Sunday, August 6, 2023
ಕಲಬುರಗಿಯಲ್ಲಿ ಸುನೀಲಕುಮಾರ ಸುಧಾಕರ ನಿರ್ದೇಶನದ ರಮಾಸಾಹೇಬಾ ಚಿತ್ರ ಪ್ರದರ್ಶನ ಹಾಗೂ ಸಂವಾದ
ಈ ದಿವಸ ವಾರ್ತೆ
ವಿಜಯಪುರ: ಅಂಬೇಡ್ಕರ್ ಆಗಿ ಪ್ರೊ ಎಚ್ ಟಿ ಪೋತೆ ಅವರು ರಾಮಾಸಾಹೇಬ್ ಚಿತ್ರದಲ್ಲಿ ಅತ್ಯುತ್ತಮವಾಗಿ ಅಭಿನಯಿಸಿದ್ದಾರೆ ಎಂದು ಸಾಹಿತಿ ಮಹಿಪಾಲರೆಡ್ಡಿ ಮುನ್ನೂರ ಅವರು ಹೇಳಿದರು. ಅವರು ಕಲಬುರಗಿ ವಿಶ್ವವಿದ್ಯಾಲಯದಲ್ಲಿ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದರು. ರೇಖಾ ಪಾಟೀಲ ಅವರು ಚಿತ್ರದಲ್ಲಿ ನಟಿಸುತ್ತಾ ನಟಿಸುತ್ತಾ ರಾಮಬಾಯಿಯಾಗಿ ಜೀವಂತಕಿ ತುಂಬಿದ್ದಾರೆ, ಚಿತ್ರದಲ್ಲಿ ಕ್ಯಾಮೆರಾ ಸಂಭಾಷಣೆ, ಡಬ್ಬಿಂಗ್ ಎಲ್ಲವೂ ಸೊಗಸಾಗಿ ಮೂಡಿಬಂದಿದೆ ಎಂದು ಅವರು ಹೇಳಿದರು.
ಕೇಂದ್ರೀಯ ವಿವಿ ಪ್ರಾಧ್ಯಪಕಿ ಮಹಿಮಾ ರಾಜ್ ಅವರು ಮಾತನಾಡಿ ಚಿತ್ರ ಸೊಗಸಾಗಿ ಮೂಡಿ ಬಂದಿದ್ದಕ್ಕೆ ಎಲ್ಲರನ್ನು ಅಭಿನಂದಿಸುತ್ತೇನೆ ಮರಾಠಿಯಲ್ಲಿ ಕೆಲವು ಸಿನಿಮಾಗಳು ಬಂದಿವೆ ಆದರೆ ಕನ್ನಡದಲ್ಲಿ ಬಂದಿರಲಿಲ್ಲ ಈ ಥರ ಚಿತ್ರಗಳು ಹೆಚ್ಚಾಗಿ ಬರಬೇಕು ಈ ಸಿನಿಮಾದಲ್ಲಿ ಸಾಕಷ್ಟು ಪ್ರಯೋಗಶೀಲ ಗುಣಗಳಿವೆ ಒಂದು ಕಡೆ ರಮಾಬಾಯಿ ಕಷ್ಟದ ಜೀವನ ಸಾಗಿಸುತ್ತಿದ್ದಾರೆ ಇನ್ನೊಂದೆಡೆ ಅಂಬೇಡ್ಕರ್ ಅವರ ಶೈಕ್ಷಣಿಕ ಮತ್ತು ಔದ್ಯೋಗಿಕ ಜೀವನವನ್ನು ಸುಂದರವಾಗಿ ತೋರಿಸುವ ಕೆಲಸವನ್ನು ನಿರ್ದೇಶಕ ಸುನೀಲಕುಮಾರ ಸುಧಾಕರ ಅವರು ಮಾಡಿದ್ದಾರೆ ಸಾಮಾಜಿಕ ಪ್ರಜ್ಞೆ ಮೂಡಿಸುವ ಏಕೀಕರಣಗೊಳಿಸುವ ಕೆಲಸವನ್ನು ಒಟ್ಟೊಟ್ಟಿಗೆ ಮಾಡುತ್ತದೆ ಎಂದು ಹೇಳಿದರು.
