Tuesday, June 16, 2020
‘’ಕೋವಿಡ್-19 ಹಿನ್ನಲೆ ಸಂಕಷ್ಟಕ್ಕೆ ಒಳಗಾದ ಉದ್ಯಮಿದಾರರಿಗೆ ಸಾಲ ಸೌಲಭ್ಯ ಕಲ್ಪಿಸಿ’’ ಜಿಲ್ಲಾಧಿಕಾರಿ ವೈ.ಎಸ್ ಪಾಟೀಲ
ಈ ದಿವಸ ವಾರ್ತೆ
ವಿಜಯಪುರ : ಕೋವಿಡ್-19 ಹಿನ್ನಲೆಯಲ್ಲಿ ತೀವ್ರ ಸಂಕಷ್ಟಕ್ಕೆ ಒಳಗಾದ ಉತ್ಪಾದನಾ ಮತ್ತು ಸೇವಾ ಘಟಕಗಳ ಸಣ್ಣ, ಅತೀ ಸಣ್ಣ ಹಾಗೂ ಮಧ್ಯಮ ಉದ್ಯಮಿದಾರರಿಗೆ ಸಕಾಲಕ್ಕೆ ಸಾಲ ನೀಡುವಲ್ಲಿ ನೆರವಾಗುವಂತೆ ಖಾಸಗಿ ಬ್ಯಾಂಕ್‍ಗಳಿಗೆ ಜಿಲ್ಲಾಧಿಕಾರಿ ವೈ.ಎಸ್ ಪಾಟೀಲ ಅವರು ಸೂಚಿಸಿದ್ದಾರೆ.
ಜಿಲ್ಲಾ ಪಂಚಾಯತ ಸಭಾಂಗಣದಲ್ಲಿಂದು ಆತ್ಮನಿರ್ಭರ ಮತ್ತು ಎಮರ್ಜನ್ಸಿ ಕ್ರೇಡಿಟ್ ಲೈನ್ ಗ್ಯಾರೆಂಟಿ ಯೋಜನೆ ಕುರಿತು ಆಯೋಜಿಸಲಾಗಿದ್ದ ವಿವಿಧ ಉದ್ಯಮೆಗಾರರೊಂದಿಗಿನ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಕೋವಿಡ್-19 ಹಿನ್ನಲೆಯಲ್ಲಿ ತೀವ್ರ ಸಂಕಷ್ಟಕ್ಕೆ ಒಳಗಾದ ಉದ್ಯಮಿದಾರರ ಪುನಶ್ಚೇತನಕ್ಕಾಗಿ ಆತ್ಮನಿರ್ಭರ ಮತ್ತು ಎಮರ್ಜನ್ಸಿ ಕ್ರೇಡಿಟ್ ಲೈನ್ ಗ್ಯಾರೆಂಟಿ ಈ ಯೋಜನೆಗಳನ್ನು ಸರ್ಕಾರ ಜಾರಿಗೊಳಿಸಿದ್ದು ಜಿಲ್ಲೆಯಲ್ಲಿ ಒಟ್ಟು 253 ಕೋಟಿ ರೂ,ಗಳನ್ನು ಸಾಲಕ್ಕಾಗಿ ಮೀಸಲಿಡಲಾಗಿದೆ. ಅರ್ಹರಿಗೆ ಇದರ ಸದುಪಯೋಗ ದೊರಕುವಂತೆ ನೋಡಿಕೊಳ್ಳಲು ಅವರು ಬ್ಯಾಂಕ್ ಅಧಿಕಾರಿಗಳಿಗೆ ಸೂಚಿಸಿದರು.
ಅದರಂತೆ ಕೋವಿಡ್-19 ಹಿನ್ನಲೆಯಲ್ಲಿ ತೀವ್ರ ಸಂಕಷ್ಟಕ್ಕೆ ಒಳಗಾಗಿದ್ದ ಜಿಲ್ಲೆಯ ಉದ್ಯಮಿದಾರರಿಗೆ ಬ್ಯಾಂಕ್ ಆಫ್ ಬರೋಡಾ, ಬ್ಯಾಂಕ್ ಆಫ್ ಇಂಡಿಯಾ, ಬ್ಯಾಂಕ್ ಆಫ್ ಮಹಾರಾಷ್ಟ್ರ, ಕೇನೆರಾ ಬ್ಯಾಂಕ್, ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ, ಇಂಡಿಯನ್ ಬ್ಯಾಂಕ್, ಇಂಡಿಯನ್ ಒವರ್‍ಸಿಸ್ ಬ್ಯಾಂಕ್, ಪಂಜಾಬ್ ಮತ್ತು ಸಿಂಧ ಬ್ಯಾಂಕ್, ಪಂಜಾಬ್ ನ್ಯಾಷನಲ್ ಬ್ಯಾಂಕ್, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಯು.ಸಿ.ಓ ಬ್ಯಾಂಕ್ ಮತ್ತು ಯುನಿಯನ್ ಬ್ಯಾಂಕ್ ಆಫ್ ಇಂಡಿಯಾಗಳ ಮೂಲಕ ಸಾಲ ಮಂಜೂರಾತಿ ಮಾಡಲಾಗುತ್ತಿದ್ದು, ಈವರಗೆ ಒಟ್ಟು 28 ಕೋಟಿ ರೂಗಳ ಸಾಲ ವಿತರಿಸಲಾಗಿದೆ ಎಂದು ಹೇಳಿದರು.
ಕೋವಿಡ್-19 ತೀವ್ರ ಸಂಕಷ್ಟ ಮತ್ತು ವಿಷಮ ಪರಿಸ್ಥಿತಿ ಇದಾಗಿದ್ದು ಆರ್.ಬಿ.ಐ ಮಾರ್ಗಸೂಚಿ ಮತ್ತು ನಿರ್ದೇಶನಗಳಂತೆ ಖಾಸಗಿ ಬ್ಯಾಂಕ್‍ಗಳು ಕೂಡಾ ಸಕಾಲಕ್ಕೆ ಅರ್ಹ ಫಲಾನುಭವಿ ಉದ್ಯಮಿದಾರರಿಗೆ ಸಾಲ ಮಂಜೂರಾತಿಗೆ ಕ್ರಮಕೈಗೊಳ್ಳಬೇಕು. ಕಷ್ಟದ ಈ ಪರಿಸ್ಥಿತಿಯಲ್ಲಿ ತೊಂದರೆ ಅನುಭವಿಸಿದ ಗ್ರಾಹಕರಿಗೆ ಸಕಾಲಕ್ಕೆ ನೆರವಾಗಬೇಕು. ಇದಕ್ಕೆ ಸ್ಪಂದಿಸದ ಬ್ಯಾಂಕ್‍ಗಳ ವಿರುದ್ಧ ವಿಪತ್ತು ನಿರ್ವಹಣಾ ಕಾಯ್ದೆಯಡಿ ಪ್ರಕರಣ ದಾಖಲಾತಿಗೆ ಕ್ರಮಕೈಗೊಳ್ಳುವುದರ ಜೊತೆಗೆ ಸರ್ಕಾರದ ಗಮನಕ್ಕೂ ಸಹ ತರುವುದಾಗಿ ಎಚ್ಚರಿಕೆ ನೀಡಿದರು.
