Sunday, December 24, 2023

ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಇಂಗ್ಲೀಷ್ ವಿಷಯದ ಫೊನ್ ಇನ್ ಕಾರ್ಯಕ್ರಮ ಶೈಕ್ಷಣಿಕ ಸಮಸ್ಯೆಗಳಿಗೆ ಪರಿಹಾರ ಪಡೆದುಕೊಂಡ ವಿದ್ಯಾರ್ಥಿಗಳು : ಡಿಡಿಪಿಐ


ಈ ದಿವಸ ವಾರ್ತೆ

ವಿಜಯಪುರ: ಇಂಗ್ಲೀಷ್ ವಿಷಯದ ವ್ಯಾಕರಣ ಮತ್ತು ಪತ್ರಲೇಖನ ಪ್ಯಾರಾಗ್ರಾಫ್, ಪ್ರಬಂಧ ಬರವಣ ಗೆ ಹಾಗೂ ವಿಷಯ ಕರಗತ ಮಾಡಿಕೊಳ್ಳುವುದೂ ಸೇರಿದಂತೆ ತಮ್ಮ ಶೈಕ್ಷಣ ಕ ಸಮಸ್ಯೆಗಳಿಗೆ ವಿದ್ಯಾರ್ಥಿಗಳು ಸಂಪನ್ಮೂಲ ಶಿಕ್ಷಕರಿಂದ ಪರಿಹಾರ ಪಡೆದುಕೊಂಡರು. ಶಿಕ್ಷಕರು ವಿಷಯ ಸಮಸ್ಯೆ ಸೂಚಿಸುವುದರ ಜೊತೆಗೆ ಆತ್ಮವಿಶ್ವಾಸದ ಪಾಠ ಮಾಡಲಾಯಿತು ಎಂದು ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆಯ ಉಪ ನಿರ್ದೇಶಕ ಎನ್.ಎಚ್.ನಾಗೂರ ತಿಳಿಸಿದ್ದಾರೆ. 

ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆಯಿಂದ ಜಿಲ್ಲೆಯ ಎಸ್ಸೆಸ್ಸೆಲ್ಸಿಯ ವಿದ್ಯಾರ್ಥಿಗಳಿಗಾಗಿ ಶುಕ್ರವಾರ ಸಂಜೆ 6 ರಿಂದ ರಾತ್ರಿ 8.30ರವರೆಗೆ ಇಂಗ್ಲೀಷ್ ವಿಷಯದ ಕುರಿತಾಗಿ ನಡೆದ ಫೋನ್ ಇನ್ ಕಾರ್ಯಕ್ರಮದಲ್ಲಿ 2 ಗಂಟೆಗಳ ಅವಧಿಯಲ್ಲಿ 325 ವಿದ್ಯಾರ್ಥಿಗಳು ಕೇಳಿದ 458 ಪ್ರಶ್ನೆಗಳಿಗೆ ವಿಷಯ ಶಿಕ್ಷಕರು ಪರಿಹಾರ ಸೂಚಿಸಿದರು.

ವಿದ್ಯಾರ್ಥಿಗಳು ಕೇಳುವ ಪ್ರಶ್ನೆಗಳಿಂದ ವಿದ್ಯಾರ್ಥಿಗಳಲ್ಲಿ ಕಲಿಕೆಯ ಹಂಬಲ ಹೆಚ್ಚಾಗುತ್ತಿದೆ. ಕೆಲ ಸಣ್ಣ ಪುಟ್ಟ ಸಮಸ್ಯೆಗಳಿಗೆ ಪರಿಹಾರ ಬೋಧನೆಯಿಂದ ಮತ್ತಷ್ಟು ವಿಷಯ ಕರಗತವಾಗಿ ಅವರ ಕಲಿಕಾ ಮಟ್ಟ ಹೆಚ್ಚಾಗುತ್ತದೆ. ಜಿಲ್ಲಾಧಿಕಾರಿಗಳು ಹಾಗೂ ಜಿಪಂ ಸಿಇಒ ಅವರ ಮಾರ್ಗದರ್ಶನದಲ್ಲಿ ನಡೆಯುತ್ತಿರುವ ಯಶಸ್ವಿ ಕಾರ್ಯಕ್ರಮವೆನಿಸಿದೆ. ಈಗಾಗಲೇ ವಿಜ್ಞಾನ ವಿಷಯದಲ್ಲಿ 438, ಗಣ ತದಲ್ಲಿ 425 ವಿದ್ಯಾರ್ಥಿಗಳು ಫೋನ್ ಇನ್ ಕಾರ್ಯಕ್ರಮದ ಮೂಲಕ ತಮ್ಮ ಸಮಸ್ಯಗೆಳಿಗೆ ಪರಿಹಾರ ಕಂಡುಕೊಂಡಿದ್ದಾರೆ ಎಂದು ಅವರು ತಿಳಿಸಿದ್ದಾರೆ. 

