Wednesday, March 26, 2025

ನಿತ್ಯ ನೂತನವಾಗಿರುವ ರಂಗಭೂಮಿಯ ಸೊಬಗು..!

 

ರಂಗಭೂಮಿ ಇಂದಿಗೂ ತನ್ನ ಗತÀ ವೈಭವವನ್ನು ಕಾಪಾಡಿಕೊಂಡು ಕಲೆ, ನೃತ್ಯ, ಸಾಹಿತ್ಯದ ಹೊನಲನ್ನು ಪ್ರತಿಬಿಂಬಿಸುತ್ತಿದೆ.

ಕಲಿಕೆ, ದುಡಿಮೆ, ಗಳಿಕೆ, ಕೆಲಸದ ಒತ್ತಡ, ಸಂಬಂಧಗಳ ಹಿತದ ಜವಾಬ್ದಾರಿ ಹೀಗೆ ಹತ್ತು ಹಲವು ದಿನ ನಿತ್ಯಗಳ ಜಂಜಾಟದಲ್ಲಿ ಮನರಂಜನೆ ಎಂಬ ಅಸ್ತ್ರ ಮನಸ್ಸು, ಮಸ್ತಕಕ್ಕೆ ವಿಶ್ರಾಂತಿ ನೀಡುತ್ತದೆ. ಹಾಡು ಆಲಿಸುವುದು, ಕಥೆ, ಕಾದಂಬರಿ ಓದುವುದು, ಆಟವಾಡುವುದು, ಪ್ರವಾಸ ಹೋಗುವುದು,  ಸ್ಪೋಟ್ರ್ಸ್ರ, ಸಿನಿಮಾ, ರೀಲ್ಸ್ ವೀಕ್ಷಣೆಗಳಂತಹ ಮನರಂಜನೆಗಳು ಒತ್ತಡ ತಗ್ಗಿಸಿ ದಿನ ನಿತ್ಯ ಜಂಜಾಟದೊಂದಿಗೆ ಮನಸ್ಸಿಗೆ ಮದ ನೀಡಿ ಜೀವನದ ಬಂಡಿ ಮುನ್ನಡೆಸುವ ಅಡಿಪಾಯವಾಗಿವೆ. 

ಸೋಟ್ರ್ಸ್, ರೀಲ್ಸ್, ಸಿನಿಮಾದಂತಹ  ತಂತ್ರಜ್ಞಾನ ಮಾಧ್ಯಮಗಳು ಅವಿಷ್ಕಾರ ಗೊಳ್ಳುವ ಮುನ್ನ  ಮನರಂಜನೆಗಾಗಿ ರಂಗಭೂಮಿ, ವೃತ್ತಿಗಾಗಿ ರಂಗಭೂಮಿ ಎಂದು ಈ ರಂಗ ಪರದೆಯೂ ಜನರನ್ನು ಸೆಳೆಯುತ್ತಿತ್ತು. 

ರಾಮಾಯಣ, ಮಹಾಭಾರತ, ಸತ್ಯ ಹರಿಶ್ಚಂದ್ರ, ಸಮಾಜದಲ್ಲಿನ ದೌರ್ಜನ್ಯ, ತೊಡಕುಗಳಂತಹ ಸಾಂಸ್ಕøತಿ ಹಾಗೂ ಸಾಮಾಜಿಕ  ನಾಟಕಗಳಲ್ಲಿ ಸಿದ್ದಿಸಾಧಿಸಿ ಕಲಾವಿದರು ರಂಗಭೂಮಿಯಲ್ಲಿ ಪ್ರದರ್ಶನ ನೀಡುತ್ತಾ ಮನುರಂಜನೆಯೊಂದಿಗೆ ಸಂದೇಶಗಳ ಬುತ್ತಿಯನ್ನು ತಲೆಯಲ್ಲಿ ಮೆತ್ತಿ ಜಾಗೃತಿ ಮೂಡಿಸುವ ಕಾರ್ಯ ನಡೆಸಲು ಸಹಕಾರಿಯಾಗುತ್ತಿದ್ದವು. 

ರಂಗ ಪರದೆಯ ಮೇಲೆ ವೇಷ ತೊಟ್ಟು ನಟಿಸುವ ಕಲಾವಿದರ ಹಾವಭಾವ ನಟನೆ ಎದುರಿಗಿದ್ದ ವಿಕ್ಷಕರ ಗಮನ ಬೇರೆಲ್ಲೂ ಜಾರದೆ ಮಂತ್ರಮುಗ್ದರನ್ನಾಗಿ ಕೂರಿಸಿದರೇ ಅವರ ಉಡುಗೆ-ತೊಡುಗೆಗಳು, ಹಿನ್ನಲೇ ಧ್ವನಿ ಆ ನಾಟಕಕ್ಕೆ ಜೀವಕಳೆ ತುಂಬುತ್ತಿತ್ತು. 

