Wednesday, January 4, 2023
Tuesday, January 3, 2023
Monday, January 2, 2023
ಪರಮಪೂಜ್ಯ ಸಿದ್ದೇಶ್ವರ ಸ್ವಾಮೀಜಿ ಲಿಂಗೈಕ್ಯ : ಸಕಲ ಸರ್ಕಾರಿ ಗೌರವಗಳೊಂದಿಗೆ ಜ.3ರಂದು ಪೂಜ್ಯರ ಅಂತಿಮ ಕ್ರಿಯೆ - ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರ
ಈ ದಿವಸ ವಾರ್ತೆ
ವಿಜಯಪುರ : ನಡೆದಾಡುವ ದೇವರೆಂದೆ ಖ್ಯಾತರಾದ ಪರಮ ಪೂಜ್ಯ ಸಿದ್ದೇಶ್ವರ ಸ್ವಾಮಿಜೀಗಳು, ಜ್ಞಾನಯೋಗಾಶ್ರಮ ವಿಜಯಪುರ ಇವರು ದಿನಾಂಕ: 02-01-2023 ರಂದು ಲಿಂಗೈಕ್ಯರಾದರೆಂದು ತಿಳಿಸಲು ತೀವ್ರ ವಿಷಾಧಿಸುತ್ತೇವೆ. ಈ ಪ್ರಯುಕ್ತ ರಾಜ್ಯ ಸರ್ಕಾರವು ತೀವ್ರ ಸಂತಾಪವನ್ನು ವ್ಯಕ್ತಪಡಿಸಿದ್ದು, ಪೂಜ್ಯರ ಅಂತಿಮ ಕ್ರಿಯೆಯನ್ನು ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರಿಸಲು ನಿರ್ದೇಶಿರುತ್ತದೆ ಮತ್ತು ಪೂಜ್ಯರ ಅಂತಿಮ ದರ್ಶನಕ್ಕೆ ಭಕ್ತಾದಿಗಳು ಹಾಗೂ ಸಾರ್ವಜನಿಕರಿಗೆ ಅನುಕೂಲವಾಗುವಂತೆ ಜಿಲ್ಲೆಯ ಎಲ್ಲ ಶಾಲಾ-ಕಾಲೇಜು ಮತ್ತು ಸರ್ಕಾರಿ ಕಛೇರಿಗಳಿಗೆ ಸರ್ಕಾರ ರಜೆ ಘೋಷಿಸಿದೆ ಎಂದು ಜಿಲ್ಲಾಡಳಿತ ಎಲ್ಲಾ ಸಿದ್ಧತೆಗಳನ್ನು ಕೈಗೊಂಡಿದೆ ಎಂದು ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರ ತಿಳಿಸಿದ್ದಾರೆ.
ಜಿಲ್ಲಾಡಳಿತವು ಪೂಜ್ಯರ ಪಾರ್ಥಿವ ಶರೀರವನ್ನು ಶ್ರೀ ಜ್ಞಾನಯೋಗಾಶ್ರಮದಲ್ಲಿ ಈ ರಾತ್ರಿಯಿಂದ ನಾಳೆ ಬೆಳಗ್ಗೆ 4.30ರವರೆಗೆ ಭಕ್ತಾದಿಗಳ ದರ್ಶನಕ್ಕಾಗಿ ಇಡಲಾಗುವುದು. ನಂತರ ಪೂಜ್ಯರ ಪಾರ್ಥಿವ ಶರೀರವನ್ನು ತೆರೆದ ವಾಹನದಲ್ಲಿ ಶ್ರೀ ಜ್ಞಾನಯೋಗಾಶ್ರಮದಿಂದ ಸೈನಿಕ ಶಾಲೆಯವರೆಗೆ ತರಲಾಗುವುದು ಎಂದು ಅವರು ತಿಳಿಸಿದ್ದಾರೆ.
