Wednesday, September 23, 2026
Sunday, September 20, 2026
ದಿ.೨೩ ರಂದು ಝೂಲೂಸ್ ಏ. ಗೌಸಿಯಾ ಎಂಬ ಬೃಹತ್ ಶಾಂತಿಯಾತ್ರೆ : ಧರ್ಮಗುರು ಮೌಲಾನಾ ನೌಷಾದ್ ಆಲಂ
ವಿಜಯಪುರ : ವಿಜಯಪುರದ ಭಾವೈಕ್ಯತೆಯ ಪ್ರತೀಕವಾಗಿರುವ ಹಜರತ್ ಅರ್ಕಾಟ್ ದರ್ಗಾದ ಉರುಸು ಶ್ರದ್ಧಾ ಭಕ್ತಿಯಿಂದ ಜರುಗಲಿದ್ದು, ಇದರಂಗವಾಗಿ ದಿ.೨೩ ರಂದು ಝೂಲೂಸ್ ಏ. ಗೌಸಿಯಾ ಎಂಬ ಬೃಹತ್ ಶಾಂತಿಯಾತ್ರೆ ನಡೆಯಲಿದೆ ಎಂದು ಧರ್ಮಗುರು ಮೌಲಾನಾ ನೌಷಾದ್ ಆಲಂ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈಗಾಗಲೇ ಉರುಸು ಅಂಗವಾಗಿ ಅನೇಕ ಸಿದ್ದತೆಗಳನ್ನು ಭರದಿಂದ ಕೈಗೊಳ್ಳಲಾಗುತ್ತಿದೆ, ಮಾನವೀಯತೆ, ಶಾಂತಿ, ಸಹೋದರತೆ ತತ್ವ ಸಾರಿದ ಅರ್ಕಾಟ್ ದರ್ಗಾದ ಹಜರತ್ ಸೈಯ್ಯದ್ ನಾ ಅಬ್ದುಲ್ ಷಾ ಖಾದ್ರಿ ಅವರ ಉರುಸಿನಲ್ಲಿ ಹಿಂದೂ ಮುಸ್ಲಿಂ ಬಾಂಧವರು ಸಾವಿರಾರು ಸಂಖ್ಯೆಯಲ್ಲಿ ಭೇಟಿ ನೀಡುತ್ತಾರೆ. ಹಸಿದವರಿಗೆ ಅನ್ನ, ಆರೋಗ್ಯ ಸಮಸ್ಯೆ ಎದುರಿಸುವವರಿಗೆ ಪಾರಂಪರಿಕ ಆಯುರ್ವೇದ ಔಷಧಿ ದೊರಕುವ ಮೂಲಕ ದವಾ ಹಾಗೂ ದುವಾ ಎರಡು ಇಲ್ಲಿ ಲಭ್ಯ ಎಂದರು.
ಉರುಸು ಅಂಗವಾಗಿ ಶಾಂತಿ ಯಾತ್ರೆ ದಿ.೨೩ ರಂದು ನಡೆಯಲಿದ್ದು, ದರ್ಗಾದ ಪ್ರಸ್ತುತ ಸಜ್ಜಾದೆ ನಷೀನ್ ಹಜರತ್ ಇಕ್ಬಾಲ್ ಪೀರಾ ಹುಸೈನಿ ಹಾಗೂ ಅವರ ಪುತ್ರ ಡಾ.ಸೈಯ್ಯದ್ ತಕೀ ಪೀರಾ ಹುಸೈನಿ ನೇತೃತ್ವದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಲಿವೆ.
ದಿ.೨೩ ರಂದು ಭವ್ಯ ಯಾತ್ರೆ ಸೊಲ್ಲಾಪೂರ ನಾಕಾದಿಂದ ಆರಂಭಗೊಳ್ಳಲಿದೆ, ಸಾವಿರಾರು ಭಕ್ತರ ಸಮ್ಮುಖದಲ್ಲಿ ಈ ಯಾತ್ರೆ ಶಹಾಪೂರ ದರ್ವಾಜಾ, ಸರಾಫ್ ಬಜಾರ್, ಗಾಂಧಿವೃತ್ತ, ಅತಾವುಲ್ಲಾ ಸರ್ಕಲ್, ಬಡಿಕಮಾನ್, ಜಾಮೀಯಾ ಮಸೀದಿ ಸೇರಿದಂತೆ ವಿವಿಧ ಪ್ರಮುಖ ಮಾರ್ಗಗಳಲ್ಲಿ ಸಂಚರಿಸಿ ದರ್ಗಾ ತಲುಪಲಿದೆ ಎಂದರು.
