿಯ ಚಿಲುಮೆ.
ನನ್ನ ತಂದೆಯ ಹೆಸರು ಬಾಬು ತಾಳಿಕೋಟಿ. ನಾನು ಯಾವಾಗಲು ಅವರನ್ನು ಅಪ್ಪಾಜಿ ಅಂತಾನೆ ಕರೆಯೋದು. ಅವರು ಒಬ್ಬ ಯಶಶ್ವಿ ಉದ್ಯಮಿಯಾಗಿದ್ದರು. ಅವರ ಸಮಯಪ್ರಜ್ಞೆ, ಪ್ರಾಮಾಣಿಕತೆ, ಕರುಣಾಮಯೀ ಹೃದಯ, ಅವರನ್ನು ಸಮಾಜದಲ್ಲಿ ಮತ್ತು ಕುಟುಂಬದಲ್ಲಿ ಒಬ್ಬ ಅತ್ಯುನ್ನತ ಗೌರವಯುತ ವ್ಯಕ್ತಿಯನ್ನಾಗಿಸಿದ್ದವು. ಅವರು ನನ್ನ ಜೀವನದ ಬಹು ವಿಶೇಷ ವ್ಯಕ್ತಿಯಾಗಿದ್ದರು. ಈಗ ಅವರು ನನ್ನೊಂದಿಗೆ ಇಲ್ಲದಿದ್ದರೂ ಅವರು ನೆನಪುಗಳು ಹಾಗೆ ನಮ್ಮೊಂದಿಗಿವೆ.
ಅವರು ಜೀವನದಲ್ಲಿ ಏನೂ ಹೇಳದೆ ಹೋದರು ಒಬ್ಬ ಒಳ್ಳೆಯ ಮನುಷ್ಯನಾಗಿ ಹೇಗೆ ಬದುಕಬೇಕೆಂಬುದ್ದನ್ನು ಕಲಿಸಿ ಹೋದರು. ಅದೇ ತರಹ ನನ್ನ ಶಿಕ್ಷಣದ ಅಭಿರುಚಿಯಲ್ಲಿ ಯಾವುದೇ ತರಹ ವಿರೋಧ ತೋರದೆ ನನ್ನ ಶೈಕ್ಷಣಿಕ ಜೀವನ ನಾನೇ ಆಯ್ಕೆ ಮಾಡಿಕೊಳ್ಳುವಲ್ಲಿ ಸಹಾಯ ಮಾಡಿದರು. ಅವರೊಂದಿಗಿನ ಆ ನನ್ನ ಅನುಭನದ ಯಾವಾಗಲೂ ಮರೆಯಲಾಗದು. ಇಂತಹ ತಂದೆಯನ್ನು ಕೊಟ್ಟ ಆ ದೇವರಿಗೆ ನಾನು ಯಾವಾಗಲೂ ಕೃತಜ್ಞಳಾಗಿದ್ದೇನೆ.
ಅವರು ನನಗೆ ತುಂಬಾ ಸಲುಗೆ ಕೊಟ್ಟಿರುವ ಕಾರಣ ನಾನು ಅವರಿಗೆ ಯಾವದೆ ಸತ್ಯ ಹೇಳಲು ಹೆದರುತ್ತಿರಲಿಲ್ಲ. ಅವರು ಯಾಕೆ ಇಷ್ಟೊಂದು ಒಡನಾಡಿಯಾಗಿದ್ದರು ಎಂಬುದು ನಮಗೆ ಇವಾಗ ಅರ್ಥವಾಗುತ್ತಿದೆ. ಅವರಷ್ಟು ನನಗೆ ಅರ್ಥ ಮಾಡಿಕೊಂಡವರು ಭಹುಷ: ಯಾರು ಇಲ್ಲ ಎನ್ನಬಹುದು. ತಪ್ಪು ಮಾಡಿದಾಗ ತಿಳಿಸಿ ಹೇಳಿದರು. ನನ್ನ ಜೀವನದ ಗುರಿಯ ಕಡೆ ನಾನು ಯಾವಾಗಲು ಲಕ್ಷ್ಯವಿರಿಸಲು ಅವರ ಪಾತ್ರ ಬಹು ಮುಖ್ಯವಾದದ್ದು. ಆದ್ದರಿಂದ ಅವ್ರು ನನ್ನ ಜೀವನದ ಒಬ್ಬ ಶಿಕ್ಷಕನೂ ಕೂಡ ಆಗಿದ್ದರು.