ನಟನೆಯ ಹವ್ಯಾಸದಿಂದಲೋ, ಬದುಕು ಕಟ್ಟಿಕೊಳ್ಳಲು ಇದನ್ನೇ ವೃತ್ತಿಯನ್ನಾಗಿ ಮಾಡಿಕೊಂಡು ರಂಗಭೂಮಿ ಪ್ರವೇಶಿಸಿದ್ದ ಅದೆμÉ್ಟೂೀ ಕಲಾವಿದರು ತಮ್ಮ ನಟನಾ ಚಾತುರ್ಯದಿಂದ /ಪ್ರತಿಭೆಯಿಂದ   ಪ್ರಖ್ಯಾತಿ ಗಳಿಸಿ, ಸಾಧನೆಗೆ ಪ್ರತಿ ಪ್ರಶಸ್ತಿಯನ್ನು ಬಾಚಿಕೊಂಡಿದ್ದಾರೆ. 

ಸಿನಿಮಾ ಎಂಬ ಜಗಮಗಿಸುವ ಲೋಕಕ್ಕೆ ಕಾಲಿಟ್ಟಾಗ ರಂಗಭೂಮಿ ಕೊಂಡಿ ಕಳಚದೇ  ಜನಮನದಲ್ಲಿ ತನ್ನದೇ ಒಂದು ಛಾಪು ಮೂಡಿಸಿ ಈಗಲ್ಲೂ ಪ್ರಸ್ತುತದಲ್ಲಿದೆ. ಇದಕ್ಕೆ ಕಾರಣ ನೋಡುಗರ ಹವ್ಯಾಸ ಮತ್ತು ಕಲಾವಿದರ ಆಸಕ್ತಿ ಇದರೊಂದಿಗೆ ಯುವ ಪೀಳಿಗೆಗೆ ರಂಗಭೂಮಿಯ ಬಗ್ಗೆ ಪರಿಚಯಿಸಲು ಪ್ರತಿ ವರ್ಷ ವಿಶ್ವಾದ್ಯಂತ ರಂಗಭೂಮಿ ದಿನ ಆಚರಿಸಲಾಗುತ್ತಿದೆ. 

ಪ್ರತಿ ವರ್ಷ ಮಾರ್ಚ್ 27ರಂದು ವಿಶ್ವ ರಂಗಭೂಮಿ ದಿನಾಚರಣೆಯನ್ನು ವಿಶ್ವಾದ್ಯಂತ ಭಾಷೆ ಭೇದ, ಲಿಂಗ ಭೇದ ಆಚರಣೆ ಮಾಡುತ್ತಾ.. ರಂಗಭೂಮಮಿಯ ರಂಗು ಮಾಸದೇ ಜೀವಂತ ಉಳಿವಿಗೆ ಕಾರಣೀಕರ್ತವಾಗಿದೆ.  

ಅμÉ್ಟೀ ಅಲ್ಲದೆ ಸಿನಿಮಾ  ಎಂಟ್ರಿ ಕೊಡುವ ಮುನ್ನ ಅನೇಕ ನಟ-ನಟಿಯರು ನಟನೆಯ ಸೊಬಗನ್ನು ಹೊಂದಲು ರಂಗಭೂಮಿಯನ್ನು ಮೊದಲು ಆದ್ಯತೆ ನೀಡಿರುವುದನ್ನು ನಾವು ಗಮನಿಸಬಹುದು. 

ಸಿನಿಮಾ ಕಲಾವಿದರೊಂದಿಗೆ ರಂಗಭೂಮಿ ನಂಟು: ಶಾರುಕ್ ಖಾನ್, ಗಿರೀಶ್ ಕಾರ್ನಾಡ್, ಓಂ ಪುರಿ, ಪ್ರಕಾಶ ರಾಜ್, ಬೊಮನ್ ಇರಾನಿ, ಡಾ.ರಾಜಕುಮಾರ, ಶಬಾನಾ ಆಜ್ಮಿ, ಶಂಕರ ನಾಗ್, ಗುಬ್ಬಿ ವೀರಣ್ಣ, ಮಂಡ್ಯ ರಮೇಶ ಸಂಚಾರಿ ವಿಜಯರಂತಹ ಘಟಾನುಘಟಿ ಧಿಗ್ಗಜರು ರಂಗಭೂಮಿಯಲ್ಲಿ ನಟಿಸಿ ಸಿನಿಮಾ ರಂಗಕ್ಕೆ ಪಾದಾರ್ಪಣೆ ಮಾಡಿದವರು. 

