Tuesday, July 22, 2025

ಗಣೇಶ ಹಬ್ಬ : ಪರಿಸರ ಸ್ನೇಹಿ ಗಣಪತಿ ವಿಗ್ರಹಗಳ ಪ್ರತಿಷ್ಠಾಪನೆ ಕುರಿತು ಜುಲೈ 25ರಂದು ಮಹಾನಗರ ಪಾಲಿಕೆ ಸಭಾಂಗಣದಲ್ಲಿ ಸಭೆ

 ವಿಜಯಪುರ  : ಜಿಲ್ಲೆಯಲ್ಲಿ ಆಗಸ್ಟ್ ಮಾಹೆಯಲ್ಲಿ ಆಚರಿಸಲಾಗುವ ಗೌರಿ ಗಣೇಶ ಚತುರ್ಥಿ ಉತ್ಸವದಲ್ಲಿ ಸಾರ್ವಜನಿಕರು ತಮ್ಮ ಮನೆಗಳಲ್ಲಿ ಹಾಗೂ ಬಡಾವಣೆಗಳಲ್ಲಿ ಜೇಡಿ-ಇತರೆ ಮಣ್ಣಿನಿಂದ ತಯಾರಿಸಲಾದ ಪರಿಸರ ಸ್ನೇಹಿ ಗಣಪತಿ ವಿಗ್ರಹಗಳನ್ನು ಪ್ರತಿಷ್ಠಾಪಿಸುವುದು ಹಾಗೂ ವಿಗ್ರಹಗಳನ್ನು ಪಾಲಿಕೆಯಿಂದ ನಿರ್ಮಿಸಲಾದ ಕೃತಕ ಹೊಂಡಗಳು, ಸಂಚಾರಿ ಗಣೇಶ ವಿಸರ್ಜನಾ ವಾಹನಗಳಲ್ಲಿ ವಿಸರ್ಜಿಸುವ ಕುರಿತು ದಿನಾಂಕ : 25-07-2025 ರಂದು ಬೆಳಿಗ್ಗೆ 11 ಗಂಟೆಗೆ ಮಹಾನಗರ ಪಾಲಿಕೆ ಕೇಂದ್ರ ಕಚೇರಿ ಸಭಾಭವನದಲ್ಲಿ ಮಹಾನಗರ ಪಾಲಿಕೆ ಆಯುಕ್ತರ ಅಧ್ಯಕ್ಷತೆಯಲ್ಲಿ ಸಭೆ ಆಯೋಜಿಸಲಾಗಿದೆ. 

 ಈ ಸಭೆಗೆ ಸಾರ್ವಜನಿಕರು, ಪ್ರತಿನಿಧಿಗಳು, ಗಣೇಶ ಮಹಾಮಂಡಳಿ ಮತ್ತು ಮಂಡಳಗಳ ಅಧ್ಯಕ್ಷರು, ಪದಾಧಿಕಾರಿಗಳು, ಗಣೇಶ ವಿಗ್ರಹ ಮಾರಾಟಗಾರರು ಹಾಗೂ ಸಂಘ-ಸAಸ್ಥೆಗಳು ಭಾಗವಹಿಸುವಂತೆ ಮಹಾನಗರ ಪಾಲಿಕೆ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Monday, July 21, 2025

ಮೃತ ಗದಿಗೆಪ್ಪ ಕುಟುಂಬಕ್ಕೆ ಸಚಿವ ಪಾಟೀಲ ಲಕ್ಷ ರೂ. ವಯಕ್ತಿಕ ನೆರವು

 


ಈ ದಿವಸ ಕನ್ನಡ ದಿನ ಪತ್ರಿಕೆ ವಾರ್ತೆ

ಹಾವೇರಿ : ಜಿಲ್ಲೆಯ ಬ್ಯಾಡಗಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಗುಡ್ಡದಮಲ್ಲಾಪುರ ಗ್ರಾಮದಲ್ಲಿ ಗೋಡೆ ಕುಸಿದು ಮೃತಪಟ್ಟಿದ್ದ ರೈತ ಗದಿಗೆಪ್ಪ ಕೊಪ್ಪದ ಕುಟುಂಬಕ್ಕೆ ಹಾವೇರಿ ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ ವೈಯಕ್ತಿಕವಾಗಿ 1 ಲಕ್ಷ ರೂ. ಆರ್ಥಿಕ ನೆರವು ವಿತರಿಸಿದರು.