ಈ ಕಾರ್ಯಕ್ರಮದಲ್ಲಿ ಪಿ. ಕುಂಬಾರ್, ಆರ್. ವಿ. ಕುಲಕಣ ð ಶ್ರೀಮತಿ ಆರ್.ಎಸ್.ಕೊರೆಗೊಳ್, ಎಸ್.ಎ ಕಮತಗಿ, ಪಿ. ಬಿ. ಕುಲಕಣ ð, ವಿ. ಎಸ್. ಬಶೆಟ್ಟಿ, ಪಿ. ಎಮ್ ಪಾಟೀಲ್ ಹಾಗೂ ಎಸ್.ವೈ ನಾಯಕ ಅವರೂ ಸೇರಿದಂತೆ 9 ಜನ ಶಿಕ್ಷಕರು ಇಂಗ್ಲೀಷ್ ವಿಷಯದ ಸಂಪನ್ಮೂಲ ವ್ಯಕ್ತಿಗಳು, ಹಾಗೂ ಇಂಗ್ಲೀಷ್ ವಿಷಯದ ಫೋನ್ ಇನ್ ಕಾರ್ಯಕ್ರಮದ ಸಂಯೋಜಕರೂ ಆದ ಬಸವನ ಬಾಗೇವಾಡಿಯ ಕ್ಷೇತ್ರ ಶಿಕ್ಷಣಾಧಿಕಾರಿ ವಸಂತ ರಾಠೋಡ,ಇಂಗ್ಲೀಷ್ ವಿಷಯ ಪರಿವೀಕಕ್ಷರಾದ ಪಿ.ಕೆ.ರಾದಾರ, ವಿಜ್ಞಾನ ವಿಷಯ ಪರಿವೀಕ್ಷಕರಾದ ಎಸ್.ಎಸ್. ತಳ್ಳಳ್ಳಿ, ಉರ್ದು ಶಿಕ್ಷಣ ಸಂಯೋಜಕರಾದ ಝಡ್.ಎ.ಸತಾರೇಕರ, ಬಸವರಾಜ ನಾಗೂರ ಸೇರಿದಂತೆ ಸಂಪನ್ಮೂಲ ಶಿಕ್ಷಕರು ಉಪಸ್ಥಿತರಿದ್ದರು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Tuesday, December 19, 2023

20-12-2023 EE DIVASA KANNADA DAILY NEWS PAPER

ಎಂ. ಬಿ.ಪಾಟೀಲ ಹಿಟ್ಲರ ನೀತಿಗೆ ತೀವ್ರ ಖಂಡನೆ : ಸತೀಶ ಪಾಟೀಲ


ವಿಜಯಪುರ : ಜಾತಿ ಜಾತಿಗಳ ಮಧ್ಯೆ ಜಗಳ ಹಚ್ಚುವುದನ್ನು ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ. ಪಾಟೀಲ ಅವರು ಬಿಡಬೇಕು. ಈಗಾಗಲೇ ಲಿಂಗಾಯತ ಧರ್ಮ ಪ್ರತ್ಯೇಕಿಸಲು ಪ್ರಯತ್ನಿಸಿ ಅಖಂಡ ಹಿಂದು ಧರ್ಮಕ್ಕೆ ಹಿಂದುತ್ವಕ್ಕೆ ಧಕ್ಕೆ ತಂದ ತಮ್ಮ ಹಿಂದೂ ಧರ್ಮ ವಿರೋಧಿನೀತಿಯನ್ನು ಜನ ಇನ್ನು ಮರೆತಿಲ್ಲ ಎಂದು ಶಿವಸೇನಾ ಮುಖಂಡ ಸತೀಶ ಪಾಟೀಲ ಹೇಳಿದರು.

