Thursday, July 20, 2023

21-07-2023 EE DIVASA KANNADA DAILY NEWS PAPER

ಪತ್ರಕರ್ತ, ಸಾಹಿತಿ ಪರಶುರಾಮ ಶಿವಶರಣರಿಗೆ ರಾಜ್ಯಮಟ್ಟದ ಬೆಳ್ಳಿ ಸಂಭ್ರಮ ಪ್ರಶಸ್ತಿ

               ಪತ್ರಕರ್ತ, ಸಾಹಿತಿ ಪರಶುರಾಮ ಶಿವಶರಣ

 ಈ ದಿವಸ ವಾರ್ತೆ

ವಿಜಯಪುರ: ನೇರ ನಡೆ ನುಡಿಯ ದಿಟ್ಟ ಪತ್ರಕರ್ತ, ಸಾಹಿತಿ ಪರಶುರಾಮ ಶಿವಶರಣ ಅವರಿಗೆ ರಾಜ್ಯ ಮಟ್ಟದ ಬೆಳ್ಳಿ ಸಂಭ್ರಮ ಗೌರವ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಮಾನವೀಯ ಪ್ರಜ್ಞೆ ಅಳವಡಿಸಿಕೊಂಡಿರುವ ಪರಶುರಾಮ ಶಿವಶರಣ ಅವರಿಗೆ ಸಾಹಿತ್ಯ ಕ್ಷೇತ್ರದಲ್ಲಿ ಮಾಡಿರುವ ಗಣನೀಯ ಸಾಧನೆಯನ್ನು ಗುರುತಿಸಿ ಈ ಪ್ರಶಸ್ತಿಯನ್ನು ನೀಡಲಾಗುತ್ತಿದೆ. 

ಪತ್ರಕರ್ತ, ಸಾಹಿತಿ ಪರಶುರಾಮ ಶಿವಶರಣ ಅವರು ‘ಸತ್ಯಕಾಮ, ಮಧುರವಾಣಿ, ನಾಡೋಜ’ ಮುಂತಾದ ಸ್ಥಳೀಯ ದಿನ ಪತ್ರಿಕೆಯಲ್ಲಿ ಹಾಗೂ ರಾಜ್ಯ ಮಟ್ಟದ ಕನ್ನಡ ಪ್ರಭ ಪತ್ರಿಕೆ ವಿಜಯಪುರ ಜಿಲ್ಲಾ ಸಹಾಯಕ ವರದಿಗಾರನಾಗಿ, ‘ಕರ್ನಾಟಕ ಸಂಧ್ಯಾಕಾಲ’ ಪ್ರಾದೇಶಿಕ ಸಂಜೆ ದಿನ ಪತ್ರಿಕೆಯ ವಿಜಯಪುರ ಜಿಲ್ಲಾ ವರದಿಗಾರನಾಗಿ, ‘ವಿಜಯವಾಣಿ’ ದಿನ ಪತ್ರಿಕೆಯಲ್ಲಿ ಉಪ ಸಂಪಾದಕನಾಗಿ, ‘ವಿಶ್ವವಾಣಿ’ ವಿಜಯಪುರ ಜಿಲ್ಲಾ ವರದಿಗಾರನಾಗಿ, ಉತ್ತರ ಕರ್ನಾಟಕ ಪ್ರಾದೇಶಿಕ ಪತ್ರಿಕೆಯಾದ ನವನಾಡು ಪತ್ರಿಕೆಯ ವಿಜಯಪುರ ಜಿಲ್ಲಾ ವರದಿಗಾರನಾಗಿ, ಸದ್ಯ ರಾಜ್ಯ ಮಟ್ಟದ ಪತ್ರಿಕೆಯಾದ ಹೊಸ ದಿಗಂತ ಕನ್ನಡ ದಿನ ಪತ್ರಿಕೆಯಲ್ಲಿ ವಿಜಯಪುರ ಜಿಲ್ಲಾ ವರದಿಗಾರನಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಆಕಾಶವಾಣಿ ಕೇಂದ್ರದಲ್ಲಿ ವರದಿ ವಾಚನ ಸೇರಿದಂತೆ ಶೈಕ್ಷಣಿಕ, ರಾಜಕೀಯ, ಕೃಷಿ, ಸಾಮಾಜಿಕ ಇತರೆ ಕಾರ್ಯಕ್ರಮಗಳ ಬರವಣಿಗೆಯಲ್ಲಿ ಪ್ರಭುತ್ವ ಸಾಧಿಸಿದ್ದಾರೆ.