ಸುರೇಶ ಬಡಿಗೇರ :ಬಾಬಾಸಾಹೇಬ್ ಅಂಬೇಡ್ಕರ್ ಅವರ ಬಗ್ಗೆ ತಿಳಿದುಕೊಳ್ಳುವುದು ಭಾಳ ಇದೆ ಹಿಂದೂ ಧರ್ಮದ ದೇವರ ಮೇಲೆ ರಮಾತಾಯಿ ಅವರಿಗೆ ಭಾಳ ಭಕ್ತಿ ಇತ್ತು,ರಮಾತಾಯಿ ತ್ಯಾಗದಿಂದ ಬಾಬಾಸಾಹೇಬರು ವಿಶ್ವ ಮಟ್ಟಕ್ಕೆ ಬೆಳೆದರೂ ಪೋತೆ ಸರ್ ಅಂಬೇಡ್ಕರ್ ಅವರ ಪಾತ್ರ ಮಾಡಿದ್ದೂ ನಮ್ಮ ಮನೆಯ ಅಣ್ಣನೇ ಮಾಡಿದಷ್ಟು ಖುಷಿಯಾಗಿದೆ,ಈ ಸಿನಿಮಾ ಎಲ್ಲರ ಕಣ್ಣಲ್ಲಿ ನೀರು ತರಿಸಿತು ಅಪರೂಪದ ಸಿನಿಮಾ ಶಾಲೆ ಕಾಲೇಜುಗಳಲ್ಲಿ ಪ್ರದರ್ಶನಗೊಳ್ಳಬೇಕು ಎಂದರು. ದಸಾಪ ರಾಜ್ಯ ಖಜಾಂಚಿ ಅವರು ಮಾತನಾಡಿ ನಮ್ಮ ಕಾಲದ ಬಾಬಾಸಾಹೇಬರಾಗಿ ನಮ್ಮ ಮಧ್ಯ ಪೋತೆ ಅವರು ಇದ್ದಾರೆ ಅಕ್ಷರ ಕ್ರಾಂತಿಯ ಈ ಚಿತ್ರದಲ್ಲಿ ಬದುಕೇ ಹಾಡಾಗಿದೆ ಎಲ್ಲ ನೋವುಗಳನ್ನು ಕಲಾತ್ಮಕವಾಗಿ ಚಿತ್ರಿಸುವ ಕಲೆ ಕರಗತ ಮಾಡಿಕೊಂಡಿರುವ ನಿರ್ದೇಶಕ ಸುನೀಲಕುಮಾರ ಸುಧಾಕರ ಅವರ ಶ್ರಮ ಸಾರ್ಥಕವಾದದ್ದು ಎಂದರು. ನಿಕಟ ಪೂರ್ವ ರಂಗಾಯಣ ನಿರ್ದೇಶಕ ಪ್ರಭಾಕರ ಜೋಶಿ ಅವರು ಮಾತನಾಡಿ ರಮಾಬಾಯಿ ಮತ್ತು ಅಂಬೇಡ್ಕರ್ ಎರಡು ಪಾತ್ರಧಾರಿಗಳು ಪೈಪೋಟಿಗೆ ಬಿದ್ದಂತೆ ನಟಿಸಿದ್ದಾರೆ ಈ ರೀತಿಯ ಸಿನಿಮಾ ನೋಡಲು ಪ್ರೇಕ್ಷಕರಿಗೆ ವಿಶೇಷ ಮನಸ್ಥಿತಿ ಬೇಕಾಗುತ್ತದೆ ಅಂಬೇಡ್ಕರ್ ಅವರದ್ದು ಗಂಭೀರ ವ್ಯಕ್ತಿತ್ವ ಅಂತಹ ಪರಿಣಾಮಕಾರಿ ಪಾತ್ರ ಈ ಸಿನಿಮಾದಲ್ಲಿ ಅಂಬೇಡ್ಕರ್ ಅವರನ್ನು ಕನ್ನಡದ ಅಂಬೇಡ್ಕರ್ ಆಗಿ ತೋರಿಸಿದ್ದು ಹೆಮ್ಮೆಯ ವಿಷಯ ಎಂದು ಹೇಳಿದರು. ಅರುಣ ಜೋಳದ ಕೂಡಗಿ ಅವರು ಮಾತನಾಡಿ ಎಲ್ಲವನ್ನು ದೃಶ್ಯದಲ್ಲಿ ಕಟ್ಟಿಕೊಡುವ ಮೂಲಕ ರಮಾಬಾಯಿ ಅವರ ವ್ಯಕ್ತಿತ್ವವನ್ನು ಚಿತ್ರದ ಮೂಲಕ ತೋರಿಸುವ ಪ್ರಯತ್ನ ಮಾಡಿದ್ದು ಉತ್ತಮ ಬೆಳವಣಿಗೆ ಎಂದು ಹೇಳಿದರು.ಪ್ರೊ ಎಚ್ ಟಿ ಪೋತೆ ಅವರು ಮಾತನಾಡಿ ಚಿತ್ರ ತಂಡದ ಪ್ರೀತಿ ವಿಶ್ವಾಸಕ್ಕೆ ನಾನು ಪಾತ್ರನಾಗಿ ಈ ಚಿತ್ರ ನಾನು ಮಾಡಿದೆ ನಾನು ಚಿತ್ರ ಮಾಡುವುದಾಗಿ ಭಾವುಕ ನಾಗಿ ಅತ್ತಿದ್ದೆ, ಚಿತ್ರದಲ್ಲಿ ಕನಿಷ್ಠ ಬಡತನ ತೋರಿಸುವ ಕೆಲಸವನ್ನು ನೈಜವಾಗಿ ತೋರಿಸುವ ಕೆಲಸ ಮಾಡಿದ ನಿರ್ದೇಶಕರ ಕಾರ್ಯ ಶ್ಲಾಘನೀಯವಾದುದು ಸಿನಿಮಾದ ಮಿತಿಗಳ ನಡುವೆ ಉತ್ತಮ ಪ್ರಯತ್ನ ಮಾಡಿದ್ದಾರೆ ಎಂದರು.