ಈ ಕುರಿತು ಪ್ರಕಟಣೆ ನೀಡಿದ ಅವರು, ಆದ್ಯಾಗೂ ನಿನ್ನೆಯ ದಿನ ಹಿಂದೂ ಗಾಣಿಗ, ಹಿಂದೂ ಸಾಧರ ಈ ರೀತಿ ಬರೆದುಕೊಳ್ಳಬಾರದು ಲಿಂಗಾಯತ ಎಂದು ಉಪನಾಮದೊಂದಿಗೆ ತಮ್ಮ ಜಾತಿಯನ್ನು ಬರೆದುಕೊಳ್ಳಲು ಒತ್ತಾಯಿಸುತ್ತಿರಲು ತಾವೇನು ನಮ್ಮ ಸಮುಧಾಯದ ಧರ್ಮ ಗುರುವೇ ? ತಮ್ಮ ಈ ಸರ್ವಾಧಿಕಾರಿ ಧೋರಣೆಗೆ ನಾಡಿನ ಗಾಣಿಗ ಹಾಗೂ ಸಾಧರ ಸಮಾಜದವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದರಿಂದ ಆ ಸಮಾಜಗಳಿಗೆ 2 ಎ ಮೀಸಲಾತಿ ತಪ್ಪಿದ್ದೆ ಆದಲ್ಲಿ ತಮಗೆ ಮುಂದಿನ ದಿನಮಾನಗಳಲ್ಲಿ ನಮ್ಮ ಎಲ್ಲ ಸಮಾಜ ಬಾಂಧವರು ತಮಗೆ ತಕ್ಕ ಪಾಠ ಕಲಿಸಲಿದ್ದಾರೆ. ತಾವು ವಿಜಯಪುರ ಜಿಲ್ಲಾ ಉಸ್ತುವಾರಿಯಾಗಿದ್ದೀರಿ ಜಿಲ್ಲೆಯಲ್ಲಿ ಸಾಕಷ್ಟು ಸಮಸ್ಯೆಗಳ ಹೂರಣಗಳಿವೆ. ಮೊದಲಿಗೆ ಅವುಗಳನ್ನು ಸರಿಪಡಿಸಿರಿ. ಅದರಲ್ಲಿ ಮುಖ್ಯವಾಗಿ ಜಿಲ್ಲೆಯು ಸಂಪೂರ್ಣವಾಗಿ ಬರಗಾಲದಿಂದ ತುತ್ತಾಗಿದ್ದು ಜಿಲ್ಲೆಯ ಜನತೆ ನಿರೀಕ್ಷೆಯು ಅಪಾರವಿದೆ. ಸುವರ್ಣಸೌಧದಲ್ಲಿ ವಿಜಯಪುರ ಜಿಲ್ಲೆಗೆ ಹೊಸ ಯೋಜನೆಯಾಗಲಿ, ಬರಗಾಲ ಜಿಲ್ಲೆ ಎಂದು ಘೋಷಣೆಯಾದರೂ ಇನ್ನೂ ಯಾವುದೇ ತರಹದ ವಿಶೇಷ ಅನುದಾನವಾಗಲಿ ಯಾವುದು ತರದ ತಮ್ಮ ನಡೆ ಜಿಲ್ಲೆ ಉಸ್ತುವಾರಿಯೋ ಸುಸ್ತುವಾರಿಯೋ ಆ ಭಗವಂತನೆ ಬಲ್ಲ. 

ತಮ್ಮ ಈ ಜಾತಿ ರಾಜಕಾರಣ, ಹಿಂದೂ ಧರ್ಮಗಳಲ್ಲಿ ಹೊಡೆದಾಳುವ ಬ್ರಿಟಿಷ್ ನೀತಿಯನ್ನು ಅನುಸರಿಸುತ್ತಿರುವ ತಮ್ಮ ಮನೋಧೋರಣೆ ಹಿಟ್ಲರಗಿಂತಲೂ ಕಡಿಮೆ ಇಲ್ಲ ಆದಷ್ಟು ಬೇಗನೆ ತಮಗೆ ದೇವರು ಬುದ್ಧಿಕೊಡಲಿ ಈಗಲೇ ಎಚ್ಚೆತ್ತುಕೊಳ್ಳಿರಿ ಎಂದು ಶಿವಸೇನಾ ಮುಖಂಡ ಸತೀಶ ಪಾಟೀಲ ಗಂಭೀರವಾಗಿ ಖಂಡಿಸಿ ಎಚ್ಚರಿಸಿದ್ದಾರೆ.