ಶಾAತಿಯಾತ್ರೆಗೂ ಮುನ್ನಾ ದಿನ ದಿ.೨೨ ರಂದು ವಿಚಾರ ಸಂಕಿರಣ ನಡೆಯಲಿದ್ದು, ದಿ.೨೩ ರಂದು ಪವಿತ್ರ ಸಂದಲ್ ಕಾರ್ಯಕ್ರಮಗಳು ದರ್ಗಾದ ಆವರಣದಲ್ಲಿ ನಡೆಯಲಿದೆ. ನಂತರ ಮುಷಾಯಿರಾ ಕಾರ್ಯಕ್ರಮಗಳು ಜರುಗಲಿವೆ ಎಂದು ವಿವರಿಸಿದರು. ಉರುಸು ಅಂಗವಾಗಿ ನೆರೆಯ ಮಹಾರಾಷ್ಟç, ಗುಜರಾತ್, ತಮಿಳುನಾಡು, ಕೇರಳ, ಗುಜರಾತ್, ಆಂದ್ರ ಪ್ರದೇಶ ಮೊದಲಾದ ಭಾಗಗಳಿಂದ ಸಾವಿರಾರು ಜನರು ಭಾಗವಹಿಸಲಿದ್ದಾರೆ.
ಪ್ರಮುಖರಾದ ಡಾ.ಎಂ.ಎಸ್. ಮುಜಾವರ, ಇರಾಪ ಸುನ್ನೆವಾಲೆ, ಮಹೇಪೊಜ ಅಲಿ ಬಾಗವಾನ, ಮೌಲಾನಾ ಹುಸೇನ ರಜ್ವಿ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.
ರಾಜ್ಯಾದ್ಯಂತ ಆಸಕ್ತರಿಗೆ ವಿಶೇಷ ಸೂಚನೆ :
ಸುದ್ದಿ ಹಾಗೂ ಜಾಹೀರಾತುಗಳನ್ನು ಪ್ರಕಟಿಸಲು ಇಂದೇ ಸಂಪರ್ಕಿಸಿರಿ.ಸಂಪಾದಕರು ಈ ದಿವಸ ಕನ್ನಡ ದಿನ ಪತ್ರಿಕೆ ವ್ಯಾಟ್ಸಪ್ ಸಂಖ್ಯೆ : 7204279187 / 9900378892 ತಾವು ಟೈಪಿಸಿ eedivasa@gmail.com ಈ ಮೇಲ್ ಗೂ ಮೇಲ್ ಸೆಂಡ್ ಮಾಡಿದರೆ ಪ್ರಕಟಿಸಲಾಗುವುದು.
Saturday, September 19, 2026
ಸರಕಾರಿ ವೈದ್ಯಕೀಯ ಮಹಾವಿದ್ಯಾಲಯ ಕಾಲೇಜು ಪ್ರಾರಂಭ ಕೆಲಸ ಕಾರ್ಯಗಳು ಭರದಿಂದ ಸಾಗಿವೆ : ಡಾ ಜಾನಕಿ ತೊರವಿ
ವಿಜಯಪುರ : ನಗರದ ಸರಕಾರಿ ಆಸ್ಪತ್ರೆಯಲ್ಲಿ ಇಂದು ಸರಕಾರಿ ವೈದ್ಯಕೀಯ ಮಹಾವಿದ್ಯಾಲಯದ ಆಡಳಿತ ಅಧಿಕಾರಿಗಳಾದ ಡಾ ಜಾನಕಿ ತೊರವಿ ಅವರನ್ನು ಭೇಟಿಯಾಗಿ ವೈದ್ಯಕೀಯ ಮಹಾವಿದ್ಯಾಲಯ ಸ್ಥಾಪನೆ ಕುರಿತು ಸರಕಾರ ಮಟ್ಟದಲ್ಲಿ ನಡೆಯುತ್ತಿರುವ ಬೆಳವಣಿಗೆಗಳ ಕುರಿತು ಚರ್ಚಿಸಲಾಯಿತು.