ಭಕ್ತಾದಿಗಳಿಗೆ ಪೂಜ್ಯರ ಅಂತಿಮ ದರ್ಶನವನ್ನು ದಿನಾಂಕ: 03-01-2023 ರ ಬೆಳಗ್ಗೆ 6.00 ಗಂಟೆಯಿಂದ ಮಧ್ಯಾಹ್ನ 3.00 ಗಂಟೆಯವರೆಗೆ ವಿಜಯಪುರ ನಗರದ ಸೈನಿಕ ಶಾಲೆ ಆವರಣದಲ್ಲಿ ಏರ್ಪಡಿಸಲಾಗಿದೆ. ಪೂಜ್ಯರ ಅಂತಿಮ ದರ್ಶನಕ್ಕಾಗಿ ಸೋಲಾಪುರ, ಕಲಬುರಗಿ, ಸಿಂದಗಿ, ಬಾಗಲಕೋಟೆ, ಜಮಖಂಡಿ, ಅಥಣಿಯಿಂದ ಆಗಮಿಸುವ ಭಕ್ತಾದಿಗಳು ನೇರವಾಗಿ ವಿಜಯಪುರ ನಗರದ ರಿಂಗ್ ರೋಡ್ ಮೂಲಕ (ಇಟಗಿ ಪೆಟ್ರೋಲ್ ಪಂಪ್) ಜಿಲ್ಲಾ ಆಸ್ಪತ್ರೆಯ ಹಿಂಭಾಗದಲ್ಲಿ ವಾಹನ ನಿಲುಗಡೆ ವ್ಯವಸ್ಥೆ ಕಲ್ಪಿಸಲಾಗಿದೆ. ಈ ಸ್ಥಳದಲ್ಲಿಯೇ ಭಕ್ತಾದಿಗಳಿಗೆ ಪ್ರಸಾದ, ನೀರು, ಇನ್ನಿತರೆ ವ್ಯವಸ್ಥೆ ಮಾಡಲಾಗಿದೆ.
ಭಕ್ತಾದಿಗಳು ಜಿಲ್ಲಾ ಸರ್ಕಾರಿ ಆಸ್ಪತ್ರೆಯ ಸೈನಿಕ ಶಾಲೆಯ ಎದುರುಗಡೆ ಇರುವ ನೇತಾಜಿ ಸುಭಾಷ ಚಂದ್ರ ಬೋಸ್, ರಸ್ತೆಯ ಮೂಲಕ ನಡೆದುಕೊಂಡು ಸೈನಿಕ ಶಾಲೆಯ ಮುಖ್ಯ ದ್ವಾರದ ಮೂಲಕ ಪ್ರವೇಶಿಸಬೇಕು. ದರ್ಶನದ ನಂತರ ಸೈನಿಕ ಶಾಲೆಯ 2ನೇ ಗೇಟ್ ಮೂಲಕ (ಲೆಫ್ಟಿನೆಂಟ್ ಕರ್ನಲ್ ಅಜಿತ್ ಭಂಡಾರಕರ ದ್ವಾರ) ಹೊರಗಡೆ ಬಂದು ತಮ್ಮ ವಾಹನ ಮೂಲಕ ವಾಪಸ ತೆರಳಬೇಕು. ಸೈನಿಕ ಶಾಲೆಯಲ್ಲಿ ಮಧ್ಯಾಹ್ನ 3.00 ಗಂಟೆಯಿಂದ ಸಾಯಂಕಾಲ 4.00 ಗಂಟೆಯ ಅವಧಿಯಲ್ಲಿ ಸರ್ಕಾರದ ವತಿಯಿಂದ ಸಕಲ ಗೌರವಗಳೊಂದಿಗೆ ಪೂಜ್ಯರಿಗೆ ಅಂತಿಮ ನಮನ ಸಲ್ಲಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.
