Friday, June 9, 2023
Thursday, June 8, 2023
Wednesday, June 7, 2023
ಜೂ.11 ರಂದು 10ನೇ ಅಖಿಲ ಭಾರತ ದಲಿತ ಸಾಹಿತ್ಯ ಸಮ್ಮೇಳನದ ಪೂರ್ವಭಾವಿ ಸಭೆ
ಈ ದಿವಸ ವಾರ್ತೆ
ವಿಜಯಪುರ: ದಲಿತ ಸಾಹಿತ್ಯ ಪರಿಷತ್ತು ರಾಜ್ಯ ಘಟಕ ಗದಗ ಬೆಳ್ಳಿ ಸಂಭ್ರಮದ ನಿಮಿತ್ತ ನಡೆಯಲಿರುವ 10ನೇ ಅಖಿಲ ಭಾರತ ದಲಿತ ಸಾಹಿತ್ಯ ಸಮ್ಮೇಳನದ ಪೂರ್ವಭಾವಿ ಸಭೆಯನ್ನು ರವಿವಾರ ದಿನಾಂಕ 11.06.2023 ರಂದು ಮಧ್ಯಾಹ್ನ 12-00 ಕ್ಕೆ ವಿಜಯಪುರದ ಜಿಲ್ಲಾ ಸರ್ಕಾರಿ ನೌಕರ ಭವನದಲ್ಲಿ ಕರೆಯಲಾಗಿದೆ. ಜಿಲ್ಲೆಯ ದಲಿತ ಬಂಡಾಯ ಸಾಹಿತಿಗಳು, ಸಂಘಟನೆಯ ಸಂಗಾತಿಗಳು, ಪ್ರಗತಿಪರ ಚಿಂತಕರು, ಕಲಾವಿದರು, ಬುದ್ದ ಬಸವ ಅಂಬೇಡ್ಕರ್ ಅಭಿಮಾನಿಗಳು, ಮಹಿಳಾ ಸಾಹಿತಿಗಳು ಹಾಗೂ ಸಂಘಟಿಕರು, ಯುವ ಮಿತ್ರರು, ವಿದ್ಯಾರ್ಥಿಗಳು, ದಲಿತ ಸಾಹಿತ್ಯ ಪರಿಷತ್ತಿನ ರಾಜ್ಯ ಘಟಕದ ಕಾರ್ಯಕಾರಿ ಸಮಿತಿಯ ಎಲ್ಲಾ ಸದಸ್ಯರು, ವಿಜಯಪುರ ಜಿಲ್ಲಾ ಕಾರ್ಯಕಾರಿ ಸಮಿತಿಯ ಸರ್ವ ಸದಸ್ಯರು ಈ ಸಭೆಯಲ್ಲಿ ಭಾಗವಹಿಸಲು ಸಲಹೆ ಸೂಚನೆ ನೀಡಬಹುದಾಗಿದೆ ಎಂದು ದಲಿತ ಸಾಹಿತ್ಯ ಪರಿಷತ್ತಿನ ರಾಜ್ಯಾಧ್ಯಕ್ಷರಾದ ಡಾ. ಅರ್ಜುನ ಗೊಳಸಂಗಿ, ಕಾರ್ಯದರ್ಶಿಗಳಾದ ಸುಭಾಷ್ ಹೊದ್ಲೂರ, ಬೆಳಗಾವಿ ವಿಭಾಗೀಯ ಸಂಯೋಜನಾಧಿಕಾರಿ ಡಾ.ಸುಜಾತಾ ಚಲವಾದಿ, ವಿಜಯಪುರ ಜಿಲ್ಲಾ ಅಧ್ಯಕ್ಷರಾದ ಬಸವರಾಜ ಜಾಲವಾದಿ ಜಂಟಿಯಾಗಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.