Thursday, June 15, 2023
Tuesday, June 13, 2023
Monday, June 12, 2023
Sunday, June 11, 2023
ಜು.29 ರಿಂದ ಎರಡು ದಿನಕಾಲ ಅಖಿಲ ಭಾರತ ದಲಿತ ಸಾಹಿತ್ಯ ಸಮ್ಮೇಳನ: ಡಾ.ಗೊಳಸಂಗಿ
ಈ ದಿವಸ ವಾರ್ತೆ
ವಿಜಯಪುರ: ದಲಿತ ಪ್ರಜ್ಞೆಯೊಂದಿಗೆ, ಅಹಿಂದ ಪರಂಪರೆಯಲ್ಲಿ ಶೋಷಿತರ ಧ್ವನಿಯಾಗಿ ಕಾರ್ಯನಿರ್ವಹಿಸುತ್ತಿರುವ ಗದುಗಿನ ದಲಿತ ಸಾಹಿತ್ಯ ಪರಿಷತ್ ರಾಜ್ಯ ಘಟಕದ ಬೆಳ್ಳಿ ಸಂಭ್ರಮ ನಿಮಿತ್ತ ನಗರದಲ್ಲಿ ಜು.29, 30 ರಂದು ಎರಡು ದಿನಗಳ ಕಾಲ 10 ನೇ ಅಖಿಲ ಭಾರತ ದಲಿತ ಸಾಹಿತ್ಯ ಸಮ್ಮೇಳನವನ್ನು ಹಮ್ಮಿಕೊಳ್ಳಲಾಗಿದೆ ಎಂದು ದಲಿತ ಸಾಹಿತ್ಯ ಪರಿಷತ್ ರಾಜ್ಯಾಧ್ಯಕ್ಷ ಡಾ.ಅರ್ಜುನ ಗೊಳಸಂಗಿ ಹೇಳಿದರು.ನಗರದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇಲ್ಲಿನ ಕಂದಗಲ್ ಹನುಮಂತರಾಯ ರಂಗಮAದಿರದಲ್ಲಿ ಅಂದು ಎರಡು ದಿನಗಳ ಕಾಲ ಅರ್ಥಪೂರ್ಣವಾಗಿ, ಪ್ರಬುದ್ಧ ಭಾರತ ನಿರ್ಮಾಣ ಹಾಗೂ ನಮ್ಮ ಸವಿಂಧಾನ ನಮ್ಮ ರಕ್ಷಣೆಯ ಆಶಯದೊಂದಿಗೆ ಸಮ್ಮೇಳನ ಜರುಗಲಿದೆ ಎಂದರು.
ಸಮ್ಮೇಳನದಲ್ಲಿ ಪ್ರಶಸ್ತಿ ಪ್ರದಾನ, ವಿವಿಧ ಗೋಷ್ಠಿಗಳು, ಸಂವಾದ, ಬುದ್ಧವಂದನೆ, ಸಮತಾ ಹಾಡುಗಳು, ನಾಟಕ, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತವೆ. ಪುಸ್ತಕ ಮಗಳಗಿ, ಚಿತ್ರಕಲೆ ಪ್ರದರ್ಶ ಕೂಡ ಇರಲಿದ್ದು, ರಾಜ್ಯದ 30 ಜಿಲ್ಲೆಗಳಿಂದ ಚಿಂತಕರು, ದಲಿತ ಲೇಖಕರು, ಪ್ರಗತಿಪರ ಹೋರಾಟಗಾರರು ಪಾಲ್ಗೊಳ್ಳಲಿದ್ದಾರೆ ಎಂದರು.
ಸಮ್ಮೇಳನಕ್ಕಾಗಿ ಸುಮಾರು 2 ಸಾವಿರ ಜನರ ಆಗಮನದ ನಿರೀಕ್ಷೆಯನ್ನು ಮಾಡಲಾಗಿದ್ದು, ನೋಂದಣಿಗೆ ಉಚಿತ ವ್ಯವಸ್ಥೆ ಮಾಡಲಾಗಿದೆ. ಇನ್ನು ಸಮ್ಮೇಳನದ ಸರ್ವಾಧ್ಯಕ್ಷರ ಆಯ್ಕೆಯನ್ನು ರಾಜ್ಯ ಕಾರ್ಯಕಾರಿ ಸಮಿತಿ, ಜಿಲ್ಲಾಧ್ಯಕ್ಷರ ಸಮಿತಿಯಲ್ಲಿ ಚರ್ಚಿಸಿ ನಿರ್ಣಯ ಕೈಗೊಳ್ಳಲಾಗುತ್ತಿದೆ. ಅಲ್ಲದೆ ಸಾರ್ವಜನಿಕರು ಸಮ್ಮೇಳನದ ಸರ್ವಾಧ್ಯಕ್ಷರ ಹೆಸರನ್ನು ಸೂಚಿಸಬಹುದಾಗಿದೆ ಎಂದರು.
