Monday, June 23, 2025

ಮಹಿಳೆ ಮತ್ತು ಪುರುಷರು ಸಮಾನವಾಗಿ ಬೆಳೆದುಬರಬೇಕಾದ ಕಾಲ ಇದು : ಮಹಿಳಾ ವಿವಿಯ ಕುಲಸಚಿವ ಶಂಕರಗೌಡ ಸೋಮನಾಳ


 ವಿಜಯಪುರ: ಸ್ತ್ರೀವಾದವನ್ನು ಪ್ರತಿಯೊಬ್ಬರೂ ಸರಿಯಾಗಿ ಅರ್ಥಮಾಡಿಕೊಳ್ಳುವುದು ಈಗಿನ ಕಾಲದಲ್ಲಿ ಅಗತ್ಯವಾಗಿದೆ ಎಂದು ಕುವೆಂಪು ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ವಿಭಾಗದ ಪ್ರಾಧ್ಯಾಪಕಿ ಪ್ರೊ. ಶುಭಾ ಮರವಂತೆ ಹೇಳಿದರು.

ನಗರದ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ ಅಹಲ್ಯಾಬಾಯಿ ಸ್ನಾತಕೋತ್ತರ ಮಹಿಳಾ ಅಧ್ಯಯನ, ಸಂಶೋಧನಾ ಮತ್ತು ವಿಸ್ತರಣಾ ಕೇಂದ್ರದ ವತಿಯಿಂದ ಸೋಮವಾರ ಆಯೋಜಿಸಿದ್ದ ‘ಲಿಂಗತ್ವ ಗ್ರಹಿಕೆ ವಿವಿಧ ಆಯಾಮಗಳಲ್ಲಿʼ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಹೆಣ್ಣು–ಗಂಡು ಸಹಜೀವಿಗಳಾಗಿ, ಪರಸ್ಪರ ಪೂರಕವಾಗಿ ಬದುಕಿದಾಗ ಮಾತ್ರ ಸಮತೋಲನದ ಸಮಾಜ ನಿರ್ಮಾಣ ಸಾಧ್ಯವಾಗುತ್ತದೆ. ಸ್ತ್ರೀವಾದವು ಮಹಿಳೆಯರನ್ನು ಸೃಜನಶೀಲರಾಗಿರಲು ಪ್ರೇರೇಪಿಸುವುದಲ್ಲದೆ, ನಮ್ಮೊಳಗಿನ ಸಮಾನತೆಯ ಅರಿವನ್ನು ಎಚ್ಚರಿಸುತ್ತದೆ. ಇದು ಹಕ್ಕುಗಳಿಗಾಗಿ ಹೋರಾಟವಲ್ಲ, ಬದಲಾಗಿ ಮಾನವೀಯ ಮೌಲ್ಯಗಳ ಪ್ರತಿಪಾದನೆ ಎಂದರು. 

ಇದೇ ಸಂದರ್ಭದಲ್ಲಿ ಮಹಿಳಾ ವಿವಿಯ ಕುಲಸಚಿವ ಶಂಕರಗೌಡ ಸೋಮನಾಳ ಮಾತನಾಡಿ, ಸಮಾಜದಲ್ಲಿ ಯಾರು ಶ್ರೇಷ್ಠರು ಅಥವಾ ಕನಿಷ್ಠರು ಎಂಬ ಭಾವನೆಗೆ ಸ್ಥಳವಿಲ್ಲ, ಪ್ರತಿಯೊಬ್ಬರೂ ತಮ್ಮದೇ ಆದ ಶಕ್ತಿ ಮತ್ತು ಸಾಮಥ್ರ್ಯ ಹೊಂದಿದ್ದಾರೆ. ಮಹಿಳೆ ಮತ್ತು ಪುರುಷರು ಸಮಾನವಾಗಿ ಬೆಳೆದುಬರಬೇಕಾದ ಕಾಲ ಇದು. ಇಂದಿನ ಬದಲಾಗುತ್ತಿರುವ ಕಾಲಘಟ್ಟದಲ್ಲಿ ಮಹಿಳಾ ಅಧ್ಯಯನ ಶಿಸ್ತು ಕೇವಲ ಅಧ್ಯಯನವಲ್ಲ, ಅದು ಸಮಾನತೆ, ಸಬಲೀಕರಣ ಮತ್ತು ಸಮಾಜಮುಖಿ ಚಿಂತನೆಗಳ ದಿಕ್ಸೂಚಿಯಾಗಬೇಕಿದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮಹಿಳಾ ವಿವಿಯ ಹಂಗಾಮಿ ಕುಲಪತಿ ಪ್ರೊ. ಶಾಂತಾದೇವಿ ಟಿ. ಮಾತನಾಡಿ, ಮಹಿಳಾ ವಿಶ್ವವಿದ್ಯಾಲಯದಲ್ಲಿ ನಡೆಯುವ ಎಲ್ಲಾ ಕಾರ್ಯಚಟುವಟಿಕೆಗಳು ಮಹಿಳಾ ಸಬಲೀಕರಣಕ್ಕೆ ಭಾಗವಾಗಿರುತ್ತವೆ. ಇಂದಿನ ಯುವಜನತೆ, ವಿಶೇಷವಾಗಿ ವಿದ್ಯಾರ್ಥಿನಿಯರು, ಕೇವಲ ಜ್ಞಾನವನ್ನು ಪಡೆದುಕೊಳ್ಳುವಷ್ಟರಲ್ಲಿ ನಿಲ್ಲದೇ, ಸಮಾಜದಲ್ಲಿ ಸಮಾನತೆಯ ಧ್ವಜದಾರರಾಗಬೇಕು. ಇಂತಹ ನಿಲುವುಗಳು ತಾನಾಗಿಯೇ ಬರುವುದಿಲ್ಲ ಅವುಗಳನ್ನು ಬೆಳಸಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿ ಮಹಿಳಾ ಅಧ್ಯಯನ ಕೇಂದ್ರ ಮತ್ತು ವಿಭಾಗದ ಕಾರ್ಯಚಟುವಟಿಕೆಗಳು ಮಹಿಳಾ ಚೇತನತೆಗೆ ಮಾರ್ಗದರ್ಶನ ನೀಡುತ್ತಿದ್ದು, ಸಮಾನತೆಯ ಅರಿವನ್ನು ಮತ್ತಷ್ಟು ಗಾಢಗೊಳಿಸುತ್ತಿವೆ ಎಂದರು.