ಸಂಜೆ 4.00 ಗಂಟೆಯಿಂದ ಪುನಃ ತೆರೆದ ವಾಹನದಲ್ಲಿ ಪೂಜ್ಯರ ಪಾರ್ಥೀವ ಶರೀರವನ್ನು ಸೈನಿಕ ಶಾಲೆಯಿಂದ ಶ್ರೀ ಜ್ಞಾನಯೋಗಾಶ್ರಮಕ್ಕೆ ತರಲಾಗುವುದು. (ಮಾರ್ಗ: ಗೋದಾವರಿ-ಶ್ರೀ ಶಂಕರಲಿಂಗ ದೇವಸ್ಥಾನ-ಶಿವಾಜಿವೃತ್ತ - ಗಾಂಧಿವೃತ್ತ- ಶ್ರೀ ಸಿದ್ದೇಶ್ವರ ದೇವಸ್ಥಾನ-ಬಿ.ಎಲ್.ಡಿ.ಇ. ಆಸ್ಪತ್ರೆ-ಶ್ರೀ ಜ್ಞಾನಯೋಗಾಶ್ರಮ), ಭಕ್ತಾದಿಗಳು ರಸ್ತೆಯ ಇಕ್ಕೆಲಗಳಲ್ಲಿ ನಿಂತುಕೊಂಡು ಪೂಜ್ಯರ ಪಾರ್ಥೀವ ಶರೀರಕ್ಕೆ ಅಂತಿಮ ನಮನವನ್ನು ಸಲ್ಲಿಸಬಹುದಾಗಿದೆ. ಪೂಜ್ಯರ ಅಂತಿಮ ಕ್ರಿಯೆಯನ್ನು ಸಂಜೆ 5.00 ಗಂಟೆಗೆ ಶ್ರೀ ಜ್ಞಾನಯೋಗಾಶ್ರಮದ ಆವರಣದಲ್ಲಿ ವಿಧಿವಿಧಾನಗಳಂತೆ ನೇರವೇರಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.
ಶ್ರೀ ಜ್ಞಾನಯೋಗಾಶ್ರಮದ ಆವರಣದಲ್ಲಿ ಸ್ಥಳಾವಕಾಶದ ಅಭಾವವಿರುವುದರಿಂದ ಭಕ್ತಾದಿಗಳು ಸೈನಿಕ ಶಾಲೆಯಲ್ಲಿಯೇ ಅಂತಿಮ ದರ್ಶನ ಪಡೆಯಲು ಮನವಿ ಮಾಡಿಕೊಂಡ ಜಿಲ್ಲಾಧಿಕಾರಿಗಳು, ಭಕ್ತಾದಿಗಳು ಯಾವುದೇ ಆತಂತಕ್ಕೆ ಒಳಗಾಗದೇ ಶಾಂತ ರೀತಿಯಿಂದ ವರ್ತಿಸಿ, ಜಿಲ್ಲಾಡಳಿತದೊಂದಿಗೆ ಸಹಕರಿಸುವಂತೆ ಅವರು ಕೋರಿದ್ದಾರೆ.
Saturday, December 31, 2022
Wednesday, December 28, 2022
ನೌಕರ-ವಿರೋಧಿ NPS ಯೋಜನೆಯನ್ನು ರದ್ದುಗೊಳಿಸಿ : ಜಿಲ್ಲಾ ಕಾರ್ಯದರ್ಶಿ, ರಾಜ್ಯ ಉಪಾಧ್ಯಕ್ಷರು ಸುರೇಶ್ ಜೀಬಿ ಆಗ್ರಹ
ಈ ದಿವಸ ವಾರ್ತೆ
ವಿಜಯಪುರ: ದಿನಾಂಕ: 01.04.2006 ರಿಂದ ರಾಜ್ಯದಲ್ಲಿ ಜಾರಿಗೆ ತರಲಾಗಿರುವ ಪಿ.ಎಫ್.ಆರ್.ಡಿ.ಎ ಕಾಯಿದೆ ಪ್ರಾಯೋಜಿತ ಎನ್.ಪಿ.ಎಸ್‌ಯೋಜನೆಯಿಂದಾಗಿ ರಾಜ್ಯ ಸರ್ಕಾರಿ ನೌಕರರಿಂದ ನಿಶ್ಚಿತ ಪಿಂಚಣ ಯನ್ನು ಕಸಿದುಕೊಳ್ಳಲಾಗಿರುತ್ತದೆ. ಎನ್.ಪಿ.