ಈ ಸಂದರ್ಭದಲ್ಲಿ ದಸಾಪ ರಾಜ್ಯಾಧ್ಯಕ್ಷ ಅರ್ಜುನ ಗೊಳಸಂಗಿ, ನಿರ್ದೇಶಕ ಸುನೀಲಕುಮಾರ ಸುಧಾಕರ, ನಿರ್ಮಾಪಕ ಜೀವನ ಗೊಳಸಂಗಿ, ನಟಿ ರೇಖಾ ಪಾಟೀಲ, ಕಲಾವಿದ ವಿಶ್ವೇಶ್ವರಯ್ಯ ಮಠಪತಿ, ಬಾಬು ತಡ್ಲಿ, ಲಕ್ಷಣ ಹಂದ್ರಾಳ, ಲಾಯಪ್ಪ ಇಂಗಳೆ , ಕಲ್ಲಪ್ಪ ಶಿವಶರಣ, ರಾಹುಲ್ ಮೆಳ್ಳಿ, ಸುನೀಲ ಕಳ್ಳಿಮನಿ, , ಚಂದ್ರಶೇಖರ ಅಂಬಲಿ, ಜಗದೀಶ ಗಲಗಲಿ, ಶ್ರೀಶೈಲ ನಾಗರಾಳ ,ಪ್ರೀತಿ ಪಾಟೀಲ ಸೇರಿದಂತೆ ಕಲ್ಬುರ್ಗಿ ವಿಭಾಗದ ಪ್ರಾಧ್ಯಾಪಕರು ಹಾಗೂ ವಿವಿಧ ಸಾಹಿತಿಗಳು ಕಲಾವಿದರು ಹಾಗೂ ವಿದ್ಯಾರ್ಥಿಗಳು ಹಾಗೂ ಎಚ್.ಟಿ.ಪೋತೆ ಅವರ ಅಭಿಮಾನಿಗಳು ಮುಂತಾದವರು ಉಪಸ್ಥಿತರಿದ್ದರು.
Saturday, August 5, 2023
3ನೇ ವರ್ಷದ ಹುಟ್ಟು ಹಬ್ಬ ಆಚರಿಸಿಕೊಂಡ ಶ್ರಾವಣಿ
ಈ ದಿವಸ ವಾರ್ತೆ
ವಿಜಯಪುರ : ಇಂಡಿಯಲ್ಲಿ ವಾಸವಿರುವ ಬಿ.ಕೆ.ಹೊಸಮನಿ ಹಾಗೂ ಮಲ್ಲಮ್ಮ ಅವರ ಮೊಮ್ಮಗಳಾದ
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಮೇಲ್ವಿಚಾರಕರಾದ ತಾಯಿ ಸಾವಿತ್ರಿ ಮಣೂರ, ನವದೆಹಲಿಯ ಕರ್ನಾಟಕ ಭವನದಲ್ಲಿ ಕಾರ್ಯನಿರ್ವಹಿಸುತ್ತಿರುವ ತಂದೆ ನಾಗರಾಜ್ ಹೊಸಮನಿ ಅವರ ಮುದ್ದಿನ ಮಗಳಾದ
ಶ್ರಾವಣಿಯ 3ನೇ ಹುಟ್ಟು ಹಬ್ಬವನ್ನು ಇಂದು ಆಚರಿಸಲಾಯಿತು.
ಮನೆಯ ಸದಸ್ಯರಾದ ವಾರ್ತಾಧಿಕಾರಿ ಅಮರೇಶ ದೊಡಮನಿ, ರೇಣುಕಾ ದೊಡಮನಿ, ರೈಲ್ವೆ ಇಲಾಖೆಯ ಶರಣು ಹೊಸಮನಿ,ಚಂದ್ರಶೇಖರ ಹೊಸಮನಿ, ರಾಘವೇಂದ್ರ ಹೊಸಮನಿ,ಮಲ್ಲಿಕಾರ್ಜುನ ಹೊಸಮನಿ, ಯೋಗಿತಾ ದೊಡಮನಿ, ಮಂಜುಳಾ, ಜ್ಯೋತಿ ಹೊಸಮನಿ ಹಾಗೂ ಪ್ರೇಮಾ ಶ್ರಾವಣಿಯ ಹುಟ್ಟು ಹಬ್ಬಕ್ಕೆ ಶುಭಾಶಯ ಹೇಳಿದರು.