ಕಾರ್ಯಕ್ರಮದಲ್ಲಿ ಡಾ. ಕಲಾವತಿ ಕಾಂಬಳೆ, ಡಾ. ಸರೋಜಾ ಸಂತಿ, ಡಾ.ರಜಿಯಾ  ನದಾಫ ಉಪಸ್ಥಿತರಿದ್ದರು. ಮಹಿಳಾ ಅಧ್ಯಯನ ಕೇಂದ್ರದ ನಿರ್ದೇಶಕಿ ಪ್ರೊ. ಲಕ್ಷ್ಮೀದೇವಿ ವೈ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಡಾ.ಶಶಿಕಲಾ ರಾಠೋಡ ನಿರೂಪಿಸಿದರು. ಡಾ. ಭಾಗ್ಯಶ್ರೀ ದೊಡಮನಿ ವಂದಿಸಿದರು. 

ರಾಜ್ಯಾದ್ಯಂತ ಆಸಕ್ತರಿಗೆ ವಿಶೇಷ ಸೂಚನೆ:

ಯುವ ಪ್ರತಿಭೆಗಳು, ಹಿರಿ-ಕಿರಿ ಆಸಕ್ತ ಸಾಹಿತಿ, ಕವಿ, ಲೇಖಕರಿಗೆ ಈ ದಿವಸ ವೇದಿಕೆ ಕಲ್ಪಿಸುತ್ತಿದೆ. ಆಸಕ್ತರು ತಮ್ಮ ಸ್ವ ರಚಿತ ಲೇಖನ, ಕಥೆ, ಕವನ , ಶಾಲಾ ಕಾಲೇಜಿನ, ವಿಶ್ವವಿದ್ಯಾಲಯ ವರದಿ, ಹೋರಾಟಗಾರರ ಮನವಿ, ತಮ್ಮ  ಜಿಲ್ಲೆ, ಪಟ್ಟಣ, ತಾಲೂಕು, ಗ್ರಾಮಗಳಲ್ಲಿನ  ಸಮಸ್ಯೆಗಳು ಸೇರಿದಂತೆ ಇತರೆ ಸುದ್ದಿ ಹಾಗೂ ಜಾಹೀರಾತುಗಳನ್ನು ಪ್ರಕಟಿಸಲು ಇಂದೇ ಸಂಪರ್ಕಿಸಿರಿ.

ಸಂಪಾದಕರು ಈ ದಿವಸ ಕನ್ನಡ ದಿನ ಪತ್ರಿಕೆ ವ್ಯಾಟ್ಸಪ್ ಸಂಖ್ಯೆ : 7204279187 / 9900378892 ತಾವು ಟೈಪಿಸಿ eedivasa@gmail.com ಈ ಮೇಲ್ ಗೂ ಮೇಲ್ ಸೆಂಡ್ ಮಾಡಿದರೆ ಪ್ರಕಟಿಸಲಾಗುವುದು.