ಆಡಳಿತಾಧಿಕಾರಿಗಳಿಗೆ ಆದಷ್ಟು ಬೇಗನೆ ವೈದ್ಯಕೀಯ ಕಾಲೇಜು ಪ್ರಾರಂಭ ಮಾಡಬೇಕು ಜೊತೆಗೆ ಎಲ್ಲ ಸಿಬ್ಬಂದಿಗಳನ್ನು ಸರಕಾರದಿಂದಲೇ ನೇಮಕಾತಿ ಮಾಡಿಕೊಳ್ಳಬೇಕು ಎಂದು ಮನವಿ ಮಾಡಿಕೊಳ್ಳಲಾಯಿತು.
ಸರಕಾರದ ಹಂತದಲ್ಲಿ ಕಾಲೇಜು ಸ್ಥಾಪನೆಗೆ ಸಂಬಂಧಪಟ್ಟ ಕೆಲಸ ಕಾರ್ಯಗಳು ಭರದಿಂದ ಸಾಗಿವೆ. ಆದಷ್ಟು ಬೇಗನೆ ಕಾಲೇಜು ಪ್ರಾರಂಭ ಮಾಡಲು ಬೇಕಾದ ಅಗತ್ಯ ಕ್ರಮಕೈಗೊಳ್ಳಲಾಗುತ್ತದೆ ಡಾ ಜಾನಕಿ ತೊರವಿ ಅವರು ಇದೇ ಸಂದರ್ಭದಲ್ಲಿ ತಿಳಿಸಿದರು.
ಈ ಸಂದರ್ಭದಲ್ಲಿ ಹೋರಾಟಗಾರರಾದ ಮಲ್ಲಿಕಾರ್ಜುನ ಬಟಗಿ, ವಿನೋದ ಖೇಡ, ಲಾಯಪ್ಪ ಇಂಗಳೆ ಉಪಸ್ಥಿತರಿದ್ದರು.
ರಾಜ್ಯಾದ್ಯಂತ ಆಸಕ್ತರಿಗೆ ವಿಶೇಷ ಸೂಚನೆ :
ಸುದ್ದಿ ಹಾಗೂ ಜಾಹೀರಾತುಗಳನ್ನು ಪ್ರಕಟಿಸಲು ಇಂದೇ ಸಂಪರ್ಕಿಸಿರಿ.ಸಂಪಾದಕರು ಈ ದಿವಸ ಕನ್ನಡ ದಿನ ಪತ್ರಿಕೆ ವ್ಯಾಟ್ಸಪ್ ಸಂಖ್ಯೆ : 7204279187 / 9900378892 ತಾವು ಟೈಪಿಸಿ eedivasa@gmail.com ಈ ಮೇಲ್ ಗೂ ಮೇಲ್ ಸೆಂಡ್ ಮಾಡಿದರೆ ಪ್ರಕಟಿಸಲಾಗುವುದು.
Thursday, September 17, 2026
ಸಿಂದಗಿಯಲ್ಲಿ ಹೈದ್ರಾಬಾದ್ ವಿಮೋಚನಾ ದಿನಾಚರಣೆ ಅಕ್ಟೋಬರ್ 3 ರಂದು ಸ್ವಾಮಿ ರಾಮಾನಂದ ತೀರ್ಥರ ಜಯಂತಿ ಸರಕಾರ ಆಚರಿಸಲಿ -ಅಶೋಕ ಅಲ್ಲಾಪುರ
ಸಿಂದಗಿ : ಹೈದ್ರಾಬಾದ್ ಪ್ರಾಂತ ವಿಮೋಚನೆ ಆಗಲು ಮುಖ್ಯ ಕಾರಣಿಕರ್ತರು ಸ್ವಾಮಿ ರಾಮಾನಂದ ತೀರ್ಥರು ವಿಮೋಚನಾ ದಿನದಂದು ಅವರ ಸ್ಮರಣೆ ಮಾಡುವುದು ದೇಶದ ಪ್ರತಿಯೊಬ್ಬರ ಕರ್ತವ್ಯವಾಗಿದೆ. ಎಂದು ರಾಷ್ಟ್ರ ವೀರ ಸ್ವಾಮಿ ರಾಮಾನಂದ ತೀರ್ಥ ಸೇವಾ ಸಮಿತಿ ಅಧ್ಯಕ್ಷ ಅಶೋಕ ಅಲ್ಲಾಪುರ ಹೇಳಿದರು.