ನಮ್ಮೂರ ಸಿರಿ ಹಾಡು ಬಿಡುಗಡೆಗೊಳಿಸಿದ : ಪತ್ರಕರ್ತ, ಸಾಹಿತಿ ಪರಶುರಾಮ ಶಿವಶರಣ
ಈ ದಿವಸ ವಾರ್ತೆ
ವಿಜಯಪುರ : ವಿಜಯಪುರದ ಯುವ ಸಾಹಿತಿ ಸೋಮು ಹಿಪ್ಪರಗಿ ಅವರ ವಿರಚಿತ ವಿಜಯಪುರ ಬಾಗಲಕೋಟ ಅವಳಿ ಜಿಲ್ಲೆಯ ಐತಿಹಾಸಿಕ ಸಾಂಸ್ಕೃತಿಕ ಗತ ಇತಿಹಾಸ ಸಾರುವ ಅಂತಾರಾಷ್ಟ್ರೀಯ ಖ್ಯಾತಿಯ ಜಾನಪದ ಕಲಾವಿದೆ ಬೆಂಗಳೂರಿನ ಸವಿತಾ ಗಣೇಶ ಪ್ರಸಾದ ಕಲಾವಿದೆ ಅವರ ಸಂಗೀತ ಮತ್ತು ಗಾಯನದಲ್ಲಿ ಸೊಗಸಾಗಿ ಮೂಡಿಬಂದ ನಮ್ಮೂರ ಸಿರಿ ಎನ್ನುವ ಹಾಡನ್ನು ಪತ್ರಕರ್ತ ಹಾಗೂ ಸಾಹಿತಿ ಪರಶುರಾಮ ಶಿವಶರಣ ಅವರು ಬಿಡುಗಡೆಗೊಳಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಯುವ ಸಾಹಿತಿ ಸೋಮು ಎಚ್. ಹಿಪ್ಪರಗಿ ಅವರು ರಚಿಸಿದ ಹಲವು ಹಾಡುಗಳು ನಾಡಿನ ಖ್ಯಾತ ಸಂಗೀತ ಸಂಗೀತಗಾರರಿAದ ಸಂಯೋಜನೆಗೊAಡು ಈಗಾಗಲೇ ಬಿಡುಗಡೆಗೊಂಡು ಜನಪ್ರಿಯತೆಗಳಿಸಿವೆ. ವಿಜಯಪುರದ ಇತಿಹಾಸ ಸಾರುವ ವಿಜಯಪುರ ಗುಮ್ಮಟಗಳ ನಾಡು ನಮ್ಮೂರು.... ಕಲೆ ಸಿರಿಯ ಕಾವ್ಯದ ಬೀಡು ನಮ್ಮೂರು ಹಾಡು ಕೂಡ ಮುಂದಿನ ದಿನಗಳಲ್ಲಿ ಜನಪ್ರಿಯತೆಗಳಿಸಿ ಸೋಮು ಅವರು ಸಾಹಿತ್ಯ ಲೋಕಕ್ಕೆ ಮತ್ತಷ್ಟು ಕೊಡುಗೆ ನೀಡುವಂತಾಗಲಿ ಎಂದು ಹೇಳಿದರು.
ಈ ಸಂದರ್ಭದಲ್ಲಿ ರಾಷ್ಟ್ರೀಯ ಸಂಶೋಧನಾ ವೇದಿಕೆಯ ಅಧ್ಯಕ್ಷ ಹಾಗೂ ಸಾಹಿತಿ ಲಾಯಪ್ಪ ಇಂಗಳೆ, ಕಲ್ಲಪ್ಪ ಶಿವಶರಣ, ಬಸವರಾಜ ಬೆಲ್ಲದ, ವಿಜಯ ಹಿರೇಮಠ, ರಾಹುಲ ಟೋಣೆ, ರಾಹುಲ ಮೆಳ್ಳಿ, ಅಭಿಷೇಕ ಭಜಂತ್ರಿ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು. ( ಅಮೃತ ಭಾರತಿ ಯೂಟ್ಯೂಬ್‌ನಲ್ಲಿ ಹಾಡು ಕೇಳಲು https://youtu.be/VyZaKv-oN3I ಲಿಂಕ್ ಮೇಲೆ ಕ್ಲಿಕ್ ಮಾಡಿ).