ಅವರ ಬಗ್ಗೆ ಹೇಳಲು ಇಷ್ಟು ಪದಗಳು ಬಹಳ ಕಡಿಮೆ. ಸಮಾಜದಲ್ಲಿ ನಾಲ್ಕು ಜನ ನೋಡಿ ಕಲಿಯುವಂತೆ ನೈತಿಕವಾಗಿ ಬದುಕಿ ತೋರಿಸಿದವರು. ಅವರು ನನ್ನೊಂದಿಗೆ ಇಲ್ಲ ಎಂದರೂ ಅವರು ಕಳಿಸಿದ ಪಾಠ, ನೈತಿಕತೆ, ಜೀವನದ ಉದ್ದೇಶಗಳು ಎಲ್ಲವನ್ನೂ ಅನುಸರಿಸುತ್ತಿದ್ದೇನೆ. ಒಬ್ಬ ಮಗಳು ಒಬ್ಬ ತಂದೆಯ ಹೆಸರು ಎತ್ತಿ ಹಿಡಿಯಲು ಏನು ಅವಶ್ಯವೋ ಎಲ್ಲವನ್ನು ಮಾಡುತ್ತಿದ್ದೇನೆ. ಅಂತಹ ತಂದೆಯ ಹಸಿ ನೆನಪುಗಳು ನನಗೆ ತುಂಬಾ ಸಂತೋಷ ಮತ್ತು ಭಾವುಕ ಮೂಕವಿಸ್ಮಯನನ್ನಾಗಿಸವೆ.
“ಅಪ್ಪನ ಕೈಗಳು ಶ್ರಮಪಟ್ಟಾಗಲೇ
ಮಕ್ಕಳ ಕೈಗಳು ಸುಂದರವಾಗಿ ಕಾಣುತ್ತವೆ."
ಸ್ಮೀ ತಾ ತಾಳಿಕೋಟಿ,
ವಿಜಯಪುರ
ಫಾದರ್ ಡೇ ಸೆಲೆಬ್ರೇಶನ್ ಫೋಟೋ ವಿತ್ ಅಪ್ಪ
💐💐💐💐💐💐💐💐💐💐💐💐💐💐💐
ತಂದೆ ಶರಣಬಸಪ್ಪಾ ಕೋಲಾರ ಜೊತೆ ಮಗಳು ವರ್ಷಾ ಕೋಲಾರ, ಕಲ್ಯಾಣ ನಗರ
💐💐💐💐💐💐💐💐💐💐💐💐💐💐
ತಂದೆ ಮಲ್ಲಿಕಾರ್ಜುನ ಕಾಳ ಶೆಟ್ಟಿ ಯೊಂದಿಗೆ ಮಗ ವಿಜುಗೌಡ
💐💐💐💐💐💐💐💐💐💐💐💐💐💐💐
ಮಿಸ್ತಿ ವಿತ್ ಅಪ್ಪ ಸಂದೀಪ ಅವರೊಂದಿಗೆ ಮುಂಬೈ
ತಂದೆ ಯೊಂದಿಗೆ ಮಂದಾಕಿನಿ ಬಿರಾದರ್, ವಿಜಯಪುರ
💐💐💐💐💐💐💐💐💐💐💐💐💐💐💐💐ತಂದೆಯೊಂದಿಗೆ ಮಕ್ಕಳಾದ ಪಲ್ಲವಿ ಮತ್ತು ಸ್ವಾತಿ
💐💐💐💐💐💐💐💐💐💐💐💐💐💐💐💐
ತಂದೆ ಬಸನಗೌಡ ಅ. ಪಾಟೀಲ ಜೊತೆ ಮಗ ಅಪ್ಪುಗೌಡ ಪಾಟೀಲ ಯತ್ನಾಳ,ವಿಜಯಪುರ