Saturday, June 14, 2025

ರಕ್ತದಾನ ಮಾಡುವ ಭಾಗ್ಯ ಸಿಕ್ಕರೆ ತಪ್ಪದೆ ಮಾಡಿ ಜೀವ ಉಳಿಸಿ

 

ವಿಜಯಪುರ ನಗರದ ವಿಜಯಪುರ ರಕ್ತ ನಿಧಿ ಕೇಂದ್ರದಲ್ಲಿ. ದೇಶ ರಕ್ಷಕರ ಪಡೆ ಸಂಚಾಲಿತ ಆಕಾಶ ರಕ್ತ ಸಹಾಯವಾಣಿ ವತಿಯಿಂದ ರಕ್ತ ದಾನ ಮಾಡುವ ಮೂಲಕ ವಿಶ್ವ ರಕ್ತದಾನಿಗಳ ದಿನಾಚರಣೆ ಆಚರಿಸಲಾಯಿತು.

ಈ ಸಂದರ್ಭದಲ್ಲಿ ದೇಶ ರಕ್ಷಕರ ಪಡೆ ಸಂಸ್ಥಾಪಕರಾದ ರೋಹನ್ ಆಪ್ಟೆ ಮಾತನಾಡಿ ಕಳೆದ 5 ವರ್ಷಗಳಿಂದ ನಮ್ಮ ಸಂಘಟಣೆಯ ಪ್ರತಿ ಕಾರ್ಯಕರ್ತರು ಪ್ರತಿ 3 ತಿಂಗಳಿಗೆ ರಕ್ತದಾನ ಮಾಡತಾ ಬಂದಿದ್ದಾರೆ. ಅದರಜೊತೆ ಕರ್ನಾಟಕ, ಮಹಾರಾಷ್ಟ್ರ, ಹಾಗು ಹೈದರಾಬಾದ ಸೇರಿ 4600 ಕ್ಕೂ ಅಧಿಕ ಜನರಿಗೆ ಆಕಾಶ ರಕ್ತ ಸಹಾಯವಾಣಿ ವತಿಯಿಂದ ರಕ್ತ ಪಡೆಯಲು ಸಹಾಯವಾಗಿದೆ. ಜನರು ರಕ್ತದಾನ ಮಾಡುವ ಮಹತ್ವ ತಿಳಿದಕೊಳ್ಳ ಬೇಕು. ಅದೆಷ್ಟು ರಕ್ತದಾನ ಮಾಡದೆ ಇರುವ ಜನರಿಗೆ ಕೂಡ ಅವರ ಆಪ್ತರಿಗೆ ರಕ್ತ ಬೇಕಾದಾಗ ರಕ್ತದಾನ ಎಷ್ಟು ಅಮೂಲ್ಯ ಅಂತ ಗೊತ್ತಾಗುತ್ತೆ. ಆದಕಾರಣ ರಕ್ತದಾನ ಮಾಡುವ ಭಾಗ್ಯ ಸಿಕ್ಕರೆ ತಪ್ಪದೆ ಮಾಡಿ ಜೀವ ಉಳಿಸಿ ಅಂದರು.


ಆಕಾಶ ರಕ್ತ ಸಹಾಯವಾಣಿ ಅಧ್ಯಕ್ಷರಾದ ವಿಕ್ರಮ ತಾಂಬೆಕರ ಮಾತನಾಡಿ ನಮ್ಮ ದೇಶ ರಕ್ಷಕರ ಪಡೆ ಕಾರ್ಯಕರ್ತ ಆಕಾಶ ಕುಲಕರ್ಣಿ ಅವರು 2020 ರಲ್ಲಿ ವಿದ್ಯುತ್ ಅಪಘಾತದಲ್ಲಿ ಸಾವನ್ನಪ್ಪಿದ್ದು. ನೇರವಾಗಿ ಜನರ ಜೀವ ಉಳಿಸುವ ಅವರ ಒಂದು ಆಸೆಯಂತೆ ರಕ್ತ ಸಹಾಯವಾಣಿ ಕೇಂದ್ರಕ್ಕೆ ಅವರ ಹೆಸರು ಇಡುವ ಮುಖಾಂತರ ಜನರ ಸೇವೆ ಮಾಡುತ್ತಾ ಇದ್ದೇವೆ ಅಂದರು.