ಎಸ್‌ಯೋಜನೆಯಡಿ ಸಂಗ್ರಹವಾಗುವ ಶೇ. 10ರಷ್ಟು ನೌಕರರ ವಂತಿಕೆ ಮತ್ತು ಶೇ. 12 ರಷ್ಟು ಸರ್ಕಾರದ ವಂತಿಕೆಯನ್ನು ಪಿ. ಎಫ್. ಆರ್. ಡಿ. ಎ ಸಂಸ್ಥೆಯು ಫಂಡ್‌ಮ್ಯಾನೇಜರುಗಳ ಮೂಲಕ ಷೇರು ಮಾರುಕಟ್ಟೆಯಲ್ಲಿ ತೊಡಗಿಸುತ್ತಿದ್ದು, ಕಳೆದ 18 ವರ್ಷಗಳ ಅನುಭವ ತೋರಿಸಿಕೊಟ್ಟಿರುವುದೇನೆಂದರೆ, ಸರ್ಕಾರಿ ನೌಕರರ ಹಣ ಖಾಸಗೀ ಕಂಪನಿಗಳ ಷೇರು ಖರೀದಿಗೆ ವಿನಿಯೋಗವಾಗುತ್ತಿದ್ದು, ಷೇರು ಮಾರುಕಟ್ಟೆಯು ಜೂಜುಕೋರ ವ್ಯವಸ್ಥೆಯಾಗಿರುವುದರಿಂದ, ನಿವೃತ್ತಿಯಾಗುತ್ತಿರುವ ನೌಕರರಿಗೆ/ ಮರಣ ಹೊಂದಿರುವ ನೌಕರರ ಕುಟುಂಬಕ್ಕೆ ಮಾಸಿಕ ಪಿಂಚಣ ಕೇವಲ ರೂ. 2,000 ದಿಂದ ರೂ. 3,000 ಮಾತ್ರವೇ ಬರುತ್ತಿದ್ದು, ಇದು ಮನೆಯ ಬಾಡಿಗೆಯಿರಲಿ, ವಿದ್ಯುತ್ ಮತ್ತು ನೀರಿನ ಶುಲ್ಕ ಕಟ್ಟಲು ಸಾಕಾಗುತ್ತಿಲ್ಲ ಎಂದು ಜಿಲ್ಲಾ ಕಾರ್ಯದರ್ಶಿ, ರಾಜ್ಯ ಉಪಾಧ್ಯಕ್ಷರು ಸುರೇಶ್ ಜೀಬಿ ಅವರು ತಿಳಿಸಿದ್ದಾರೆ.
ನೌಕರ-ವಿರೋಧಿ NPS ಯೋಜನೆಯನ್ನು ರದ್ದುಗೊಳಿಸಿ ನಿಶ್ಚಿತ ಪಿಂಚಣ ಯೋಜನೆಯನ್ನು ಮರುಸ್ಥಾಪಿಸುವ ನಿಟ್ಟಿನಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ಓPS ನೌಕರರ ಸಂಘದ ನೇತೃತ್ವದಲ್ಲಿ ವಿವಿಧ ನೌಕರ-ಪರ ಸಂಘಟನೆಗಳು ಒಡಗೂಡಿ ದಿನಾಂಕ: 19/12/2022 ರಿಂದ ಅನಿರ್ದಿಷ್ಟಾವಧಿ ಅಹೋರಾತ್ರಿ ಧರಣ ಕಾರ್ಯಕ್ರಮವನ್ನು ನಡೆಸುತ್ತಿವೆ. ಇದಕ್ಕೆ ಬೆಂಬಲವಾಗಿ ಹಲವಾರು ನೌಕರ ಪರ ಸಂಘಟನೆಗಳು ಬೆಂಬಲವನ್ನು ವ್ಯಕ್ತಪಡಿಸಿ ನೌಕರ ಪರ ಈ ಬೇಡಿಕೆಯನ್ನು ಈಡೇರಿಸುವಂತೆ ಸರ್ಕಾರವನ್ನು ಚಂದ್ರಶೇಖರ ಎಚ್ ಲೆಂಡಿ ಜಿಲ್ಲಾ ಅಧ್ಯಕ್ಷರು ಹಾಗೂ ಕರ್ನಾಟಕ ರಾಜ್ಯ ಸರ್ಕಾರಿ ಪಿಂಚಣ ದಾರರ ಒಕ್ಕೂಟ ರಾಜ್ಯ ಉಪಾಧ್ಯಕ್ಷರು ಆಗ್ರಹಿಸಿದರು.