ಹಿನ್ನಲೇ: ಅಂತರಾಷ್ಟ್ರೀಯ ರಂಗಭೂಮಿ ಸಂಸ್ಥೆಯೂ 1962ರಿಂದ ವಿಶ್ವ ರಂಗಭೂಮಿ ದಿನಾಚರಣೆಯನ್ನು ಮಾರ್ಚ್ 27ರಂದು ಆಚರಿಸಲು ಪ್ರಾರಂಭಿಸಿತು. ಇದರ ಬೆನ್ನಲೇ ಪ್ರತಿ ವರ್ಷ ರಂಗಭೂಮಿ ಮತ್ತು ಶಾಂತಿಯ ಸಂಸ್ಕøತಿ ಎಂಬ ಧ್ಯೇಯ ವಾಕ್ಯದೊಂದಿಗೆ ವಿಶ್ವ ರಂಗಭೂಮಿ ದಿನಾಚರಣೆಯನ್ನು ಆಚರಿಸಲಾಗುವುದು. 

ಯಾವುದೇ ಕಟ್, ಎಡಿಟ್  ಇಲ್ಲದೇ ಒಂದೇ ಶಾಟ್ ನಲ್ಲಿ ಸ್ಕೀನ್ ಪ್ಲೆ ಮಾಡಿ ತಮ್ಮ ನಟನಾ ಕಲೆಯಿಂದ  ವೀಕ್ಷಕರ ಮನಮುಟ್ಟುವಂತೆ ವಿಷಯ ಹೂರಣವನ್ನು ಉಣಬಡಿಸುವ ರಂಗಭೂಮಿ ಕಲಾವಿದರ ನಟನೆ ಯಾವ ಆಧುನಿಕ ತಂತ್ರಜ್ಞಾನ ಗಳಿಂದ ಮಾಸದೆ ನಿತ್ಯ ನೂತನವಾಗಿರಲಿ ಎಂಬುದೆ ನಮ್ಮ ಆಶಯ. 

- ವಿದ್ಯಾಶ್ರೀ ಹೊಸಮನಿ 

ಪ್ರಶಿಕ್ಷಣಾರ್ಥಿ , ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ

ವಿಜಯಪುರ


27-03-2025 EE DIVASA KANNADA DAILY NEWS PAPER

ಸಿದ್ಧಗಂಗಾ ಶ್ರೀ ರತ್ನ ಪ್ರಶಸ್ತಿಗೆ ಮಹೇಶ ಶಿವಶರಣ ಭಾಜನ


ವಿಜಯಪುರ : ವಿಜಯಪುರ ಜಿಲ್ಲೆಯ ನಗರ ನಿವಾಸಿ ಕಲಾವಿದ ಮಹೇಶ ಶಿವಶರಣ ಅವರು ಸಿದ್ಧಗಂಗಾ ಶ್ರೀ ರತ್ನ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಮಹೇಶ ಶಿವಶರಣ ಅವರು ಕಲಾ ಕ್ಷೇತ್ರದಲ್ಲಿ ನಿಸ್ವಾರ್ಥ ಮತ್ತು ಪ್ರಾಮಾಣಿಕವಾಗಿ ಶಕ್ತಿಮೀರಿ ಸಲ್ಲಿಸಿದ ಸಾಧನೆಯನ್ನು ಗುರುತಿಸಿ ಅವರಿಗೆ ಪ್ರಶಸ್ತಿ ನೀಡಿ ಸನ್ಮಾನಿಸಿ ಗೌರವಿಸಿ ಅಭಿನಂದಿಸಿದೆ.