ರಾಜ್ಯಾದ್ಯಂತ ಆಸಕ್ತರಿಗೆ ವಿಶೇಷ ಸೂಚನೆ:

ಯುವ ಪ್ರತಿಭೆಗಳು, ಹಿರಿ-ಕಿರಿ ಆಸಕ್ತ ಸಾಹಿತಿ, ಕವಿ, ಲೇಖಕರಿಗೆ ಈ ದಿವಸ ವೇದಿಕೆ ಕಲ್ಪಿಸುತ್ತಿದೆ. ಆಸಕ್ತರು ತಮ್ಮ ಸ್ವ ರಚಿತ ಲೇಖನ, ಕಥೆ, ಕವನ , ಶಾಲಾ ಕಾಲೇಜಿನ, ವಿಶ್ವವಿದ್ಯಾಲಯ ವರದಿ, ಹೋರಾಟಗಾರರ ಮನವಿ, ತಮ್ಮ ಊರಿನ ಸಮಸ್ಯೆಗಳು ಸೇರಿದಂತೆ ಇತರೆ ಸುದ್ದಿ ಹಾಗೂ ಜಾಹೀರಾತುಗಳನ್ನು ಪ್ರಕಟಿಸಲು ಇಂದೇ ಸಂಪರ್ಕಿಸಿರಿ.

ಸಂಪಾದಕರು ಈ ದಿವಸ ಕನ್ನಡ ದಿನ ಪತ್ರಿಕೆ ವ್ಯಾಟ್ಸಪ್ ಸಂಖ್ಯೆ : 7204279187 / 9900378892 ತಾವು ಟೈಪಿಸಿ eedivasa@gmail.com ಈ ಮೇಲ್ ಗೂ ಮೇಲ್ ಸೆಂಡ್ ಮಾಡಿದರೆ ಪ್ರಕಟಿಸಲಾಗುವುದು.

Saturday, December 16, 2023

"ಜಾತಿ ವ್ಯವಸ್ಥೆ ವಿರೋಧಿಸಿದ ದಾಸ ಶ್ರೇಷ್ಟ ಕನಕದಾಸರು "ವಿದ್ಯಾ ಕಲ್ಯಾಣಶೆಟ್ಟಿ


 ಈ ದಿವಸ ವಾರ್ತೆ

ಚಡಚಣ : ದಾಸ ಶ್ರೇಷ್ಠರಾದ ಕನಕದಾಸರು ಮಾನವ ಜನಾಂಗಕ್ಕೆ ಕೊಟ್ಟ ಕೊಡುಗೆ ಅದ್ಭುತವಾದದ್ದು. ಕುಲ ಕುಲ ಎಂದು ಬಡದಾಡದಿರಿ ಹುಟ್ಟಿಗೆ ಕುಲವಿಲ್ಲ ನಮಗೇಕೆ ಜಾತಿ ವ್ಯವಸ್ಥೆ ಅಂತ ಜಾತಿ ವ್ಯವಸ್ಥೆ ವಿರುದ್ಧ ಸಿಡಿದ್ದೆದವರು. ಕಡಿಮೆ ಕುಲದವರಿಗೆ ದೇವಾಲಯ ಪ್ರವೇಶ ಇಲ್ಲದ ಕಾಲದಲ್ಲಿ ದೇವರು ನಿಮ್ಮೊಳಗೆ ಇದ್ದಾನೆ, ದೇವಾಲಯ ಪ್ರವೇಶದಿಂದ ಯಾವುದೇ ಲಾಭವಿಲ್ಲ ಮನದಲ್ಲಿ ದೇವರ ಗುಡಿ ನಿರ್ಮಾಣ ಮಾಡಿ ಎಂದು ಜನರಿಗೆ ಸಾರಿ ಹೇಳಿದರು . ಕೇಳ ದರ್ಜೆಯ ಜನರಿಗಾಗಿ ಕ್ರಾಂತಿ ಮಾಡಿ ಅವರಿಗೆ ದೇವಸ್ಥಾನದ ಪ್ರವೇಶ ಮಾಡಿಕೊಟ್ಟರು. ಮುಂದೆ ದಂಡನಾಯಕನಾದ ಕನಕರು ತಮ್ಮ ಅಧಿಕಾರ ತ್ಯಾಗ ಮಾಡಿ ದಾಸಕೂಟ ರಚಿಸಿ ಮಹಾನ ದಾಸರೆನಿಸಿಕೊಂಡರು ಎಂದು ಕದಳಿ ವೇದಿಕೆ ಅಧ್ಯಕ್ಷೆ  ವಿದ್ಯಾ ಕಲ್ಯಾಣಶೆಟ್ಟಿ  ಅಭಿಪ್ರಾಯ ಪಟ್ಟರು. ಪಟ್ಟಣದ ಸಂಗಮೇಶ್ವರ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯದ  ಕನ್ನಡ ವಿಭಾಗ ಮತ್ತು ಕನ್ನಡ ಸಂಘ ವತಿಯಿಂದ ಹಮ್ಮಿಕೊಂಡ ದಾಸ ಶ್ರೇಷ್ಠ  ಕನಕದಾಸರ ಜಯಂತಿಯ ನಿಮಿತ್ಯ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. 


