Sunday, October 11, 2026

ದಿನಗೂಲಿ ನೌಕರರ ಸಮಾನ ಕೆಲಸಕ್ಕೆ ಸಮಾನ ವೇತನ ನೀಡಿ: ಜೋಶಿ

ವಿಜಯಪುರ: ಹೈಕೋರ್ಟ್ ಆದೇಶದಂತೆ ಎಲ್ಲ ದಿನಗೂಲಿ ನೌಕರರಿಗೆ ತಕ್ಷಣವೇ ಎಲ್ಲ ಸೌಲಭ್ಯ ಕಲ್ಪಿಸುವುದು ಸೇರಿ ಸಮಾನ ಕೆಲಸಕ್ಕೆ ಸಮಾನ ವೇತನ ನೀಡಬೇಕು ಎಂದು ರಾಜ್ಯ ದಿನಗೂಲಿ ಕ್ಷೇಮಾಭಿವೃದ್ಧಿ ನೋಂದಾಯಿತ ನೌಕರರ ಒಕ್ಕೂಟದ ಹೋರಾಟಗಾರ ಸಂಜಯ ಜೋಶಿ ಒತ್ತಾಯಿಸಿದರು.

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸರ್ಕಾರ ಕೂಡಲೇ ದಿನಗೂಲಿ ಕ್ಷೇಮಾಭಿವೃದ್ಧಿ ನೌಕರರ ಬೇಡಿಕೆಯನ್ನು 

ಈಡೇರಿಸಬೇಕು. ಈ ವಿಷಯದಲ್ಲಿ ವಿಳಂಬ ನೀತಿ ಅನುಸರಿಸಿ, ನ್ಯಾಯಾಂಗ ನಿಂದನೆಗೆ ಅವಕಾಶ ನೀಡಬಾರದು ಎಂದರು.

ದಿನಗೂಲಿ ಕ್ಷೇಮಾಭಿವೃದ್ಧಿ ನೌಕರರು ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ, ಮಾನವೀಯತೆ ದೃಷ್ಟಿಯಿಂದ ಪಡೆಯಬೇಕಾದ ಸೌಲಭ್ಯಗಳನ್ನು ದಿನಗೂಲಿ ಕ್ಷೇಮಾಭಿವೃದ್ಧಿ ನೌಕರರು ಕಾನೂನು ಹೋರಾಟದ ಮೂಲಕ ಪಡೆದುಕೊಳ್ಳಬೇಕಾದ ಅನಿವಾರ್ಯತೆ ಎದುರಾಗಿರುವುದು ದುರಂತ ಎಂದರು.

ರಾಜ್ಯ ಸರ್ಕಾರವು ಕರ್ನಾಟಕ ರಾಜ್ಯ ದಿನಗೂಲಿ ಕ್ಷೇಮಾಭಿವೃದ್ಧಿ ವಿಧೇಯಕ 2012 ನ್ನು ನೇಮಿಸಿ, ಫೆ. 15, 2013 ರಂದು ಜಾರಿಗೆ ತರಲಾಯಿತು. ಆದರೆ ಸರ್ಕಾರ ಡಿಎ, ಎಚ್‌ಆರ್‌ಎ ಸೇರಿದಂತೆ ಅನೇಕ ಸೌಲಭ್ಯಗಳನ್ನು ಕಡಿತಗೊಳಿಸಿತು, ಈ ಹಿನ್ನೆಲೆಯಲ್ಲಿ ನೌಕರರು ಸುದೀರ್ಘವಾದ ಕಾನೂನಾತ್ಮಕ ಹೋರಾಟ ನಡೆಸಬೇಕಾಯಿತು. ಈ ಕಾನೂನಾತ್ಮಕ ಹೋರಾಟದ ಗೆಲುವಿನ ಭಾಗವಾಗಿ ಹೈಕೋರ್ಟ್ 2 ನೇ ಫೆಬ್ರವರಿ 2026ರಂದು ರಂದು ತೀರ್ಪು ನೀಡಿ 1996 ಕ್ಕಿಂತ ಮುಂಚಿತವಾಗಿ ನೇಮಕಗೊಂಡ ದಿನಗೂಲಿ ನೌಕರರಿಗೆ ಪೂರ್ಣ ಪ್ರಮಾಣದ ಡಿಎ, ಎಚ್‌ಆರ್‌ಎ ಎಕ್ಸಗ್ರೇಷಿಯಾ ಮೊದಲಾದ ಸೌಲಭ್ಯಗಳನ್ನು ಒದಗಿಸಲು ಹೈಕೋರ್ಟ್ ಆದೇಶ ಹೊರಡಿಸಿತು. ಇದನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್ ಅರ್ಜಿ ಸಲ್ಲಿಸುವ ಪ್ರಯತ್ನದಲ್ಲಿದ್ದ ವೇಳೆ ಸುಪ್ರೀಂ ಕೋರ್ಟ್ನಲ್ಲಿ ಕೇವಿಯಟ್ ದಾಖಲಿಸಲಾಯಿತು. ಇದರ ಪರಿಣಾಮವಾಗಿ ಕಲಬುರ್ಗಿ ಹೈಕೋರ್ಟ್ ಪೀಠದಲ್ಲಿಯೇ ಹೋರಾಟ ಮಾಡುವುದಾಗಿ ಹೇಳಿ ರಾಜ್ಯ ಸರ್ಕಾರದವರು ಸುಪ್ರೀಂಕೋರ್ಟ್ನಿAದ ರಿವೋಕ್ಡ್ ಮಾಡಿಕೊಂಡಿದೆ. ಕಾಯ್ದೆ ಅನುಷ್ಠಾನಕ್ಕೆ ತಾರದೇ ಹೋದರೆ ಅದನ್ನು ರೂಪಿಸಿದರೆ ಏನರ್ಥ ? ಇದು 22 ಸಾವಿರ ಜನರ ಜೀವನದ ಪ್ರಶ್ನೆ ಎಂದರು.