ಈ ಯೋಜನೆಯ ರೋಪುರೇಷೆಗಳ ಬಗ್ಗೆ ಖಾಸಗಿ ಬ್ಯಾಂಕ್‍ಗಳಿಗೆ ಮನವರಿಕೆ ಮಾಡುವಂತೆ ತಿಳಿಸಿದ ಅವರು ಆರ್.ಬಿ.ಐ ಮಾರ್ಗಸೂಚಿಯನ್ವಯ ಕಾರ್ಯ ನಿರ್ವಹಿಸುವಂತೆ ಸೂಕ್ತ ತಿಳುವಳಿಕೆ ನೀಡಲು ಸಂಬಂಧಪಟ್ಟ ಬ್ಯಾಂಕ್ ಅಧಿಕಾರಿಗಳಿಗೆ ಸೂಚನೆ ನೀಡಿದ ಅವರು 2020ರ ಅಕ್ಟೋಬರ್ 31ರ ರೊಳಗೆ ಈ ಯೋಜನೆಯಡಿ ಸೌಲಭ್ಯ ಕಲ್ಪಿಸಲು ಅವಕಾಶ ಇರುವುದರಿಂದ ಮತ್ತು ವ್ಯಾಪಾರ ವಹಿವಾಟಿಗೆ ಪ್ರೋತ್ಸಾಹದಾಯಕ ವಾಗಿರುವುದರಿಂದ ಇವುಗಳ ಲಾಭ ದೊರಕಿಸುವಂತೆ ಅವರು ಸೂಚನೆ ನೀಡಿದರು.
ಸಭೆಯಲ್ಲಿ ಮಾತನಾಡಿದ ಲೀಡ್ ಬ್ಯಾಂಕ್ ಮ್ಯಾನೇಜರ್ ಶ್ರೀ ಸೋಮನಗೌಡ ಅವರು ಕೇಂದ್ರ ಸರ್ಕಾರದ ಆತ್ಮನಿರ್ಭರ ಯೋಜನೆಯಡಿ 3 ಲಕ್ಷ ರೂಗಳ ವರೆಗೆ ಸಾಲ ಪಡೆಯಲು ಅವಕಾಶವಿದ್ದು, ಅರ್ಹ ಸಣ್ಣ, ಅತೀ ಸಣ್ಣ ಮತ್ತು ಮದ್ಯಮ (ಎಂ.ಎಸ್.ಎಂ.ಇ) ಉದ್ಯಮಿದಾರರು ಸಂಬಂಧಪಟ್ಟ ಬ್ಯಾಂಕ್ ಶಾಖೆಗಳಿಗೆ ಸಂಪರ್ಕಿಸಿ ಸಾಲ ಸೌಲಭ್ಯ ಪಡೆಯಬಹುದಾಗಿದ್ದು, ಬರುವ ಅಕ್ಟೋಬರ್ 31 ರೊಳಗೆ ಮೊದಲು ಬಂದವರಿಗೆ ಪ್ರಥಮ ಆಧ್ಯತೆ ಮೇಲೆ ಸಾಲ ನೀಡಲಾಗುತ್ತಿದ್ದು ಇದರ ಸದುಪಯೋಗ ಪಡೆದುಕೊಳ್ಳುವಂತೆ ಅವರು ಕೋರಿದ್ದಾರೆ.
ಇದೇ ಸಂದರ್ಭದಲ್ಲಿ ವಿವಿಧ ಉದ್ಯಮಿಗಳೊಂದಿಗೆ ಸಂವಾದ ನಡೆಸಿ ವಿವಿಧ ಸಮಸ್ಯೆಗಳನ್ನು ಜಿಲ್ಲಾಧಿಕಾರಿಗಳು ಆಲಿಸಿದರು. ಸಭೆಯಲ್ಲಿ ಜಿಲ್ಲಾಪಂಚಾಯತ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗೋವಿಂದ ರೆಡ್ಡಿ, ಜಿಲ್ಲಾ ಕೈಗಾರಿಕಾ ಕೇಂದ್ರ ಜಂಟಿ ನಿರ್ದೇಶಕ ಟಿ.ಸಿದ್ದಣ್ಣ, ಲೀಡ್ ಬ್ಯಾಂಕ್ ಮ್ಯಾನೇಜರ್ ಸೋಮನಗೌಡ ಸೇರಿದಂತೆ ಇತರರು ಉಪಸ್ಥಿತರಿದ್ದರು.
‘’ದ್ವಿತೀಯ ಪಿಯುಸಿಯ ಇಂಗ್ಲೀಷ ಪರೀಕ್ಷೆಗೆ 41 ಪರೀಕ್ಷಾ ಕೇಂದ್ರಗಳಲ್ಲಿ ಸೂಕ್ತ ವ್ಯವಸ್ಥೆ ಕೈಗೊಳ್ಳಲಾಗಿದೆ’’ : ಜಿಲ್ಲಾಧಿಕಾರಿ ವೈ.ಎಸ್ ಪಾಟೀಲ
ವಿಜಯಪುರ : ದ್ವಿತೀಯ ಪಿಯುಸಿಯ ಇಂಗ್ಲೀಷ ವಿಷಯದ ವಾರ್ಷಿಕ ಪರೀಕ್ಷೆಯು ದಿನಾಂಕ : 18-06-2020 ರಂದು ಜಿಲ್ಲೆಯ 41 ಪರೀಕ್ಷಾ ಕೇಂದ್ರಗಳಲ್ಲಿ ನಡೆಯಲಿದ್ದು, ಜಿಲ್ಲೆಯ ಎಲ್ಲ ಪರೀಕ್ಷಾ ಕೇಂದ್ರಗಳಲ್ಲಿ ಸೂಕ್ತ ವ್ಯವಸ್ಥೆ ಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ವೈ.ಎಸ್ ಪಾಟೀಲ ಅವರು ತಿಳಿಸಿದ್ದಾರೆ.