ಬುದ್ಧ, ಬಸವ, ಅಂಬೇಡ್ಕರ್ ಚಿಂತನೆಯ ಮಾರ್ಗದಲ್ಲಿ ಮುನ್ನಡೆಯುತ್ತಿರುವ ದಲಿತ ಸಾಹಿತ್ಯ ಪರಿಷತ್ ಎಲ್ಲ ಪಂಗಡಗಳನ್ನು ಸೇರಿಸಿಕೊಂಡು, ಸಾಹಿತ್ಯ ಹಾಗೂ ಸಮಾಜವನ್ನು ಒಟ್ಟೊಟ್ಟಿಗೆ ಮುನ್ನಡೆಸಿಕೊಂಡು ಹೋಗುತ್ತಿದೆ ಎಂದರು.
ದಲಿತ ಸಾಹಿತ್ಯ ಪರಿಷತ್ ಈಗಾಗಲೇ 9 ಸಮ್ಮೇಳನಗಳನ್ನು ಮಾಡಿದ್ದು, ವಿಜಯಪುರದಲ್ಲಿಯೇ 2008 ರಲ್ಲಿ ಹಮ್ಮಿಕೊಂಡ ಸಮ್ಮೇಳನದಲ್ಲಿ ಖ್ಯಾತ ದಲಿತ ಸಾಹಿತಿ ಡಾ.ಸಿದ್ದಲಿಂಗಯ್ಯ ಅವರನ್ನು ಸರ್ವಾಧ್ಯಕ್ಷರನ್ನಾಗಿ ಮಾಡಲಾಗಿತ್ತು. ಬಳಿಕ ಡಾ.ಅರವಿಂದ ಮಾಲಗತ್ತಿ, ಡಾ. ಮೂಡ್ನಾಕೂಡು ಚಿನ್ನಸ್ವಾಮಿ, ಡಾ.ಚೆನ್ನಣ್ಣ ವಾಲೀಕಾರ, ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ, ಡಾ.ಸತ್ಯಾನಂದ ಪಾತ್ರೋಟ, ಡಾ. ಸಮತಾ ದೇಶಮಾನೆ, ಅಲ್ಲಾ ಗರಾಜ ಅವರನ್ನು ಸಮ್ಮೇಳನದ ಸರ್ವಾಧ್ಯಕ್ಷರನ್ನಾಗಿ ಮಾಡಲಾಗಿತ್ತು. ಪ್ರಸಕ್ತ ಸಮ್ಮೇಳನದ ಸರ್ವಾಧ್ಯಕ್ಷರನ್ನು ಇನ್ನು ಕೆಲ ದಿನಗಳಲ್ಲಿ ಆಯ್ಕೆಗೊಳಿಸುವ ಕಾರ್ಯ ನಡೆಯುತ್ತಿದೆ ಎಂದರು.
ದಲಿತ ಸಾಹಿತ್ಯ ಪರಿಷತ್ ಪದಾಧಿಕಾರಿಗಳಾದ ವೈ.ಎಂ. ಭಜಂತ್ರಿ, ದೊಡ್ಡಣ್ಣ ಬಜಂತ್ರಿ, ಜಿಲ್ಲಾಧ್ಯಕ್ಷ ಬಸವರಾಜ ಜಾಲವಾದಿ, ಪತ್ರಕರ್ತ ಸುಭಾಷ ಹೊದ್ಲುರ, ಡಾ.ಎಚ್.ಬಿ. ಕೋಲಾರ, ಸುಜಾತಾ ಚಲವಾದಿ, ಶ್ರೀನಾಥ ಪೂಜಾರಿ ಇದ್ದರು.
Saturday, June 10, 2023
Friday, June 9, 2023
Subscribe to:
Posts (Atom)