ಸೋಮವಾರ ಹಾವೇರಿ ನಗರದಲ್ಲಿ ಜರುಗಿದ ಕಾರ್ಯನಿರತ ಪತ್ರಕರ್ತರ ಸಂಘದ ಪತ್ರಿಕಾ ದಿನಾಚರಣೆ ಸಮಾರಂಭದಲ್ಲಿ ಮೃತ ಗದಿಗೆಪ್ಪ ಅವರ ಪುತ್ರ ಮೂಕೇಶ ಕೊಪ್ಪದ ಅವರನ್ನು ಕರೆಸಿ 1 ಲಕ್ಷ ರೂ. ನಗದು ಪರಿಹಾರವನ್ನು ಹಸ್ತಾಂತರಿಸಿದರು.

ಇದೇ ವೇಳೆ ಶಾಸಕರಾದ ಬಸವರಾಜ ಶಿವಣ್ಣವರ, ಪ್ರಕಾಶ ಕೋಳಿವಾಡ, ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರ, ಜಿ.ಪಂ. ಸಿಇಒ  ರುಚಿರಾ ಬಿಂದು, ಎಸ್ಪಿ ಯಶೋಧಾ ವಂಟಗೋಡಿ, ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ.ವಿ.ಪ್ರಭಾಕರ, ಹಾವೇರಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಸಂಜೀವ ನೀರಲಗಿ ಸೇರಿದಂತೆ ಇತರರು ಉಪಸ್ಥಿತರಿದ್ದರು.

ರಾಜ್ಯಾದ್ಯಂತ ಆಸಕ್ತರಿಗೆ ವಿಶೇಷ ಸೂಚನೆ:

ಯುವ ಪ್ರತಿಭೆಗಳು, ಹಿರಿ-ಕಿರಿ ಆಸಕ್ತ ಸಾಹಿತಿ, ಕವಿ, ಲೇಖಕರಿಗೆ ಈ ದಿವಸ ವೇದಿಕೆ ಕಲ್ಪಿಸುತ್ತಿದೆ. ಆಸಕ್ತರು ತಮ್ಮ ಸ್ವ ರಚಿತ ಲೇಖನ, ಕಥೆ, ಕವನ , ಶಾಲಾ ಕಾಲೇಜಿನ, ವಿಶ್ವವಿದ್ಯಾಲಯ ವರದಿ, ಹೋರಾಟಗಾರರ ಮನವಿ, ತಮ್ಮ  ಜಿಲ್ಲೆ, ಪಟ್ಟಣ, ತಾಲೂಕು, ಗ್ರಾಮಗಳಲ್ಲಿನ  ಸಮಸ್ಯೆಗಳು ಸೇರಿದಂತೆ ಇತರೆ ಸುದ್ದಿ ಹಾಗೂ ಜಾಹೀರಾತುಗಳನ್ನು ಪ್ರಕಟಿಸಲು ಇಂದೇ ಸಂಪರ್ಕಿಸಿರಿ.

ಸಂಪಾದಕರು ಈ ದಿವಸ ಕನ್ನಡ ದಿನ ಪತ್ರಿಕೆ ವ್ಯಾಟ್ಸಪ್ ಸಂಖ್ಯೆ : 7204279187 / 9900378892 ತಾವು ಟೈಪಿಸಿ eedivasa@gmail.com ಈ ಮೇಲ್ ಗೂ ಮೇಲ್ ಸೆಂಡ್ ಮಾಡಿದರೆ ಪ್ರಕಟಿಸಲಾಗುವುದು.