ಪರೀಕ್ಷಾಕೇಂದ್ರದ ಸುತ್ತಮುತ್ತಲು 200 ಮೀಟರ್‌ಅಂತರದಲ್ಲಿ 144 ಕಲಂ ಜಾರಿಮಾಡಿ ಪರೀಕ್ಷಾಕೇಂದ್ರದ ಸುತ್ತಮುತ್ತಲಿರುವಝರಾಕ್ಸ್, ಸೈಬರ್‌ಕೆಫೆ, ಕೋಚಿಂಗ್ ಕ್ಲಾಸ್‌ಗಳನ್ನು ಬಂದು ಮಾಡಲುಕ್ರಮ ಕೈಗೊಳ್ಳಲಾಗಿದೆ. ಕೊವಿಡ್-19 ಕರೋನಾ ವೈರಸ್ ಹರಡಿರುವ ಪ್ರಯುಕ್ತ ಪರೀಕ್ಷೆಗೆ ಬರುವ ಪ್ರತಿ ವಿದ್ಯಾರ್ಥಿಯುಕಡ್ಡಾಯವಾಗಿ ಮಾಸ್ಕ್, ಸ್ಯಾನಿಟೈಸರ್‌ತಮಗೆಕುಡಿಯಲು ನೀರಿನ ಬಾಟಲ್‌ಎರಡು ಪೆನ್ನುಗಳು ತೆಗೆದುಕೊಂಡು ಪ್ರತಿ ವಿದ್ಯಾರ್ಥಿಯನ್ನು ಥರ್ಮಲ್ ಸ್ಕಾö್ಯನರ್‌ನಿಂದ ಪರೀಕ್ಷಾ ಕೇಂದ್ರಗಳಲ್ಲಿ ತಪಾಸಣೆ ಮಾಡಿ ಸಾಮಾಜಿಕಅಂತರವನ್ನು ಪಾಲಿಸಲು ಪರೀಕ್ಷಾ ಕೇಂದ್ರಗಳಲ್ಲಿ ಪ್ರವೇಶ ಮಾಡಲು ವಿದ್ಯಾರ್ಥಿಗಳು ಕಡ್ಡಾಯವಾಗಿ ಬೆಳಗ್ಗೆ 8:00 ಗಂಟೆಗೆ ಹಾಜರಿರಲು ತಿಳಿಸಿದೆ. ಯಾವುದೇಕಾರಣಕ್ಕೂ ನಿಗದಿತ ಸಮಯವನ್ನು ಮೀರಿ ಪರೀಕ್ಷಾಕೇಂದ್ರಕ್ಕೆಆಗಮಿಸುವುದನ್ನು
ದ್ವೀತಿಯ ಪಿಯು ಪರೀಕ್ಷಾ ಅಂಗವಾಗಿ ಜಿಲ್ಲೆಯ ವಿಜಯಪುರ ನಗರದಲ್ಲಿ 12 ಪರೀಕ್ಷಾ ಕೇಂದ್ರಗಳು, ಬಬಲೇಶ್ವರ ನಗರದಲ್ಲಿ 01, ತಿಕೋಟಾದಲ್ಲಿ 01, ಚಡಚಣತಾಲ್ಲೂಕಿನಲ್ಲಿ 03, ಇಂಡಿತಾಲ್ಲೂಕಿನಲ್ಲಿ 04, ಸಿಂದಗಿ ನಗರದಲ್ಲಿ 03, ದೇವರ ಹಿಪ್ಪರಗಿತಾಲ್ಲೂಕಿನಲ್ಲಿ 01, ತಾಳಿಕೋಟಿ ತಾಲ್ಲೂಕಿನಲ್ಲಿ 04, ಬಸವನ ಬಾಗೇವಾಡಿತಾಲ್ಲೂಕಿನಲ್ಲಿ 04, ನಿಡಗುಂದಿ ತಾಲ್ಲೂಕಿನಲ್ಲಿ 02,ಮುದ್ದೇಬಿಹಾಳ ತಾಲ್ಲೂಕಿನಲ್ಲಿ 04 ಹಾಗೂ ಆಲಮೇಲ ತಾಲ್ಲೂಕಿನಲ್ಲಿ 02 ಪರೀಕ್ಷಾ ಕೇಂದ್ರಗಳಲ್ಲಿ ಒಟ್ಟು 23556 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ ಎಂದು ತಿಳಿಸಿದರು.
ಬಾಲಕರ ಸರಕಾರಿ ಪದವಿ ಪೂರ್ವಕಾಲೇಜು, ವಿಜಯಪುರಇಲ್ಲಿ 1370 ವಿದ್ಯಾರ್ಥಿಗಳು ಇರುವುದರಿಂದ ಹೆಚ್ಚುವರಿ ಬ್ಲಾಕ್‌ನ್ನು ಸಿಕ್ಯಾಬ ತಾಂತ್ರಿಕ ಮಹಾವಿದ್ಯಾಲಯದಲ್ಲಿ 504 ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ಅವಕಾಶ ಮಾಡಿಕೊಡಲಾಗಿದ್ದು, ವಿದ್ಯಾರ್ಥಿಗಳ ನೋಂದಣಿ ಸಂಖ್ಯೆ 734343 ರಿಂದ 734930 ವಿದ್ಯಾರ್ಥಿಗಳು ಪರೀಕ್ಷೆಯನ್ನು ಸಿಕ್ಯಾಬ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಬರೆಯಬೇಕಾಗಿರುವುದರಿಂದ ಈ ನೋಂದಣಿ ಸಂಖ್ಯೆಯಲ್ಲಿ ಬರತಕ್ಕಂತಹ ವಿದ್ಯಾರ್ಥಿಗಳು ಖಚಿತ ಪಡಿಸಿಕೊಳ್ಳಲು ಶ್ರೀ ಬಿ.ಬಿ. ಗಂಗನಹಳ್ಳಿ, ಪ್ರಾಚಾರ್ಯರು, ಬಾಲಕರ ಸರಕಾರಿ ಪದವಿ ಪೂರ್ವಕಾಲೇಜು, ವಿಜಯಪುರಇವರ ಮೊಬೈಲ್ ಸಂ : 7760212470 ಕರೆ ಮಾಡಿ ಮಾಹಿತಿ ಪಡೆಯತಕ್ಕದ್ದು ಹಾಗೂ ಶ್ರೀ ಬಿ.ಕೆ ಉಂಬರ್ಜೆ, ಮುಖ್ಯಅಧೀಕ್ಷಕರು, ಬಾಲಕರ ಸರಕಾರಿ ಪದವಿ ಪೂರ್ವಕಾಲೇಜು, ವಿಜಯಪುರಇವರ ಮೊಬೈಲ್ ಸಂ : 9449169025 ಮತ್ತು ಶ್ರೀ ಎನ್.ಎಸ್ ಭೂಸನೂರ, ಪ್ರಾಚಾರ್ಯರು, ಸಿಕ್ಯಾಬ ಬಾಲಕರ ಪದವಿ ಪೂರ್ವಕಾಲೇಜು, ವಿಜಯಪುರಇವರ ಮೋಬೈಲ್ ಸಂ : 9341613241 ಈ ಮೊಬೈಲ್ ಸಂಖ್ಯೆಗಳಿಗೆ ಹೆಚ್ಚಿನ ಮಾಹಿತಿಗಾಗಿ ವಿದ್ಯಾರ್ಥಿಗಳು ಕರೆ ಮಾಡಿ ತಿಳಿದುಕೊಳ್ಳಬಹುದು ಎಂದು ತಿಳಿಸಿದ್ದಾರೆ.