ಒಕ್ಕೂಟದ ರಾಜ್ಯಾಧ್ಯಕ್ಷ ಚಂದ್ರಶೇಖರ ಬುರಾಣಪೂರ ಮಾತನಾಡಿ, ಧೀರ್ಘಕಾಲದ ಸೇವೆ ಸಲ್ಲಿಸುತ್ತಿರುವ ಕರ್ನಾಟಕ ದಿನಗೂಲಿ ನೌಕರರಿಗೆ ಸಮಾನ ಕೆಲಸಕ್ಕೆ ಸಮಾನ ವೇತನ ನೀಡುವುದು, ಅರ್ಹ ನಿಯಮಾನುಸಾರ ಸೇವಾ ಭದ್ರತೆ ಹಾಗೂ ವೇತನ ಶ್ರೇಣಿ ಒದಗಿಸುವುದು, ಸೇವಾ ಅವಧಿಯನ್ನು ಪರಿಗಣಿಸಿ ವೇತನ ನಿಗದಿ, ಅರ್ಹತೆಯುಳ್ಳ ನೌಕರರಿಗೆ ಕ್ರಮಬದ್ಧವಾಗಿ ಸೇವಾ ಸಕ್ರಮೀಕರಣ ಮಾಡುವುದು ಸೇರಿ ವಿವಿಧ ಸೌಲಭ್ಯ ನೀಡಬೇಕು ಎಂದು ಆಗ್ರಹಿಸಿದರು.

ಸಿಐಟಿಯುನ ಲಕ್ಷ್ಮಣ ಹಂದ್ರಾಳ, ರಾಜ್ಯ ಪ್ರಧಾನ ಕಾರ್ಯದರ್ಶಿ ಸುರೇಶ ಕೊಂಡಗೂಳಿ, ಎಂ.ಕೆ. ಕುಲಕರ್ಣಿ, ಕೆ.ಎಂ. ಒಣಕುದರಿ ಪತ್ರಿಕಾಗೋಷ್ಠಿಯಲ್ಲಿ ಇದ್ದರು.

ರಾಜ್ಯಾದ್ಯಂತ ಆಸಕ್ತರಿಗೆ ವಿಶೇಷ ಸೂಚನೆ :

ಸುದ್ದಿ ಹಾಗೂ ಜಾಹೀರಾತುಗಳನ್ನು ಪ್ರಕಟಿಸಲು ಇಂದೇ ಸಂಪರ್ಕಿಸಿರಿ.ಸಂಪಾದಕರು ಈ ದಿವಸ ಕನ್ನಡ ದಿನ ಪತ್ರಿಕೆ ವ್ಯಾಟ್ಸಪ್ ಸಂಖ್ಯೆ : 7204279187 / 9900378892 ತಾವು ಟೈಪಿಸಿ eedivasa@gmail.com ಈ ಮೇಲ್ ಗೂ ಮೇಲ್ ಸೆಂಡ್ ಮಾಡಿದರೆ ಪ್ರಕಟಿಸಲಾಗುವುದು.

No comments:

Post a Comment