ನಿರುದ್ಯೋಗ ನಿವಾರಿಸುವಲ್ಲಿ ಪೆಂಡಾಲ ಮಾಲೀಕರ ಪಾತ್ರ ದೊಡ್ಡದು ; ಸಚಿವ ಶಿವಾನಂದ

 ಈ ದಿವಸ ಕನ್ನಡ ದಿನ ಪತ್ರಿಕೆ ವಾರ್ತೆ

ವಿಜಯಪುರ : ಶಾಮೀಯಾನಾ, ಪೆಂಡಾಲ್, ಲೈಟಿಂಗ್, ಡೆಕೋರೇಶನ್ ಮಾಲೀಕರು ಸಮಾಜದಲ್ಲಿ ನಿರುದ್ಯೋಗ ನಿವಾರಣೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದು, ಸರ್ಕಾರದ ಮೇಲೆ ಭಾರ ಕಡಿಮೆ ಆಗಿದೆ ಎಂದು ಜವಳಿ, ಕೃಷಿ ಮಾರುಕಟ್ಟೆ, ಸಕ್ಕರೆ ಹಾಗೂ ಕಬ್ಬು ಅಭಿವೃದ್ಧಿ ಸಚಿವ ಶಿವಾನಂದ ಪಾಟೀಲ ಹೇಳಿದರು.

ನಗರದ ವಿಜಯಪುರ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಹಿಂಭಾಗದ ಆಲಕುಂಟೆ ಪ್ರದೇಶದಲ್ಲಿ ಹಮ್ಮಿಕೊಂಡಿರುವ ಉತ್ತರ ಕರ್ನಾಟಕ ಶಾಮಿಯಾನಾ ಸಪ್ಲಾಯರ್, ಲೈಟಿಂಗ್, ಧ್ವನಿವರ್ಧಕ ಹಾಗೂ ಡೆಕೋರೇಶನ್ ಮಾಲೀಕರ ಸಂಘ ಹಮ್ಮಿಕೊಂಡಿದ್ದ ವಿಜಯಪುರ ಉತ್ಸವದ ವಸ್ತು ಪ್ರದರ್ಶನದಲ್ಲಿ ಅದೃಷ್ಟದ ಬಹುಮಾನ ವಿತರಿಸಿ ಮಾತನಾಡಿದರು.

ದೇಶದಲ್ಲಿರು ಜನಸಂಖ್ಯೆಯಲ್ಲಿ ಸರ್ಕಾರವೇ ಎಲ್ಲರಿಗೂ ಉದ್ಯೋಗ ನೀಡಲು ಸಾಧ್ಯವಿಲ್ಲ. ದೇಶದಲ್ಲಿ ಶೇ.93 ಕ್ಕಿಂತ ಅಧಿಕ ಜನರಿಗೆ  ಉದ್ಯೋಗವಿಲ್ಲ. ಆದರೆ  ಭಾರತೀಯ ಕೃಷಿರಂಗ ಶೇ.70 ರಷ್ಟು ಜನರಿಗೆ ಉದ್ಯೋಗ ಕಲ್ಪಿಸಿದೆ. ಉದ್ಯೋಗ ನೀಡಿ ನಿರುದ್ಯೋಗ ಸಮಸ್ಯೆ ನೀಗಿರುವ ರೈತ, ದೇಶದ 140 ಕೋಟಿ ಜನತ ಹಸಿವನ್ನೂ ನೀಗಿದ್ದು, ಭಾರತ ಆಹಾರ ಸ್ವಾವಲಂಬನೆ ಪಡೆಯುವಲ್ಲಿ ಸಹಕಾರಿ ಆಗಿದೆ ಎಂದು ವಿಶ್ಲೇಷಿಸಿದರು.

ಅದೇರೀತಿ ಪೆಂಡಾಲ್, ಶಾಮೀಯಾನಾ ಮಾಲೀಕರು ವಿಶೇಷವಾಗಿ ಕರ್ನಾಟಕ ರಾಜ್ಯದಲ್ಲಿ 2 ಲಕ್ಷ ಜನರಿಗೆ ಉದ್ಯೋಗ ನೀಡಿದ್ದಾರೆ. ಇದು ಸರ್ಕಾರದ ಮೇಲೆ ಉದ್ಯೋಗ ನೀಡುವ ಒತ್ತಡ ಕಡಿಮೆ ಮಾಡಿದೆ ಎಂದರು.