ದೇಶದ ಸರ್ವೋಚ್ಛ ನ್ಯಾಯಾಲಯವು ಪಿಂಚಣ ಎಂಬುವುದು ನೌಕರರಿಗೆ ನೀಡುವ ಭಿಕ್ಷೆಯಲ್ಲ, ನೌಕರರು ದೀರ್ಘಾವಧಿಗೆ ಮಾಡಿದ ಸೇವೆ ಹಾಗೂ ಸದರಿ ಸೇವಾವಧಿಯಲ್ಲಿ ನೌಕರರ ಶ್ರಮಕ್ಕೆ ಮಾರುಕಟ್ಟೆ ದರಕ್ಕಿಂತ ಕಡಿಮೆ ವೇತನ ನೀಡಿ ಉಳಿದ ಮೊತ್ತವನ್ನು ಪಿಂಚಣ ಯ ರೂಪದಲ್ಲಿ ಇಳಿವಯಸ್ಸಿನ ಸಾಮಾಜಿಕ-ಆರ್ಥಿಕ ಭದ್ರತೆಗಾಗಿ ನೀಡುವಂತಹುದ್ದಾಗಿದೆ. ಇದನ್ನು “ಆeಜಿeಡಿeಜ Wಚಿges” ಎಂದು ಅರ್ಥೈಸಲಾಗಿದೆ. 'ಪಿಂಚಣ ' ಎಂಬುದು ನೌಕರರು ಮಾಡಿದ ಸರ್ಕಾರಿ ಸೇವೆಗಾಗಿ, ಇಳಿ ವಯಸ್ಸಿನಲ್ಲಿ ನೌಕರರ ಸಾಮಾಜಿಕ ಹಾಗೂ ಆರ್ಥಿಕ ಭದ್ರತೆಗಾಗಿ ನೀಡುವ ಹಕ್ಕಿನಂಶದ ಹಣವೆಂದು ಪರಿಗಣ ಸುವಂತೆ ಹೇಳಿದೆ (ಂIಖ- 1983-Sಅ-130) ಚಂದ್ರಶೇಖರ ಎಚ್ ಲೆಂಡಿ ಅವರು ತಿಳಿಸಿದ್ದಾರೆ.
ಕಳೆದ ಒಂದು ವಾರದಿಂದ ರಾಜ್ಯದ ಎನ್.ಪಿ.ಎಸ್ ನೌಕರರು ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಮಕ್ಕಳು ಮತ್ತು ಕುಟುಂಬವರ್ಗದವರೊAದಿಗೆ ಸೇರಿ ಅಹೋರಾತ್ರಿ ಧರಣ ಯನ್ನು ನಡೆಸುತ್ತಿದ್ದಾರೆ. ಆದರೆ, ಇದುವರೆಗೂ ರಾಜ್ಯ ಸರ್ಕಾರವು ಈ ಕುರಿತು ಗಮನ ಹರಿಸದೇ ಇರುವುದು ನೌಕರರ ಜ್ವಲಂತ ಬೇಡಿಕೆಯ ಕುರಿತು ಇರುವ ಉದಾಸೀನ ಎನ್ನಬೇಕಾಗುತ್ತದೆ. ಹಲವು ವರ್ಷಗಳ ನಂತರ ರಾಜಸ್ಥಾನ/ಛತ್ತೀಸ್ ಗಡ್/ ಜಾರ್ಖಂಡ್/ ಪಂಜಾಬ್ ರಾಜ್ಯ ಸರ್ಕಾರಗಳು ಮಹತ್ವದ ನಿರ್ಧಾರಗಳನ್ನು ಹೊರಡಿಸಿವೆ. ಅದೇ ರೀತಿಯಲ್ಲಿ, ನಮ್ಮ ರಾಜ್ಯ ಸರ್ಕಾರವೂ ಸಹ ನೌಕರ-ವಿರೋಧಿ ಓPS ಯೋಜನೆಯನ್ನು ರದ್ದುಗೊಳಿಸಿ ನಿಶ್ಚಿತ ಪಿಂಚಣ ಯೋಜನೆಯನ್ನು ಮರುಸ್ಥಾಪಿಸುವ ಬೇಡಿಕೆಯನ್ನು ಈಡೇರಿಸುವ ಮೂಲಕ ಮಾದರಿ ರಾಜ್ಯಗಳಲ್ಲೊಂದಾಗಬೇಕೆAದು ಅಖಿಲ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಒಕ್ಕೂಟವು ಸರ್ಕಾರವನ್ನು ಆಗ್ರಹಿಸುತ್ತದೆ ಎಂದು ಅಶೋಕ ಇಲಕಲ್ ರಾಜ್ಯ ಸಂಘಟನಾ ಕಾರ್ಯದರ್ಶಿಗಳು ಅವರು ತಿಳಿಸಿದ್ದಾರೆ.