ಜಿಲ್ಲೆಯ 41 ಪರೀಕ್ಷಾ ಕೇಂದ್ರಗಳಿಗೆ ಈಗಾಗಲೇ ಇಲಾಖೆಯ ನಿಯಮಾನುಸಾರ ಈ ಕಛೇರಿಯಿಂದ ಪ್ರಾಚಾರ್ಯರು / ಉಪನ್ಯಾಸಕರುಗಳನ್ನು ನೋಡಲ್ ಅಧಿಕಾರಿಗಳನ್ನು ನೇಮಕ ಮಾಡಲಾಗಿದ್ದು, ಸದರಿ ನೊಡಲ್ ಅಧಿಕಾರಿಗಳು ಪರೀಕ್ಷಾ ಕೇಂದ್ರಗಳನ್ನು ಸ್ಯಾನಿಟೈಸರ್‌ನಿಂದ ಸ್ವಚ್ಛಮಾಡಿದ ಬಗ್ಗೆ ಪರೀಕ್ಷಾ ಕೊಠಡಿಗಳಲ್ಲಿ ಸಾಮಾಜಿಕ ಅಂತರವನ್ನು ಕಾಪಾಡಿಕೊಂಡು ಹೋಗುವಂತೆ ವಿದ್ಯಾರ್ಥಿಗಳಿಗೆ ಆಸನ ವ್ಯವಸ್ಥೆ, ಮಾಸ್ಕ್, ಸ್ಯಾನಿಟೈಸರ್, ಥರ್ಮಲ್ ಸ್ಕಾö್ಯನರ್‌ನಿಂದ ತಪಾಸಣೆ ಮಾಡಲು ಕ್ರಮ ಕೈಗೊಂಡ ಬಗ್ಗೆ ಪರಿಶೀಲಿಸಿ ವರದಿ ನೀಡುವುದು ಹಾಗೂ ಇದರಂತೆಯೇಕ್ರಮ ಕೈಗೊಳ್ಳುಬೇಕು ಎಂದು ತಿಳಿಸಿದ್ದಾರೆ.
ಕಂಟೋನ್ಮೇAಟ್‌ಜೋನ್‌ನಿAದ ಬಂದAತಹ ವಿದ್ಯಾರ್ಥಿಗಳನ್ನು ಪ್ರತ್ಯೇಕಕೊಠಡಿಯಲ್ಲಿ ಪರೀಕ್ಷೆ ಬರೆಯಲುಕ್ರಮ ಕೈಗೊಳ್ಳಲಾಗಿದ್ದು, ಜಿಲ್ಲೆಗೆ ಹೋರ ರಾಜ್ಯಗಳಿಂದ 04 ವಿದ್ಯಾರ್ಥಿಗಳು (ಮುಂಬೈಠಾಣೆ, ಪುಣೆ, ಸೊಲ್ಲಾಪೂರ) ಪರೀಕ್ಷೆ ಬರೆಯಲಿದ್ದಾರೆ. ರಾಜ್ಯದ ವಿವಿಧ ಜಿಲ್ಲೆಗಳಿಂದ ಒಟ್ಟು 917 ಜನ ವಿದ್ಯಾರ್ಥಿಗಳು ಈ ಜಿಲ್ಲೆಯಲ್ಲಿ ವಿವಿಧ ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ಬರೆಯಲಿದ್ದಾರೆ ಎಂದರು.
ಪರೀಕ್ಷಾ ಅವಧಿಗಾಗಿ ಸಹಾಯವಾಣಿ ಕೇಂದ್ರದ ಸಹಾಯಕರಾಗಿ ಶ್ರೀ ಕೆ.ಎ. ಉಪ್ಪಾರ, ಪ್ರಾಚಾರ್ಯರು, ಸರಕಾರಿ ಪದವಿ ಪೂರ್ವಕಾಲೇಜು, ಲಚ್ಯಾಣ (9449645489), ಶ್ರೀ ಬಿ.ಎಸ್. ಗೌರಿ, ಉಪನ್ಯಾಸಕರು, ಸರಕಾರಿ ಪದವಿ ಪೂರ್ವಕಾಲೇಜು, ಹಳಗುಣಕಿ (9448186493) ಶ್ರೀ ವಿ.ಎ. ಕುದರಿ, ಉಪನ್ಯಾಸಕರು, ಬಿ.ಎಸ್ ಪವಾರ ಪದವಿ ಪೂರ್ವಕಾಲೇಜು, ಗೊಳಸಂಗಿ (9611464346) ಸದರಿ ಸಹಾಯವಾಣಿಕೇಂದ್ರದ ಸಹಾಯಕರು ವಿದ್ಯಾರ್ಥಿಗಳು ಮತ್ತು ಪಾಲಕರು ಪರೀಕ್ಷೆಯ ಬಗ್ಗೆ ಮಾಹಿತಿ ಕೇಳಿದಲ್ಲಿ ಮಾಹಿತಿಯನ್ನು ನೀಡಲಿರುತ್ತಾರೆ. ದಿನಾಂಕ : 16-06-2020 ರಿಂದ 18-06-2020 ರ ವರೆಗೆ 24*7 ಕಾರ್ಯನಿರ್ವಹಿಸಲಿರುತ್ತಾರೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.