ಈಗಾಗಲೇ ಇವರು ಜೀವ ಪೀಠ ಕವನ ಸಂಕಲನ, ರಾಣಿ ಬಗೀಚ್ ಕಥಾ ಸಂಕಲನ, ವಾರನೋಟ ಅಂಕಣ ಸಂಕಲನ, ನೀಲಿಮಿಂಚು ಕವನ ಸಂಕಲನ ಕೃತಿಗಳು ಪ್ರಕಟವಾಗಿವೆ.

ವಿಜಯಪುರ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆವತಿಯಿಂದ ಹಮ್ಮಿಕೋಂಡ ರಾಷ್ಟçಕವಿ ಕುವೆಂಪು ಅವರ ಜನ್ಮ ದಿನಾಚರಣೆ ಹಿನ್ನೆಲೆ ರಾಷ್ಟçಕವಿ ಕುವೆಂಪು ಅವರ ಕುರಿತು ಉಪನ್ಯಾಸ ಸೇರಿದಂತೆ ಅನೇಕ ಕಾರ್ಯಕ್ರಮಗಳಲ್ಲಿ ಕೂಡ ಉಪನ್ಯಾಸ ನೀಡಿ ಮೆಚ್ಚುಗೆ ಪಡೆದುಕೊಂಡಿದ್ದಾರೆ.

ಈಗಾಗಲೇ ಪತ್ರಕರ್ತ, ಸಾಹಿತಿ ಪರಶುರಾಮ ಶಿವಶರಣ ಅವರ ವಿರಚಿತ ಜೀವ ಪೀಠ ಕವನ ಸಂಕಲನಕ್ಕೆ ಬೆಂಗಳೂರು ಕೇಂದ್ರ ಸಾಹಿತ್ಯ ಪರಿಷತ್ತಿನಿಂದ ‘ಅರಳು ಪ್ರಶಸ್ತಿ’ ಲಭಿಸಿದೆ. ‘ನೀಲಿಮಿಂಚು’ ಕರ್ನಾಟಕ ಪುಸ್ತಕ ಪ್ರಾಧಿಕಾರದ ಸಹಾಯಧನದಡಿಯಲ್ಲಿ ಈ ಕವನ ಸಂಕಲನ ಪ್ರಕಟಗೊಂಡಿದೆ.

ಅದರಂತೆ ಜೀವಪೀಠ, ರಾಣಿ ಬಗೀಚ, ವಾರನೋಟ ಕೊಲ್ಕತ್ತಾ, ಚೈನೈ ಜೀವಪೀಠ, ರಾಣಿ ಬಗೀಚ, ವಾರನೋಟ ಪುಸ್ತಕಗಳು ಗ್ರಂಥಾಲಯದಲ್ಲಿ ಇವರ ಪುಸ್ತಕಗಳು ಆಯ್ಕೆಯಾಗಿವೆ. ಇವರ ಈ ಮಹತ್ತರ ಮಾದರಿ ಸಾಧನೆಗಳನ್ನು ಗುರುತಿಸಿ ದಲಿತ ಸಾಹಿತ್ಯ ಪರಿಷತ್ತು ರಾಜ್ಯ ಘಟಕ ಗದಗ, ಬೆಳ್ಳಿ ಸಂಭ್ರಮದ ನಿಮಿತ್ಯವಾಗಿ 10ನೇ ಅಖಿಲ ಭಾರತ ದಲಿತ ಸಾಹಿತ್ಯ ಸಮ್ಮೇಳನವನ್ನು ವಿಜಯಪುರದ ಕಂದಗಲ್ ಹನುಮಂತರಾಯ ರಂಗಮಂದಿರದಲ್ಲಿ ಜುಲೈ 29 ಹಾಗೂ 30 -2023 ರಂದು ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ ಪ್ರಕಟಣೆಯಲ್ಲಿ ದಲಿತ ಸಾಹಿತ್ಯ ಪರಿಷತ್ತಿನ ರಾಜ್ಯಾದ್ಯಕ್ಷರಾದ ಡಾ.ಅರ್ಜುನ ಗೊಳಸಂಗಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Wednesday, July 19, 2023