ಅವರು ಸಿಂದಗಿಯ ಸ್ವಾಮಿ ರಾಮಾನಂದ ತೀರ್ಥರ ಸ್ಮಾರಕದಲ್ಲಿ ರಾಷ್ಟ್ರ ವೀರ ಸ್ವಾಮಿ ರಾಮಾಂನಂದ ತೀರ್ಥ ಸೇವಾ ಸಮಿತಿಯಿಂದ ಹಮ್ಮಿಕೊಂಡಿದ್ದ ಹೈದ್ರಾಬಾದ್ ವಿಮೋಚನಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ದೇಶದ ಸ್ವಾತಂತ್ರ್ಯ ಚಳುವಳಿಗೆ ದೊಡ್ಡ ಕೊಡುಗೆ ನೀಡಿದವರ ಸಾಲಿನಲ್ಲಿ ನಿಲ್ಲುವ ಪ್ರಮುಖ ನಾಯಕರೆಂದರೆ ಸ್ವಾಮಿ ರಾಮಾನಂದ ತೀರ್ಥರಾಗಿದ್ದಾರೆ. ಸರಕಾರ ಅವರ ಜನ್ಮ ದಿನವಾದ ಅಕ್ಟೋಬರ್ 3ರಂದು ಸರ್ಕಾರಿ ಜಯಂತಿಯಾಗಿ ಘೋಷಣೆ ಮಾಡಿ ಆಚರಿಸಿ ಸ್ವಾಮಿ ರಾಮಾನಂದ ತೀರ್ಥರಿಗೆ ಗೌರವಿಸಲ್ಲಿಸಬೇಕು, ಹಾಗೂ ಸಿಂದಗಿ ಯಲ್ಲಿರುವ ಅವರ ಸ್ಮಾರಕವನ್ನು ಅಭಿವೃದ್ಧಿಪಡಿಸಬೇಕೆಂದರು.
ರೈತ ಸಂಘದ ಜಿಲ್ಲಾಧ್ಯಕ್ಷ ಸಿದ್ದನಗೌಡ ಪಾಟೀಲ ಹಾಗೂ ಎನ್ ಸುರೇಶಕುಮಾರ ಅವರು ಮಾತನಾಡಿ ಸಿಂದಗಿಯು ಹೈದ್ರಾಬಾದ್ ಪ್ರಾಂತ ವಿಮೋಚನಾ ಚಳುವಳಿಯ ಕೇಂದ್ರ ಸ್ಥಾನವಾಗಿದೆ. ಸಿಂದಗಿಯಲ್ಲಿ ಜನಸಿದ ಸ್ವಾಮಿ ರಾಮಾನಂದ ತೀರ್ಥರು ಚಳುವಳಿಯ ನೇತೃತ್ವ ವಹಿಸದೆ ಹೋದಲ್ಲಿ ಹೈದ್ರಾಬಾದ್ ಪ್ರಾಂತ ವಿಮೋಚನೆ ಆಗುತ್ತಿರಲಿಲ್ಲ ಅಂತಹ ಮಹಾತ್ಮರಿಗೆ ಗೌರವಿಸುವ ಕೆಲಸ ವಿಜಯಪುರ ಜಿಲ್ಲಾಡಳಿತ ಹಾಗೂ ರಾಜ್ಯ ಸರಕಾರ ಮಾಡಬೇಕು ಎಂದರು.