Monday, June 15, 2020
‘’ಜಿಲ್ಲೆಯಲ್ಲಿನ ತೀವ್ರ ಉಸಿರಾಟ ತೊಂದರೆ, ನೆಗಡಿ,ಕೆಮ್ಮು,ಜ್ವರ ಸಂಬಂಧಿತ ರೋಗಿ ಚಿಕಿತ್ಸೆಗೆ ಬಂದ ತಕ್ಷಣ ಮಾಹಿತಿ ಒದಗಿಸಿ” : ಜಿಲ್ಲಾಧಿಕಾರಿ ವೈ.ಎಸ್ ಪಾಟೀಲ
ಈ ದಿವಸ ವಾರ್ತೆ
ವಿಜಯಪುರ : ಜಿಲ್ಲೆಯ ಖಾಸಗಿ ವೈದ್ಯರ ಬಳಿ ತೀವ್ರ ಉಸಿರಾಟ ತೊಂದರೆ, ನೆಗಡಿ, ಕೆಮ್ಮು, ಜ್ವರ ಸಂಬಂಧಿತ ಯಾವುದೇ ರೋಗಿಗಳು ಬಂದಲ್ಲಿ ತಕ್ಷಣ ನೋಡಲ್ ಅಧಿಕಾರಿಗಳಿಗೆ ಮಾಹಿತಿ ನೀಡಿ ಗಂಟಲು ದ್ರವ ಮಾದರಿ ಪಡೆಯಲು ನೆರವಾಗುವಂತೆ ಜಿಲ್ಲಾಧಿಕಾರಿ ವೈ.ಎಸ್ ಪಾಟೀಲ ಅವರು ಸೂಚಿಸಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿಂದು ಕೋವಿಡ್-19 ನಿಯಂತ್ರಣ ಕುರಿತು ಆರೋಗ್ಯ ಇಲಾಖೆ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಅವರು ಜಿಲ್ಲೆಯ ಪ್ರತಿ ಆಸ್ಪತ್ರೆಗಳಿಗೆ ಹೋಗುವ ನೆಗಡಿ,ಕೆಮ್ಮು, ಜ್ವರ, ಹಾಗೂ ತೀವ್ರ ಉಸಿರಾಟ ಸಂಬಂಧಿತ ತೊಂದರೆಗಳಿಂದ ಬಳಲುತ್ತಿರುವವರ ಬಗ್ಗೆ ತಕ್ಷಣ ನೋಡಲ್ ಅಧಿಕಾರಿಗಳನ್ನು ಸಂಪರ್ಕಿಸಬೇಕು. ದೂರವಾಣಿ ಸಂಖ್ಯೆ 9739224889(ಭೀಮರಾವ ಮಮದಾಪೂರ) ಇವರಿಗೆ ತಕ್ಷಣ ಮಾಹಿತಿ ನೀಡುವಂತೆ ಸೂಚಿಸಿದ್ದಾರೆ.
ಅದರಂತೆ ಈ ಮಾಹಿತಿ ಲಭ್ಯವಾದ ತಕ್ಷಣ ಇಂತಹ ರೋಗಿಗಳ ಗಂಟಲು ದ್ರವ ಮಾದರಿ ಸಂಗ್ರಹಣೆಗೆ ಸಂಬಂಧಪಟ್ಟ ಲ್ಯಾಬ್ ಟೆಕ್ನಿಷಿಯನ್‍ಗಳ ಮೂಲಕ ಆಯಾ ಆಸ್ಪತ್ರೆಗಳಿಗೆ ಸಂಪರ್ಕ ಸಾಧಿಸಿ ಗಂಟಲು ದ್ರವ ಮಾದರಿ ಸಂಗ್ರಹಿಸಬೇಕು. ತೀವ್ರ ಉಸಿರಾಟ ತೊಂದರೆ ಸಂಬಂಧಸಿದ ಪ್ರಕರಣಗಳಲ್ಲಿ ಟ್ರೂನ್ಯಾಟ್ ಯಂತ್ರದ ಮೂಲಕ ಗಂಟಲು ದ್ರವ ಮಾದರಿಗೆ ಒಳಪಡಿಸಿ ಪಾಸಿಟಿವ್ ಬಂದಲ್ಲಿ ತಕ್ಷಣ ಆಸ್ಪತ್ರೆಗೆ ದಾಖಲಿಸಬೇಕು. ಐ.ಎಲ್.ಐ ಪ್ರಕರಣಗಳಲ್ಲಿಯೂ ತಕ್ಷಣ ಗಂಟಲು ದ್ರವ ಮಾದರಿಗೆ ಒಳಪಡಿಸಿದ ನಂತರ ಆನ್‍ಲೈನ್ ನೊಂದಣಿ ಮತ್ತು ಆಪ್‍ಲೋಡ್‍ಗೆ ಕ್ರಮಕೈಗೊಳ್ಳುವಂತೆ ಅವರು ಸೂಚಿಸಿದರು.