ಪೆಂಡಾಲ್ ವ್ಯವಸ್ಥೆಯಿಂದ ಮಳೆ, ಛಳಿ, ಬಿಸಿಲು ಏನೆ ವೈಪರೀತ್ಯಗಳಿದ್ದರೂ ಎಂಥದ್ದೇ ಬೃಹತ್ ಕಾರ್ಡ್ ಇದ್ದರೂ ನಿರಾಳವಾಗಿ ಮಾಡಲು ಸಾಧ್ಯವಾಗಿದೆ. ಈಚೆಗೆ ಹೊಸಪೇಟೆಯಲ್ಲಿ ಜರುಗಿದ ಸರ್ಕಾರದ ಬೃಹತ್ ಕಾರ್ಯಕ್ರಮ ವಿಪರೀತ ಮಳೆಯ ಮಧ್ಯೆಯೂ 6-7 ಲಕ್ಷ ಜನರು ನಿರಾಳವಾಗಿ ಕಾರ್ಯಕ್ರಮ ವೀಕ್ಷಿಸಲು ಸಾಧ್ಯವಾಗಿದ್ದೇ ನಿಮ್ಮ ಪರಿಶ್ರಮದಿಂದ ಎಂದರು.

ಯಾವುದೇ ಕಾರ್ಯಕ್ರಮದಲ್ಲಿ ಧ್ವನಿವರ್ಧಕ ಬಳಸಿ ಮಾತನಾಡಿದರೆ ಲಕ್ಷ, ಕೋಟಿ ಜನರಿಗೆ ನಮ್ಮ ಮಾತು ಕೇಳುವಂತೆ ಸಾಧ್ವವಾಗಿಸಿದೆ. ಜಗಮಗಿಸುವ ಬೆಳಕು ನೀಡಿ, ಕಾರ್ಯಕ್ರಮದ ವೇದಿಕೆಯನ್ನು ಜನಾಕರ್ಷಣೆ ಮಾಡುವಲ್ಲಿ ನಿಮ್ಮ ಪಾತ್ರ ದೊಡ್ಡದಿದೆ ಎಂದು ಶ್ಲಾಘಿಸಿದರು.

ಆಧುನಿಕತೆಗೆ ತಕ್ಕಂತೆ ಪೆಂಡಾಲ್, ಶಾಮೀಯಾನಾ, ಲೈಟಿಂಗ್, ಮೈಕ್ ಮಾಲೀಕರು ಕೂಡ ತಾಂತ್ರಿಕವಾಗಿ ಬದಲಾವಣೆಗಳನ್ನು ಅಳವಡಿಸಿಕೊಳ್ಳುತ್ತಾ ಬರುತ್ತಿದ್ದೀರಿ. ಇದರಿಂದಾಗಿ ಭವಿಷ್ಯದಲ್ಲಿ ನಿಮ್ಮ ಮೇಲೆ ಇನ್ನೂ ಹೆಚ್ಚಿನ ನಿರೀಕ್ಷೆ ಇದೆ ಎಂದರು.

ಪೆಂಡಾಲ್ ಮಾಲೀಕರು ಸಂಘಟನೆಗಳು ಒಗ್ಗೂಡಿ ಕೆಲಸ ಮಾಡಬೇಕು. ಡಾ.ಅಂಬೇಡ್ಕರ್ ಅವರು ಹೇಳಿದ ಶಿಕ್ಷಣ, ಸಂಘಟನೆ, ಹೋರಾಟ ನಿಮ್ಮ ಮೂಲ ಮಂತ್ರವಾಗಲಿ ಎಂದು ಕಿವಿಮಾತು ಹೇಳಿದರು.