ಡಾ. ಪೂರ್ಣಿಮಾ ಧಾಮಣ್ಣವರಗೆ ಪುಸ್ತಕ ಪ್ರಶಸ್ತಿ

ಈ ದಿವಸ ವಾರ್ತೆ

ವಿಜಯಪುರ :   ಸಂಶೋಧಕಿ, ಸಾಹಿತಿ ಡಾ. ಪೂರ್ಣಿಮಾ ಕೃಷ್ಣಪ್ಪಾ ಧಾಮಣ್ಣವರ 'ಅವರ ವಿಜಯಪುರ ಪ್ರಾದೇಶಿಕ ಪದಕೋಶ' ವಿಮರ್ಶಾ ಕೃತಿಗೆ  ರಾಜ್ಯಮಟ್ಟದ ಬೆಳ್ಳಿ ಸಂಭ್ರಮ ಪುಸ್ತಕ ಪ್ರಶಸ್ತಿಗೆ‌ ಆಯ್ಕೆ ಯಾಗಿದೆ.  

ಜುಲೈ ತಿಂಗಳಲ್ಲಿ 29 ಹಾಗೂ 30 ರಂದು ವಿಜಯಪುರದ ಕಂದಗಲ ಹನುಮಂತರಾಯ ರಂಗಮಂದಿರದಲ್ಲಿ ನಡೆಯುವ ೧೦ನೇ ಅಖಿಲ ಭಾರತ ದಲಿತ ಸಾಹಿತ್ಯ ಸಮ್ಮೇಳನದಲ್ಲಿ ಪ್ರಶಸ್ತಿ ಪ್ರದಾನಮಾಡಿ, ಸನ್ಮಾನಿಸಿಗೌರವಿಸಲಾಗುವುದು ಎಂದು ದಲಿತ ಸಾಹಿತ್ಯ ರಾಜ್ಯ ಘಟಕದ ಅಧ್ಯಕ್ಷ ಡಾ. ಅರ್ಜುನ ಗೊಳಸಂಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


ಆಸಕ್ತರಿಗೆ ವಿಶೇಷ ಸೂಚನೆ:

ಯುವ ಪ್ರತಿಭೆಗಳಿಗೆ, ಹಿರಿ-ಕಿರಿ ಆಸಕ್ತ ಸಾಹಿತಿ, ಕವಿ, ಲೇಖಕರಿಗೆ ಈ ದಿವಸ ವೇದಿಕೆ ಕಲ್ಪಿಸುತ್ತಿದೆ. ಆಸಕ್ತರು ತಮ್ಮ ಸ್ವ ರಚಿತ  ಲೇಖನ, ಕಥೆ, ಕವನ , ಶಾಲಾ ಕಾಲೇಜಿನ ವರದಿ, ಹೋರಾಟಗಾರರ ಮನವಿ, ತಮ್ಮ ಊರಿನ ಸಮಸ್ಯೆಗಳ ಸೇರಿದಂತೆ ಇತರೆ ಸುದ್ದಿ ಹಾಗೂ ಜಾಹೀರಾತುಗಳನ್ನು ಪ್ರಕಟಿಸಲು ಸಂಪರ್ಕಿಸಿರಿ.

ಕಲ್ಲಪ್ಪ ಶಿವಶರಣ

ವ್ಯವಸ್ಥಾಪಕ ಸಂಪಾದಕ

ಈ ದಿವಸ ಕನ್ನಡ ದಿನ ಪತ್ರಿಕೆ

 ಮೊ: 7204279187/     

          9900378892

ತಾವು ಟೈಪಿಸಿ ವ್ಯಾಟ್ಸಪ್ ಅಥವಾ eedivasa@gmail.com ಈ ಮೇಲ್ ಗೂ ಮೇಲ್ ಮಾಡಿರಿ.

ಮತಾಂತರ ವಿರೋಧಿ ,,,,,,,!!!!!!,,,,,,,,,,!!!!!!,,,,,,,,,,,

ಹೊಲೆಯರೆಲ್ಲರನು ಹರಿಜನರೆಂದು ಕರಿದು

ಹರಿಹರರಿಂದ ಅವರನ್ನೆಲ್ಲಾ ದೂರವಿರಿಸಿ

ಬಲು ಹಗುರವಾಗಿ ಕಂಡಿರಿ.

ಊರೊಳಗೆ ಅವರನು ಕರೆಯಿಸಿ ಜನಗಳ ಕಸವ ಹೊರಿಸಿದಿರಿ ದನಗಳ ಹಣವ ಹೆಗಲಿಗೇರಿಸಿದಿರಿ.