ಜಿಲ್ಲೆಯ ಆಯುರ್ವೇದ, ಯೂನಾನಿ, ಹೋಮಿಯೋಪತಿಕ್ ವೈದ್ಯರ ಬಳಿ ಐ.ಎಲ್.ಐ ಮತ್ತು ಸಾರಿ ಪ್ರಕರಣಗಳು ಬಂದ ತಕ್ಷಣ ಮೇಲಿನ ಮೋಬೈಲ್ ಸಂಖ್ಯೆಗೆ ಮಾಹಿತಿ ನೀಡಬೇಕು. ಗಂಟಲು ದ್ರವ ಮಾದರಿ ಸಂಗ್ರಹಣೆಗೆ ಸೂಕ್ತ ರೀತಿಯಲ್ಲಿ ನೆರವಾಗಬೇಕು. ಇಂತಹ ಪ್ರಕರಣಗಳಲ್ಲಿ ಯಾವುದೇ ರೀತಿಯ ನಿರ್ಲಕ್ಷ ಮತ್ತು ಲೋಪ ಕಂಡುಬಂದಲ್ಲಿ ಅಂತಹವರ ವಿರುದ್ಧ ಕೆ.ಪಿ.ಎಂ.ಎ ಮತ್ತು ವಿಪತ್ತು ನಿರ್ವಹಣಾ ಕಾಯ್ದೆಗಳಯಡಿ ಕ್ರಿಮಿನಲ್ ಪ್ರಕರಣ ದಾಖಲಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಅದರಂತೆ ಕೋವಿಡ್-19 ರೋಗ ವಿಸ್ತರಣೆ ತಡೆಯಲು ಮತ್ತು ಸಾವುಗಳನ್ನು ತಪ್ಪಿಸಲು ತಕ್ಷಣ ಜಿಲ್ಲೆಯಲ್ಲಿನ ನಗರ ಮತ್ತು ಗ್ರಾಮಾಂತರ ಪ್ರದೇಶಗಳಲ್ಲಿನ ಪ್ರತಿ ಐಎಲ್‍ಐ ಮತ್ತು ಸಾರಿ ರೋಗಿಗಳ ಗಂಟಲು ದ್ರವ ಮಾದರಿ ಸಂಗ್ರಹಿಸಬೇಕು. ಈ ಕುರಿತು ಐ.ಎಂ.ಎ ಸಂಸ್ಥೆಯಡಿ ನೊಂದಾಸಿಕೊಂಡಿರುವ ವೈದ್ಯರು, ಕಂಟೇನ್ಮೆಂಟ್ ವಲಯ ಮತ್ತು ಬಫರ್ ಝೋನ್‍ಗಳಲ್ಲಿನ ಪ್ರತಿ ವೈದ್ಯರೊಂದಿಗೆ ಪ್ರತ್ಯೇಕ ಸಭೆ ನಡೆಸಿ ಮಾಹಿತಿ ನೀಡಬೇಕು. ಆಯಾ ತಾಲೂಕಾ ಆರೋಗ್ಯ ಅಧಿಕಾರಿಗಳು ತಕ್ಷಣ ಕಾರ್ಯ ಪ್ರವೃತ್ತರಾಗಬೇಕು. ಮುದ್ದೇಬಿಹಾಳ ತಾಲೂಕಿಗೆ ಸಂಬಂಧಿಸಿದಂತೆ ತಾಲೂಕಾ ಆರೋಗ್ಯಾಧಿಕಾರಿ ಶ್ರೀ ಸತೀಶ (ಮೋ.ಸಂ:8277504629) ವಿಜಯಪುರ ಟಿ.ಎಚ್.ಓ ಡಾ.ಕವಿತಾ (ಮೋ.ಸಂ:8073742494), ಬ ಬಾಗೇವಾಡಿ ಟಿ.ಎಚ್.ಓ ಶ್ರೀ ಓತಗಿರಿ (ಮೋ.ಸಂ: 8277504283), ಇಂಡಿ ಟಿ.ಎಚ್.ಓ ಡಾ. ಅರ್ಚನಾ ಕುಲಕರ್ಣಿ( ಮೋ.ಸಂ: 7483685695), ಸಿಂದಗಿ ಟಿ.ಎಚ್.ಓ ಆರ್.ಎಸ್ ಇಂಗಳೆ (ಮೋ.ಸಂ: 9606656104) ಹಾಗೂ ಜಿಲ್ಲಾ ಸರ್ವೇಕ್ಷಣಾಧಿಕಾರಿ ಎಂ.ಬಿ ಬಿರಾದಾರ (ಮೋ.ಸಂ: 9538240225) ಇವರಿಗೂ ಆಯಾ ಕ್ಷೇತ್ರಗಳಲ್ಲಿ ಬರುವ ಐ.ಎಲ್‍ಐ ಮತ್ತು ಸಾರಿ ಪ್ರಕರಣಗಳ ಬಗ್ಗೆ ಮಾಹಿತಿ ನೀಡುವಂತೆ ಜಿಲ್ಲಾಧಿಕಾರಿಗಳು ಸೂಚನೆ ನೀಡಿದ್ದಾರೆ.
ತೀವ್ರ ಉಸಿರಾಟ ತೊಂದರೆಯಿಂದ ಬಳಲಿ ಕೋವಿಡ್-19 ಪ್ರಕರಣಗಳು ದೃಡಪಟ್ಟು ಆಸ್ಪತ್ರೆಗೆ ದಾಖಲಾಗುವ ರೋಗಿಗಳ ವ್ಯವಸ್ಥಿತ ನಿಗಾದಲ್ಲಿ ಚಿಕಿತ್ಸೆ ನಡೆಯಬೇಕು. ಐಸಿಯುಗಳಲ್ಲಿರುವ ರೋಗಿಗಳ ಆರೋಗ್ಯ ಲಕ್ಷಣ, ಏರುಪೇರು ನಿಗಾಕ್ಕೆ ನಿರಂತರ ಪರಿಶೀಲನೆಗಾಗಿ ಶಿಶ್ರೋಶಕಿ ಒಬ್ಬರನ್ನು ನಿಯೋಜಿಸಬೇಕು. ಜಿಲ್ಲಾಸ್ಪತ್ರೆ ಶತ್ರಚಿಕಿತ್ಸಕರು ಸೂಕ್ತ ಗಮನ ನೀಡುವಂತೆ ಅವರು ಸೂಚನೆ ನೀಡಿದರು.
ಜಿಲ್ಲೆಯಲ್ಲಿ ಇಂತಹ ರೋಗಿಗಳ ಗಂಟಲುದ್ರವ ಮಾದರಿ ಸಂಗ್ರಹಣೆಗೆ ಲ್ಯಾಬ್ ಟೆಕ್ನಿಷಿಯನ್‍ಗಳನ್ನು ಮತ್ತು ನೋಡಲ್ ಅಧಿಕಾರಿಗಳನ್ನು ನೀಯೋಜಿಸಬೇಕು. ಇಂದಿನಿಂದ ಈ ವ್ಯವಸ್ಥೆ ಪರಿಣಾಮಕಾರಿಯಾಗಿ ಜಾರಿಯಾಗಬೇಕು. ಎಲ್ಲರು ಎಚ್ಚರಿಕೆಯಿಂದ ಕಾರ್ಯನಿರ್ವಹಿಸಬೇಕು. ಯಾವುದೇ ಲೋಪಕ್ಕೆ ಅವಕಾಶ ನೀಡಬಾರದು. ಐ.ಎಲ್.ಐ ಮತ್ತು ಸಾರಿ ಸಂಬಂಧಿತ ರೋಗಿಗಳ ತಕ್ಷಣ ಲಕ್ಷಣ ಗುರುತಿಸುವಿಕೆ, ಗಂಟಲು ದ್ರವ ಮಾದರಿ ಸಂಗ್ರಹಣೆ, ವೈದ್ಯಕೀಯ ಪರೀಕ್ಷೆ ನಂತರ ವೆಬ್‍ಸೈಟ್‍ನಲ್ಲಿ ನೋಂದಣಿಗೆ ಕ್ರಮಕೈಗೊಳ್ಳಬೇಕು. ಖಾಸಗಿ ವೈದ್ಯಾಧಿಕಾರಿಗಳು ಈ ನಿಟ್ಟಿನಲ್ಲಿ ಜವಾಬ್ದಾರಿಯಿಂದ ಕಾರ್ಯನಿರ್ವಹಿಸಬೇಕು ಎಂದು ಕಟ್ಟುನಿಟ್ಟಿನ ಕ್ರಮಕೈಗೊಳ್ಳುವಂತೆ ಅವರು ಸೂಚನೆ ನೀಡಿದರು.