ನೀವು ನಿಮ್ಮ ಸಾಮಗ್ರಿಗಳನ್ನು ದಾಸ್ತಾನು ಮಾಡಿಕೊಳ್ಳಲು ವಿಸ್ತಾರವಾದ ಗೋದಾಮು ಬೇಕಿದೆ. ಇದಕ್ಕಾಗಿ ನಿಮ್ಮ ಸಂಘಟನೆಯಿಂದ ಪತ್ರ ಬರೆದರೆ ಕಡಿಮೆ ದರದಲ್ಲಿ ಬಿಡಿಎ ನಿವೇಶನ ಕೊಡಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ಒಂದೊಮ್ಮೆ ನೀವೇ ಜಮೀನು ಖರೀದಿಸಿ, ಕೃಷಿಯೇತರ ಭೂಮಿ ಪರಿವರ್ತನೆಗೆ ಮುಂದಾದರೂ ಅದಕ್ಕೆ ಸಹಕಾರ ನೀಡುವುದಾಗಿ ಭರವಸೆ ನೀಡಿದರು.

ಸಂಘಟನೆಯ ಪ್ರಮುಖರಾದ ಅಪ್ಪಣ್ಣ, ಅಮರೇಶ ಹಿರೇಮಠ, ಶಿವಾನಂದ ಮಾನಕರ, ಪ್ರಕಾಶ,  ಚನ್ನಬಸಪ್ಪ ಗಸ್ತಿ, ಲಕ್ಷ್ಮಣ ದಿಗ್ಗಾವಿ, ಪ್ರಕಾಶ, ಬಷೀರ ಅಹ್ಮದ್ ಬಾಂಗಿ, ದ್ಯಾವಣ್ಣ ಬಜಂತ್ರಿ, ಅಮರಸಿಂಗ್ ರಜಪೂತ, ಎಂ.ಆರ್.ಪಾಟೀಲ ಸೇರಿದಂತೆ ಇತರರು ಉಪಸ್ಥಿತರಿದ್ದರು.

ರಾಜ್ಯಾದ್ಯಂತ ಆಸಕ್ತರಿಗೆ ವಿಶೇಷ ಸೂಚನೆ:

ಯುವ ಪ್ರತಿಭೆಗಳು, ಹಿರಿ-ಕಿರಿ ಆಸಕ್ತ ಸಾಹಿತಿ, ಕವಿ, ಲೇಖಕರಿಗೆ ಈ ದಿವಸ ವೇದಿಕೆ ಕಲ್ಪಿಸುತ್ತಿದೆ. ಆಸಕ್ತರು ತಮ್ಮ ಸ್ವ ರಚಿತ ಲೇಖನ, ಕಥೆ, ಕವನ , ಶಾಲಾ ಕಾಲೇಜಿನ, ವಿಶ್ವವಿದ್ಯಾಲಯ ವರದಿ, ಹೋರಾಟಗಾರರ ಮನವಿ, ತಮ್ಮ  ಜಿಲ್ಲೆ, ಪಟ್ಟಣ, ತಾಲೂಕು, ಗ್ರಾಮಗಳಲ್ಲಿನ  ಸಮಸ್ಯೆಗಳು ಸೇರಿದಂತೆ ಇತರೆ ಸುದ್ದಿ ಹಾಗೂ ಜಾಹೀರಾತುಗಳನ್ನು ಪ್ರಕಟಿಸಲು ಇಂದೇ ಸಂಪರ್ಕಿಸಿರಿ.

ಸಂಪಾದಕರು ಈ ದಿವಸ ಕನ್ನಡ ದಿನ ಪತ್ರಿಕೆ ವ್ಯಾಟ್ಸಪ್ ಸಂಖ್ಯೆ : 7204279187 / 9900378892 ತಾವು ಟೈಪಿಸಿ eedivasa@gmail.com ಈ ಮೇಲ್ ಗೂ ಮೇಲ್ ಸೆಂಡ್ ಮಾಡಿದರೆ ಪ್ರಕಟಿಸಲಾಗುವುದು.