ದೇಶ ರಕ್ಷಕರ ಪಡೆ ಪ್ರಧಾನಕಾರ್ಯದರ್ಶಿ ಜಗದೀಶ ರೂಗಿಮಠ ಮಾತನಾಡಿ ರಕ್ತದಾನವು ಬಹಳ ಮುಖ್ಯವಾದ ಕೆಲಸ. ಇದು ಜೀವಗಳನ್ನು ಉಳಿಸಲು ಸಹಾಯ ಮಾಡುತ್ತದೆ ಮತ್ತು ಆರೋಗ್ಯಕರ ರಕ್ತ ಪರಿಚಲನೆಗೆ ಸಹಕಾರಿಯಾಗಿದೆ. ರಕ್ತದಾನ ಮಾಡುವುದರಿಂದ ಅನೇಕ ಪ್ರಯೋಜನಗಳಿವೆ ಮತ್ತು ಇದು ಸಮಾಜಕ್ಕೆ ಬಹಳ ಉಪಯುಕ್ತವಾಗಿದೆ. ಇಲ್ಲಿಯವರೆಗೆ ರಕ್ತದಾನದ ಮಾಡದೇ ಇರುವ ಯಾವುದೋ ಒಂದು ಭಯದಿಂದ ಹಿಂಜರಾಗುತ್ತ ಇದ್ದಾರೆ ಅದರೆ ಅಂಥವರು ಕೂಡಾ ಧೃಡ ನಿರ್ಧಾರ ಮಾಡಿ ಜೀವ ಉಳಿಸುವ ಪುಣ್ಯದ ಕೆಲಸದಲ್ಲಿ ಪಾಲಗೋಳ್ಳ ಬೇಕಾಗಿ ವಿನಂತಿಸಿಕೊಳ್ಳುತ್ತೇನೆ. ದೇಶ ರಕ್ಷಕರ ಪಡೆ ಅಧ್ಯಕ್ಷಾರಾದ ಆಕಾಶ ಇಂಡಿ ಮಾತನಾಡಿ ಇವತ್ತಿನ ಯುವ ಸಮುದಾಯ ಹೆಚ್ಚು ರಕ್ತದಾನ ಮಾಡಿ ಸಮಾಜಕ್ಕೆ ಸ್ಫೂರ್ತಿ ನೀಡಬೇಕೆಂದು ಹೇಳಿದರು. ಈ ಸಂದರ್ಭದಲ್ಲಿ

ಕಿರಣ್ ಕೋಳುರಗಿ, ಶಿವಾನಂದ ತುಪ್ಪದ,ವಿನೋದ ಪತ್ತಾರ, ಆದಿತ್ಯ ಬಡಿಗೇರ, ಅಭಯ ಹದನುರ, ಆದಿತ್ಯ ಹಳ್ಳಿ, ರಾಘವೇಂದ್ರ ಮಿರೇಕರ, ಸಾಗರ ಭಜಂತ್ರಿ, ಪವನ ಶರ್ಮಾ, ಪ್ರಸನ್ನ ಗಣಿಯಾರ, ಕೃಷ್ಣಾ ಮಾಯಾಚಾರಿ, ವಿವೇಕ ತಾವರಗೇರಿ ರೋಹನ್ ವಿನಯ ಆಪ್ಟೆ. ಉಪಸ್ಥಿದ್ದರು.

ರಾಜ್ಯಾದ್ಯಂತ ಆಸಕ್ತರಿಗೆ ವಿಶೇಷ ಸೂಚನೆ:

ಯುವ ಪ್ರತಿಭೆಗಳು, ಹಿರಿ-ಕಿರಿ ಆಸಕ್ತ ಸಾಹಿತಿ, ಕವಿ, ಲೇಖಕರಿಗೆ ಈ ದಿವಸ ವೇದಿಕೆ ಕಲ್ಪಿಸುತ್ತಿದೆ. ಆಸಕ್ತರು ತಮ್ಮ ಸ್ವ ರಚಿತ ಲೇಖನ, ಕಥೆ, ಕವನ , ಶಾಲಾ ಕಾಲೇಜಿನ, ವಿಶ್ವವಿದ್ಯಾಲಯ ವರದಿ, ಹೋರಾಟಗಾರರ ಮನವಿ, ತಮ್ಮ  ಜಿಲ್ಲೆ, ಪಟ್ಟಣ, ತಾಲೂಕು, ಗ್ರಾಮಗಳಲ್ಲಿನ  ಸಮಸ್ಯೆಗಳು ಸೇರಿದಂತೆ ಇತರೆ ಸುದ್ದಿ ಹಾಗೂ ಜಾಹೀರಾತುಗಳನ್ನು ಪ್ರಕಟಿಸಲು ಇಂದೇ ಸಂಪರ್ಕಿಸಿರಿ.

ಸಂಪಾದಕರು ಈ ದಿವಸ ಕನ್ನಡ ದಿನ ಪತ್ರಿಕೆ ವ್ಯಾಟ್ಸಪ್ ಸಂಖ್ಯೆ : 7204279187 / 9900378892 ತಾವು ಟೈಪಿಸಿ eedivasa@gmail.com ಈ ಮೇಲ್ ಗೂ ಮೇಲ್ ಸೆಂಡ್ ಮಾಡಿದರೆ ಪ್ರಕಟಿಸಲಾಗುವುದು.