ಜಿಲ್ಲೆಯಲ್ಲಿ ಐ.ಎಲ್.ಐ ಹಂತದಲ್ಲಿಯೇ ರೋಗಿಗಳಿಗೆ ಪರಿಣಾಮಕಾರಿಯಾದ ಚಿಕಿತ್ಸೆ ನೀಡಬೇಕು. ಇವರೊಂದಿಗೆ ಸಂಪರ್ಕ ಗುರುತಿಸುವ ಕಾರ್ಯ ಸಹ ಅಚ್ಚುಕಟ್ಟಾಗಿ ನಡೆಯಬೇಕು. ಅದರಂತೆ ಐ.ಎಲ್.ಐ ಮತ್ತು ಸಾರಿ ಪ್ರಕರಣಗಳಿಗೆ ಪ್ರಾಥಮಿಕ ಸಂಪರ್ಕಗಳ ಬಗ್ಗೆ ಮತ್ತು ಹೋಮ್‍ಕ್ವಾರಂಟೈನ್ ತೀವ್ರ ನಿಗಾ ಇಡುವ ಬಗ್ಗೆಯೂ ಅವರು ಸಂಬಂಧಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಿಲ್ಲಾ ಪಂಚಾಯತ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಶ್ರೀ ಗೋವಿಂದ ರೆಡ್ಡಿ ಅವರು ಮಾತನಾಡಿ ಈ ಕರ್ತವ್ಯಕ್ಕೆ ನೇಮಿಸಿರುವ ಎಲ್ಲ ನೋಡಲ್ ಅಧಿಕಾರಿಗಳು, ಲ್ಯಾಬ್ ಟೆಕ್ನಿಷಿಯನ್‍ಗಳು, ತಾಲೂಕಾವಾರು ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸಬೇಕು. ಐ.ಎಂ.ಎ ಮತ್ತು ಕಂಟೇನ್ಮೆಂಟ್ ವಲಯಗಳ ವೈದ್ಯರು ಕೂಡಾ ಯಾವುದೇ ರೀತಿಯ ನಿರ್ದಾಕ್ಷಣ್ಯ ಕ್ರಮಕ್ಕೆ ಅವಕಾಶ ನೀಡದೆ ರೋಗಿಗಳು ಬಂದ ತಕ್ಷಣ ಸಂಬಂಧಪಟ್ಟವರಿಗೆ ಮಾಹಿತಿ ನೀಡಿ ಗಂಟಲು ದ್ರವ ವೈದ್ಯಕೀಯ ಪರೀಕ್ಷೆಗೆ ನೆರವಾಗಬೇಕು. ನಂತರ ಪೋರ್ಟಲ್‍ನಲ್ಲಿ ನೋಂದಣಿಗೆ ಕ್ರಮಕೈಗೊಳ್ಳುವಂತೆ ಸೂಚನೆ ನೀಡಿದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಡಾ. ಔದ್ರಾಮ್, ಡಿ.ಎಚ್.ಓ ಡಾ. ಮಹೇಂದ್ರ ಕಾಪ್ಸೆ, ವಿಶ್ವ ಆರೋಗ್ಯ ಸಂಸ್ಥೆ ಪ್ರತಿನಿಧಿ ಡಾ.ಮುಕುಂದ ಗಲಗಲಿ, ಡಾ.ಎಂ.ಬಿ ಬಿರಾದಾರ, ಸಂಪತಕುಮಾರ ಗುಣಾರೆ, ಶರಣಪ್ಪಾ ಕಟ್ಟಿ, ಡಾ. ಕವಿತಾ ಹಾಗೂ ಇತರರು ಉಪಸ್ಥಿತರಿದ್ದರು.
ಜಿಲ್ಲೆಯಲ್ಲಿ ಇಂದು ಮತ್ತೆ ೩ ಕೋವಿಡ್-೧೯ ಪಾಸಿಟಿವ್ ದೃಢ ಸೋಂಕಿತರ ಸಂಖ್ಯೆ ೨೩೨ ಕ್ಕೆ ಏರಿಕೆ : ಇಬ್ಬರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ
ಈ ದಿವಸ ವಾರ್ತೆ
ವಿಜಯಪುರ : ಜಿಲ್ಲೆಯಲ್ಲಿ ಈವರೆಗೆ ಒಟ್ಟು ೨೩೨ ಕೋವಿಡ್-೧೯ ಪಾಸಿಟಿವ್ ಪ್ರಕರಣಗಳು ದೃಢಪಟ್ಟಿದ್ದು, ಜಿಲ್ಲಾಸ್ಪತ್ರೆಯಲ್ಲಿ ೬೨ ರೋಗಿಗಳು ಕೋವಿಡ್-೧೯ ಪಾಸಿಟಿವ್ ಸಕ್ರಿಯ ರೋಗಿಗಳಾಗಿದ್ದಾರೆ. ಇಂದು ಮತ್ತೆ ೩ ಕೋವಿಡ್-೧೯ ಪಾಸಿಟಿವ್ ಪ್ರಕರಣಗಳು ದೃಢಪಟ್ಟಿದೆ ಎಂದು ಜಿಲ್ಲಾಧಿಕಾರಿ ವೈ.ಎಸ್ ಪಾಟೀಲ ಅವರು ತಿಳಿಸಿದ್ದಾರೆ.