ಅನಾಥ, ನಿರ್ಗತಿಕ ಹಾಗೂ ಬಡ ಮಕ್ಕಳಿಗೆ ಉಚಿತ ಶಿಕ್ಷಣ ನೀಡುವ ಶ್ರೀ ಶ್ರೀ ಶಿವಕುಮಾರ ಸ್ವಾಮೀಜಿ ಗಾಮೀಣಾಭಿವೃದ್ಧಿ ಸೇವಾ ಸಂಸ್ಥೆ (ರಿ) ಶ್ರೀ ಸಿದ್ಧಗಂಗಾ ಕಿರಿಯ ಪ್ರಾಥಮಿಕ ಶಾಲೆ ತುರಕನಗೇರಿ ತಾ| ತಾಳಿಕೋಟಿ ಜಿ| ವಿಜಯಪುರ ವತಿಯಿಂದ ತ್ರಿವಿದ ದಾಸೋಹಿ ಡಾ. ಶ್ರೀ ಶ್ರೀ ಶಿವಕುಮಾರ ಮಹಾಸ್ವಾಮೀಜಿಯವರ 118 ನೇ ಜಯಂತ್ಯೋತ್ಸವ ಹಾಗೂ ಸಿದ್ಧಗಂಗಾ ಕಿರಿಯ ಪ್ರಾಥಮಿಕ ಶಾಲೆಯ 7ನೇ ವಾರ್ಷಿಕ ಸ್ನೇಹ ಸಮ್ಮೇಳನ ನಿಮಿತ್ಯ “ಸಿದ್ಧಗಂಗಾ ಶ್ರೀ ರತ್ನ ಪ್ರಶಸ್ತಿ”ಯನ್ನು ಕಲಾವಿದ ಮಹೇಶ ಶಿವಶರಣ ಅವರಿಗೆ ನೀಡಿ ಸನ್ಮಾನಿಸಿ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಶಂಶೂದ್ದೀನ ಇನಾಂದಾರ ಹಾಗೂ ಬಸವರಾಜ ಹೂಗಾರ ಸೇರಿದಂತೆ ರಜಾಕ ಇನಾಮದಾರ, ಅಲ್ತಾಪ ಇನಾಮದಾರ, ವಿರೇಶ ಹಿರೇಮಠ, ಅಮರೇಶ ಬಸವಪಟ್ಟಣ, ಮಂಜುನಾಥ ಮೋಪಗಾರ, ಪ್ರವೀಣ ಮೋಪಗಾರ ಸೇರಿದಂತೆ ಮುಂತಾದವರು ಇದ್ದರು.

ಮಹೇಶ ಶಿವಶರಣ ಸಿದ್ಧಗಂಗಾ ಶ್ರೀ ರತ್ನ ಪ್ರಶಸ್ತಿ ಪಡೆದ ಹಿನ್ನೆಲೆ ಸ್ನೇಹಿತರು, ಹಿತೈಷಿಗಳು, ಕಲಾಭಿಮಾನಿಗಳು, ಕುಟಂಬದ ಸದಸ್ಯರು ಸೇರಿದಂತೆ ಅಪಾರ ಬಂಧು-ಬಳಗದವರು ಶುಭಕೋರಿ ಹಾರೈಸಿದ್ದಾರೆ.

ರಾಜ್ಯಾದ್ಯಂತ ಆಸಕ್ತರಿಗೆ ವಿಶೇಷ ಸೂಚನೆ:

ಯುವ ಪ್ರತಿಭೆಗಳು, ಹಿರಿ-ಕಿರಿ ಆಸಕ್ತ ಸಾಹಿತಿ, ಕವಿ, ಲೇಖಕರಿಗೆ ಈ ದಿವಸ ವೇದಿಕೆ ಕಲ್ಪಿಸುತ್ತಿದೆ. ಆಸಕ್ತರು ತಮ್ಮ ಸ್ವ ರಚಿತ ಲೇಖನ, ಕಥೆ, ಕವನ , ಶಾಲಾ ಕಾಲೇಜಿನ, ವಿಶ್ವವಿದ್ಯಾಲಯ ವರದಿ, ಹೋರಾಟಗಾರರ ಮನವಿ, ತಮ್ಮ  ಜಿಲ್ಲೆ, ಪಟ್ಟಣ, ತಾಲೂಕು, ಗ್ರಾಮಗಳಲ್ಲಿನ  ಸಮಸ್ಯೆಗಳು ಸೇರಿದಂತೆ ಇತರೆ ಸುದ್ದಿ ಹಾಗೂ ಜಾಹೀರಾತುಗಳನ್ನು ಪ್ರಕಟಿಸಲು ಇಂದೇ ಸಂಪರ್ಕಿಸಿರಿ.

ಸಂಪಾದಕರು ಈ ದಿವಸ ಕನ್ನಡ ದಿನ ಪತ್ರಿಕೆ ವ್ಯಾಟ್ಸಪ್ ಸಂಖ್ಯೆ : 7204279187 / 9900378892 ತಾವು ಟೈಪಿಸಿ eedivasa@gmail.com ಈ ಮೇಲ್ ಗೂ ಮೇಲ್ ಸೆಂಡ್ ಮಾಡಿದರೆ ಪ್ರಕಟಿಸಲಾಗುವುದು.