Tuesday, May 24, 2022
Sunday, May 22, 2022
ದೇವರನಿಂಬರಗಿಯಲ್ಲಿ ಸರಣಿ ಕಳ್ಳತನ
ವಿಜಯಪುರ: ಜಿಲ್ಲೆಯ ಚಡಚಣ ತಾಲೂಕಿನ ದೇವರ ನಿಂಬರಗಿ ಗ್ರಾಮದಲ್ಲಿ ಭಾನುವಾರ ರಾತ್ರಿ ಬಂಗಾರ ಅಂಗಡಿ, ಮನೆಯಲ್ಲಿ ಸರಣಿ ಕಳ್ಳತನವಾಗಿರುವ ಘಟನೆ ನಡೆದಿದೆ.
ಇಲ್ಲಿನ ರಾಜು ಪತ್ತಾರ ಎಂಬವರ ಬಂಗಾರದ ಅಂಗಡಿಗೆ ನುಗ್ಗಿದ ಕಳ್ಳರು, ಅಂಗಡಿಯಲ್ಲಿನ 40 ಸಾವಿರ ನಗದು ಸೇರಿ 5 ಲಕ್ಷ ರೂ.ಗಳ ಚಿನ್ನಾಭರಣವನ್ನು ಕಳ್ಳತನ ಮಾಡಿದ್ದಾರೆ. ಅಲ್ಲದೆ ಸದಾಶಿವ ಸಿಂಗೆ ಎಂಬವರ ಮನೆಯಲ್ಲಿನ ತಿಜೋರಿ ಬೀಗ ಮುರಿದು 8 ಸಾವಿರ ರೂ. ನಗದನ್ನು ಕಳ್ಳರು ಕಳ್ಳತನ ಮಾಡಿದ್ದು, ಜಾಕೀರ್ ಎಂಬವರ ಬಳೆ ಅಂಗಡಿ ಮತ್ತು ಶಾಕೀರ ಅವರ ಚಪ್ಪಲಿ ಅಂಗಡಿ ಬೀಗ ಮುರಿದು ನಗದು ಹಣವನ್ನು ಕಳ್ಳರು ಕಳ್ಳತನ ಮಾಡಿಕೊಂಡು ಪರಾರಿಯಾಗಿದ್ದಾರೆ.
ಸ್ಥಳಕ್ಕೆ ಚಡಚಣ ಪೊಲೀಸರು ಆಗಮಿಸಿ, ಪರಿಶೀಲನೆ ನಡೆಸಿದರು.
ಚಡಚಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
Thursday, May 19, 2022
Tuesday, May 17, 2022
Sunday, May 15, 2022
Friday, May 13, 2022
Subscribe to:
Posts (Atom)