ವಿಜಯಪುರ ಜಿಲ್ಲಾ 371 ಜೆ ಹೋರಾಟಗಾರ ಲಾಯಪ್ಪ ಇಂಗಳೆ ಅವರು ಮಾತನಾಡಿ ವಿಜಯಪುರ ಜಿಲ್ಲಾಡಳಿತ ಸಿಂದಗಿ ತಾಲೂಕು ಆಡಳಿತ ಮತ್ತು ರಾಜ್ಯ ಸರಕಾರ ವಿಮೋಚನಾ ದಿನದಂದು ಗೌರವ ಸಲ್ಲಿಸಬೇಕು ಎಂದು ಮನವಿ ಮಾಡಿಕೊಳ್ಳಲಾಗಿತ್ತು ಸರಕಾರ ಜಿಲ್ಲಾಡಳಿತ ಮತ್ತು ತಾಲೂಕು ಆಡಳಿತ ಅವರಿಗೆ ಗೌರವ ಸಲ್ಲಿಸದೆ ಅಗೌರವ ತೋರಿಸುವ ಕೆಲಸ ಮಾಡಿದೆ. ಕೂಡಲೇ ಸರಕಾರ ಸ್ವಾಮಿ ರಾಮಾನಂದ ತೀರ್ಥರ ಸಿಂದಗಿಯ ಸ್ಮಾರಕವನ್ನು ರಾಷ್ಟ್ರೀಯ ಸ್ಮಾರಕ ಎಂದು ಘೋಷಣೆ ಮಾಡಬೇಕು ಜೊತೆಗೆ ಅಕ್ಟೋಬರ್ 3 ರ ಅವರ ಜನ್ಮ ದಿನವನ್ನು ರಾಷ್ಟ್ರೀಯ ದಿನಾಚರಣೆಯಾಗಿ ಕೇಂದ್ರ ಸರಕಾರ ಮತ್ತು ರಾಜ್ಯ ಸರಕಾರ ಘೋಷಣೆ ಮಾಡಿ ಆಚರಣೆ ಮಾಡಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಹೈದ್ರಾಬಾದ್ ವಿಮೋಚನಾ ಚಳುವಳಿ ಪಿತಾಮಹ ಸ್ವಾಮಿ ಶ್ರೀ ರಾಮಾಂನಂದ ತೀರ್ಥರ ಪ್ರತಿಮೆಗೆ ಗೌರವ ಸಲ್ಲಿಸಲಾಯಿತು.
ಕಾರ್ಯಕ್ರಮದಲ್ಲಿ ಸ್ವಾಮಿ ರಾಮಾನಂದ ತೀರ್ಥರ ವಂಶಸ್ಥರಾದ ರಂಗರಾವ ಖೇಡಗಿ, ಸಮಿತಿಯ ಕಾರ್ಯದರ್ಶಿ ಪ್ರದೀಪ ದೇಶಪಾಂಡೆ, 371 ಜೆ ಹೋರಾಟಗಾರರಾದ ವಿನೋದ ಖೇಡ ಕಲ್ಲಪ್ಪ ಶಿವಶರಣ, ಚಂದ್ರಶೇಖರ ಹೊಸಮನಿ,ಬಸವರಾಜ ಕುಂಬಾರ, ಧರ್ಮಣ್ಣ ಗಬಸಾವಳಗಿ, ಬಸನಗೌಡ ಧರ್ಮಗೊಂಡ, ಶಿವಪ್ಪ ಸುಲ್ಪಿ, ಎಮ್ ಎಚ್ ಪಟೇಲ, ರಮೇಶ ದೊಡಮನಿ, ಶಬ್ಬೀರ ಪಟೇಲ ಬಿರಾದಾರ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ರಾಜ್ಯಾದ್ಯಂತ ಆಸಕ್ತರಿಗೆ ವಿಶೇಷ ಸೂಚನೆ :
ಸುದ್ದಿ ಹಾಗೂ ಜಾಹೀರಾತುಗಳನ್ನು ಪ್ರಕಟಿಸಲು ಇಂದೇ ಸಂಪರ್ಕಿಸಿರಿ.ಸಂಪಾದಕರು ಈ ದಿವಸ ಕನ್ನಡ ದಿನ ಪತ್ರಿಕೆ ವ್ಯಾಟ್ಸಪ್ ಸಂಖ್ಯೆ : 7204279187 / 9900378892 ತಾವು ಟೈಪಿಸಿ eedivasa@gmail.com ಈ ಮೇಲ್ ಗೂ ಮೇಲ್ ಸೆಂಡ್ ಮಾಡಿದರೆ ಪ್ರಕಟಿಸಲಾಗುವುದು.