ಜಿಲ್ಲೆಯ ಸೋಂಕಿತರಲ್ಲಿ ರೋಗಿ ಸಂಖ್ಯೆ ೭೦೬೬ (೨೪ ವರ್ಷದ ಹೆಣ್ಣು) ರೋಗಿ ಸಂಖ್ಯೆ ೭೦೬೭ (೪೨ ವರ್ಷದ ಗಂಡು) ಇವರ ಸಂಪರ್ಕ ಪತ್ತೆ ಹಚ್ಚಲಾಗುತ್ತಿದೆ. ಹಾಗೂ ರೋಗಿ ಸಂಖ್ಯೆ ೭೦೬೮ (೮ ವರ್ಷದ ಹೆಣ್ಣು) ಇವರಿಗೆ ಐಎಲ್‌ಐ ಸಂಪರ್ಕದಿಂದ ಸೋಂಕು ತಗುಲಿರುವುದು ದೃಢಪಟ್ಟಿದೆ ಎಂದು ಅವರು ತಿಳಿಸಿದ್ದಾರೆ.
ಅದರಂತೆ ರೋಗಿ ಸಂಖ್ಯೆ ೫೯೭೪ (೫ ವರ್ಷದ ಹೆಣ್ಣು) ರೋಗಿ ಸಂಖ್ಯೆ ೫೯೭೫ (೩ ವರ್ಷದ ಹೆಣ್ಣು) ಸೋಂಕಿನಿಂದ ಗುಣಮುಖರಾಗಿ ಜಿಲ್ಲಾಸ್ಪತೆಯಿಂದ ಬಿಡುಗಡೆ ಆಗಿದ್ದಾರೆ.
ಜಿಲ್ಲೆಯಲ್ಲಿ ಈವರೆಗೆ ವಿದೇಶ ಸೇರಿದಂತೆ ಇತರ ಪ್ರದೇಶಗಳಿಂದ ೨೯೮೩೧ ಜನರು ಬಂದ ಬಗ್ಗೆ ವರದಿಯಾಗಿದ್ದು, ಇವರ ಮೇಲೆ ತೀವ್ರ ನಿಗಾ ಇಡಲಾಗಿದೆ. ಇಲ್ಲಿಯವರೆಗೆ ಒಟ್ಟು ೨೩೨ ಕೋವಿಡ್ -೧೯ ಪಾಸಿಟಿವ್ ಪ್ರಕರಣಗಳು ದೃಢಪಟ್ಟಿದ್ದಾರೆ. ೮೯೮೪ ಜನರು ೨೮ ದಿನಗಳ ಐಸೋಲೇಶನ್ ಅವಧಿ ಪೂರ್ಣಗೊಳಿಸಿದ್ದಾರೆ. ೨೦೬೭೭ ಜನರು (೧ ರಿಂದ ೨೮ ದಿನಗಳ) ರಿಪೋರ್ಟಿಂಗ್ ಅವಧಿಯಲ್ಲಿದ್ದು, ಈವರೆಗೆ ಒಟ್ಟು ೬ ಜನ ಕೋವಿಡ್-೧೯ ರೋಗಿಗಳು ಮೃತಪಟ್ಟಿದ್ದಾರೆ. ೧೬೪ ಜನರು ಕೋವಿಡ್-೧೯ ರೋಗದಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದು, ೬೨ ಜನರು ಆಸ್ಪತ್ರೆಯಲ್ಲಿರುವ ಕೋವಿಡ್-೧೯ ಸಕ್ರಿಯ ರೋಗಿಗಳಾಗಿದ್ದಾರೆ. ಈವರೆಗೆ ೨೬೯೩೦ ಜನರ ಗಂಟಲು ದ್ರವ ಮಾದರಿಯನ್ನು ಸಂಗ್ರಹಿಸಿದ್ದು, ೨೬೫೪೨ ಜನರ ನೆಗೆಟಿವ್ ವರದಿ ಬಂದಿದೆ. ಇನ್ನೂ ೧೫೬ ಜನರ ಗಂಟಲು ದ್ರವ ಮಾದರಿ ಪರೀಕ್ಷಾ ವರದಿ ಬರಬೇಕಾಗಿದೆ ಎಂದು ಅವರು ತಿಳಿಸಿದ್ದಾರೆ.
ವಿಜಯಪುರ : ಇನ್ನುಮುಂದೆ ಆಕಾಶವಾಣಿ ಬೆಂಗಳೂರು ಕೇಂದ್ರದ ಕಾರ್ಯಕ್ರಮ ಪ್ರಸಾರ
ಈ ದಿವಸ ವಾರ್ತೆ
ವಿಜಯಪುರ: ಆಕಾಶವಾಣಿ ವಿಜಯಪುರ ಕೇಂದ್ರದಿಂದ ಜೂ.16, 2020 ರಿಂದ ಇನ್ನುಮುಂದೆ ಬೆಳಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆ ವರೆಗೆ ಬೆಂಗಳೂರು ಕೇಂದ್ರದ ಮುಖ್ಯವಾಹಿನಿಯ ಕಾರ್ಯಕ್ರಮಗಳು ಪ್ರಸಾರವಾಗಲಿವೆ ಎಂದು ವಿಜಯಪುರ ಆಕಾಶವಾಣಿ ಕಾರ್ಯಾಲಯ ಮುಖ್ಯಸ್ಥ ಬಿ.ಡಿ. ಕಾಂಬಳೆ ಹೇಳಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿದ ಅವರು, ಪ್ರತಿದಿನ ಬೆಳಗ್ಗೆಯಿಂದ ಸಂಜೆ ವರೆಗೆ ಬೆಂಗಳೂರು ಕೇಂದ್ರದ ಮುಖ್ಯವಾಹಿನಿಯ ಕಾರ್ಯಕ್ರಮಗಳು ಪ್ರಸಾರವಾಗಲಿದ್ದು, ಬೆಂಗಳೂರು ಕೇಂದ್ರದ ಕಾರ್ಯಕ್ರಮಗಳು ಲಭ್ಯವಿಲ್ಲದಿದ್ದಾಗ ವಿವಿಧ ಭಾರತೀ ಮುಂಬೈ ಕಾರ್ಯಕ್ರಮಗಳು ಪ್ರಸಾರವಾಗಲಿವೆ ಎಂದು ಅವರು ತಿಳಿಸಿದ್ದಾರೆ.
Subscribe to:
Posts (Atom)