Saturday, December 24, 2022
ದಸಾಪ ಜಿಲ್ಲಾಧ್ಯಕ್ಷರಾಗಿ ಬಸವರಾಜ ಜಾಲವಾದಿ ಆಯ್ಕೆ
ಈ ದಿವಸ ವಾರ್ತೆ
ವಿಜಯಪುರ: ನಗರದ ಬಸವರಾಜ ಜಾಲವಾದಿ ಅವರನ್ನು ದಲಿತ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷರಾಗಿ ಆಯ್ಕೆ ಮಾಡಲಾಗಿದೆ.
ದಲಿತ ಸಾಹಿತ್ಯ ಪರಿಷತ್ ಬೆಳ್ಳಿ ಹಬ್ಬ ಆಚರಿಸುತ್ತಿರುವ ಈ ಸಂದರ್ಭ ರಾಜ್ಯದ ಜಿಲ್ಲಾ ಘಟಕಗಳನ್ನು ಇನ್ನಷ್ಟು ಕ್ರಿಯಾಶೀಲಗೊಳಿಸುವ ಹಿನ್ನೆಲೆಯಲ್ಲಿ ವಿಜಯಪುರ ಜಿಲ್ಲಾ ದಲಿತ ಸಾಹಿತ್ಯ ಪರಿಷತ್ ಅಧ್ಯಕ್ಷರನ್ನಾಗಿ ಬಸವರಾಜ ಜಾಲವಾದಿ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ರಾಜ್ಯ ದಲಿತ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ. ಅರ್ಜುನ ಗೊಳಸಂಗಿ, ಕಾರ್ಯದರ್ಶಿ ಸುಭಾಷ ಹೊದ್ಲೂರ, ದಲಿತ ಸಾಹಿತ್ಯ ಪರಿಷತ್ ಬೆಳಗಾವಿ ವಿಭಾಗೀಯ ಸಂಯೋಜಕ ಡಾ.ಸುಜಾತಾ ಚಲವಾದಿ ಅವರು ಜಂಟಿ ಪತ್ರಿಕಾ ಪ್ರಕಟನೆ ನೀಡಿದ್ದಾರೆ.
ವಿಜಯಪುರ ಜಿಲ್ಲಾ ಕಾರ್ಯಕಾರಿ ಸಮಿತಿ ಹಾಗೂ ವಿವಿಧ ತಾಲೂಕು ಅಧ್ಯಕ್ಷರಾಗ ಬಯಸುವವರು ದಲಿತ ಸಾಹಿತ್ಯ, ಸಂಸ್ಕೃತಿ, ಕಲೆಯ ಬಗೆಗೆ ಆಸಕ್ತಿಯುಳ್ಳವರು ಜಿಲ್ಲಾ ಅಧ್ಯಕ್ಷ ಬಸವರಾಜ ಜಾಲವಾದಿ ಅವರನ್ನು (ಮೊ.9449292062) ಸಂಪರ್ಕಿಸಬಹುದಾಗಿದೆ ಎಂದು ಕೋರಲಾಗಿದೆ.