ತಂದೆ ಚಂದ್ರಕಾಂತ ಬ ಶೆಟ್ಟಿ ಯೊಂದಿಗೆ ಮಗ ಶ್ರೇಯಸ್ ಶೆಟ್ಟಿ
💐💐💐💐💐💐💐💐💐💐💐💐💐💐💐💐💐
💐💐💐💐💐💐💐💐💐💐💐💐💐
ತಂದೆ ಸೋಮನಗೌಡ ಪಾಟೀಲ ಜೊತೆ ಮಗ ಸೌರಭಗೌಡ ಪಾಟೀಲ, ಐಶ್ವರ್ಯ ನಗರ
💐💐💐💐💐💐💐💐💐💐💐💐💐
ತಂದೆ ಡಾ|| ದಯಾನಂದ ಜುಗತಿ ಜೊತೆ ಮಗ ರೋಹಿತ ಜುಗತಿ, ವಿಜಯಪುರ
💐💐💐💐💐💐💐💐💐💐💐💐💐
ತಂದೆ ಗುಂಡೂರಾವ್ ಅವರೊಂದಿಗೆ ಮಗಳು ಭಾಗ್ಯ
💐💐💐💐💐💐💐💐💐💐💐💐💐💐💐
ತಂದೆ ಪ್ರಭುಗೌಡ ಪಾಟೀಲ ಜೊತೆ ಮಗ ಪ್ರವೀಣಗೌಡ ಪಾಟೀಲ, ಆನಂದ ನಗರ ವಿಜಯಪುರ
💐💐💐💐💐💐💐💐💐💐💐💐💐💐💐
ಅಪ್ಪನೊಂದಿಗೆ ಮಗ ಶಶಿ ಗೆಣ್ಣೂರ
ತಂದೆ ಶಂಕರ್ ಬೋಲಕೋಟಾಗಿ ಜೊತೆ ಮಗ ಶಾಂತು ಬೋಲಕೋಟಾಗಿ, ಕಲ್ಯಾಣ ನಗರ
💐💐💐💐💐💐💐💐💐💐💐💐💐
ಮಕ್ಕಳೊಂದಿಗೆ ಅಪ್ಪ ಪಂಜೇಸಾಬ್ ಜಾತಗಾರ
💐💐💐💐💐💐💐💐💐💐💐💐💐💐💐💐💐
💐💐💐💐💐💐💐💐💐💐💐💐💐💐💐
💐💐💐💐💐💐💐💐💐💐💐💐💐
💐💐💐💐💐💐💐💐💐💐💐💐💐💐
ತಂದೆ ಭೀಮಸಿಂಗ್ ರಾಠೋಡ ಜೊತೆ ಮಗ ನವನೀತ ರಾಠೋಡ, ಆನಂದ ನಗರ ವಿಜಯಪುರ
💐💐💐💐💐💐💐💐💐💐💐💐💐💐
ತಂದೆ ಅಶೋಕ ಬಣ್ಣದ ಜೊತೆ ಮಗ ವಿನೂತ ಬಣ್ಣದ, ಸಜ್ಜನ ಬಡಾವಣೆ
💐💐💐💐💐💐💐💐💐💐💐💐💐💐💐
ಅಪ್ಪನೊಂದಿಗೆ ಕಳೆದ ಕೆಲ ಕ್ಷಣಗಳು ಮಾತ್ರ ನೆನಪಾಗಿ ಉಳಿದಿವಿ, ಮಿಸ್ ಯು ಅಪ್ಪ: ಅಕ್ಷತಾ
💐💐💐💐💐💐💐💐💐💐💐💐💐💐
ತಂದೆ ಡಾ|| ಎಂ ಬಿ ಪಾಟೀಲ ಜೊತೆ ಮಗ ಬಸನಗೌಡ ಪಾಟೀಲ