ಕಾರ್ಯಕ್ರಮದ ಅಧ್ಯಕ್ಷ ಸ್ಥಾನ ವಹಿಸಿ ಮಾತನಾಡಿದ ಕಾಲೇಜಿನ ಪ್ರಾಚಾರ್ಯರಾದ ಡಾ. ಎಸ್. ಬಿ. ರಾಠೋಡ ಮಾತನಾಡಿ ಕನಕದಾಸರು ಸರ್ವಕಾಲಿಕ ಶ್ರೇಷ್ಠರು. ಸರಳ ಬದುಕಿನ ಮೌಲ್ಯಗಳನ್ನು ಸಾರಿದ ಅವರು ಮೌಢ್ಯತೆಯ ವಿರುದ್ಧ ಹೋರಾಟಮಾಡಿದರು. ಅವರ ಕೀರ್ತನೆಗಳು ಪ್ರತಿಯೊಬ್ಬರ ಬಾಳಿಗೆ ದಾರಿದೀಪಗಳಾಗಿವೆ ಎಂದರು.

 ವೇದಿಕೆ ಮೇಲಿದ್ದ ನಿವೃತ್ತ ಪ್ರಾಂಶುಪಾಲರಾದ ಶ್ರೀ ಎಸ್. ಜಿ. ಜಂಗಮಶೆಟ್ಟಿ, ಕನ್ನಡ ವಿಭಾಗ ಮುಖ್ಯಸ್ಥ ಡಾ. ಎಂ. ಎಸ್. ಮಾಗಣಗೇರಿ ಪ್ರಾಸ್ತಾವಿಕವಾಗಿ ಮಾತನಾಡಿದರು. 

ಕಾರ್ಯಕ್ರಮದಲ್ಲಿ ಪ್ರೊ. ಎಂ. ಎ. ಜನವಾಡ ಸ್ವಾಗತಿಸಿದರೆ, ಪ್ರೊ. ಎಸ್. ಎಫ್. ಬಿರಾದಾರ ನಿರೂಪಿಸಿ ವಂದಿಸಿದರು. ಕಾರ್ಯಕ್ರಮದಲ್ಲಿ ಕಾಲೇಜಿನ ಗ್ರಂಥಪಾಲಕರಾದ ಶ್ರೀ ಎಂ. ಕೆ. ಬಿರಾದಾರ, ಪ್ರೊ.ಸದಾನಂದ ಪಾಟೀಲ, ಪ್ರೊ.ಬಸವರಾಜ ನೀಲವಾಣಿ ಮತ್ತು ಸಿಬ್ಬಂದಿ ವರ್ಗ ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.

ರಾಜ್ಯಾದ್ಯಂತ ಆಸಕ್ತರಿಗೆ ವಿಶೇಷ ಸೂಚನೆ:

ಯುವ ಪ್ರತಿಭೆಗಳು, ಹಿರಿ-ಕಿರಿ ಆಸಕ್ತ ಸಾಹಿತಿ, ಕವಿ, ಲೇಖಕರಿಗೆ ಈ ದಿವಸ ವೇದಿಕೆ ಕಲ್ಪಿಸುತ್ತಿದೆ. ಆಸಕ್ತರು ತಮ್ಮ ಸ್ವ ರಚಿತ ಲೇಖನ, ಕಥೆ, ಕವನ , ಶಾಲಾ ಕಾಲೇಜಿನ, ವಿಶ್ವವಿದ್ಯಾಲಯ ವರದಿ, ಹೋರಾಟಗಾರರ ಮನವಿ, ತಮ್ಮ ಊರಿನ ಸಮಸ್ಯೆಗಳು ಸೇರಿದಂತೆ ಇತರೆ ಸುದ್ದಿ ಹಾಗೂ ಜಾಹೀರಾತುಗಳನ್ನು ಪ್ರಕಟಿಸಲು ಇಂದೇ ಸಂಪರ್ಕಿಸಿರಿ.

ಸಂಪಾದಕರು ಈ ದಿವಸ ಕನ್ನಡ ದಿನ ಪತ್ರಿಕೆ ವ್ಯಾಟ್ಸಪ್ ಸಂಖ್ಯೆ : 7204279187 / 9900378892 ತಾವು ಟೈಪಿಸಿ eedivasa@gmail.com ಈ ಮೇಲ್ ಗೂ ಮೇಲ್ ಸೆಂಡ್ ಮಾಡಿದರೆ ಪ್ರಕಟಿಸಲಾಗುವುದು.