ಅವರೊಂದಿಗೆ ಬೆರೆತು ಬಾಳುವದು ಅವರ ಬದುಕು ಬದಲಾಯಿಸುವುದು ನಿಮ್ಮ ಬಾಯಿಗೆ ಬಂಡವಾಳವಾಗಿತ್ತು.

ಬಾಳಿನಲಿ ಬೆಳಕಿಗಾಗಿ ಬೊಬ್ಬೆಯಿಟ್ಟವರು ತಮಗೆ ಲೇಸನಿಸಿದತ್ತ ವಲಸೆ ಹೋದರೆ ನೀವೇಕೆ ತಬ್ಬಿಬ್ಬಾದಿರಿ ? ತಂಗಾದಿರಿ ?

ಲಗುಬಗೆಯಿಂದ ಅವರು ದೌಡಾಯಿಸಿ ಸವಲತ್ತುಗಳ ಬಿಸಿಲುಗುದುರೆಗಳನ್ನು ಅವರೆದುರು ಓಡಿಸಲು ಮುಂದಾದಿರಿ.

ಪೊಳ್ಳು ಪರ೦ಪರೆಗೆ ಬಣ್ಣ ಬಳಿದು ಒಳ್ಳೆಯದೆಂದು ಒದರುತ್ತಾ ಶತಶತಮಾನಗಳಿಂದ ಮಾಡಿದ ಶೋಷಣೆ ಸಾಲದೆ ?

ಅವರು ನೀವಾಗಿ, ನೀವು ಅವರಾಗಿ ಬದುಕು ಭಯಂಕರವಾದೀತೆಂಬ ಭಯ ನಿಮ್ಮನೆಲ್ಲಾ ಬಡಿದೆಬ್ಬಿಸಿರಬಹುದು.

ಅವರಿವರ ಧರ್ಮಗಳನ್ನು ಹಳಿಯುತ್ತ ತುಳಿಯುತ್ತಾ ನಿಮ್ಮಗಳ ಧರ್ಮಗಳನ್ನು ಮೇಲೆತ್ತ ಮರೆದಾಡುವ ನೀವು ಧರ್ಮಿಷ್ಟರೆ ?

ಬೇಡ ನಮ್ಮಲಿ ಧರ್ಮ ಕಲಹ ಅಂದು ಇಂದು, ಮುಂದು, ಎಂದೆಂದಿಗೂ ಜಗದೊಳೊಂದೆ ಮನುಜ ಮನುಜ ಕುಲವು.

ಬಸವರಾಜ್ ಜಾಲವಾದಿ

ಅಧ್ಯಕ್ಷರು ದಲಿತ ಸಾಹಿತ್ಯ ಪರಿಷತ್ ವಿಜಯಪುರ.


ಆಸಕ್ತರಿಗೆ ವಿಶೇಷ ಸೂಚನೆ:

ಯುವ ಪ್ರತಿಭೆಗಳಿಗೆ, ಹಿರಿ-ಕಿರಿ ಆಸಕ್ತ ಸಾಹಿತಿ, ಕವಿ, ಲೇಖಕರಿಗೆ ಈ ದಿವಸ ವೇದಿಕೆ ಕಲ್ಪಿಸುತ್ತಿದೆ. ಆಸಕ್ತರು ತಮ್ಮ ಸ್ವ ರಚಿತ  ಲೇಖನ, ಕಥೆ, ಕವನ , ಶಾಲಾ ಕಾಲೇಜಿನ ವರದಿ, ಹೋರಾಟಗಾರರ ಮನವಿ, ತಮ್ಮ ಊರಿನ ಸಮಸ್ಯೆಗಳ ಸೇರಿದಂತೆ ಇತರೆ ಸುದ್ದಿ ಹಾಗೂ ಜಾಹೀರಾತುಗಳನ್ನು ಪ್ರಕಟಿಸಲು ಸಂಪರ್ಕಿಸಿರಿ.

ಕಲ್ಲಪ್ಪ ಶಿವಶರಣ

ವ್ಯವಸ್ಥಾಪಕ ಸಂಪಾದಕ

ಈ ದಿವಸ ಕನ್ನಡ ದಿನ ಪತ್ರಿಕೆ

 ಮೊ: 7204279187/     

          9900378892

ತಾವು ಟೈಪಿಸಿ ವ್ಯಾಟ್ಸಪ್ ಅಥವಾ eedivasa@gmail.com ಈ ಮೇಲ್ ಗೂ ಮೇಲ್ ಮಾಡಿರಿ.

20-07-2023 EE DIVASA KANNADA DAILY NEWS PAPER