💐💐💐💐💐💐💐💐💐💐💐💐💐
ತಂದೆ ರಾಜು ಹಿರೇಮಠ ಜೊತೆ ಮಕ್ಕಳಾದ ವಿನಯ, ವಿಜಯ, ರೋಹನ ಹಿರೇಮಠ
💐💐💐💐💐💐💐💐💐💐💐💐💐💐💐
ತಂದೆ ಧೋಂಡಿಬಾ ಕ್ಷೀರಸಾಗರ, ಚಿಕ್ಕಪ್ಪಾ ಕಶಿನಾಥ ಹಾಗೂ ತಾಯಿ ಶೋಭಾ ಜೊತೆ ಮಗಳು ರೊಪಾ ಮಗ ಸಂತೋಷ್ ಕ್ಷೀರಸಾಗರ ಮೊಮ್ಮಗಳು ಖುಷಿ.
ಶ್ವೆತಾ.,ಶಿಲ್ಪಾ.ತಂದೆ ಭರತೇಶ.ಕಲಗೊಂಡ. ವಿಜಯಪುರ
💐💐💐💐💐💐💐💐💐💐💐💐💐
💐💐💐💐💐💐💐🙏💐💐💐💐💐💐💐
ಮುದ್ದಿ ನ ಮಗನೊಂದಿಗೆ ಶ್ರೀಕಾಂತ ನಾಟಿ ಕಾರ
💐💐💐💐💐💐💐💐💐💐💐💐💐💐
ಕಲ್ಯಾಣಶೆಟ್ಟಿ, ಕಲ್ಯಾಣಶೆಟ್ಟಿ ಚೌಕ, ವಿಜಯಪುರ
💐💐💐💐💐💐💐💐💐💐💐💐💐💐💐
ಆಕಾಶ ಬಸವರಾಜ ಕಿರಣಗಿ
💐💐💐💐💐💐💐💐💐💐💐💐💐💐💐
ನೀವು ನನ್ನ ಜೀವನದ ಪ್ರಮುಖ ವ್ಯಕ್ತಿ. ನೀವು ರಕ್ಷಣೆ ಮತ್ತು ಕಾಳಜಿಯನ್ನು ಒದಗಿಸಿದ್ದೀರಿ ಮತ್ತು ನನ್ನ ಜೀವನಕ್ಕೆ ಸ್ಥಿರತೆಯನ್ನು ತಂದಿದ್ದೀರಿ. ವಿಶ್ವದ ಅತ್ಯುತ್ತಮ ತಂದೆಗೆ ತಂದೆಯ ದಿನಾಚರಣೆಯ ಶುಭಾಶಯಗಳು..From Akshata
💐💐💐💐💐💐💐💐💐💐💐💐💐💐💐
ಮಹಾಂತೇಶ ದ್ಯಾಮಣ್ಣವರ
ಅವರ ಮಕ್ಕಳೊಂದಿಗೆ
💐💐💐💐💐💐💐💐💐💐💐💐💐💐💐
ತಂದೆ ಡಾ|| ಎಂ ಬಿ ಪಾಟೀಲ ಜೊತೆ ಮಗ ದ್ರುವ ಪಾಟೀಲ
💐💐💐💐💐💐💐💐💐💐💐💐💐💐
ತಂದೆಯೊಂದಿಗೆ ಮಮತಾ ಗುಮಶೆಟ್ಟಿ
💐💐💐💐💐💐💐💐💐💐💐💐💐💐💐
Subscribe to:
Posts (Atom)



































